Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
Magh Purnima 2023 : ಫೆ.5ಕ್ಕೆ ಮಾಘ ಪೂರ್ಣಿಮೆ: ಈ ದಿನ ದಾನದ ಮಹತ್ವವೇನು?
ಈ ಬಾರಿ ಮಾಘ ಪೂರ್ಣಿಮೆ ಫೆಬ್ರವರಿ 4 ಹಾಗೂ 5 ರಂದು ಬಂದಿದೆ. ಇದು ಇಡೀ ಮಾಘ ಮಾಸದ ಸ್ನಾನ, ದಾನ, ದಾನ, ಜಪ ಮತ್ತು ತಪಸ್ಸಿನ ಕೊನೆಯ ದಿನವಾಗಿದೆ. ಈ ದಿನ ಸಾವಿರಾರು ಜನರು ಪುಣ್ಯ ನದಿಯಲ್ಲಿ ಸ್ನಾನ ಮಾಡುತ್ತಾರೆ, ಈ ರೀತಿ ಪುಣ್ಯ ಸ್ನಾನ ಮಾಡಿದರೆ ಪಾಪಗಳು ಕಳೆದು ಹೋಗಿ ಸಂಕಲ್ಪ ನೆರವೇರುವುದು ಎಂಬ ನಂಬಿಕೆ. ಇದಾಗಿ ಒಂದು ತಿಂಗಳಿನಲ್ಲಿ ಹೋಳಿ ಹಬ್ಬ ಆಚರಿಸಲಾಗುವುದು.

ಮಾಘ ಮಾಸ ಶ್ರೀ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಮಾಸ ಎಂದು ಹೇಳಲಾಗುವುದು. ಶಾಸ್ತ್ರಗಳ ಪ್ರಕಾರ, ಮಾಘ ಪೂರ್ಣಿಮೆಯ ದಿನದಂದು ಶ್ರೀ ಹರಿಯು ಗಂಗೆಯ ನೀರಿನಲ್ಲಿ ನೆಲೆಸುತ್ತಾನೆ, ಆದ್ದರಿಂದ ಈ ದಿನ ಗಂಗಾ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಈ ದಿನ ಕೇವಲ ಗಂಗಾಜಲವನ್ನು ಸ್ಪರ್ಶಿಸಿದರೂ ವೈಕುಂಠ ಲೋಕ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಈ ದಿನ ಸೂರ್ಯೋದಯಕ್ಕೆ ಮುನ್ನ ಪುಣ್ಯ ನದಿಯಲ್ಲಿ ಅಥವಾ ಮನೆಯಲ್ಲಿ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಹಾಕಿ ಸ್ನಾನ ಮಾಡಿ ವಿಷ್ಣುವಿನ ಪೂಜೆ ಮಾಡಲಾಗುವುದು.
ಮಾಘ ಪೂರ್ಣಿಮೆಯ ಮಹತ್ವವೇನು? ಈ ದಿನ ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಮಾಘ ಪೂರ್ಣಿಮೆ ಯಾವಾಗ?
ಮಾಘ ಮಾಸದ ಹುಣ್ಣಿಮೆಯ ದಿನಾಂಕವು ಶುಕ್ಲ ಪಕ್ಷದ ಫೆಬ್ರವರಿ 4 ರಂದು 09:29 ನಿಮಿಷದಿಂದ ಪ್ರಾರಂಭವಾಗಿ ಫೆಬ್ರವರಿ 5 ರಂದು 11:58 ನಿಮಿಷಗಳವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ, ಮಾಘ ಪೂರ್ಣಿಮಾವನ್ನು ಫೆಬ್ರವರಿ 5, 2023 ರಂದು ಆಚರಿಸಲಾಗುತ್ತದೆ.

ಮಾಘ ಮಾಸದಲ್ಲಿ ಪುಣ್ಯ ನದಿಯಲ್ಲಿ ಸ್ನಾನದ ಮಹತ್ವ
ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಿ, ಮನಸ್ಸಿನಲ್ಲಿ ಗಂಗಾ ಮಾತೆಯನ್ನು ಧ್ಯಾನಿಸುವುದರಿಂದ ವ್ಯಕ್ತಿಯು ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತಾನೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾಘ ಪೂರ್ಣಿಮೆಯಂದು ಗಂಗಾ ಸ್ನಾನವನ್ನು ಮಾಡುವುದರಿಂದ ಇಡೀ ವರ್ಷದ ಧ್ಯಾನದ ಫಲ ಸಿಗುವುದು. ಈ ದಿನ, ಗಂಗಾ ಸೇರಿದಂತೆ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಪುಣ್ಯಕಾರ್ಯ, ಇದರಿಂದ ಆತ್ಮ ಹಾಗೀ ಮನಸನ್ಸು ಶುದ್ಧವಾಗುತ್ತದೆ ಎಂದು ಹೇಳಲಾಗುವುದು. ಈ ದಿನದಂದು ಪುಣ್ಯಸ್ನಾನ ಮಾಡಿದರೆ ಎಲ್ಲಾ ರೋಗಗಳು ದೂರಾಗುವದು. ಈ ದಿನ ಪುಣ್ಯ ನದಿಯಲ್ಲಿ ಸ್ನಾನ ಮಾಡುವಾಗ 'ಓಂ ನಮೋ ಭಗವತೇ ವಾಸುದೇವಾಯ ನಮಃ' ಎಂದು ಜಪಿಸುತ್ತಾ ಸ್ನಾನ ಮಾಡಬೇಕು. ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಗಂಗಾಜಲವನ್ನು ಚಿಮುಕಿಸಿ ಪುಣ್ಯದ ಫಲವನ್ನು ಪಡೆಯಬಹುದು.

ದಾನ ಮತ್ತು ಪೂಜೆಯ ಮಹತ್ವ
* ಸ್ನಾನದ ನಂತರ, ಕಪ್ಪು ಎಳ್ಳನ್ನು ಪಾತ್ರೆಯಲ್ಲಿ ತುಂಬಿಸಿ ಮತ್ತು ಅದರೊಂದಿಗೆ ಸ್ವೆಟರ್, ಕಂಬಳಿ ದಾನ ಮಾಡುವುದರಿಂದ ಸಂಪತ್ತು ಮತ್ತು ಸಂತಾನ ವೃದ್ಧಿಯಾಗುತ್ತದೆ.
* ಈ ದಿನದಂದು ಭಗವಂತ ಸತ್ಯನಾರಾಯಣನ ಕಥೆಯನ್ನು ಹೇಳುವುದರಿಂದ ಶ್ರೀ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಅನಂತ ಕೃಪೆಗೆ ಪಾತ್ರರಾಗುವಿರಿ. ಇದರಿಂದ ಸುಖ-ಸೌಭಾಗ್ಯ, ಸಂಪತ್ತು-ಸಂತಾನ ಪ್ರಾಪ್ತಿಯಾಗುತ್ತದೆ
* ಈ ದಿನ ಮಾತೆ ಸರಸ್ವತಿಯನ್ನು ನಿಯಮಾವಳಿಗಳ ಪ್ರಕಾರ ಪೂಜಿಸಿ, ಬಿಳಿ ಹೂವುಗಳನ್ನು ಅರ್ಪಿಸಿದರೆ ಮಕ್ಕಳ ಜ್ಞಾನ ಹೆಚ್ಚುವುದು, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚುವುದು.
* ಈ ದಿನದಂದು ಪೂರ್ವಜರಿಗೆ ಅರ್ಪಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ.
ಮಾಘ ಪೂರ್ಣಿಮೆಯಂದು ಸ್ನಾನ ಮಾಡುವುದರಿಂದ ಸೂರ್ಯ ಮತ್ತು ಚಂದ್ರ ಜನ್ಮ ದೋಷಗಳಿಂದ ಮುಕ್ತಿ ದೊರೆಯುತ್ತದೆ.
ಮಾಘ ಪೂರ್ಣಿಮೆಗೆ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ, ಈ ದಿನ ಈ ವಸ್ತುಗಳನ್ನು ದಾನ ಮಾಡಿ
* ಈ ದಿನ ನಿರ್ಗತಿಕರಿಗೆ ದಾನ ಮಾಡಿ, ಬ್ರಾಹ್ಮಣರಿಗೆ ದಾನ ಮಾಡಿ
* ನೀವು ದಾನ ಮಾಡುವಾಗ ದಾನ ಮಾಡುವ ವಸ್ತುವಿನ ಜೊತೆ ಸ್ವಲ್ಪ ಕಪ್ಪು ಎಳ್ಳು ಹಾಕಿ ದಾನ ಮಾಡಿ.
ಈ ದಿನ ಓಂ ನಮೋ ನಾರಾಯಣ ಅಂತ 108 ಬಾರಿ ಪಠಿಸಿ.



Click it and Unblock the Notifications
