Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
2021ರ ಫೆಬ್ರವರಿಯಲ್ಲಿ ಈ ಕೆಳಗಿನ ೪ ರಾಶಿಗಳಿಗಿದೆ ಅದೃಷ್ಟ
ಫೆಬ್ರವರಿ ಅಂದಾಕ್ಷಣ ಮೊದಲು ಏನು ನೆನಪಿಗೆ ಬರುತ್ತದೆ? ಇದು ಚುಮುಚುಮು ಚಳಿಯೇ? ಪ್ರೇಮಿಗಳ ದಿನದಂದು ಎಲ್ಲೆಡೆ ಮಾರಾಟವಾಗುವ ಗುಲಾಬಿಗಳ ಹೂಗುಚ್ಛಗಳೇ?. ಹೀಗೆ ಫೆಬ್ರವರಿ ತನ್ನದೇ ಆದ ಒಂದು ಮ್ಯಾಜಿಕ್ ಅನ್ನು ಹೊಂದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಅಷ್ಟೊಂದು ಒಳಿತಾದ ತಿಂಗಳಲ್ಲ. ಗ್ರಹಗತಿಗಳು ತಮ್ಮ ದಿಕ್ಕನ್ನು ಬದಲಾಯಿಸುತ್ತವೆ. ಹಾಗಂತ ನಿರಾಶೆಗೊಳ್ಳುವ ಅಗತ್ಯವಿಲ್ಲ, ವಿಶೇಷವಾಗಿ ನೀವು ಫೆಬ್ರವರಿ 2021 ರ ಅತ್ಯುತ್ತಮ ತಿಂಗಳು ಹೊಂದಿರುವ ರಾಶಿಚಕ್ರ ಚಿಹ್ನೆಗಳಲ್ಲಿ ಒಬ್ಬರಾಗಿದ್ದರೆ. ಹಾಗಾಗಿ ಇಲ್ಲಿ ನಾವು ಈ ತಿಂಗಳು ಅದೃಷ್ಟವಿರುವ ರಾಶಿಚಕ್ರಗಳ ಬಗ್ಗೆ ಹೇಳಿದ್ದೇವೆ.
ಫೆಬ್ರವರಿ ತಿಂಗಳಲ್ಲಿ ಅದೃಷ್ಟವಿರುವ ರಾಶಿಚಕ್ರಗಳು ಇಲ್ಲಿವೆ.

ಮಿಥುನ:
ಈ ರಾಶಿಯವರು ಸಾಕಷ್ಟು ರೋಮಾಂಚಕಾರಿ ಬೆಳವಣಿಗೆಯನ್ನು ಅನುಭವಿಸುತ್ತೀರಿ. ನೀವು ನೀವು ಸಾಧಿಸಲು ಬಯಸುವ ಎಲ್ಲ ವಿಷಯಗಳ ಬಗ್ಗೆ ಯೋಚಿಸಲು, ಮುಂದೆ ಆಗಲು ಬಯಸುವ ವ್ಯಕ್ತಿಯ ಬಗ್ಗೆ ಆಲೋಚಿಸಲು ಇದು ಉತ್ತಮ ಸಮಯವಾಗಿದೆ. ನೀವು ಬಯಸಿದ ಜೀವನವನ್ನು ಪಡೆಯಲು ಇದು ಉತ್ತಮ ಸಮಯವಾಗಿದೆ. ಇದನ್ನು ಗಳಿಸಲು ಸಮಯ ಹಿಡಿದರೂ, ನಿಮ್ಮ ಕನಸುಗಳನ್ನು ನನಸಾಗಿಸಲು ಏನು ಬೇಕೋ ಅದನ್ನು ಮಾಡಲು ಸಾಧ್ಯವಿದೆ.

ತುಲಾ:
ಫೆಬ್ರವರಿಯಲ್ಲಿ ನಿಮಗೆ ಅನೇಕ ವಿಷಯಗಳು ನಡೆಯಬಹುದು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಈ ತಿಂಗಳು ತುಂಬಾ ಖುಷಿಯಾಗಿರುತ್ತೀರಿ. ತುಂಬಾ ಸೃಜನಶೀಲ, ಕಲಾತ್ಮಕ ಮತ್ತು ವರ್ಣರಂಜಿತ ಶಕ್ತಿಯು ಈ ತಿಂಗಳು ನಿಮಗೆ ಬೆಂಬಲ ನೀಡುತ್ತಿದೆ. ನೀವು ಒಂದು ವೇಳೆ ಪ್ರೀತಿಯಲ್ಲಿ ಬಿದ್ದಿದ್ದರೆ ಈ ತಿಂಗಳು ರಸಮಮವಾಗಿರುತ್ತದೆ ಮತ್ತು ನಿಮ್ಮ ಸುತ್ತಲೂ ತುಂಬಾ ರೋಮ್ಯಾನ್ಸ್ ಸುತ್ತುತ್ತದೆ. ನೀವು ಒಬ್ಬಂಟಿಯಾಗಿದ್ದರೆ, ಹೊಸ ವ್ಯಕ್ತಿಯ ಮೇಲೆ ನಿಮಗೆ ಕ್ರಷ್ ಆಗಬಹುದು.

ಕುಂಭ:
ಈ ತಿಂಗಳಲ್ಲಿ ನೀವು ನಿಮ್ಮ ಮೇಲೆ ವಿಶ್ವಾಸ ಹೊಂದಲಿದ್ದೀರಿ. ನೀವು ಇನ್ನು ಮುಂದೆ ಮಕ್ಕಳ ರೀತಿ ಚಿಂತಿಸದೇ, ಎಂದಿಗಿಂತಲೂ ಹೆಚ್ಚು ಗಂಭೀರವಾಗಿ ವಿಷಯಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತೀರಿ. ನಿಮ್ಮ ಮೂರ್ಖತನ ಅಂತ್ಯವಾಗಿ, ಕೆಟ್ಟ ಅಭ್ಯಾಸಗಳೂ ನಿಲ್ಲುತ್ತವೆ. ಈ ತಿಂಗಳು, ನೀವು ಹಳೆಯದನ್ನು ಮರೆತು, ಹೊಸದನ್ನು ಹೇಗೆ ಅಳವಡಿಸಿಕೊಳ್ಳಬೇಕೆಂದು ಕಲಿಯುತ್ತೀರಿ. ಆದರೆ ಇದು ಸುಲಭವಲ್ಲ, ಸಮಯ ತೆಗೆದುಕೊಳ್ಳುತ್ತದೆ. ಆದರೂ ಅದನ್ನು ಬಿಡದೇ ಬದ್ದತೆಯಿಂದ ಇರುವಿರಿ.

ಮೀನ:
ಈ ತಿಂಗಳ ಮೊದಲಾರ್ಧವು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲು ತೆಗೆದುಕೊಳ್ಳುತ್ತೀರಿ. ಕಳೆದು ಹೋದ ನೆನಪುಗಳನ್ನು ಮರೆಯಲು ಹೊಸ ಜೀವನ ಪ್ರಾರಂಭಿಸಲು ಶುರು ಮಾಡುವಿರಿ. ಆದರೆ ಇದು ಬೇಗನೇ ಆಗುವಂತದ್ದಲ್ಲ. ಸಮಯ ಬೇಕಾಗಬಹುದು. ನೆನಪುಗಳನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ. ತಿಂಗಳ ಮೊದಲಾರ್ಧವು ಚಿಕಿತ್ಸಕವಾದರೆ, ದ್ವಿತೀಯಾರ್ಧವು ಉತ್ತಮ ಗುಣಗಳಿಂದ ತುಂಬಿರುತ್ತದೆ.



Click it and Unblock the Notifications