Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಎಪ್ರಿಲ್ 2021 :ಈ ತಿಂಗಳಲ್ಲಿ ಅದೃಷ್ಟವಿರುವ ರಾಶಿಚಕ್ರಗಳಿವು
ನಮ್ಮ ಮುಂದಿನ ಜೀವನ ಹೇಗಿರುತ್ತೋ ಯಾರಿಗೂ ತಿಳಿಯದು. ನಾವೇನೇ ಯೋಜನೆಗಳನ್ನ ಮಾಡಿಕೊಂಡರೂ ಆ ದೇವರು ಬರೆದಂತೆ ಆಗುವುದಂತೂ ಸತ್ಯ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ಜ್ಯೋತಿಷ್ಯವು ಮುಂದೆ ಎದುರಾಗುವ ವಿಚಾರಗಳ ಬಗ್ಗೆ ಸಣ್ಣ ಮಟ್ಟದ ಎಚ್ಚರಿಕೆಯನ್ನು ನೀಡುತ್ತದೆ. ಆಗ ನಾವು ಆಗುವ ಅನಾಹುತಗಳನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದು. ಆದ್ದರಿಂದ ಇಂದು ನಾವು ಎಪ್ರಿಲ್ ತಿಂಗಳು ಯಾವ ರಾಶಿಯವರಗೆ ಶುಭವಾಗಿರುತ್ತೆ? ಯಾವ ರಾಶಿಯವರು ಸ್ವಲ್ಪ ಎಚ್ಚರಿಕೆ ವಹಿಸಬೇಕು ಎಂಬುದನ್ನ ಹೇಳಿದ್ದೇವೆ.

ಎಪ್ರಿಲ್ ತಿಂಗಳಲ್ಲಿ ಅದೃಷ್ಠವಿರುವ ರಾಶಿಚಕ್ರಗಳು:

ಮೇಷ ರಾಶಿ:
ಮೇಷ ರಾಶಿಯವರಿಗೆ ಏಪ್ರಿಲ್ ತಿಂಗಳು ಶುಭವಾಗಲಿದೆ. ಅನೇಕ ಪ್ರಮುಖ ಕಾರ್ಯಗಳು ಜಾರಿಗೆ ಬರಲಿದ್ದು, ದೊಡ್ಡ ವ್ಯಾಪಾರಿಗಳೊಂದಿಗೆ ಮಾತುಕತೆ ಇರುತ್ತದೆ. ಲಾಭದ ಪರಿಸ್ಥಿತಿಯೂ ಅನುಕೂಲಕರವಾಗಿರುತ್ತದೆ. ಮೇಷ ರಾಶಿಯವರು ಸಂಪತ್ತನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಬಹುದು. ಮಿತ್ರರರು ಕೆಲಸದಲ್ಲಿ ಸಹಕರಿಸಲಿದ್ದಾರೆ. ಇದು ಕೆಲಸದಲ್ಲಿನ ಅಡೆತಡೆಗಳು ಅಥವಾ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ನೀವು ಕೌಶಲ್ಯಪೂರ್ಣ ತಂತ್ರ ಮತ್ತು ವಿವೇಕದಿಂದ ಕೆಲಸ ಮಾಡಿದರೆ ಈ ಮೇಷ ರಾಶಿಯವರಿಗೆ ಈ ತಿಂಗಳು ಒಳ್ಳೆಯದು ಹಾಗೂ ಹೆಚ್ಚಿನ ಲಾಭದ ಪರಿಸ್ಥಿತಿ ಇರುತ್ತದೆ.

ಕುಂಭ ರಾಶಿ
ಈ ತಿಂಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ. ಮನಸ್ಸು ಅಧ್ಯಯನ ಮತ್ತು ಬರವಣಿಗೆಯಲ್ಲಿ ಕಳೆಯುತ್ತದೆ. ಯಾವುದೇ ಸ್ಪರ್ಧೆಯಲ್ಲಿಯೂ ಯಶಸ್ಸನ್ನು ಗಳಿಸಬಹುದು. ಈ ತಿಂಗಳು, ಕುಟುಂಬ ಮತ್ತು ಪೋಷಕರೊಂದಿಗೆ ಪ್ರಯಾಣವನ್ನು ಮಾಡಬಹುದು. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಗೌರವವನ್ನು ಪಡೆಯಲಾಗುವುದು. ವೃತ್ತಿಜೀವನದಲ್ಲಿ ಮುನ್ನಡೆಯಲು ಅವಕಾಶವನ್ನು ಪಡೆಯಬಹುದು.

ಕನ್ಯಾ ರಾಶಿ
ಈ ತಿಂಗಳು ಕನ್ಯಾ ರಾಶಿಯ ಮಕ್ಕಳಲ್ಲಿ ಪ್ರಗತಿಕಾಣುವಿರಿ. ಅವರು ಯಾವುದೇ ಸ್ಪರ್ಧೆಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ನಿಮಗೆ ಈ ತಿಂಗಳು ತುಂಬಾ ಫಲಪ್ರದವಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ. ತಿಂಗಳ ಕೊನೆಯಲ್ಲಿ ಗೌರವ ಹೆಚ್ಚಾಗುತ್ತದೆ. ನೀವು ಶತ್ರುಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗುತ್ತೀರಿ.

ತುಲಾ ರಾಶಿ
ಹೊಸ ಕಾರ್ಯಗಳಲ್ಲಿ ಪ್ರಗತಿ ಇದೆ. ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸುವುದರೊಂದಿಗೆ ನೀವು ಸಂತೋಷವಾಗಿರುತ್ತೀರಿ. ಮೊಕದ್ದಮೆಗಳನ್ನು ಅಥವಾ ಶತ್ರುಗಳನ್ನು ಗೆಲ್ಲುವಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಶುಭ ಕಾರ್ಯಗಳಿಗಾಗಿ ಹಣವನ್ನು ಖರ್ಚು ಮಾಡಬಹುದು. ವ್ಯವಹಾರದಲ್ಲಿ ಲಾಭ ಇದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ. ಹಿರಿಯರು ಮತ್ತು ಗುರುಗಳ ಕಡೆಗೆ ನಂಬಿಕೆ ಹೆಚ್ಚಾಗುತ್ತದೆ. ವ್ಯಾಪಾರದ ಏರಿಳಿತದ ನಡುವೆ ಪ್ರಯೋಜನಕಾರಿ ಪರಿಸ್ಥಿತಿಗಳು ಮುಂದುವರಿಯಬಹುದು.

ಎಪ್ರಿಲ್ ತಿಂಗಳಲ್ಲಿ ಜಾಗರೂಕವಾಗಿರಬೇಕಾದ ರಾಶಿಚಕ್ರಗಳು:
ವೃಷಭ ರಾಶಿ
ಭೂ-ನಿರ್ಮಾಣ ವಾಹನ ಮತ್ತು ಮನೆ ಖರೀದಿಯಲ್ಲಿಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ, ಇಲ್ಲದಿದ್ದರೆ ತೊಂದರೆ ಅಥವಾ ನಷ್ಟದ ಪರಿಸ್ಥಿತಿ ಉಂಟಾಗುತ್ತದೆ. ಶನಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನೀಡಬಹುದು, ಆದ್ದರಿಂದ ಜಾಗರೂಕರಾಗಿರಿ. ಪ್ರಯಾಣ ಮತ್ತು ಖರ್ಚನ್ನು ಎಚ್ಚರಿಕೆಯಿಂದ ಮಾಡಬೇಕು. ಚಿಂತನಶೀಲವಾಗಿ ಕೆಲಸ ಮಾಡಿ. ಸಕ್ರಿಯವಾಗಿ ಮುಂದುವರಿಸಿ. ಇದರಿಂದಾಗಿ ಫಲಿತಾಂಶಗಳು ಅನುಕೂಲಕರವಾಗಿರಲಿದೆ.

ಕರ್ಕ ರಾಶಿ:
ಕೆಲಸದಲ್ಲಿ ವರ್ಗಾವಣೆ ಆಗಬಹುದು. ವೈವಾಹಿಕ ಜೀವನದಲ್ಲಿಯೂ, ಅನಗತ್ಯ ವಾದಗಳು ಮತ್ತು ಭಿನ್ನಾಭಿಪ್ರಾಯಗಳ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಅನಗ್ಯತ ಒತ್ತಡವನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಸಂಕಟ ಉಂಟಾಗಬಹುದು. ಯಾರದೋ ರ್ಲಕ್ಷ್ಯ ಅಥವಾ ಅಗೌರವದಿಂದಾಗಿ ಕರ್ಕ ರಾಶಿಯವರು ಒತ್ತಡಕ್ಕೆ ಒಳಗಾಗಬಹುದು. ಈ ಸಮಯವು ವ್ಯಾಪಾರಿಗಳಿಗೆ ಸ್ವಲ್ಪ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ. ಖರ್ಚು ಆದಾಯಕ್ಕಿಂತ ಹೆಚ್ಚಾಗುತ್ತದೆ. ಇದರಿಂದಾಗಿ ಉದ್ವಿಗ್ನತೆಯನ್ನು ಅನುಭವಿಸಬಹುದು.

ಧನು ರಾಶಿ
ಈ ತಿಂಗಳು, ವಿರೋಧಿಗಳು ಮತ್ತು ಸ್ಪರ್ಧಿಗಳು ಮೋಸ ಮಾಡಬಹುದು, ಅದು ಯಾವುದೇ ತೊಂದರೆ ಅಥವಾ ಗೊಂದಲಕ್ಕೆ ಕಾರಣವಾಗಬಹುದು. ದೀರ್ಘ ಪ್ರಯಾಣವನ್ನು ತಪ್ಪಿಸಿ, ಗಾಡಿ ಚಲಾಯಿಸುವಾಗ ಜಾಗರೂಕರಾಗಿರಿ.

ವೃಶ್ಚಿಕ ರಾಶಿ
ಈ ತಿಂಗಳು ಜನರೊಂದಿಗೆ ಸಂಪರ್ಕದಲ್ಲಿರಿ, ಆದರೆ ಜಾಗರೂಕರಾಗಿರಿ. ಹಣದ ನಷ್ಟವಾಗಬಹುದು. ಹೊರಗಿನ ಆಹಾರ ಮತ್ತು ಪಾನೀಯಗಳನ್ನು ಸಹ ತಪ್ಪಿಸಿ. ಅನಗತ್ಯ ಕೋಪ ಅಥವಾ ಉತ್ಸಾಹದಿಂದಾಗಿ ಪರಿಸ್ಥಿತಿಗಳು ಅಸಂಗತವಾಗಬಹುದು. ಕೋಪ ಮತ್ತು ಉತ್ಸಾಹದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಸಾಕಷ್ಟು ತೊಂದರೆಗಳನ್ನು ಸೃಷ್ಟಿಸಬಹುದು.
ಉಳಿದ ರಾಶಿಗಳಾದ ಮಿಥುನ, ಮಕರ, ಮೀನ, ಸಿಂಹ ರಾಶಿಗಳು ಸಾಮಾನ್ಯವಾಗಿರುತ್ತವೆ.



Click it and Unblock the Notifications











