Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ರಾಶಿಯ ಹುಡುಗಿಯರನ್ನು ವಿವಾಹವಾದರೆ, ನಿಮ್ಮ ಭವಿಷ್ಯವೇ ಬದಲಾಗುವುದಂತೆ
ಸೊಸೆಯನ್ನು ಮನೆಯ ಲಕ್ಷ್ಮಿ ಎಂದು ಹೇಳಲಾಗುವುದು. ಹುಟ್ಟಿದ ಮನೆ ಬಿಟ್ಟು, ಗಂಡನ ಮನೆ ಸೇರಿ, ಅಲ್ಲಿನ ಏಳಿಗೆಗಾಗಿ ಸದಾ ಹಂಬಲಿಸುವ ಒಂದು ಜೀವ ಸೊಸೆ. ಆದರೆ, ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರದ ಹುಡುಗಿಯರು ಬಹಳ ಭಾಗ್ಯಶಾಲಿಗಳಂತೆ. ಅವರಿಂದ ಮೆಟ್ಟಿದ ಅಂದರೆ, ಮದುವೆಯಾಗಿ ಹೋಗುವ ಮನೆಗೆ ಅದೃಷ್ಟ ತುಂಬಿಕೊಳ್ಳುವುದಂತೆ. ಅವರ ಕಾಲ್ಗುಣ ತುಂಬಾ ಚೆನ್ನಾಗಿದ್ದು, ಗಂಡನ ಜೀವನವು ಸಂಪತ್ತಿನಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಈ ಹುಡುಗಿಯರನ್ನು ಗಂಡನ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಅಂತಹ ಹೆಣ್ಣುಮಕ್ಕಳು ತಮ್ಮ ಅತ್ತೆಯ ಮನೆಯಲ್ಲಿ ಬೇರೆಯವರಿಗೂ ಅದೃಷ್ಟ ತರುತ್ತಾರಂತೆ. ಹಾಗಾದರೆ, ಆ ರಾಶಿಚಕ್ರಗಳಾವುವು ನೋಡೋಣ.
ಜ್ಯೋತಿಷ್ಯದ ಪ್ರಕಾರ, ಯಾವ ರಾಶಿಯ ಹುಡುಗಿಯರನ್ನು ಮದುವೆಯಾಗುವುದರಿಂದ ಅವರ ಗಂಡನ ಭವಿಷ್ಯ ಬದಲಾಗುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕರ್ಕ ರಾಶಿ :
ಈ ರಾಶಿಚಕ್ರದ ಹುಡುಗಿಯರು ಅವರ ಜೀವನ ಸಂಗಾತಿಗೆ ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅವರ ಜೀವನದಲ್ಲಿ ಎಂದಿಗೂ ಸೌಕರ್ಯಗಳಿಗೆ ಕೊರತೆಯಾಗುವುದಿಲ್ಲ. ಅವರನ್ನು ಮದುವೆಯಾಗುವುದರಿಂದ ಹುಡುಗರ ಜೀವನ ಸುಖಮಯವಾಗುತ್ತದೆ. ಏಕೆಂದರೆ ಅತ್ತೆಯ ಮನೆಗೆ ಕಾಲಿಟ್ಟ ಘಳಿಗೆಯಿಂದ, ಆಕೆಯ ಕಾಲ್ಗುಣದಿಂದ ಮನೆಯ ಎಲ್ಲರ ಅದೃಷ್ಟ ಬದಲಾಗುವುದು. ಕೇವಲ ನಗು, ಖುಷಿ ಸಂತೋಷವೇ ತುಂಬಿರುವುದಂತೆ.

ಮೇಷ ರಾಶಿ:
ಈ ರಾಶಿಯ ಹುಡುಗಿಯರು ತುಂಬಾ ಸಂತೋಷದ ಸ್ವಭಾವದವರು. ಅವರ ಸ್ವಭಾವದಿಂದ, ಅವರು ತಕ್ಷಣವೇ ಯಾರನ್ನಾದರೂ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಕುಟುಂಬದ ಸದಸ್ಯರ ಫೇವರೆಟ್ ಆಗಿರುತ್ತಾರೆ. ಅವಳು ತನ್ನ ಎಲ್ಲಾ ಕೆಲಸಗಳನ್ನು ನನಸಾಗಿಸಲು ಪ್ರಯತ್ನಿಸುತ್ತಾಳೆ. ಇವರನ್ನು ಮದುವೆಯಾಗುವ ಹುಡುಗನ ಅದೃಷ್ಟವೇ ಬದಲಾಗುತ್ತದೆ. ತನ್ನೊಂದಿಗೆ, ತನ್ನ ಪತಿಯನ್ನೂ ಎತ್ತರಕ್ಕೆ ಕೊಂಡೊಯ್ಯುವ ವ್ಯಕ್ತಿತ್ವ ಈಕೆಯದು.

ಮಕರ ರಾಶಿ:
ಈ ರಾಶಿಯ ಹುಡುಗಿಯರು ಕೂಡ ತಮ್ಮ ಗಂಡಂದಿರಿಗೆ ಬಹಳ ಅದೃಷ್ಟವಂತರು. ಅವಳನ್ನು ಮದುವೆಯಾಗುವುದರಿಂದ ಅವಳ ಗಂಡನ ಅದೃಷ್ಟ ಆಗುತ್ತದೆ. ಅತ್ತೆಯ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ. ಪತಿಯು ಯಾವುದೇ ಕೆಲಸ ಮಾಡಿದರೆ ಯಶಸ್ಸು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಈ ರಾಶಿಯ ಸೊಸೆಯಂದಿರು ಅತ್ತೆಯ ಮನೆಯನ್ನು ಸಂಪತ್ತಿನಿಂದ ತುಂಬುತ್ತಾರೆ.



Click it and Unblock the Notifications
