For Quick Alerts
ALLOW NOTIFICATIONS  
For Daily Alerts

Love Horoscope 2023: ಪ್ರೇಮ ಭವಿಷ್ಯ 2023: ರಾಶಿಚಕ್ರದ ಪ್ರಕಾರ 2023ರ ಪ್ರೇಮ-ಕೌಟುಂಬಿಕ ಭವಿಷ್ಯ ಹೇಗಿರಲಿದೆ?

|

ಜೀವನ ಎಂದ ಮೇಲೆ, ಪ್ರೀತಿ, ಪ್ರೇಮ, ಕುಟುಂಬ, ಸಂಬಂಧ ಎಲ್ಲವೂ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಇದ್ಯಾವುದು ಇಲ್ಲದೆ ಬದುಕನ್ನು ಊಹಿಸಲು ಸಾಧ್ಯವಿಲ್ಲ ಎನ್ನಬಹುದು. ಮುಂಬರಲಿರುವ ನೂತನ ವರ್ಷ 2023 ನಮ್ಮ ಬದುಕಿನಲ್ಲಿ ಪ್ರೇಮ, ಬಾಂಧವ್ಯದ ಬದುಕು, ಕೌಟುಂಬಿಕ ವಿಚಾರ ಹೇಗಿರಲಿದೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.

123
ಜ್ಯೋತಿಶಾಸ್ತ್ರದ ಪ್ರಕಾರ ಹೊಸ ವರ್ಷ 2023ರಲ್ಲಿ 12 ರಾಶಿಚಕ್ರಗಳ ಪ್ರೇಮ, ಕುಟುಂಬ ಹಾಗೂ ಸಂಬಂಧದ ಭವಿಷ್ಯ ಹೇಗಿರಲಿದೆ, ಗ್ರಹಗಳ ಸಂಚಾರ ಏನೆಲ್ಲಾ ಬಲಾವಣೆ ತರಲಿದೆ, ಸಂಬಂಧದ ವಿಚಾರವನ್ನು ಹೇಗೆ ನಿಭಾಯಿಸಬಹುದು, ಯಾವ ತಿಂಗಳು ನಮಗೆ ಶುಭವಾಗಲಿದೆ ಮುಂದೆ ನೋಡೋಣ:
ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವರ್ಷವು ಅತ್ಯುತ್ತಮವಾಗಿದೆ. ಈಗಾಗಲೇ ಸಂಬಂಧದಲ್ಲಿರುವವರು ಅದನ್ನು ಬಲಪಡಿಸುವ ಬಗ್ಗೆ ಗಮನಹರಿಸಬೇಕು. ಆದರೆ ನಿಮ್ಮ ಪ್ರೇಮಿಯನ್ನು ಹುಡುಕುತ್ತಿರುವವರು ಈ ವರ್ಷ ಯಶಸ್ಸನ್ನು ಕಾಣಬಹುದು.

ನೀವು ಈ ವರ್ಷ ಮದುವೆಯಾಗಲು ಬಯಸಿದರೆ, ಏಪ್ರಿಲ್ ಮತ್ತು ಆಗಸ್ಟ್ ನಡುವೆ ವೈವಾಹಿಕ ಬಂಧ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚು. ಎಲ್ಲವೂ ಸರಿಯಾಗಿ ನಡೆದರೆ, ಈ ವರ್ಷದ ಅಂತ್ಯದ ವೇಳೆಗೆ ಮದುವೆಯಾಗಬಹುದು.

ಕೌಟುಂಬಿಕವಾಗಿ ಜೀವನ ಮಿಶ್ರವಾಗಿರುತ್ತದೆ, ಕೆಲಸದ ಒತ್ತಡ ನಡುವೆ ಕುಟುಂಬಕ್ಕೆ ಸಮಯ ಮೀಡಲಿಡಬೇಕು. ಸಂಗಾತಿ ಜತೆ ಅನಗತ್ಯ ವಾದ ಮಾಡದಿರುವುದು ಸಂಬಂಧವನ್ನು ಸೌಹಾರ್ದವಾಗಿಡುತ್ತದೆ.

ವೃಷಭ ರಾಶಿ

ವೃಷಭ ರಾಶಿ

2023ರಲ್ಲಿ ನಿಮ್ಮ ಸಂಬಂಧದಲ್ಲಿ ವಿಶ್ವಾಸವನ್ನು ತರುತ್ತದೆ. ಜನವರಿಯಿಂದ ಏಪ್ರಿಲ್ ವರೆಗೆ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ನಿಮ್ಮ ಪ್ರೇಮಿಯನ್ನು ಮದುವೆಯಾಗಲು ಬಯಸಿದರೆ, ಜುಲೈ ಮತ್ತು ಮುಂದಿನ ತಿಂಗಳಲ್ಲಿ ನಿಮ್ಮ ಆಸೆ ಈಡೇರುವ ಹೆಚ್ಚಿನ ಅವಕಾಶವಿದೆ.

ಅಕ್ಟೋಬರ್‌ನಲ್ಲಿ ನಿಮ್ಮ ಸಂಗಾತಿ ಜತೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶಗಳಿವೆ. ನೀವು ರಜೆಯ ಮೇಲೆ ಕುಟುಂಬದ ಜತೆ ಪ್ರವಾಸ ಹೋಗಬಹುದು. ಆದಾಗ್ಯೂ, ನೀವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಜಾಗರೂಕರಾಗಿರಬೇಕು ಮತ್ತು ನಿಮ್ಮ ಸಂಗಾತಿಯೊಂದಿಗೆ ಯಾವುದೇ ಬಿಸಿ ವಾದಕ್ಕೆ ಒಳಗಾಗುವುದನ್ನು ತಡೆಯಿರಿ.

ಮಿಥುನ ರಾಶಿ

ಮಿಥುನ ರಾಶಿ

2023ರ ಆರಂಭವು ಸಂಬಂಧದ ವಿಚಾರದಲ್ಲಿ ಮಿಥುನ ರಾಶಿಯವರಿಗೆ ಅನುಕೂಲಕರವಾಗಿಲ್ಲದಿರಬಹುದು. ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಅಡೆತಡೆಗಳು ಇರಬಹುದು. ಜನವರಿಯಿಂದ ಏಪ್ರಿಲ್ ವರೆಗೆ ನಿಮಗೆ ಹೆಚ್ಚು ಸಮಸ್ಯೆಗಳೇ ಉಂಟಾಗಬಹುದು.

ಆದ್ದರಿಂದ, ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹಳ ಜಾಗರೂಕರಾಗಿರಬೇಕು. 2023ರ ಮಧ್ಯದಿಂದ, ನಿಮಗೆ ವಿಷಯಗಳು ಉತ್ತಮಗೊಳ್ಳಲು ಪ್ರಾರಂಭಿಸಬಹುದು. ನಿಮ್ಮ ಕುಟುಂಬವು ಸಹ ನಿಮ್ಮ ಪ್ರೇಮ ಸಂಬಂಧವನ್ನು ಒಪ್ಪಬಹುದು ಮತ್ತು ವರ್ಷ ಕೊನೆಗೆ ಮದುವೆಯಾಗುವ ಸಾಧ್ಯತೆ ಸಹ ಇದೆ.

ಕರ್ಕ ರಾಶಿ

ಕರ್ಕ ರಾಶಿ

ಮಂಗಳನ ಸ್ಥಾನದಿಂದಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಕೆಲವು ಕಠಿಣ ಸಮಯವನ್ನು ಅನುಭವಿಸಬಹುದು. ಆದರೂ, ಗುರುವು ನಿಮಗೆ ಎಲ್ಲ ಕಷ್ಟಗಳನ್ನು ದಾಟಿ ಮುಂದೆ ಹೋಗುವುದನ್ನು ತೋರಿಸಿಕೊಡುತ್ತದೆ. ನೀವು ಏಪ್ರಿಲ್‌ನಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು ಆದರೆ ಕೌಟುಂಬಿಕ ಪ್ರವಾಸ ಮಾಡುವ ಸಾಧ್ಯತೆ ಇದೆ.

ಹೆಚ್ಚಿನ ಅಡೆತಡೆಗಳನ್ನು ತರಬಹುದು, ಆದರೆ ನಂತರ ವಿಷಯಗಳು ಒಳ್ಳೆಯದಾಗುವ ಸಾದ್ಯತೆ ಇದೆ. 2023ರ ಅಂತ್ಯವು ನಿಮಗೆ ಪ್ರಣಯದಿಂದ ತುಂಬಿರುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ತಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಮೊದಲ ಮೂರು ತಿಂಗಳಲ್ಲಿ, ಶನಿ ಮತ್ತು ಗುರುಗಳ ಸಂಚಾರದಿಂದಾಗಿ ಹೆಚ್ಚು ಜಗಳಗಳನ್ನು ಮಾಡುತ್ತೀರಿ.

ನಿಮ್ಮ ಪ್ರೇಮ ಸಂಬಂಧವು ಸಾಕಷ್ಟು ಸಮಸ್ಯೆಯಲ್ಲಿದ್ದರೆ, 2023 ಸ್ವಲ್ಪ ಸಮಾಧಾನವನ್ನು ತರಬಹುದು. ಮುಂದಿನ ವರ್ಷದ ಅಂತ್ಯದಲ್ಲಿ ಮದುವೆಯಾಗುವ ಸಾಧ್ಯತೆ ಇದೆ. ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಪಾಲುದಾರನನ್ನು ನೀವು ಕಾಣಬಹುದು.ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡಿ, ಪೋಷಕರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಕನ್ಯಾ ರಾಶಿ

ಕನ್ಯಾ ರಾಶಿ

2023ರ ಆರಂಭವು ನಿಮ್ಮ ಸಂಬಂಧವನ್ನು ಉಳಿಸಲು ನಿಮಗೆ ಸಾಧ್ಯವಾಗದಿರುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ, ಮುಂದುವರಿಯಲು ಪ್ರಯತ್ನಿಸಿ.

ಮುಂದಿನ ವರ್ಷದ ಮಧ್ಯಭಾಗವು ನಿಮ್ಮ ಪ್ರೇಮ ಜೀವನಕ್ಕೆ ಅನುಕೂಲಕರವಾಗಿರುತ್ತದೆ. ನಿಮ್ಮ ಜೀವನದುದ್ದಕ್ಕೂ ನೀವು ಹುಡುಕುತ್ತಿರುವ ವ್ಯಕ್ತಿಯನ್ನು ನೀವು ಕಾಣಬಹುದು.

ಕನ್ಯಾ ರಾಶಿಯ ಸೂರ್ಯ ಚಿಹ್ನೆಯನ್ನು ಹೊಂದಿರುವ ವಿವಾಹಿತರಿಗೆ, ಈ ವರ್ಷವು ನಿಮ್ಮ ಸಂಗಾತಿಯಿಂದ ದೂರವಿರಬೇಕಾದ ಸಂದರ್ಭಗಳನ್ನು ಸೃಷ್ಟಿಸಬಹುದು. ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ಕೆಲವು ವಿಷಯಗಳನ್ನು ನೀವು ಬದಲಾಯಿಸಬೇಕಾಗಬಹುದು. ಕೆಲಸದ ಜತೆ ಕುಟುಂಬ ಹಾಗೂ ಸಂಗಾತಿಗೂ ಆದ್ಯತೆ ನೀಡಬೇಕು.

ತುಲಾ ರಾಶಿ

ತುಲಾ ರಾಶಿ

ವಿವಾಹಿತರಿಗೆ 2023 ಉತ್ತಮ ವರ್ಷವಾಗಿರುತ್ತದೆ. ತುಲಾ ರಾಶಿಯವರು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ಕುಟುಂಬದೊಂದಿಗೆ ವಿಹಾರಕ್ಕೆ ಹೋಗಲು ಅವಕಾಶ ಸಿಗಬಹುದು. ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಅವಕಾಶವಿದೆ.

ನೀವು ಯಾರನ್ನಾದರೂ ಪ್ರೇಮಿಸುತ್ತಿದ್ದರೆ ನಿಮ್ಮ ಕುಟುಂಬದಿಂದ ನೀವು ಅನುಮೋದನೆ ಸಿಗಬಹುದು. ಇದರ ನಡುವೆ ಪ್ರೇಮಿಯ ಜತೆ ಸ್ವಲ್ಪ ಕಲಹವಾಗುವ ಸಾಧ್ಯತೆ ಇದೆ ಮುಂದುವರಿಯಲು ಪ್ರಯತ್ನಿಸಿ, 2023ರ ಮಧ್ಯದ ವೇಳೆಗೆ ಎಲ್ಲವೂ ಉತ್ತಮವಾಗುತ್ತದೆ. ಭವಿಷ್ಯವು ನಿಮಗಾಗಿ ಹೆಚ್ಚು ಉತ್ತಮ ಸಮಯವನ್ನು ಕಾದಿರಿಸಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

2023ರ ಆರಂಭವು ನಿಮ್ಮ ಪ್ರೀತಿಯ ಜೀವನಕ್ಕೆ ಫಲಪ್ರದವಾಗಲಿದೆ. ನೀವು ಪ್ರೀತಿಸುತ್ತಿದ್ದರೆ ಮದುವೆಯಾಗಬಹುದು. ನೀವು ಸಂಗಾತಿಯನ್ನು ಹುಡುಕುತ್ತಿದ್ದರೆ, ಈ ವರ್ಷದ ಮಧ್ಯಭಾಗದಲ್ಲಿ ನಿಮ್ಮ ಎಲ್ಲಾ ಆಸೆಗಳು ಪೂರೈಸಬಹುದು.

ನೀವು ವಿವಾಹಿತರಾಗಿದ್ದರೆ ಈ ವರ್ಷವು ನಿಮ್ಮ ಸಂಗಾತಿಯೊಂದಿಗೆ ಪ್ರಣಯ ಮತ್ತು ಗುಣಮಟ್ಟದ ಸಮಯ ಕಳೆಯಬಹುದು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ತಿಳುವಳಿಕೆಯ ಸಂಬಂಧವನ್ನು ಬೆಳೆಸಿಕೊಳ್ಳುತ್ತೀರಿ.

ಧನು ರಾಶಿ

ಧನು ರಾಶಿ

2023ನೇ ವರ್ಷವು ನಿಮ್ಮ ಪ್ರೀತಿಯ ಜೀವನಕ್ಕೆ ಅನುಕೂಲಕರವಾಗಿಲ್ಲದಿರಬಹುದು. ಪ್ರೇಮಿಗಳು ಬೇರೆಯಾಗುವ ಸಾಧ್ಯತೆ ಹೆಚ್ಚಿದೆ, ಆದ್ದರಿಂದ ನೀವು ಏನು ಮಾತನಾಡುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು.

ವಿವಾಹಿತರಿಗೆ, 2023ರಲ್ಲಿ ನಿಮ್ಮ ಸಂಬಂಧದಲ್ಲಿ ಸ್ವಲ್ಪ ಉದ್ವಿಗ್ನತೆ ಎದುರಾಗಬಹುದು. ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಕೆಲವು ಬಿಸಿ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಮೂರನೇ ವ್ಯಕ್ತಿ ನಿಮ್ಮ ಜೀವನದಲ್ಲಿ ಪ್ರವೇಶಿಸಬಹುದು ಮತ್ತು ನಿಮ್ಮ ಪ್ರೀತಿಯ ಜೀವನದಲ್ಲಿ ಸಮಸ್ಯೆಗಳು ತೆರೆದುಕೊಳ್ಳಬಹುದು. ಈ ಎಲ್ಲಾ ಉದ್ವಿಗ್ನತೆ ಅಕ್ಟೋಬರ್ ವರೆಗೆ ಇರುತ್ತದೆ ನಂತರ ನೀವು ಸ್ವಲ್ಪ ಪರಿಹಾರ ಪಡೆಯಬಹುದು.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು ತಮ್ಮ ಪ್ರೀತಿಯ ಜೀವನದ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ಪ್ರೇಮಿಯಿಂದ ದ್ರೋಹಕ್ಕೆ ಒಳಗಾಗುವ ಸಾಧ್ಯತೆ ಇದೆ. ನೀವು ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಬಹುದು. ಇದು ವಿಘಟನೆಗೂ ಕಾರಣವಾಗಬಹುದು.

ನೀವು ಮತ್ತು ನಿಮ್ಮ ಪ್ರೇಮಿ ಈ ಕಷ್ಟದ ಸಮಯದಲ್ಲಿ ಒಂದಾಗಿ ಪ್ರಯಾಣಿಸಿದರೆ ವರ್ಷದ ಅಂತ್ಯದ ವೇಳೆಗೆ ಮದುವೆಯಾಗಬಹುದು. ವಿವಾಹಿತರಿಗೆ ತಮ್ಮ ಸಂಬಂಧದಲ್ಲಿ ಮಧುರತೆ ಇರುತ್ತದೆ, ಸಂಬಂಧವನ್ನು ಮತ್ತಷ್ಟು ಅರಳಿಸುತ್ತದೆ. ಕೌಟುಂಬಿಕವಾಗಿ 2023ರ ಅಂತ್ಯವು ಕೆಲವು ಒಳ್ಳೆಯ ಸುದ್ದಿಗಳನ್ನು ತರುತ್ತದೆ ಅದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪ್ರೀತಿಯನ್ನು ಹೆಚ್ಚು ಬೆಳೆಯಲು ಸಹಾಯ ಮಾಡುತ್ತದೆ.

ಕುಂಭ ರಾಶಿ

ಕುಂಭ ರಾಶಿ

2023 ನಿಮ್ಮ ಸಂಗಾತಿಯೊಂದಿಗೆ ಸಂಪರ್ಕ ಸಾಧಿಸಲು ನಿಮ್ಮ ಪ್ರೇಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿಸಲು ನಿಮಗೆ ಹೆಚ್ಚಿನ ಅವಕಾಶಗಳನ್ನು ತರುತ್ತದೆ. ಸೂರ್ಯ ಮತ್ತು ಬುಧದ ಸ್ಥಾನಗಳು ನಿಮ್ಮ ಸಂಗಾತಿಯೊಂದಿಗೆ ತಿಳುವಳಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ.

ಮಾರ್ಚ್ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಮಸ್ಯೆಯನ್ನು ಉಂಟುಮಾಡಬಹುದು. ನೀವು ಅದನ್ನು ನಿಭಾಯಿಸದಿದ್ದರೆ ಮಾತ್ರ ಬೇರ್ಪಡುವ ಸಾಧ್ಯತೆಗಳಿವೆ. ಇದೆಲ್ಲವೂ ನಿಮ್ಮ ವರ್ತನೆ ಹಾಗೂ ಮಾತಿನ ಮೇಲೆ ನಿರ್ಧಾರವಾಗುತ್ತದೆ. ಆಗಸ್ಟ್ ಮತ್ತು ನಂತರದ ತಿಂಗಳು ವಿವಾಹಿತರಿಗೆ ಅನುಕೂಲಕರ ಸಂದರ್ಭ ಇದೆ.

ಮೀನ ರಾಶಿ

ಮೀನ ರಾಶಿ

ಹೊಸ ವರ್ಷವು ಶುಕ್ರ ಮತ್ತು ಶನಿ ಸಂಕ್ರಮಣ ಇದೆ, ಇದು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ನಿಮ್ಮ ಪ್ರೇಮಿಯ ಬಗ್ಗೆ ನೀವು ನಂಬಿಕೆಯನ್ನು ಬೆಳೆಸಿಕೊಳ್ಳುತ್ತೀರಿ, ಇದು ನಿಮ್ಮಿಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.

ನಿಮ್ಮ ಸಂಬಂಧದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಲು ಸಹ ಪ್ರಯತ್ನಿಸಬೇಕು. ಪ್ರೇಮ ಸಂಬಂಧದಲ್ಲಿರುವ ಮೀನ ರಾಶಿಯವರು 2023ರ ಅಂತ್ಯದ ವೇಳೆಗೆ ತಮ್ಮ ಪ್ರೇಮಿಯನ್ನು ಮದುವೆಯಾಗಬಹುದು. ವಿವಾಹಿತರು ಕೆಲವು ಸಮಸ್ಯೆಗಳನ್ನು ಅನುಭವಿಸಬಹುದು. ಆದರೂ ಎಚ್ಚರಿಕೆಯಿಂದ ಮುಂದುವರಿದರೆ ನಿಮ್ಮ ಸಂಬಂಧ ಮುರಿಯದಂತೆ ಉಳಿಸಬಹುದು.

English summary

Love and Relationship Horoscope 2023 in Kannada: Prema Rasi Bhavishya for 12 Zodiac Signs

Love and Relationship Horoscope 2023 in Kannada: How will your love life be in 2023? Know Love Life Horoscope 2023 predictions for 12 zodiac signs in Kannada. Read on.
Story first published: Wednesday, December 21, 2022, 22:05 [IST]
X
Desktop Bottom Promotion