Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಈ 5 ರಾಶಿಯವರು ಡ್ರಾಮಾ ಕ್ವೀನ್‌ಗಳಂತೆ!
ಕೆಲವರಿಗೆ ಎಲ್ಲರ ಗಮನ ತಮ್ಮ ಮೇಲೆ ಇರಬೇಕೆಂಬ ಆಸೆ ಇರುತ್ತದೆ. ಇದಕ್ಕೆ ನಾನಾ ಕಸರತ್ತುಗಳನ್ನು ಮಾಡಿ, ಎಲ್ಲರ ಗಮನ ತಮ್ಮತ್ತ ಸೆಳೆಯುತ್ತಿರುತ್ತಾರೆ. ಇತರರ ಗಮನ ಸೆಳೆಯಲು ಪ್ರತಿಯೊಂದು ಸಣ್ಣ ವಿಚಾರಕ್ಕೂ ಡ್ರಾಮಾ ಮಾಡುತ್ತಿರುತ್ತಾರೆ. ಆದರೆ, ಎಲ್ಲರಿಗೆ ಇವರ ನಾಟಕೀಯ ಪ್ರವೃತ್ತಿ ಸಹಿಸಕೊಳ್ಳುವ ತಾಳ್ಮೆ ಇರುವುದಿಲ್ಲ. ಆದರೂ ಅದನ್ನು ಲೆಕ್ಕಿಸದೇ, ತಮ್ಮದೇ ಲೋಕದಲ್ಲಿ ಎಲ್ಲಾ ಸಮಯದಲ್ಲೂ ಎಲ್ಲರ ಗಮನದ ಕೇಂದ್ರವಾಗಿರಲು ಏನು ಬೇಕೋ ಅದನ್ನ ಮಾಡುತ್ತಲೇ ಇರುತ್ತಾರೆ. ಅದೇ ರೀತಿ, ಜ್ಯೋತಿಷ್ಯದ ಪ್ರಕಾರ, ಹನ್ನೆರಡು ರಾಶಿ ಚಕ್ರಗಳಲ್ಲಿ ಡ್ರಾಮಾ ಕ್ವೀನ್ ಗಳು ಯಾವ ರಾಶಿಗೆ ಸೇರಿದ್ದಾರೆ ಎಂಬುದನ್ನು ನೋಡೋಣ.
ಜ್ಯೋತಿಷ್ಯದ ಪ್ರಕಾರ, ಹೆಚ್ಚು ಡ್ರಾಮಾ ಮಾಡುವ ರಾಶಿಚಕ್ರಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಧನು ರಾಶಿ:
ಈ ರಾಶಿಯವರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುವ ವಿಚಾರದಲ್ಲಿ ತುಂಬಾ ನೇರವಾಗಿದ್ದರೂ, ಅದನ್ನು ವ್ಯಕ್ತಪಡಿಸುವ ರೀತಿಯಲ್ಲಿ ಡ್ರಾಮಾ ಇರದೇ ಸಾಧ್ಯವೇ ಇಲ್ಲ. ಅದು ಎಂತಹ ಜಗಳವಾಗಿದ್ದರೂ ಸಹ, ಪ್ರತಿ ಸನ್ನಿವೇಶವನ್ನು ದೊಡ್ಡ ವಿಷಯವಾಗಿ, ನಾಟಕೀಯವಾಗಿ ಹೇಳಲು ಇಷ್ಟಪಡುತ್ತಾರೆ. ಸಣ್ಣ ವಿಚಾರವನ್ನು ದೊಡ್ಡದು ಮಾಡುವ ಗುಣ ಇವರದ್ದು. ಇದೇ ಕಾರಣಕ್ಕೆ ಕೆಲವೊಮ್ಮೆ, ಧನು ರಾಶಿಯವರು ಯಾವುದೇ ಹಾನಿ ಮಾಡುವ ಮೊದಲು, ದೊಡ್ಡ ಗಲಾಟೆ ಮಾಡುವುದನ್ನು ಯಾರಾದರೂ ನಿಲ್ಲಿಸಬೇಕಾಗುತ್ತದೆ.

ವೃಶ್ಚಿಕ ರಾಶಿ:
ಇವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಹೋರಾಟಗಳ ಬಗ್ಗೆ ಸಾಕಷ್ಟು ನಾಟಕೀಯತೆಯನ್ನು ಪ್ರದರ್ಶಿಸಬಹುದು. ತುಂಬಾ ಭಾವನಾತ್ಮಕವಾಗಿದ್ದಾಗ, ಅವರು ತುಂಬಾ ಆಕ್ರಮಣಕಾರಿಯಾಗಿರುತ್ತಾರೆ. ಇವರು ಹೆಚ್ಚಾಗಿ ಎಲ್ಲಾ ವಿಷಯಗಳನ್ನು ಉತ್ಪ್ರೇಕ್ಷೆಗೊಳಿಸಲು ಬಯಸುತ್ತಾರೆ, ಅದು ತಮ್ಮ ಅಭಿಪ್ರಾಯಗಳಾಗಿರಲಿ ಅಥವಾ ಯಾವುದಾದರೂ ವಿಚಾರವಾಗಿರಲಿ.

ಕರ್ಕ ರಾಶಿ:
ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಈ ರಾಶೀಯವರು ತುಂಬಾ ಮೂಡಿ ಆಗಿರುತ್ತಾರೆ. ಅವರು ಒಂದು ಕ್ಷಣ ಉತ್ತಮವಾಗಿದ್ದರೆ, ಇನ್ನೊಂದು ಕ್ಷಣದಲ್ಲಿ ಬದಲಾಗುತ್ತಾರೆ. ಅದು ಇತರ ವ್ಯಕ್ತಿಯು ತಮ್ಮ ಭಾವನೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಗಲಭೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಕರ್ಕಾಟಕ ರಾಶಿಯವರು ನಿರಾಕರಣೆಯನ್ನು ಉತ್ತಮವಾಗಿ ಸ್ವೀಕರಿಸುವುದಿಲ್ಲ, ಅದೇ ಕಾರಣಕ್ಕೆ ಹೆಚ್ಚು ಡ್ರಾಮಾ ಮಾಡುತ್ತಾರೆ.

ಕುಂಭ ರಾಶಿ:
ಸಾಮಾನ್ಯವಾಗಿ, ಕುಂಭ ರಾಶಿಯವರು ಒಂದು ಮೂಲೆಯಲ್ಲಿ ಉಳಿಯಲು ಇಷ್ಟಪಡುತ್ತಾರೆ. ಆದರೆ ಅವರು ಕೋಪಗೊಂಡಾಗ, ನಾಟಕೀಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ಈ ವಿಷಯಕ್ಕೆ ಬಂದಾಗ ಅವರು ತುಂಬಾ ಅನಿರೀಕ್ಷಿತರಾಗಿದ್ದು, ಇವರ ಜೊತೆ ವ್ಯವಹರಿಸುವುದು ಕಷ್ಟಕರ. ಏಕೆಂದರೆ, ಇವರು ಯಾವುದೇ ಕಾರಣವಿಲ್ಲದೆ ನಾಟಕೀಯವಾಗಿ ವರ್ತಿಸುತ್ತಾರೆ.

ಸಿಂಹ ರಾಶಿ:
ಅವರು ನಾಟಕದ ರಾಜ ಮತ್ತು ರಾಣಿಯರು. ಅವರು ಯಾವಾಗಲೂ ತಮಗೆ ಗಮನ ಕೊಡಬೇಕು ಎಂದು ಬಯಸುತ್ತಾರೆ ಏಕೆಂದರೆ ಅವರು ಉತ್ತಮರು ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಇವರು ತುಂಬಾ ನಾಟಕೀಯರಾಗಿದ್ದಾರೆ ಮತ್ತು ದುರಹಂಕಾರದಿಂದ ಅತಿಯಾಗಿ ಕೆಲಸ ಮಾಡುತ್ತಾರೆ. ಆದರೆ ಆ ಎಲ್ಲಾ ನಾಟಕದ ಜೊತೆಗೆ ಅವರು ಸಹ ಕರುಣಾಮಯಿ ಆಗಿರುತ್ತಾರೆ.



Click it and Unblock the Notifications











