Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಖುಷ್ಬೂ ಸುಂದರ್ ಬಾಳಿನಲ್ಲಿ ಅಪ್ಪನೇ ವಿಲನ್: ಅಪ್ಪ ಎಂದ ಪದದ ಅರ್ಥ ತಿಳಿಯದ ಕ್ರೂರಿ ಆತ
ಬಹುಭಾಷಾ ನಟಿ ಖುಷ್ಬೂ ಸುಂದರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳುತ್ತಿದ್ದ ಟಾಪ್ ನಟಿಯಲ್ಲಿ ಒಬ್ಬರು ಈಕೆ. ಖುಷ್ಬೂ ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಮಲಯಾಳಂ ಸಿನಿಮಾಗಳಲ್ಲಿ ಛಾಪು ಮೂಡಿಸಿದ್ದ ನಟಿ.

ಕನ್ನಡಕ್ಕೆ ಖುಷ್ಬೂರನ್ನು ಕರೆತಂದವರೇ ರವಿಚಂದ್ರನ್. ಆಗಿನ ಕಾಲದಲ್ಲಿ ಖುಷ್ಬೂ ಕನ್ನಡಿಗರೇ ಫೇವರೇಟ್ ನಟಿ ಅಂದ್ರೆ ತಪ್ಪಾಗೋದಿಲ್ಲ. ರವಿಚಂದ್ರನ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಅನೇಕ ದಿಗ್ಗಜ ನಟರ ಜೊತೆಗೂ ಕೂಡ ಇವರು ಕನ್ನಡದಲ್ಲಿ ಸ್ಕ್ರೀನ್ ಶೇರ್ ಮಾಡ್ಕೊಂಡಿದ್ರು.
ಬಣ್ಣದ ಲೋಕದಿಂದ ಹೊರಬಂದ ಮೇಲೆ ಟಿವಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಖುಷ್ಬೂ ರಾಜಕೀಯದಲ್ಲೂ ಸಂಚಲನ ಸೃಷ್ಟಿ ಮಾಡಿದ್ರು. ಆದ್ರೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಖುಷ್ಬೂ ಸುಂದರ್ ಹೇಳಿರೋ ಅದೊಂದು ಹೇಳಿಕೆ ಇದೀಗ ಸಂಚಲನವನ್ನು ಸೃಷ್ಟಿಸ್ತಿದೆ.
ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಖುಷ್ಬೂ ಸುಂದರ್
ಇತ್ತೀಚಿಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ಖುಷ್ಬೂ ಹೆಣ್ಣಾಗಲಿ ಅಥವಾ ಗಂಡಾಗಲಿ ಖಂಡಿತ ಅವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಇರುತ್ತಾರೆ ಎಂದರು. ನಂತರ ಲೈಂಗಿಕ ದೌರ್ಜನ್ಯ ನನ್ನ ಜೀವನದ ಮೇಲೂ ಪ್ರಭಾವ ಬೀರಿದೆ ಅಂತ ಹೇಳುತ್ತಾ ನಾನು ಎಂಟು ವರ್ಷದವಳಿರುವಾಗ ನನ್ನ ತಂದೆಯೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಹಾಗೂ ನನ್ನ ಅಮ್ಮನಿಗೆ ಮನಬಂದಂತೆ ತಳಿಸುತ್ತಿದ್ದರು ಎಂಬ ಭಯಾನಕ ಸತ್ಯವನ್ನು ಬಚ್ಚಿಟ್ಟಿದ್ದಾರೆ.
ಮಾತು ಮುಂದುವರಿಸುತ್ತಾ ಖುಷ್ಬೂ ಸುಂದರ್ ಅವರು ನನ್ನ ತಂದೆ ಹೆಂಡತಿಯನ್ನು ಹೊಡೆಯುವುದು ಹಾಗೂ ಒಬ್ಬಳೇ ಮಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸೋದು ಆತನ ಜನ್ಮಸಿದ್ಧ ಹಕ್ಕು ಎಂದು ತಿಳಿದಿದ್ದರು. ನಾನು ಎಂಟು ವರ್ಷದವಳಿರಬೇಕಾದರೆ ನನ್ನ ಮೇಲೆ ದೌರ್ಜನ್ಯ ಶುರುವಾಗಿತ್ತು. ಆದರೆ ನಾನು ಹದಿನೈದು ವರ್ಷಕ್ಕೆ ಕಾಲಿಟ್ಟಾಗ ಇದನ್ನು ವಿರೋಧಿಸಲು ಶುರುಮಾಡಿದೆ. ನನ್ನ ತಂದೆ ಏನೇ ಮಾಡಿದ್ರು ನನ್ನ ತಾಯಿ ಆತನನ್ನು ದೇವರಂತೆ ಕಾಣುತ್ತಿದ್ದರು. ನಾನು ಹದಿನಾರನೇ ವರ್ಷಕ್ಕೆ ಕಾಳಿಟ್ಟಾಗ ನಮ್ಮ ತಂದೆ ನಮ್ಮನ್ನು ಇದ್ದಕ್ಕಿದ್ದ ಹಾಗೇ ಬಿಟ್ಟು ಹೋದರು ಎಂದು ಹೇಳಿಕೆ ನೀಡಿದ್ದಾರೆ. ಖಷ್ಬೂ ಹೇಳಿದ ಇದೇ ವಿಚಾರ ಈಗ ದೇಶದಾದ್ಯಂತ ತಲ್ಲಣ ಮೂಡಿಸಿದೆ.
ಖುಷ್ಬೂ ಸಿನಿಮಾ ಪಯಣ ಹೇಗಿತ್ತು?
ಖಷ್ಬೂ ಸೆಪ್ಟೆಂಬರ್ 29 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸುತ್ತಾರೆ. ಅವರ ಮೊದಲ ಹೆಸರು ನಖತ್ ಖಾನ್. ಕಳೆದ 34 ವರ್ಷಗಳಿಂದ ಖುಷ್ಬೂ ಅವರು ಚೆನ್ನೈನಲ್ಲಿ ನೆಲೆಸಿದ್ದಾರೆ. ಬಾಲನಟಿಯಾಗಿ ಬಾಲಿವುಡ್‌ಗೆ ಕಾಲಿಟ್ಟಿದ್ದ ಇವರು ದಕ್ಷಿಣ ಭಾರತದಲ್ಲಿ ತುಂಬಾನೇ ಖ್ಯಾತಿ ಪಡೆದಿದ್ದ ನಟಿ ಇವರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದ ಖುಷ್ಬೂ ತಮಿಳುನಾಡಿನ ಮೂರು ಅಂತರಾಷ್ಟೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಬಾಲ ನಟಿಯಾಗಿ ಕನ್ನಡದಲ್ಲಿ "ರಾಜ ನನ್ನ ರಾಜ" ಸಿನಿಮಾದ ಮೂಲಕ ಮೊದಲು ಚಿತ್ರರಂಗಕ್ಕೆ ಎಂಟ್ರಿ ಪಡೆದುಕೊಳ್ತಾರೆ. ಆದ್ರೆ ಆರಂಭಿಕ ಸಿನಿಮಾಗಳಲ್ಲಿ ಖುಷ್ಬೂ ಅಷ್ಟಾಗಿ ಗುರುತಿಸಿಕೊಳ್ಳುವುದಿಲ್ಲ. ಆದರೆ ನಂತರದ ದಿನಗಳಲ್ಲಿ ತಮಿಳಿನಲ್ಲಿ ನಂಬರ್ ಒನ್ ಹಿರೋಯಿನ್ ಆಗಿ ಗುರುತಿಸಿಕೊಳ್ಳುತ್ತಾರೆ. ಮುಂದೆ ಆಗಿದ್ದೆಲ್ಲಾ ಇತಿಹಾಸ. ಯಾಕಂದ್ರೆ ಎಲ್ಲಾ ಭಾಷೆಗಳಲ್ಲಿ ಖುಷ್ಬೂ ಅವರದ್ದೇ ಆದ ಒಂದು ಟ್ರೇಡ್ ಮಾರ್ಕ್ ಸೃಷ್ಟಿಸುತ್ತಾರೆ.
ಖಷ್ಬೂ ರಾಜಕೀಯ ಜೀವನ
ಸಿನಿ ಬದುಕಿನಿಂದ ಆಚೆ ಬಂದು ಕೆಲವರ್ಷಗಳ ನಂತರ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ಖುಷ್ಬೂ 2010 ರಲ್ಲಿ ಡಿಎಂಕೆ ಮೂಲಕ ಮೊದಲ ಬಾರಿಗೆ ರಾಜಕೀಯಕ್ಕೆ ಪದಾರ್ಪಣೆ ಮಾಡ್ತಾರೆ. ಆನಂತರ 2014, ನವೆಂಬರ್ 26ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗ್ತಾರೆ. ಕಾಂಗ್ರೆಸ್‌ನಲ್ಲಿ ಇರಬೇಕಾದರೆ ಅನೇಕ ಬಾರಿ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಿದ್ರು. ಅದೇ ರೀತಿ ಯಾವುದೇ ವಿಚಾರಗಳಿರಲಿ ಅದನ್ನು ಘಂಟಾಘೋಷವಾಗಿ ಮಾತ್ನಾಡುತ್ತಿದ್ರು. ಇದರಿಂದ ಅನೇಕ ಬಾರಿ ಅವರು ಟೀಕೆಗೆ ಒಳಗಾಗಿದ್ದು ಇದೆ. ನಂತರ ಏಕಾಏಕಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಖಷ್ಬೂ ಸದ್ಯ ಬಿಜೆಪಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವ ಈ ಹೊತ್ತಿನಲ್ಲಿ ಖ್ಯಾತ ನಟಿಯೊಬ್ಬರು ಹದಿಹರೆಯದಲ್ಲಿ ಅನುಭವಿಸಿದ ಕರಾಳ ಘಟನೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವಿಚಾರದಿಂದ ನಾವೆಲ್ಲ ಕಲಿಯೋದು ತುಂಬಾನೇ ಇದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸುವುದು ತುಂಬಾನೇ ಅವಶ್ಯಕ.



Click it and Unblock the Notifications


