Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ನ.5ರಿಂದ ಡಿ.4ರವರೆಗೆ ಕಾರ್ತಿಕ ಮಾಸ: ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ? ಇಲ್ಲಿದೆ ನೋಡಿ
ಅತ್ಯಂತ ಪವಿತ್ರವಾದ ಕಾರ್ತಿಕ ಮಾಸವು ನವೆಂಬರ್ 5ರಿಂದ ಡಿಸೆಂಬರ್ 4ರವರೆಗೆ ಇರಲಿದೆ. ವಿಷ್ಣು ಹಾಗೂ ಶಿವಾರಾಧನೆಗೆ ಉತ್ತಮವಾದ ಈ ಮಾಸವು ಸುಖ, ಶಾಂತಿ ಹಾಗೂ ಸಮೃದ್ಧತೆಯ ಸಂಕೇತವಾಗಿದೆ. ಈ ತಿಂಗಳು ದ್ವಾದಶ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ? ಯಾವೆಲ್ಲಾ ರಾಶಿಚಕ್ರಗಳಿಗೆ ಅದೃಷ್ಟವಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕಾರ್ತಿಕ ಮಾಸದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:
ವ್ಯಾಪಾರ ಮತ್ತು ಸಂಪತ್ತಿಗೆ ಇದು ಅನುಕೂಲಕರ ಸಮಯವಲ್ಲ. ಆದ್ದರಿಂದ ಎಚ್ಚರಿಕೆ ವಹಿಸಿ. ಮಕ್ಕಳಿಂದ ಸಮಸ್ಯೆಗಳನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಏಕೆಂದರೆ ಹವಾಮಾನ ಬದಲಾವಣೆಯಿಂದಾಗಿ ನಾನಾ ಸಮಸ್ಯೆಗಳು ಉದ್ಭವವಾಗಬಹುದು.

ವೃಷಭ:
ಪ್ರತಿ ಹೆಜ್ಜೆ ಮತ್ತು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ, ಇಲ್ಲವಾದಲ್ಲಿ ಸ್ವಲ್ಪ ನಷ್ಟವನ್ನು ಎದುರಿಸಬಹುದು. ಇತರರ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ. ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಗೆಲುವು ಕಾಣಬಹುದು.

ಮಿಥುನ:
ಈ ರಾಶಿಯವರಿಗೆ ವ್ಯಾಪಾರ ಮತ್ತು ಸಂಪತ್ತು ಗಳಿಕೆಗೆ ಉತ್ತಮ ಸಮಯ. ನಿಮ್ಮ ಎಲ್ಲಾ ಪರಿಶ್ರಮಕ್ಕೆ ಫಲಿತಾಂಶ ಸಿಗುವ ಸಮಯ ಇದು. ಆದರೆ ನೀವು ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಎದುರಿಸಬಹುದು.

ಕರ್ಕ:
ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಯಶಸ್ಸು ಪಡೆಯಬಹುದು. ಹೆಸರು, ಖ್ಯಾತಿ ಮತ್ತು ಜನಪ್ರಿಯತೆಯಲ್ಲಿ ಏರಿಕೆ ಕಂಡುಬರುತ್ತದೆ. ಸಣ್ಣ ಪ್ರಯಾಣದ ಅವಕಾಶಗಳನ್ನು ಪಡೆಯಬಹುದು. ಈ ರಾಶಿಯವರಿಗೆ ಉತ್ತಮ ಸಮಯ.

ಸಿಂಹ:
ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬಹುದು. ಸ್ನೇಹಿತರ ಸಹಾಯದಿಂದ ಯಶಸ್ಸನ್ನು ಪಡೆಯಬಹುದು. ಸಹೋದರರ ನಡುವೆ ವಿವಾದಗಳು ಉಂಟಾಗಬಹುದು. ಆದ್ದರಿಂದ ಈ ವಿಚಾರದಲ್ಲಿ ಮಾತನಾಡುವಾಗ ಎಚ್ಚರವಿರಲಿ.

ಕನ್ಯಾ:
ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ. ಇಲ್ಲವಾದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಯಾರಿಗೂ ನಿಂದನೀಯ ಭಾಷೆಯನ್ನು ಬಳಸಬೇಡಿ. ಇದು ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಬಹುದು.

ತುಲಾ:
ವ್ಯಾಪಾರ ಮತ್ತು ಕೆಲಸಕ್ಕೆ ಒಳ್ಳೆಯ ಸಮಯ. ಏನಾದರೂ ಹೊಸ ವ್ಯವಹಾರಕ್ಕೆ ಕೈಹಾಕಲು ಇದು ಉತ್ತಮ ಸಂದರ್ಭವಾಗಿದೆ. ಆದರೆ ಮನೆಯಲ್ಲಿ ಸಮಸ್ಯೆ ಉಂಟಾಗಬಹುದು. ಕಾಲೋಚಿತ ಕಾಯಿಲೆಗಳಿಂದ ಜಾಗರೂಕರಾಗಿರಿ.

ವೃಶ್ಚಿಕ:
ಈ ರಾಶಿಯವರಿಗೆ ಗ್ರಹಗಳ ಸಂಚಾರವು ಅನುಕೂಲಕರವಾಗಿಲ್ಲ. ಆಂತರಿಕ ಅಡಚಣೆಯಲ್ಲಿ ಭಾವನೆ ಮೇಲುಗೈ ಸಾಧಿಸುತ್ತದೆ. ಶತ್ರುಗಳು ನಿಮ್ಮನ್ನು ಸುಲಭವಾಗಿ ಸೋಲಿಸಬಹುದು ಆದ್ದರಿಂದ ಜಾಗರೂಕರಾಗಿರಿ.

ಧನು:
ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ಆದ್ದರಿಂದ ಸರಿಯಾಗಿ ಪ್ಲಾನ್ ಮಾಡಿಕೊಂಡು ಕೆಲಸಗಳನ್ನು ಮಾಡಿ. ನಿಮಗೆ ಪಾದಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ.

ಮಕರ:
ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಉನ್ನತ ಅಧಿಕಾರಿಗಳು ನಿಮ್ಮ ಪರವಾಗಿರುತ್ತಾರೆ. ವಿರೋಧಿಗಳು ದುರ್ಬಲರಾಗಿರುತ್ತಾರೆ. ನಿಮಗೆ ಉತ್ತಮ ಸಮಯ ಇದಾಗಿದೆ.

ಕುಂಭ:
ನೀವು ಹೆಚ್ಚು ಚೈತನ್ಯವನ್ನು ಅನುಭವಿಸುವಿರಿ. ಅಂತಃಪ್ರಜ್ಞೆಯ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಹೊಸ ಕೆಲಸಗಳನ್ನು ಮಾಡಲು ಮನಸ್ಸು ಮಾಡುತ್ತೀರಿ. ನಿಮ್ಮ ಉದ್ಯಮಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ.

ಮೀನ:
ಗಳಿಕೆಯ ಮೇಲೆ ಹೆಚ್ಚು ಗಮನಹರಿಸುವಿರಿ. ಕೆಲಸದ ದಕ್ಷತೆಯು ಹೆಚ್ಚಾಗುತ್ತದೆ. ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಕಂಡುಬರುತ್ತವೆ. ಈ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿದೆ.



Click it and Unblock the Notifications
