Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಏ.6ಕ್ಕೆ ಕುಂಭ ರಾಶಿಗೆ ಗುರು ಸಂಚಾರ: 12 ರಾಶಿಗಳ ಮೇಲಾಗಲಿದೆ ಈ ಪರಿಣಾಮ
ಗುರು ಗ್ರಹವನ್ನು ಶುಭ ಗ್ರಹ, ಎಲ್ಲರಿಗು ಉತ್ತಮ ಫಲಿತಾಂಶವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವ ಗ್ರಹ ಎಂದು ಹೇಳಲಾಗುತ್ತದೆ. ಕುಂಭ ರಾಶಿಯಲ್ಲಿ ಗುರುವಿನ ಈ ಸಂಚಾರವು ಖಂಡಿತವಾಗಿಯೂ ಎಲ್ಲಾ ಹನ್ನೆರಡು ರಾಶಿಚಕ್ರಗಳ ಮೇಲೆ ಪರಿಣಾಮ ಬೀರಲಿದೆ.

ನವೆಂಬರ್ 20, 2020ಕ್ಕೆ ಮಕರ ರಾಶಿಗೆ ಪ್ರವೇಶಿಸಿದ್ದ ಗುರು ಏಪ್ರಿಲ್ 6ಕ್ಕೆ ಕುಂಭ ರಾಶಿಗೆ ಪ್ರವೇಶಿಸಲಿದೆ. ಗುರು ಮಕರ ರಾಶಿಯಲ್ಲಿ ಇದ್ದಾಗ ನಿಮ್ಮ ಜೀವನದಲ್ಲಿ ಇದರ ಪ್ರಭಾವ ಹೇಗಿತ್ತು ಎಂಬುವುದು ನಿಮಗೆ ತಿಳಿದಿದೆ. ಇದೀಗ ಗುರು ರಾಶಿ ಬದಲಾಯಿಸುವುದರಿಂದ ಇದರ ಪ್ರಭಾವ ನಿಮ್ಮ ರಾಶಿಯ ಮೇಲೆ ಹೇಗಿರಲಿದೆ ನೋಡೋಣ:

ಮೇಷ ರಾಶಿ
ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಮೇಷ ರಾಶಿಯವರಿಗೆ ಯಾವುದಾದರೂ ಕಾಯಿಲೆ ಇದ್ದರೆ ಈ ಅವಧಿಯಲ್ಲಿ ಚೇತರಿಕೆ ಕಂಡು ಬರುವುದು. ಕುಟುಂಬ ಜೀವನವೂ ಚೆನ್ನಾಗಿರುತ್ತದೆ. ವೃತ್ತಿ ಜೀವನದಲ್ಲೂ ಪ್ರಗತಿ ಕಾಣುವಿರಿ.

ವೃಷಭ ರಾಶಿ
ವೃಷಭ ರಾಶಿಯವರೇ ಈ ಸಮಯದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಇನ್ನು ಆರ್ಥಿಕ ವಿಷಯದಲ್ಲಿ ಹಾಗೂ ಆಸ್ತಿ ವಿಷಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಜಾಗೂರಕರಾಗಿರಬೇಕು.

ಮಿಥುನ ರಾಶಿ
ಈ ಸಮಯದಲ್ಲಿ ನೀವು ಆಹಾರಕ್ರಮದ ಕಡೆ ತುಂಬಾನೇ ಜಾಗ್ರತೆವಹಿಸಬೇಕು. ಇನ್ನು ವ್ಯವಹಾರಸ್ಥರಿಗೆ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಉದ್ಯೋಗಿಗಳು ಈ ಸಮಯದಲ್ಲಿ ಬಯಸಿದ ವರ್ಗಾವಣೆ ಬಳಸಬಹುದು. ಮಿಥುನ ರಾಶಿಯ ಮಕ್ಕಳಿಗೆ ಇದು ಒಳ್ಳೆಯ ಸಮಯವಾಗಿದೆ. ಇನ್ನು ಈ ಸಮಯದಲ್ಲಿ ನೀವು ಸಾಕಷ್ಟು ಪ್ರಯಾಣ ಮಾಡುವಿರಿ.

ಕರ್ಕ ರಾಶಿ
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಕರ್ಕರಾಶಿಯವರಿಗೆ ಈ ಸಂಚಾರ ವರದಾನವಾಗಲಲಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಇನ್ನು ವಿದೇಶದಲ್ಲಿ ಶಿಕ್ಷಣ ಹಾಗೂ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಈ ಸಮಯ ಅನುಕೂಲಕರವಾಗಿದೆ. ಈ ಸಂಚಾರ ಅದೃಷ್ಟವನ್ನು ತರುತ್ತದೆ.

ಸಿಂಹ ರಾಶಿ
ಈ ಸಮಯದಲ್ಲಿ ಡ್ರೈವ್ ಮಾಡುವಾಗ ನಿಧಾನಕ್ಕೆ ಓಡಿಸಿ. ಇನ್ನು ನೀವು ಗಾಡಿ ಅಥವಾ ಆಸ್ತಿ ಖರೀದಿಗೆ ಪ್ರಯತ್ನಿಸುತ್ತಿದ್ದರೆ 2022ಕ್ಕೆ ಮುಂಚೆ ಅದಕ್ಕೆ ಅನುಕೂಲಕರವಾದ ಸಮಯವಿಲ್ಲ. ನಿಮ್ಮ ಗುರಿ ಸಾಧಿಸಲು ಪ್ರಯತ್ನಿಸಿ, ಅದೇ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ.

ಕನ್ಯಾ ರಾಶಿ
ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ ನೀವು ಹುಷಾರ್ ಆಗಿರಬೇಕು, ಅದರಲ್ಲೂ ಲೋನ್ ತೆಗೆದುಕೊಂಡಿದ್ದರೆ ಅದನ್ನು ಸರಿಯಾಗಿ ಪಾವತಿಸಿ. ಇನ್ನು ಸರ್ಕಾರಿ ಉದ್ಯೋಗಕ್ಕೆ ಪರೀಕ್ಷೆ ಬರೆದಿದ್ದರೆ ಅದರಲ್ಲಿ ಮೆರಿಟ್ ಸಿಗುವುದು. ಅಲ್ಲದೆ ವಿದೇಶದಲ್ಲಿ ಓದಲು ಪ್ರಯತ್ನಿಸುತ್ತಿದ್ದರೆ ಅದು ಸಾಧ್ಯವಾಗುವುದು. ಇನ್ನು ಸ್ಪೋರ್ಟ್ಸ್ ಹಾಗೂ ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶ ಸಿಗುವುದು.

ತುಲಾ ರಾಶ
ತುಲಾ ರಾಶಿಯವರೇ ನೀವು ಆಹಾಕ್ರಮದ ಕಡೆ ಗಮನ ನೀಡಬೇಕು, ಏಕೆಂದರೆ ಆಸಿಡ್ ರಿಫ್ಲೆಕ್ಸ್, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು. ಇನ್ನು ಬ್ಯಾಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶ ಸಿಗುವುದು. ಇನ್ನು ಈ ಸಂಚಾರದ ಸಮಯದಲ್ಲಿ ನೀವಾಡುವ ಮಾತುಗಳ ಬಗ್ಗೆ ಕೂಡ ಗಮನವಿರಬೇಕು.

ವೃಶ್ಚಿಕ ರಾಶಿ
ನೀವು 35 ವರ್ಷ ಮೇಲ್ಪಟ್ಟವರಾದರೆ ಆರೋಗ್ಯದ ಕಡೆ ಗಮನ ನೀಡಬೇಕು. ಇನ್ನು ವಿವಾಹಿತರು ತಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಉಂಟಾಗದಂತೆ ಎಚ್ಚರವಹಿಸಬೇಕು. ಇನ್ನು ಆರೋಗ್ಯ ಹಾಗೂ ಸಂಪತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದ ಈ ಸಂಚಾರದ ಸಮಯದಲ್ಲಿ ಮುಕ್ತರಾಗುವಿರಿ.

ಧನು ರಾಶಿ
ನಿಮಗೆ ಸಾಡೇ ಸಾತಿ ದೋಷದ ಕೊನೆಯ ಹಂತದಲ್ಲಿ ಇರುವುದರಿಂದ ಏನು ಸಂಭವಿಸುತ್ತದೆಯೋ ಅದನ್ನು ಹಾಗೆಯೇ ಸ್ವೀಕರಿಸಲು ಪ್ರಯತ್ನಿಸಿ. ಇನ್ನು ಈ ಸಂಚಾರದ ಸಮಯವು ಕಳೆದ 5 ವರ್ಷಗಳಿಗಿಂತ ನಿಮಗೆ ಅನುಕೂಲಕರವಾಗಿದೆ ಎಂದು ಹೇಳಬಹುದು. ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಇದ್ದರೆ ನಿಮ್ಮ ಗೌರವ, ಹೆಸರು ಹೆಚ್ಚಾಗುವುದು.

ಮಕರ ರಾಶಿ
ನೀವು ಸಾಡೇ ಸಾತಿಯ ಎರಡನೇ ಹಂತದಲ್ಲಿ ಇರುವುದರಿಂದ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ತೊಂದರೆ ಉಂಟಾಗಬಹುದು, ಕೂಡಿಟ್ಟ ಹಣ ಖರ್ಚಾಗುವ ಸಾಧ್ಯತೆ ಇದೆ, ಆದ್ದರಿಂದ ನಿಮ್ಮ ಆದಾಯ ಹಾಗೂ ಖರ್ಚು ಎರಡನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ ಈ ಸಂಚಾರದ ಸಮಯ ಅನುಕೂಲಕರವಾಗಿದೆ.

ಕುಂಭ ರಾಶಿ
ಗುರು ಕುಂಭ ರಾಶಿಗೆ ಸಂಚರಿಸುತ್ತಿದ್ದಾನೆ. ನೀವು ಈಗಾಗಲೇ ವೃತ್ತಿ ಜೀವನದಲ್ಲಿ ತೊಂದರೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿರಬಹುದು. ಇವೆಲ್ಲಾ ಸಾಡೇ ಸಾತಿ ದೋಷದಿಂದ ಉಂಟಾಗಿತ್ತು. ಆದರೆ ಕುಂಭ ರಾಶಿಗೆ ಗುರುವಿನ ಸಂಚಾರವಾದ ಬಳಿಕ ಪರಿಸ್ಥಿ ಬದಲಾಗಿದೆ, ಆರೋಗ್ಯ ಸಮಸ್ಯೆ ಇದ್ದರೆ ಅದರಿಂದಲೂ ಸುಧಾರಣೆ ಕಾಣುವಿರಿ.

ಮೀನ ರಾಶಿ
ಈ ಸಂಚಾರದ ಸಮಯದಲ್ಲಿ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇನ್ನು ಆಸ್ತಿ ವಿಷಯದಲ್ಲಿ ನಿಮಗೆ ಅನುಕೂಲಕರವಾದ ಫಲಿತಾಂಶ ದೊರೆಯಲಿದೆ. ಇನ್ನು ಪ್ರೇಮಿಗಳಿಗೂ ಇದು ಉತ್ತಮ ಸಮಯವಾಗಿದೆ. ವಿದ್ಯಾರ್ಥಿಗಳಿಗೂ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.



Click it and Unblock the Notifications