Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಾಕಾಲ ದರ್ಶನ ಪಡೆದ ವಿರೂಷ್ಕಾ ದಂಪತಿ: ಉಜ್ಜಯಿನಿ ಜ್ಯೋತಿರ್ಲಿಂಗ ಹಾಗೂ ಇಲ್ಲಿಯ ಭಸ್ಮ ಆರತಿ ವಿಶೇಷತೆಯೇನು?
ಭಾರತದಲ್ಲಿ 12 ಪ್ರಮುಖ ಜ್ಯೋತಿರ್ಲಿಂಗಗಳಿವೆ. ಪ್ರತಿಯೊಂದು ಜ್ಯೋತಿರ್ಲಿಂಗ ತುಂಬಾನೇ ವಿಶೇಷತೆಯನ್ನು ಹೊಂದಿದೆ. ಈ ಅದರಲ್ಲೊಂದು ಉಜ್ಜಯಿನಿನಲ್ಲಿರುವ ಜ್ಯೋತಿರ್ಲಿಂಗ.

ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇತ್ತೀಷೆಗಷ್ಟೇ ಕೊಹ್ಲಿ ಪತ್ನಿ ಸಮೇತ ಭೇಟಿ ನೀಡಿದ್ದರು. ಉಜ್ಜಯಿನಿನಲ್ಲಿರುವ ಈ ಜ್ಯೋತಿರ್ಲಿಂಗದ ವಿಶೇಷತೆಯೇನು, ಇಲ್ಲಿಯ ಭಷ್ಮ ಆರತಿ ಕೂಡ ತುಂಬಾ ವಿಶೇಷತೆಯನ್ನು ಹೊಂದಿದೆ.
ಈ ದೇವಾಲಯದ ವಿಶೇಷತೆಯೇನು, ಪೌರಾಣಿಕ ಹಿನ್ನೆಲೆಯೇನು ಎಂದು ನೋಡೋಣ ಬನ್ನಿ:
ಜ್ಯೋತಿರ್ಲಿಂಗಗಳಲ್ಲಿ ಮಹಾಕಾಲ ಅತ್ಯಂತ ವಿಶೇಷವಾಗಿದೆ
ಉಜ್ಜಯಿನ್‌ನ ಮಹಾಕಾಲ ಶಿವಲಿಂಗವನ್ನು ವಿಶೇಷ ಶಿವಲಿಂಗವೆಂದು ಹೇಳಲಾಗಿದೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಮೂರು ಭಾಗಗಳಲ್ಲಿದೆ. ಕೆಳಗಿನ ವಿಭಾಗದಲ್ಲಿ ಮಹಾಕಾಳೇಶ್ವರ, ಎರಡನೇ ವಿಭಾಗದಲ್ಲಿ ಓಂಕಾರೇಶ್ವರ ಮತ್ತು ಮೂರನೇ ವಿಭಾಗದಲ್ಲಿ ನಾಗಚಂದ್ರೇಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿಯ ನಾಗಚಂದ್ರೇಶ್ವರ ಶಿವಲಿಂಗದ ದರ್ಶನವನ್ನು ವರ್ಷಕ್ಕೊಮ್ಮೆ ನಾಗ ಪಂಚಮಿಯ ದಿನದಂದು ಮಾತ್ರ ಪಡೆಯಬಹುದು.
ಉಜ್ಜಯಿನಿಯಲ್ಲಿ ಮೂರು ಮಹಾಕಾಲಗಳಿವೆ
ಉಜ್ಜಯಿನಿಯಲ್ಲಿ ಮೂರು ಮಹಾಕಾಲಗಳು ಕುಳಿತಿದ್ದಾರೆ. ಮೊದಲನೆಯದು ಕಾಲ ಭೈರವ ಮಹಾಕಾಲ, ಎರಡನೆಯದು ಗಡ್ಕಲಿಕಾ ಮತ್ತು ಮೂರನೆಯದು ಅರ್ಧ ಕಾಲ ಭೈರವ.
ಇಲ್ಲಿಯ ಭಷ್ಮ ಆರತಿ ತುಂಬಾ ವಿಶೆಷತೆಯಿಂದ ಕೂಡಿದೆ
ಮಹಾಕಾಲ ನಗರದಲ್ಲಿ ಭಸ್ಮ ಆರತಿಗೆ ವಿಶೇಷ ಮಹತ್ವವಿದೆ. ಇಲ್ಲಿ ಮಹೇಶ್ವರನಿಗೆ ಪ್ರತಿದಿನ ವಿಭೂತಿ ಹಚ್ಚಿ ಆರತಿ ಎತ್ತಲಾಗುವುದು. ಇಲ್ಲಿಗೆ ಹೋದಾಗ ಭಸ್ಮ ಆರತಿ ನೋಡಬೇಕೆಂದರೆ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಪಡೆಯಿರಿ.
ಉಜ್ಜಯಿನಿ ಇತಿಹಾಸ
ಹಿಂದೆ ಉಜ್ಜಯಿನಿಯನ್ನು ರಾಜರುಗಳು ಆಳ್ವಿಕೆ ಮಾಡುತ್ತಿದ್ದರು. ಈ ನಗರವನ್ನು ವಂತಿಕಾ, ಅಮರಾವತಿ ಮತ್ತು ಇಂದ್ರಪುರಿಯೆಂಬ ಹೆಸರುಗಳಿಂದ ಕೂಡ ಕ್ರೆಯಲಾಗುತ್ತಿತ್ತು. ಇಲ್ಲಿ ಹೆಚ್ಚು ದೇವಾಲಯಗಳಿದ್ದು ಅವುಗಳ ಗೋಪುರವನ್ನು ಚಿನ್ನದಲ್ಲಿ ನಿರ್ಮಿಸಿರುವುದರಿಂದ 'ಸ್ವರ್ಣ ಶೃಂಗ' ಎಂದು ಕೂಡ ಕರೆಯಲಾಗಿದೆ.
ಭಾರತದ ಪವಿತ್ರ ಸ್ಥಳವಾಗಿರುವ ಇದು 28 ತೀರ್ಥಗಳನ್ನು, 7 ಸಾಗರ ತೀರ್ಥಗಳನ್ನು ಹೊಂದಿದೆ. ಈ ನಗರದಲ್ಲಿ 30 ಶಿವಲಿಂಗಳಿದ್ದು ಅವುಗಳಲ್ಲಿ ಮಹಾಕಾಲ ಜ್ಯೋತಿರ್ಲಿಂಗ ಪ್ರಮುಖವಾಗಿದೆ.
ಈ ಜ್ಯೋತಿರ್ಲಿಂಗವನ್ನು 3 ಮತ್ತು 4 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಐತಿಹಾಸಿಕ ಪುರಾವೆಗಳು ಹೇಳುತ್ತವೆ.
ಪೌರಾಣಿಕ ಕತೆ
ಉಜ್ಜಯಿನಿ ನಗರದಲ್ಲಿ ಒಬ್ಬ ಬ್ರಾಹ್ಮಣ ಇದ್ದ ಅವನು ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಆದರೆ ಅಲ್ಲಿಗೆ ಬಂದ ದುಶಾನ ಎಂಬ ರಾಕ್ಷಸ ಶಿವನಿಂದ ವರ ಪಡೆದು ತುಂಬಾ ಅಹಂಕಾರಿಯಾಗಿ, ಕ್ರೂರಿಯಾಗಿ ವರ್ತಿಸುತ್ತಿದ್ದ. ಆ ರಾಕ್ಷಸ ಬ್ರಾಹ್ಮಣನಿಗೂ ತೊಂದರೆ ಕೊಡಲಾರಂಭಿಸುತ್ತಶನೆ. ಆ ಬ್ರಾಹ್ಮಣ ತನ್ನನ್ನು ರಕ್ಷಿಸಲು ಶಿವನ ಮೊರೆ ಹೋಗುತ್ತಾನೆ. ಆಗ ಭೂಮಿ ಬಾಯ್ದೆರೆದು ಶಿವನು ಮಹಾಕಾಲ ರೂಪದಲ್ಲಿ ಪ್ರತ್ಯಕ್ಷಗೊಂಡು ದುಶಾನಿಗೆ ಯಾರಿಗೂ ತೊಂದರೆ ಕೊಡಬೇಡ ಎಂದು ಹೇಳುತ್ತಾನೆ, ಆದರೆ ಅದನ್ನು ದುಶಾನ ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದರಿಂದ ಕೋಪೋದ್ರಿಕ್ತಗೊಂಡ ಶಿವನು ದುಶಾನನ್ನು ತುಂಡುಗಳನ್ನಾಗಿ ಮಾಡಿ ಸುಟ್ಟುಬಿಟ್ಟ. ಆದರೂ ಮಹಾಕಾಲನ ಕೋಪ ತಣ್ಣಗಾಗುವುದಿಲ್ಲ. ಶಿವ, ಬ್ರಹ್ಮ ವಿಷ್ಣು ಮತ್ತು ಇತರ ದೇವತೆಗಳು ಪ್ರತ್ಯಕ್ಷರಾಗಿ ಅವರನ್ನು ಶಾಂತಗೊಳಿಸುತ್ತಾರೆ ಎಂಬ ಪೌರಾಣಿಕ ಕತೆ ಇದೆ.



Click it and Unblock the Notifications

