ಫೆಬ್ರವರಿ ತಿಂಗಳ ಬಗ್ಗೆ ಅಚ್ಚರಿ ಮೂಡಿಸುವ ಸಂಗತಿ

ಹೊಸ ವರ್ಷ ಬಂತೆಂದರೆ ಎಲ್ಲರಿಗೂ ಹರುಷ. ಆ ವರ್ಷದ ಯಾವ ತಿಂಗಳಿನಲ್ಲಿ ಯಾವ ದಿನ ಒಳ್ಳೆಯದು, ಯಾವ ದಿನ ರಜಾ ದಿನ, ಯಾವ ದಿನ ಅದೃಷ್ಟದ ದಿನ ಎಂದೆಲ್ಲಾ ಯೋಚಿಸುತ್ತೇವೆ. ಯಾವುದೇ ತಿಂಗಳಿನಲ್ಲಿ ಯಾವುದೇ ವಿಶೇಷಗಳಿದ್ದರೆ ಅದು ಅಚ್ಚರಿಯೆನಿಸುತ್ತದೆ. ಅಷ್ಟೇ ಅಲ್ಲ, ಕೆಲವು ತಿಂಗಳ ಕೆಲವು ವಾರ, ದಿನ ಗಂಟೆಗಳು ನಮಗೆ ಅಪಾಯವನ್ನು ತಂದೊಡ್ಡಬಲ್ಲವು ಎಂಬಿತ್ಯಾದಿ ವಿಷಯಗಳ ಎದೆ ಝಲ್ ಎನ್ನುವಂತೆ ಮಾಡುತ್ತದೆ! ಇನ್ನು ನಾವೀಗ ಹೇಳಲಿರುವ ಒಂದು ತಿಂಗಳಿನ ಬಗ್ಗೆ ನಿಮಗೆ ಅಚ್ಚರಿ ಎನಿಸುವುದರಲ್ಲಿ ಸಂಶಯವಿಲ್ಲ. ಅದೇ ಫೆಬ್ರವರಿ ತಿಂಗಳು!

Interesting Facts About February

1. ಫೆಬ್ರವಾ (ಫೆಬ್ರ) ನಂತರ ಫೆಬ್ರವರಿ ಎಂದು ಕರೆಯಲಾಗುತ್ತದೆ

1. ಫೆಬ್ರವಾ (ಫೆಬ್ರ) ನಂತರ ಫೆಬ್ರವರಿ ಎಂದು ಕರೆಯಲಾಗುತ್ತದೆ

ಇದರ ಹೆಸರಿನಲ್ಲಿಯೇ ಅಡಗಿದೆ ಅಚ್ಚರಿ! ಫೆಬ್ರವಾ ಎನ್ನುವುದು ಒಂದು ಧಾರ್ಮಿಕ ಶುದ್ಧೀಕರಣದ ಆಚರಣೆಯಾಗಿದ್ದು ಇದನ್ನು ಆರಂಭದಲ್ಲಿ ರೋಮ್ ಸ್ಪ್ರಿಂಗ್ ಕ್ಲೀನಿಂಗ್ ಫೆಸ್ಟಿವಲ್ (ರೋಮ್ ನಲ್ಲಿ ವಸಂತದಲ್ಲಿ ಶುಚಿಗೊಳಿಸುವ ಒಂದು ಉತ್ಸವ) ಎಂದೇ ಕರೆಯಲಾಗುತ್ತಿತ್ತು. ಈ ಉತ್ಸವದಲ್ಲಿ ಜನರು ಧಾರ್ಮಿಕವಾಗಿ ಶುಚಿಗೊಳ್ಳುತ್ತಿದ್ದರು. ಫೆಬ್ರವಾ, ಇದು ರೋಮನ್ ದೇವರ ಹೆಸರಾಗಿದ್ದು, ಈ ಕಾರಣದಿಂದಾಗಿ ಫೆಬ್ರವಾ ಉತ್ಸವಕ್ಕೆ ಹೀಗೆ ಹೆಸರಿಡಲಾಯಿತು.

2. ಹುಣ್ಣಿಮೆಯೇ ಇಲ್ಲದೇ ಕಳೆಯುವ ಏಕೈಕ ತಿಂಗಳು

2. ಹುಣ್ಣಿಮೆಯೇ ಇಲ್ಲದೇ ಕಳೆಯುವ ಏಕೈಕ ತಿಂಗಳು

ಫೆಬ್ರವರಿಯ ಬಗ್ಗೆ ಸಾಮಾನ್ಯರಿಗೆ ತಿಳಿಯದ ದೊಡ್ಡ ಸಂಗತಿಯೆಂದರೆ ಈ ತಿಂಗಳಿನಲ್ಲಿ ನಿಮಗೆ ಹುಣ್ಣಿಮೆ ಕಾಣಲು ಸಿಗುವುದಿಲ್ಲ! ‘ತಿಂಗಳು' (ಮಂಥ್) ಎಂಬ ಪದವು 'ಚಂದ್ರ-ನೇ' (ಮೂನ್-ಥ್) ಎಂಬುದರಿಂದ ಹುಟ್ಟಿಕೊಂಡಿದೆ, ಇದು ಒಂದು ಸಂಪೂರ್ಣ ಚಂದ್ರನ ಆವರ್ತನ ಮತ್ತು ಒಂದು ತಿಂಗಳ ಅವಧಿಯನ್ನು ತಿಳಿಸುತ್ತದೆ. ಒಂದು ಚಂದ್ರ ತಿಂಗಳು ಅಥವಾ ಒಂದು ಲೂನಾರ್ ಮಂಥ್ ಎಂದರೆ, ಎರಡು ಅಮಾವಾಸ್ಯೆಗಳ ನಡುವಿನ ಸರಾಸರಿ ಅವಧಿಯಾಗಿದೆ. ಇದು 28 ದಿನಗಳಿರುವ ಫೆಬ್ರವರಿ ತಿಂಗಳಿನಲ್ಲಿ 29 ದಿನ 12ಗಂಟೆ ಮತ್ತು 44 ನಿಮಿಷಗಳಾಗಿದೆ. 29 ದಿನಗಳ ಫೆಬ್ರವರಿ ವರ್ಷದಲ್ಲಿ ಅಥವಾ ಅಧಿಕ ವರ್ಷದಲ್ಲಿ ಇದು 29 ದಿನಗಳಾಗಿದ್ದು ಫೆಬ್ರವರಿ ತಿಂಗಳು ಒಂದು ಚಂದ್ರ ತಿಂಗಳಿಗಿಂತ ಕಡಿಮೆ ಅವಧಿಯದ್ದಾಗಿದೆ.

 3. ಅವಳಿ ತಿಂಗಳುಗಳು

3. ಅವಳಿ ತಿಂಗಳುಗಳು

ಫೆಬ್ರವರಿ, ಮಾರ್ಚ್ ಮತ್ತು ನವೆಂಬರ್ ತಿಂಗಳುಗಳು ಅವಳಿ ತಿಂಗಳುಗಳು ಎಂದು ನಿಮಗೆ ಗೊತ್ತೇ? ಹೇಗೆ ಅಂತೀರಾ? ಫೆಬ್ರವರಿ ತಿಂಗಳು ಅಧಿಕ ವರ್ಷವನ್ನು ಹೊಂದಿರದಿದ್ದರೆ ಈ ಮೂರು ತಿಂಗಳುಗಳು ಯಾವಾಗಲೂ ವಾರದ ಒಂದೇ ದಿನದಂದು ಪ್ರಾರಂಭವಾಗುತ್ತವೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ಒಂದು

ವೇಳೆ ಫೆಬ್ರವರಿ ತಿಂಗಳು ಅಧಿಕ ವರ್ಷವಾಗಿದ್ದರೆ ಇದಕ್ಕೆ ಆಗಸ್ಟ್ ತಿಂಗಳು ಅವಳಿಯಾಗಿರುತ್ತದೆ.

4. ಪೂರ್ಣ ಏಳು ದಿನಗಳ ವಾರ

4. ಪೂರ್ಣ ಏಳು ದಿನಗಳ ವಾರ

ಪ್ರತಿ ಆರು ವರ್ಷಗಳಿಗೊಮ್ಮೆ ಮಾತ್ರ ನಡೆಯುವ ಅಚ್ಚರಿ ಇದಾಗಿದೆ! ಫೆಬ್ರವರಿ ತಿಂಗಳು ಮಾತ್ರ ಪೂರ್ಣ 7 ದಿನಗಳ ವಾರವನ್ನು ಒಳಗೊಂಡಿರುವ ಒಂದು ತಿಂಗಳು. ಬೇರೆ ಯಾವುದೇ ತಿಂಗಳುಗಳಲ್ಲಿ ಇಂತಹ ಅದ್ಭುತ ಕಾಣಲು ಸಾಧ್ಯವಿಲ್ಲ.

 5. ವರ್ಷದ ಕಡಿಮೆ ದಿನಗಳನ್ನು ಹೊಂದಿರುವ ತಿಂಗಳು

5. ವರ್ಷದ ಕಡಿಮೆ ದಿನಗಳನ್ನು ಹೊಂದಿರುವ ತಿಂಗಳು

ನಮ್ಮ ಆಧುನಿಕ-ದಿನದ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಫೆಬ್ರವರಿ ವರ್ಷದ ಎರಡನೇ ತಿಂಗಳು. ಇದು ಸಾಮಾನ್ಯ ವರ್ಷಗಳಲ್ಲಿ ಕೇವಲ 28 ದಿನಗಳು ಮತ್ತು ಅಧಿಕ ವರ್ಷಗಳಲ್ಲಿ 29 ದಿನಗಳನ್ನು ಹೊಂದಿರುವ ವರ್ಷದ ಅತ್ಯಂತ ಕಡಿಮೆ ದಿನಗಳನ್ನು ಹೊಂದಿರುವ ತಿಂಗಳು. ಫೆಬ್ರವರಿ ಜನ್ಮ ಹೂವು ಪ್ರೈಮ್ರೋಸ್ (ವಸಂತ ಋತುವಿನಲ್ಲಿ ಹೂ ಬಿಡುವ ಒಂದು ಜಾತಿಯ ಗಿಡ).

ಫೆಬ್ರವರಿ ತಿಂಗಳು ಮಾತ್ರ 30 ದಿನಗಳಿಗಿಂತ ಕಡಿಮೆ ದಿನಗಳನ್ನು ಹೊಂದಿರುವ ವರ್ಷದ ಏಕೈಕ ತಿಂಗಳು. ಗ್ರೆಗೋರಿಯನ್ ಕ್ಯಾಲೆಂಡರ್ ನಂತೆ, ಹಿಂದಿನ ಜೂಲಿಯನ್ ಕ್ಯಾಲೆಂಡರ್ ನಲ್ಲೂ ಕೂಡ ಇದು ಎರಡನೇ ತಿಂಗಳು.

6. ನೀವು ಫೆಬ್ರವರಿಯಲ್ಲಿ ಜನಿಸಿದ್ದೀರೆ? ನಿಮ್ಮ ರಾಶಿಚಕ್ರ ಚಿಹ್ನೆಯ ಬಗ್ಗೆ ಕುತೂಹಲವಿದೆಯೇ? ಮುಂದೆ ಓದಿ

6. ನೀವು ಫೆಬ್ರವರಿಯಲ್ಲಿ ಜನಿಸಿದ್ದೀರೆ? ನಿಮ್ಮ ರಾಶಿಚಕ್ರ ಚಿಹ್ನೆಯ ಬಗ್ಗೆ ಕುತೂಹಲವಿದೆಯೇ? ಮುಂದೆ ಓದಿ

ನೀವು ಫೆಬ್ರವರಿ 18 ಅಥವಾ ಅದಕ್ಕೂ ಮೊದಲು ಜನಿಸಿದರೆ, ನಿಮ್ಮದು ಕುಂಭ ರಾಶಿ, ಇದರ ಪ್ರಕಾರ ನೀವು ನೀವು ಸೃಜನಶೀಲ, ಬುದ್ಧಿವಂತ ಮತ್ತು ಸ್ವಂತಿಕೆ ಉಳ್ಳವರು. ನೀವು ಫೆಬ್ರವರಿಯಲ್ಲಿ 18 ರ ನಂತರ ಜನಿಸಿದ್ದರೆ ನೀವು ಮೀನ ರಾಶಿಯವರು. ಇದರ ಪ್ರಕಾರ ನೀವು ಬಹುಶಃ ಸ್ವಪ್ನಶೀಲ, ಭಾವನಾತ್ಮಕ ಮತ್ತು ಕೆಲವೊಮ್ಮೆ ಅತಿಯಾದ ಸಂವೇದನಾಶೀಲ ವ್ಯಕ್ತಿತ್ವದವರಾಗಿರುತ್ತೀರಿ.

English summary

Interesting Facts About February Month

february, month, facts, insync, ಫೆಬ್ರವರಿ, ಮಾಸ, ವಾಸ್ತವಾಂಶ,
X
Desktop Bottom Promotion