ಜೀವನದಲ್ಲಿ ಅದೃಷ್ಟ ನಮ್ಮದಾಗಲು ಅರಳಿ ಮರವನ್ನು ಹೀಗೆ ಪೂಜಿಸಿ

ಅರಳಿ ಮರವನ್ನು ಹಿಂದೂ ನಂಬಿಕೆಗಳ ಪ್ರಕಾರ ಅತ್ಯಂತ ಶುಭ ಮರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅರಳಿ ಮರವನ್ನು ಪೂಜಿಸಿದ ನಂತರ ಅನೇಕರು ಅದ್ಭುತ ಫಲಿತಾಂಶಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಬೌದ್ಧರು ಮತ್ತು ಜೈನರು ಸೇರಿದಂತೆ ಹೆಚ್ಚಿನ ಹಿಂದೂ ಸಮುದಾಯಗಳು ಈ ಪವಿತ್ರ ಮರವನ್ನು ಪೂಜಿಸುತ್ತವೆ. ಶನಿ ದೇವ ಈ ಪವಿತ್ರ ವೃಕ್ಷದಲ್ಲಿ ನೆಲೆಸಿದ್ದಾರೆ ಎಂದು ಭಕ್ತರು ನಂಬುತ್ತಾರೆ, ಮತ್ತು ಶನಿವಾರದಂದು ಅರಳಿ ಮರವನ್ನು ಪೂಜಿಸಿದರೆ ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಅರಳಿ ಮರಕ್ಕೆ ನೀರು ಅರ್ಪಿಸಿದರೆ ಶನಿ ದೇವರು ಸಂತಸಗೊಂಡು ಯಾವುದೇ ರೀತಿಯ ಕಷ್ಟಗಳಿಂದ, ಯಾತನೆಗಳಿಂದ ನಮ್ಮನ್ನು ಕಾಪಾಡುತ್ತಾನೆ ಎಂದು ನಂಬಲಾಗಿದೆ.

ನಾವು ಇಂದಿನ ಲೇಖನದಲ್ಲಿ ಅರಳಿ ಮರವನ್ನು ಹೇಗೆ, ಯಾವ ರೀತಿ ಪೂಜಿಸಿದರೆ ಒಳ್ಳೆಯದು, ಉತ್ತಮ ಪ್ರತಿಫಲ ಸಿಗುತ್ತದೆ, ಯಾವ ಗ್ರಹದವರು ಹೇಗೆ ಪೂಜಿಸಬೇಕು ಇನ್ನೂ ಹಲವು ಆಕಸ್ತಿಕರ ವಿಷಯಗಳನ್ನು ತಿಳಿಸಲಿದ್ದೇವೆ:

ಅರಳಿ ಮರವನ್ನು ಏಕೆ ಪವಿತ್ರ ಮರವೆಂದು ಪರಿಗಣಿಸಲಾಗಿದೆ?

ಅರಳಿ ಮರವನ್ನು ಏಕೆ ಪವಿತ್ರ ಮರವೆಂದು ಪರಿಗಣಿಸಲಾಗಿದೆ?

* ಎಲ್ಲಕ್ಕಿಂತ ಹೆಚ್ಚು ಪವಿತ್ರವಾದ ಮರಗಳಲ್ಲಿ ಅರಳಿಮರವೂ ಒಂದು, ನಮ್ಮ ವಿವಿಧ ನಂಬಿಕೆಗಳಿಂದ ಅರಳಿ‌ ಮರದೊಂದಿಗೆ ನಾವು ಪೂಜ್ಯನೀಯವಾದ ಸಂಬಂಧವನ್ನು ಹೊಂದಿದ್ದೇವೆ.

* ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ಹೀಗೆ ಹೇಳುತ್ತಾನೆ, "ನಾನು ಇತರ ಎಲ್ಲಾ ಮರಗಳ ಪೈಕಿ ಅರಳಿ ಮರ (ಅಶ್ವಥ ಮರ)" ಎಂದು. ಆದ್ದರಿಂದ ಜನರು ಈ ಮರವನ್ನು ವಿಷ್ಣುವಿಗೆ ಹೋಲಿಸಲು ಕಾರಣವಾಗಿದೆ.

* ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಅರಳಿ ಮರದಲ್ಲಿ ನೆಲೆಸಿದ್ದಾರೆ ಎಂದು ಕೆಲವರು ನಂಬುತ್ತಾರೆ. ಇದರಲ್ಲಿ ಬ್ರಹ್ಮ ಅರಳಿ ಮರದ ಬೇರಾಗಿದ್ದರೆ, ವಿಷ್ಣು ಕಾಂಡ ಮತ್ತು ಶಿವ ಈ ಪವಿತ್ರ ಮರದ ಎಲೆಗಳು ಎಂಬ ನಂಬಿಕೆ ಇದೆ.

* ಈ ಮರದಲ್ಲಿ ಪೂರ್ವಜರು ಮತ್ತು ಮಹಾನ್ ದೇವರುಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.

* ಅರಳಿ ಮರದ ಔಷಧೀಯ ಮತ್ತು ಗುಣಪಡಿಸುವ ಗುಣಗಳು ವಿಶ್ವಾದ್ಯಂತ ಜನರಿಗೆ ಚೆನ್ನಾಗಿ ತಿಳಿದಿದೆ.

* ಈ ಮರವು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಮತ್ತು ಶಕ್ತಿಯ ಮೂಲವಾಗಿದೆ.

* ಅರಳಿ ಮರವು ಅದೃಷ್ಟ, ಉತ್ತಮ ಆರೋಗ್ಯ, ಬುದ್ಧಿವಂತಿಕೆ ಮತ್ತು ಹೆರಿಗೆಯ ಮೂಲವೆಂದು ತಿಳಿದಿದೆ.

ಅರಳಿ ಮರವನ್ನು ಪೂಜಿಸುವುದರಿಂದ ಜೀವನದ ಯಾವ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ?

ಅರಳಿ ಮರವನ್ನು ಪೂಜಿಸುವುದರಿಂದ ಜೀವನದ ಯಾವ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ?

* ಅರಳಿ ಮರವನ್ನು ಪೂಜಿಸುವುದು ವಿವಾಹಿತರ ಜೀವನದಲ್ಲಿರುವ ಹಲವು ಅಡೆತಡೆಗಳು, ಕಲಹ ನಿವಾರಣೆಯಾಗುತ್ತದೆ.

* ಅರಳು ಮರಕ್ಕೆ ಪೂಜೆ ಸಲ್ಲಿಸುವುದರಿಂದ ಇದು ಮಗುವಿನ ಉತ್ತಮ ಬೆಳವಣಿಗೆ ಮತ್ತು ಆರೋಗ್ಯಕರ ವೃದ್ಧಿಗೆ ಕಾರಣವಾಗುತ್ತದೆ.

* ಇದು ವ್ಯಕ್ತಿಯ ಜೀವನದಲ್ಲಿ ಆಲೋಚನೆಯಲ್ಲಿ ಸ್ಥಿರತೆಯನ್ನು ತರುತ್ತದೆ ಮತ್ತು ಸಾಮಾನ್ಯವಾಗಿ ನಿಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡುತ್ತದೆ.

* ನಿಮ್ಮ ವ್ಯವಹಾರಕ್ಕೆ ಉತ್ತೇಜನ ನೀಡುವ ಮೂಲಕ ಮತ್ತು ನಿಮ್ಮ ಉದ್ಯೋಗ ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ನಿಮ್ಮ ವೃತ್ತಿಪರ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

* ಅರಳಿ ಮರವನ್ನು ಆರಾಧಿಸುವವರ ಜೀವನದಲ್ಲಿ ಇದು ಅದೃಷ್ಟ ಮತ್ತು ಬುದ್ಧಿವಂತಿಕೆಯನ್ನು ತರುತ್ತದೆ.

* ಅನಾರೋಗ್ಯ, ಅಸ್ವಸ್ಥತೆಗಳನ್ನು ನಿರ್ಮೂಲನೆ ಮಾಡುವ ಮತ್ತು ಆರೋಗ್ಯವನ್ನು ಸುಧಾರಿಸುವ ಪ್ರಬಲ ಮೂಲವಾಗಿದೆ.

* ನಮ್ಮ ಜಾತಕದಲ್ಲಿನ ಮಂಗಳ ದೋಷ, ಶನಿ ದೋಷ, ನವಗ್ರಹ ಬಾಧೆ, ರಾಹು ಮತ್ತು ಕೇತು ಸಮಸ್ಯೆಗಳು ಇತ್ಯಾದಿಗಳನ್ನು ಪರಿಹರಿಸುತ್ತದೆ.

ನಿಮ್ಮ ಜಾತಕದಲ್ಲಿನ ಗ್ರಹಗಳ ಪ್ರಕಾರ ಅರಳಿ ಮರವನ್ನು ಪೂಜಿಸುವುದು ಹೇಗೆ?

ನಿಮ್ಮ ಜಾತಕದಲ್ಲಿನ ಗ್ರಹಗಳ ಪ್ರಕಾರ ಅರಳಿ ಮರವನ್ನು ಪೂಜಿಸುವುದು ಹೇಗೆ?

ಮಂಗಳ ಗ್ರಹ: ತಾಮ್ರದ ಪಾತ್ರೆಯಿಂದ ದೈವಿಕ ಮರಕ್ಕೆ ನೀರನ್ನು ಅರ್ಪಿಸಿ ನಂತರ ಮರವನ್ನು 8 ಸುತ್ತುಗಳು ಸುತ್ತಿ.

ಚಂದ್ರ ಗ್ರಹ: ಅರಳಿ ಮರದ ತುಂಡನ್ನು ಸ್ನಾನ ಮಾಡುವ ನೀರಿಗೆ ಹಾಕಿ ಅದರೊಂದಿಗೆ ಸ್ನಾನ ಮಾಡಿ.

ಬುಧ ಗ್ರಹ: ಬುಧವಾರ ಹಸಿರು ಬೇಳೆಯನ್ನು ಅರ್ಪಿಸಿ ಮತ್ತು ಮರದ ಸುತ್ತ 3 ಸುತ್ತು ಸುತ್ತಿ. ಅಲ್ಲದೆ, ಚಮೆಲಿ ಎಣ್ಣೆಯ ದೀಪವನ್ನು ಬೆಳಗಿಸಿ.

ಗುರು ಗ್ರಹ: ಗುರುವಾರದಂದು ಹಳದಿ ಬಣ್ಣಕ್ಕೆ ಪ್ರಾಧಾನ್ಯತೆ ನೀಡಿ. ಹಳದಿ ಹೂವುಗಳು, ಅರಿಶಿನ ನೀರು ಮತ್ತು ಹಳದಿ ಸಿಹಿತಿಂಡಿಗಳನ್ನು ಗುರುವಾರದಂದು ನೀಡಿ. ಇದಲ್ಲದೆ, ಸಂಜೆ ನೀರು ಮತ್ತು ಹಾಲನ್ನು ಬೆರೆಸಿ ಮರಕ್ಕೆ ಅರ್ಪಿಸಬೇಕು.

ರಾಹು ಗ್ರಹ: ಶನಿವಾರ ಅರಳಿ ಮರಕ್ಕೆ ಜೇನುತುಪ್ಪವನ್ನು ಅರ್ಪಿಸಿ.

ಕೇತು ಗ್ರಹ: ಅಲ್ಸಿ ಎಣ್ಣೆಯ ದೀಪವನ್ನು ಬೆಳಗಿಸಿ ಗಂಗಾಜಲವನ್ನು ಮರಕ್ಕೆ ಅರ್ಪಿಸಿ.

ಶನಿ ಗ್ರಹ: ಶನಿವಾರದಂದು ಬೆಲ್ಲದ ನೀರಿನೊಂದಿಗೆ ಬೆರೆಸಿದ ಹಸಿ ಹಾಲನ್ನು ಮರಕ್ಕೆ ಅರ್ಪಿಸಿ. ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.

ನಿರ್ದಿಷ್ಟ ಸಮಸ್ಯೆಗಳನ್ನು ತೊಡೆದುಹಾಕಲು ಅನುಸರಿಸಬೇಕಾದ ಆಚರಣೆಗಳು

ನಿರ್ದಿಷ್ಟ ಸಮಸ್ಯೆಗಳನ್ನು ತೊಡೆದುಹಾಕಲು ಅನುಸರಿಸಬೇಕಾದ ಆಚರಣೆಗಳು

* ಗಂಡು ಮಗು ಹುಟ್ಟಬೇಕು ಎಂದು ಬಯಸುವ ಮಹಿಳೆಯರು ಮರದ ಸುತ್ತಲೂ ಕೆಂಪು ದಾರ ಅಥವಾ ಕೆಂಪು ಬಟ್ಟೆಯನ್ನು ಕಟ್ಟಬೇಕು.

* ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಬಯಸುವ ಜನರು ಶನಿವಾರದಂದು ಅರಳಿ ಮರವನ್ನು ಪೂಜಿಸಬೇಕು. ಏಕೆಂದರೆ ಸಂಪತ್ತಿನ ದೇವತೆ ಲಕ್ಷ್ಮಿ ಈ ದಿನದಂದು ಮರದ ಕೆಳಗೆ ವಾಸಿಸುತ್ತಾರೆ ಎಂದು ನಂಬಲಾಗಿದೆ.

* ನಿಮ್ಮ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅರಳಿ ಮರಕ್ಕೆ ನಿತ್ಯ ನೀರು ಹಾಕಿ.

* ಈ ಶುಭ ಮರದ ಕೆಳಗೆ ಶಿವಲಿಂಗ ಅನ್ನು ಇರಿಸಿ ಮತ್ತು ಅದನ್ನು ನಿಯಮಿತವಾಗಿ ಪೂಜಿಸಿದರೆ ಭಕ್ತರು ಭೌತಿಕ ಸಂತೋಷವನ್ನು ಗಳಿಸಬಹುದು.

* ಆಧ್ಯಾತ್ಮಿಕತೆ ಮತ್ತು ಸಕಾರಾತ್ಮಕತೆಯನ್ನು ಪಡೆಯಲು ಅರಳಿ ಮರದ ಕೆಳಗೆ ಕುಳಿತಾಗ ಹನುಮಾನ್ ಚಾಲಿಸಾವನ್ನು ಪಠಿಸಬೇಕು.

* ಜೀವನದಲ್ಲಿ ಅಡೆತಡೆಗಳು ಮತ್ತು ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವ ಜನರು ಅರಳಿ ಮರದ ಕೆಳಗೆ ಕುಳಿತು 11 ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಚಂದನದ ಪೇಸ್ಟ್ ಬಳಸಿ ಪ್ರತಿ ಎಲೆಯಲ್ಲೂ "ಶ್ರೀ ರಾಮ್" ಎಂದು ಬರೆಯಬೇಕು. ಈ ಮರದ ಹಣ್ಣುಗಳನ್ನು ಭಗವಾನ್ ಹನುಮನಿಗೆ ಅರ್ಪಿಸಬೇಕು.

* ವ್ಯವಹಾರದಲ್ಲಿ ಬೆಳವಣಿಗೆಯನ್ನು ನೋಡಲು ಸೋಮವಾರ ಅರಳಿ ಮರವನ್ನು ಪೂಜಿಸಬೇಕು ಮತ್ತು ಅರಳಿ ಮರದ ಚಿಗುರೆಲೆಯನ್ನು ಕ್ಯಾಶ್‌ಬಾಕ್ಸ್‌ನಲ್ಲಿ ಇಡಬೇಕು.

* ಅರಳಿ ಮರಕ್ಕೆ ನಿಯಮಿತವಾಗಿ ನೀರುಹಾಕುವುದರ ಮೂಲಕ ಜನರು ಚಾಲ್ತಿಯಲ್ಲಿರುವ ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಮುಕ್ತರಾಗಬಹುದು. ಸಂಬಂಧಪಟ್ಟ ವ್ಯಕ್ತಿಯು ತಮ್ಮ ಎಡಗೈಯಿಂದ ಮರದ ಬೇರುಗಳನ್ನು ಸ್ಪರ್ಶಿಸಬೇಕು. ಉತ್ತಮ ಅರೋಗ್ಯ ಫಲಿತಾಂಶಗಳನ್ನು ನೋಡಲು ಅರಳಿ ಮರದ ಎಲೆಯನ್ನು ತಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು.

* ಗರ್ಭಧರಿಸಲು ಸಾಧ್ಯವಾಗದ ವಿವಾಹಿತ ದಂಪತಿಗಳು ಅರಳಿ ಮರದ ಎಲೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಮುಳುಗಿಸಬೇಕು. ಎಲೆಯನ್ನು ನೆನೆಸಿದ ಕನಿಷ್ಠ ಒಂದು ಗಂಟೆಯ ನಂತರ, ಅದನ್ನು ಹೊರಗೆ ತೆಗೆದುಕೊಂಡು ಮರದ ಕೆಳಗೆ ಇರಿಸಿ. ಈ ಆಚರಣೆಗಳನ್ನು ಮಾಡಿದ ನಂತರ ದಂಪತಿಗಳು ನೀರನ್ನು ಸೇವಿಸಬೇಕು.

* ಪೂರ್ವಜರ ಸಾಲಗಳು ನಿಮಗೆ ತೊಂದರೆ ನೀಡುತ್ತಿದ್ದರೆ, ಭಾನುವಾರಗಳನ್ನು ಹೊರತುಪಡಿಸಿ ನೀವು 43 ದಿನಗಳ ಕಾಲ ಅರಳಿ ಮರಕ್ಕೆ ನೀರು ಹಾಕಬೇಕು.

* ಜೀವನದಲ್ಲಿ ಸಮೃದ್ಧಿಯನ್ನು ಸಾಧಿಸಲು, ಕರ್ಪೂರವನ್ನು ಅರ್ಪಿಸುವ ಮೂಲಕ ಪವಿತ್ರ ಮರವನ್ನು ಪೂಜಿಸಿ.

* ಅವಿವಾಹಿತರು ಅರಳಿ ಮರದ ಎಲೆಗಳನ್ನು ನೀರಿನಲ್ಲಿ ಹಾಕಿ ಆ ನೀರಿನೊಂದಿಗೆ ಸ್ನಾನ ಮಾಡಬಹುದು.

* ಅರಳಿ ಮರಕ್ಕೆ ಭಾನುವಾರದಂದು ಯಾರೂ ನೀರನ್ನು ಹಾಕಬಾರದು, ಏಕೆಂದರೆ ಇದನ್ನು ನಿಷೇಧವೆಂದು ಪರಿಗಣಿಸಲಾಗಿದ್ದು, ಪ್ರತಿಕೂಲ ಪರಿಣಾಮ ಬೀರುತ್ತದೆ.

English summary

How to Worship Peepal Tree to Get Blessings in Kannada

Here we are discussing about How to Worship Peepal Tree to Get Blessings in Kannada. Trimurti resides in the Peepal tree, where Brahma is the roots, Vishnu is the trunk, and Shiva is the leaves of this sacred tree. Read more.
Story first published: Tuesday, July 13, 2021, 15:00 [IST]
X
Desktop Bottom Promotion