Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ನೈಸರ್ಗಿಕವಾಗಿ ಮೊಡವೆ ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ
ಮೊಡವೆ ಪುರುಷರು ಅಥವಾ ಮಹಿಳೆಯರು ಎಂಬ ಬೇಧವಿಲ್ಲದೆ ಎಲ್ಲರನ್ನು ಕಾಡುವ ಸಾಮಾನ್ಯ ಸೌಂದರ್ಯ ಸಮಸ್ಯೆ ಮೊಡವೆ. ಮೊಡವೆ ಏನೀ ಗೊಡವೆ ಎಂಬಂತೆ ಇದು ಸಾಷ್ಟು ಕಿರಿಕಿರಿ ಮಾಡುವ ಮತ್ತು ಎಲ್ಲ ವಯಸ್ಸಿನವರನ್ನು ಕಾಡುತ್ತದೆ. ಅದರಲ್ಲೂ ಯಾವುದಾದರೂ ಕಾರ್ಯಕ್ರಮ ಇರುವ ಸಮಯದಲ್ಲಿ ಬಂದರಂತೂ ಮುಜುಗರದಲ್ಲೇ ಹೋಗುತ್ತೇವೆ.

ಮೊಡವೆ ನಿವಾರಿಸುವ ನೈಸರ್ಗಿಕ ಮನೆಮದ್ದುಗಳು ಯಾವುವು ಮುಂದೆ ನೋಡೋಣ:
* ಮುಖವನ್ನು ಚೆನ್ನಾಗಿ ತೊಳೆಯಿರಿ
ನಿಮ್ಮ ಮುಖದಲ್ಲಿ ಮೊಡವೆಗಳ ಸಮಸ್ಯೆ ಇದ್ದರೆ ಯಾವಾಗಲೂ ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಫೇಸ್ ವಾಶ್ ಅನ್ನು ಬಳಸಬೇಕು. ದಿನಕ್ಕೆ ಕನಿಷ್ಠ 2 ಅಥವಾ 3 ಬಾರಿ ಚೆನ್ನಾಗಿ ತೊಳೆಯಿರಿ.
* ಅರಿಶಿನ
ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದೆ, ಇದು ನಮ್ಮ ಚರ್ಮದ ಮೇಲಿನ ಮೊಡವೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಜೇನುತುಪ್ಪ ಮತ್ತು ಅರಿಶಿನ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖದ ಮೊಡವೆಗಳ ಮೇಲೆ ಅನ್ವಯಿಸಿ. ಮೊಡವೆಗಳು ಸಂಪೂರ್ಣವಾಗಿ ಮಾಯವಾಗುವವರೆಗೆ ನೀವು ಈ ವಿಧಾನಗಳನ್ನು ಮುಂದುವರೆಸಿ.
* ಜೇನುತುಪ್ಪ ಬಳಸಿ
ಮುಖದ ಮೇಲಿನ ಮೊಡವೆಗಳ ಸಮಸ್ಯೆಯಿಂದ ಪರಿಹಾರ ಪಡೆಯಲು ಜೇನುತುಪ್ಪವನ್ನು ಬಳಸಿ. ಏಕೆಂದರೆ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾದ ಗುಣಲಕ್ಷಣಗಳು ಜೇನುತುಪ್ಪದಲ್ಲಿವೆ, ಜೇನುತುಪ್ಪ ಮೊಡವೆಗಳ ಸಮಸ್ಯೆಗೆ ಚಿಕಿತ್ಸೆ ನೀಡಲು ಅತ್ಯುತ್ತಮವಾಗಿದೆ. ರಾತ್ರಿ ಮಲಗುವ ಮೊದಲು ಮೊಡವೆಗಳ ಮೇಲೆ ಸ್ವಲ್ಪ ಜೇನುತುಪ್ಪವನ್ನು ಹಚ್ಚಿ ಒಣಗಿದ ನಂತರ ಚೆನ್ನಾಗಿ ತೊಳೆಯಿರಿ.
* ದಾಲ್ಚಿನ್ನಿ
ಮುಖದ ಮೇಲೆ ಗುಳ್ಳೆಗಳನ್ನು ಬಿಡುವ ತಪ್ಪನ್ನು ಎಂದಿಗೂ ಮಾಡಬೇಡಿ, ಮೊಡವೆಗಳನ್ನು ಮತ್ತೆ ಮತ್ತೆ ಮುಟ್ಟಬೇಡಿ. ಮೊಡವೆಗಳ ಸಮಸ್ಯೆ ತೊಡೆದುಹಾಕಲು ದಾಲ್ಚಿನ್ನಿ ಪುಡಿಯನ್ನು ಬಳಸಿ. ಒಂದು ಬಟ್ಟಲಿನಲ್ಲಿ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ಜೇನುತುಪ್ಪ ಬೆರೆಸಿ ಮಿಶ್ರಣವನ್ನು ಮೊಡವೆಗಳ ಮೇಲೆ ಅನ್ವಯಿಸಿ. ರಾತ್ರಿಯಲ್ಲಿ ಮಾತ್ರ ಇದನ್ನು ಪ್ರಯತ್ನಿಸಿ.



Click it and Unblock the Notifications




