Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ದ್ವಾದಶ ರಾಶಿಯವರೇ, ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ವ್ಯಾಲೆಂಟೈನ್ ಡೇ ಮತ್ತಷ್ಟು ಸ್ಪೆಷಲ್ ಆಗುತ್ತೆ..
ನಾವೆಲ್ಲರೂ ಈ ವಾರಾಂತ್ಯದಲ್ಲಿ ನಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಎದುರು ನೋಡುತ್ತಿದ್ದೇವೆ. ತಮ್ಮ ಪ್ರೀತಿ ಪಾತ್ರರ ಬಳಿ ಪ್ರೀತಿಯನ್ನು ವ್ಯಕ್ತಪಡಿಸುವುದರ ಜೊತೆಗೆ ಹೊಸ ಜೀವನಕ್ಕೆ ಕಾಲಿಡಲು ಅನೇಕ ಜೋಡಿಗಳು ಕಾತುರದಿಂದ ಕಾಯುತ್ತಿವೆ. ಇವುಗಳ ಮಧ್ಯೆ ಪ್ರತಿಯೊಂದು ರಾಶಿಚಕ್ರದವರು ಸಣ್ಣ-ಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ಇದನ್ನು ಹೋಗಲಾಡಿಸಲು ನೀವು ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತವೆ. ಈ ವಾರ ವ್ಯಾಲೆಂಟೈನ್ಸ್ ವೀಕ್ ಇರುವುದರಿಂದ ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ, ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಬಾಂಧವ್ಯವನ್ನು ಬಲಪಡಿಸಲು ಅಗತ್ಯವಿರುವ ಸಂಬಂಧದ ಸಲಹೆಯೊಂದಿಗೆ ಈ ಭಾನುವಾರವನ್ನು ಮತ್ತಷ್ಟು ಅತ್ಯುತ್ತಮವಾಗಿ ಮಾಡಿ.
ಪ್ರೇಮಿಗಳ ದಿನದಂದು ಪ್ರತಿ ರಾಶಿಚಕ್ರಗಳ ಜನರು ತಮ್ಮ ಭಾಂದವ್ಯವನ್ನು ಬಲಪಡಿಸಲು ಸಲಹೆಗಳು :

ಮೇಷ:
ಸಕಾರಾತ್ಮಕ ಸ್ವ-ಮಾತುಕತೆ ನಿಮ್ಮ ಮನಸ್ಸಿನಲ್ಲಿನ ಗೊಂದಲವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸಕಾರಾತ್ಮಕವಾಗಿ ಯೋಚಿಸಿ. ಇದು ನಿಮ್ಮ ತಾಳ್ಮೆಯ ಕೊರತೆಯಿಂದ ಹಿಡಿದು ವಾದಗಳಿಗೆ ಕಾರಣವಾಗುವ ಹತಾಶೆಯನ್ನು ಕಡಿಮೆ ಮಾಡಬಹುದು. ನಿಮ್ಮಲ್ಲಿ ಹೆಚ್ಚು ತಾಳ್ಮೆ ಬರಲು ಧ್ಯಾನ ಮಾಡುವುದು ಉತ್ತಮ.

ವೃಷಭ ರಾಶಿ:
ನೀವು ಪ್ರಾಯೋಗಿಕ ಜನರಾಗಿರುವುದರಿಂದ ಈ ವಾರ ಅಂದರೆ ಭಾನುವಾರ ನಿಮ್ಮ ಹೃದಯದಿಂದ ಯೋಚಿಸುವುದು ಮತ್ತು ಅನುಭವ ಪಡೆಯುವುದು ಬಹಳ ಮುಖ್ಯ. ನಿಮ್ಮ ಭಾವನೆಗಳನ್ನು ತಿಳಿಸುವ ಮೂಲಕ ನಿಮ್ಮ ಸಂಗಾತಿಯ ಮನದಲ್ಲಿ ವಿಶೇಷ ಸ್ಥಾನ ಗಳಿಸಿ. ಈ ರಾಶಿಯವರು ಭೂತಕಾಲಕ್ಕೆ ಅಂಟಿಕೊಳ್ಳುವುದು ಹೆಚ್ಚು. ಆದ್ದರಿಂದ ಹಿಂದೆ ನಡೆದಿದ್ದನ್ನು ಮರೆತು, ಮುಂದಾಗುವುದನ್ನು ಒಪ್ಪಿಕೊಳ್ಳಿ. ಪ್ರೀತಿ ನೀಡಿ ಹಾಗೂ ಸ್ವೀಕರಿಸಿ. .

ಮಿಥುನ:
ಈ ರಾಶಿಯವರು ಸಾಮಾಜಿಕ ಚಿಟ್ಟೆಗಳಾಗಿದ್ದು, ಎಲ್ಲರಿಂದ ಪ್ರಭಾವಿತರಾಗುತ್ತಾರೆ. ಆದ್ದರಿಂದ ಇದನ್ನು ನೀವು ತಡೆಯಬೇಕು. ಇದರಿಂದ ನಿಮ್ಮ ಸಂಗಾತಿ ಅಸುರಕ್ಷಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ನೀವು ನಿಷ್ಟವಂತರಾಗಿರಲು ಮತ್ತು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಿದ್ಧತೆ ಮಾಡಿಕೊಳ್ಳಿ.

ಕರ್ಕಾಟಕ:
ಈ ರಾಶಿಯವರು ಸಂಬಂಧದ ವಿಚಾರದಲ್ಲಿ ನೀವು ಅತಿಯಾದ ಭಾವನೆಯನ್ನು ತೋರುತ್ತೀರಿ. ನಿಮ್ಮ ಭಾವನೆಗಳನ್ನು ಮರೆಮಾಚುವುದು ಮತ್ತು ಭಾವನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತಪಡಿಸದಿರುವುದು ಅತಿಯಾದ ಆಲೋಚನೆಗೆ ಕಾರಣವಾಗುತ್ತದೆ. ಇತರರ ಮಾತು ನಿಮ್ಮ ಮೇಲೆ ಪರಿಣಾಮ ಬೀರಬೇಕಾಗಿಲ್ಲ ಎಂದು ನಿಮ್ಮ ಮನಸ್ಸಿಗೆ ಹೇಳುವುದು ಮುಖ್ಯ.

ಸಿಂಹ:
ನಿಮ್ಮ ಸಂಗಾತಿಯ ಗಮನವನ್ನು ನಿರೀಕ್ಷಿಸುವುದು ಸರಿ, ಆದರೆ ಗಮನದ ನಿರೀಕ್ಷೆಯ ಜೊತೆಗೆ, ಅದನ್ನು ನಿಮ್ಮ ಸಂಗಾತಿಗೆ ಕೊಡುವುದು ಸಹ ಮುಖ್ಯವಾಗಿದೆ. ನೀವು ಕಡಿಮೆ ಸ್ವಾರ್ಥಿಗಳಾಗಿರಬೇಕು ಮತ್ತು ನಿಮ್ಮ ಸಂಗಾತಿಗೆ ಪ್ರೀತಿಯನ್ನು ನೀಡಬೇಕು. ನಿಮ್ಮ ಬ್ಯುಸಿ ಜೀವನದಲ್ಲಿ ವಿರಾಮ ತೆಗೆದುಕೊಳ್ಳಿ, ನಿಮ್ಮ ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ವಿಶೇಷ ಭೋಜನ ಅಥವಾ ಸಣ್ಣ ಪ್ರವಾಸ ಯೋಜಿಸಿ.

ಕನ್ಯಾ:
ವ್ಯಕ್ತಿಯ ಪರಿಪೂರ್ಣತೆ ನೋಡುವುದನ್ನು ನಿಲ್ಲಿಸಿ. ನಿಮ್ಮ ಸಂಗಾತಿಗೆ ವಿರಾಮ ನೀಡಿ ಅಥವಾ ಸಣ್ಣ ಪ್ರವಾಸವನ್ನು ಯೋಜಿಸಿ ಮತ್ತು ಪ್ರೀತಿ ಮತ್ತು ತಿಳುವಳಿಕೆಯನ್ನು ಮರಳಿ ತರಲು ನಿಮ್ಮನ್ನು ಮತ್ತೆ ಚೈತನ್ಯಗೊಳಿಸಿ.

ತುಲಾ:
ಸಂಬಂಧದಲ್ಲಿ ಬದ್ಧತೆಯನ್ನು ಕಾಪಾಡಲು ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಿ ಅದು ನಿಮ್ಮ ಸಂಗಾತಿಗೆ ಆತಂಕವನ್ನುಂಟು ಮಾಡುತ್ತದೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ನಿಮ್ಮ ಸಂಗಾತಿಯನ್ನು ಹೇಗೆ ಮೆಚ್ಚಿಸುವುದು ಅಥವಾ ಅವರನ್ನು ಹೇಗೆ ಆಕರ್ಷಿಸುವುದು ಎಂದು ನಿಮಗೆ ಖಂಡಿತವಾಗಿ ತಿಳಿದಿದೆ. ಆದರೆ ಯೋಚಿಸುವುದನ್ನು ನಿಲ್ಲಿಸಿ, ಅದನ್ನು ಜಾರಿಗೊಳಿಸಲು ಪ್ರಯತ್ನ ಪಡಬೇಕು. ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಿ ಮತ್ತು ಸಂಬಂಧವನ್ನು ಗಟ್ಟಿಗೊಳಿಸಿ.

ವೃಶ್ಚಿಕ:
ಈ ರಾಶಿಯವರು ಪ್ರೀತಿಯ ಪಾಲುದಾರರಾಗಿರುತ್ತಾರೆ. ಇವರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ ಆದರೆ ಕೆಲವೊಮ್ಮೆ ಅದು ಸೊಕ್ಕಿನಂತೆ ಕಾಣುತ್ತದೆ. ನಿಮ್ಮ ಸಂಗಾತಿಗೆ ಯಾವುದೇ ನಿರ್ಬಂಧಗಳಿಲ್ಲದೆ ಬದುಕಲು ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಿ. ಪ್ರೀತಿ, ಪರ್ಸನಲ್ ಸ್ಪೇಸ್, ಕಾಳಜಿ ಮತ್ತು ತಿಳುವಳಿಕೆಯೊಂದಿಗೆ ನಿಮ್ಮ ಸಂಬಂಧವನ್ನು ನೀವು ಸಮತೋಲನಗೊಳಿಸಬೇಕಾಗಿದೆ.

ಧನು:
ನೀವು ನಿಷ್ಟಾವಂತರಾಗಿರುವುದು ಬಹಳ ಮುಖ್ಯ. ನಿಷ್ಠೆ ಮಾತ್ರ ನಿಮ್ಮ ಸಂಬಂಧವನ್ನು ಉಳಿಸುತ್ತದೆ. ಯಾವುದೇ ಉತ್ತಮ, ಗಟ್ಟಿಯಾದ ಸಂಬಂಧಕ್ಕೆ ಪ್ರಾಮಾಣಿಕವಾಗಿರುವುದು ಮುಖ್ಯ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಯೋಚಿಸಿ ಮಾಡಿ. ನಿಮ್ಮ ಸಂಬಂಧದಲ್ಲಿ ಪ್ರೀತಿಯನ್ನು ತನ್ನಿ.

ಮಕರ:
ನೀವು ಕಾರ್ಯನಿರತವಾಗಿರುವುದು ಒಳ್ಳೆಯದು, ಆದರೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ನೀವು ಸಮತೋಲನಗೊಳಿಸಬೇಕಾಗಿದೆ. ಈಗಾಗಲೇ ಪ್ರೀತಿಯಲ್ಲಿ ಬಿದ್ದವರು ಚಿಂತಿಸುವ ಅವಶ್ಯಕತೆಯಿಲ್ಲ. ಏಕೆಂದರೆ ಅವರು ಬದ್ಧತೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ನಿಷ್ಠವಂತಾಗಿರುತ್ತಾರೆ.

ಕುಂಭ :
ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ನೀವು ಗೌರವಿಸಬೇಕು. ನಿಮ್ಮ ಸಂಬಂಧವನ್ನು ಅಪ್ಪಿಕೊಂಡು, ಪ್ರೀತಿಯನ್ನು ಮರಳಿ ತರಲು ಒಂದು ಸಣ್ಣ ಪ್ರವಾಸವನ್ನು ಯೋಜಿಸಿ. ಉತ್ತಮವಾದುದು ನಿಮಗೆ ಮುಂದೆ ಕಾಯುತ್ತಾ ಕುಳಿತಿದೆ. ಅಸಾಧ್ಯವಾದ ವಿಷಯಗಳು ಸಾಧ್ಯವಾಗುವುದನ್ನು ನೀವು ನೋಡುತ್ತೀರಿ.

ಮೀನ:
ನೀವು ತುಂಬಾ ಭಾವನಾತ್ಮಕವಾಗಿರುವುದನ್ನು ನಿಲ್ಲಿಸಬೇಕು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸಬೇಕು. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ. ನೀವು ಪ್ರೀತಿಸುವವರಿಗಾಗಿ ಸ್ವಯಂ ತ್ಯಾಗ ಮಾಡುವ ಅಗತ್ಯವಿಲ್ಲ. ಅತಿಯಾದ ಚಿಂತೆಯನ್ನು ದೂರಮಾಡಲು ಸ್ಪಷ್ಟ ಮತ್ತು ಗಂಭೀರವಾದ ಸಂವಹನವನ್ನು ಹೊಂದಿರಬೇಕು.



Click it and Unblock the Notifications











