Latest Updates
-
ಬೆಂಗಳೂರಿನ ನೀರಿನ ಅಭಾವ: ರೂಮ್ಮೇಟ್ಗಳ ಜಗಳ ತಪ್ಪಿಸಲು ಈ 'ಮೈಕ್ರೋ-ಸ್ಕ್ರಿಪ್ಟ್' ಟ್ರಿಕ್ ಬಳಸಿ! -
ಚೆನ್ನೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಕೇವಲ 15 ನಿಮಿಷದ ಈ ಟಿಪ್ಸ್ ಸಾಕು! -
ಅಮರನಾಥ ಯಾತ್ರೆ 2026: ಹಿಮಾಲಯದ ಕಡಿದಾದ ಹಾದಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಕ್ರಮಗಳನ್ನು ಮರೆಯದಿರಿ! -
ಮೊಹರಂ ಮೆರವಣಿಗೆ: ಇಂದು ನಿಮ್ಮ ನಗರದಲ್ಲಿ ಟ್ರಾಫಿಕ್ ಸಮಸ್ಯೆ? ಹೊರಡುವ ಮುನ್ನ ಈ ಅಪ್ಡೇಟ್ ನೋಡಿ -
ಮುಂಬೈ ನೀರಿನ ಕಡಿತ: ನೀರು ಉಳಿಸಿ ಫಿಟ್ ಆಗಿರಲು 12 ನಿಮಿಷದ ವ್ಯಾಯಾಮ ಮತ್ತು ಸ್ನಾನದ ಟಿಪ್ಸ್! -
ಬೆಂಗಳೂರು ಮೆಟ್ರೋ ವ್ಯತ್ಯಯ: ಆಫೀಸ್ ತಲುಪಲು ತಡವಾಗುತ್ತಿದೆಯೇ? ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದ ತೇವಾಂಶದಿಂದ ನಿಮ್ಮ ಮನೆ ಮತ್ತು ವಸ್ತುಗಳನ್ನು ರಕ್ಷಿಸಲು ಇಲ್ಲಿವೆ ಸರಳ ಟಿಪ್ಸ್! -
ಮುಂಬೈ ಮಳೆಗಾಲದಲ್ಲಿ ಆರೋಗ್ಯವಾಗಿರಬೇಕೆ? ರಸ್ತೆ ಬದಿಯ ತಿಂಡಿ ತಿನ್ನುವ ಮುನ್ನ ಈ ಎಚ್ಚರಿಕೆ ವಹಿಸಿ! -
ಭಾರತ-ಐರ್ಲೆಂಡ್ ಮೊದಲ ಟಿ20: ಬೆಲ್ಫಾಸ್ಟ್ನಲ್ಲಿ ಮಳೆ ಕಾಟ, ಪಂದ್ಯ ನಡೆಯುತ್ತಾ? ಇಲ್ಲಿದೆ ಪಿಚ್ ಮತ್ತು ಹವಾಮಾನ ವರದಿ -
ವಿಶ್ವ ವಿಟಲಿಗೋ ದಿನ 2026: ಚರ್ಮದ ಆರೋಗ್ಯಕ್ಕಾಗಿ ನೀವು ಪಾಲಿಸಬೇಕಾದ 'ಯುವಿ-ಸೇಫ್' ದಿನಚರಿ ಇಲ್ಲಿದೆ!
ಜುಲೈ 24ಕ್ಕೆ ಪೋಷಕರ ದಿನ : ಪೋಷಕರಿಗೆ ಕಳುಹಿಸಲು ಇಲ್ಲಿದೆ ಪ್ರೀತಿಯ ಸಂದೇಶ, ಗ್ರೀಟಿಂಗ್ಸ್
ಮಕ್ಕಳನ್ನು ಹೆತ್ತವರು ಎಲ್ಲರೂ ಪೋಷಕರಾಗಲು ಸಾಧ್ಯವಿಲ್ಲ, ಆದರೆ ಮಕ್ಕಳನ್ನು ಬೆಳೆಸುವ ಎಲ್ಲರೂ ಪೋಷಕರಾಗುತ್ತಾರೆ, ಹೌದು ಮಕ್ಕಳ ಲಾಲನೆ-ಪಾಲನೆ ಮಾಡಿ ಅವರನ್ನು ಬೆಳೆಸುವುದು ಇದೆಯೆಲ್ಲಾ ಅದೊಂದು ದೊಡ್ಡ ಜವಾಬ್ದಾರಿ. ಎಷ್ಟೋ ಜನರು ಮಕ್ಕಳನ್ನು ದತ್ತು ಪಡೆದು ಆ ಮಕ್ಕಳಿಗೆ ಪೋಷಕರಾಗಿದ್ದಾರೆ, ಆದ್ದರಿಂದಲೇ ಹೆತ್ತ ಮಾತ್ರಕ್ಕೆ ಪೋಷಕರಾಗಲ್ಲ ಎಂದು ಹೇಳಿದ್ದು.
ಪೋಷಕರು ತಮ್ಮ ಬದುಕಿನ ಎಷ್ಟೋ ಸುಖಗಳನ್ನು ಮಕ್ಕಳಿಗಾಗಿ ತ್ಯಾಗ ಮಾಡುತ್ತಾರೆ. ಒಂದು ಮಗುವನ್ನು ಸಾಕಿ-ಬೆಳೆಸಬೇಕೆಂದರೆ ಎಷ್ಟೋ ನಿದ್ದೆಗಳನ್ನು ತ್ಯಾಗ ಮಾಡಿರುತ್ತಾರೆ, ತಮ್ಮ ಆಸೆ, ಗುರಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ.

ಪೋಷಕರ ಸ್ಥಾನದ ಬಗ್ಗೆ ಸಂಪೂರ್ಣ ಅರಿವಿಗೆ ಬರುವುದು ನಾವು ಪೋಷಕರಾದಾಗ, ಮಗುವಿಗೆ ಹುಷಾರಿಲ್ಲದಿದ್ದಾಗ ಮಗುವನ್ನು ಎತ್ತುಕೊಂಡು ಹೋಗುವಾಗ ಪ್ರತಿಯೊಬ್ಬರು ಅವರ ಪೋಷಕರನ್ನು ನೆನಪಿಸಿಕೊಳ್ಳದೆ ಇರಲು ಸಾಧ್ಯನೇ ಇಲ್ಲ, ನನ್ನ ಪೋಷಕರು ನನ್ನನ್ನು ಇದೇ ರೀತಿ ಕಷ್ಟಪಟ್ಟು ಸಾಕಿರುತ್ತಾರೆ ಅಲ್ವಾ ಎಂದು ಅನಿಸಲಾರಂಭಿಸುತ್ತದೆ ಹೌದು ತಾನೆ?
ಪೋಷಕರು ಏನೇ ಆಗಿರಲಿ ಆದರೆ ಅವರು ನಮಗಾಗಿಯೇ ಎಲ್ಲವನ್ನು ಮಾಡಿರುತ್ತಾರೆ, ಅವರನ್ನು ಪ್ರೀತಿಸೋಣ, ಗೌರವಿಸೋಣ. ಜುಲೈ 24ಕ್ಕೆ ಪೋಷಕರ ದಿನ, ಪೋಷಕರಿಗೆ ಕಳುಹಿಸಲು ಇಲ್ಲಿದೆ ಮನ ಮುಟ್ಟುವ ಸಂದೇಶ...

1
ದೇವರು ನನಗೆ ಕೊಟ್ಟಿರುವ ದೊಡ್ಡ ವರ ನನ್ನ ಪೋಷಕರು- ಹ್ಯಾಪಿ ಪೇರೇಂಟ್ಸ್ ಡೇ

2.
ಪೋಷಕರಾಗುವುದು ದೊಡ್ಡ ಜವಾಬ್ದಾರಿ, ಅದರಲ್ಲಿ ಒಂದಿಷ್ಟು ತಪ್ಪದೆ ನಮ್ಮನ್ನು ಬೆಳೆಸುತ್ತಿರುವ ನನ್ನ ಪೋಷಕರಿಗೆ ಪೋಷಕರ ದಿನ ಶುಭಾಶಯಗಳು

3.
ಪೋಷಕರ ದಿನದ ಶುಭಾಶಯಗಳು

4.
ನಿಮ್ಮ ಮಗ ಎಂದು ಹೇಳಿಕೊಳ್ಳುವುದೇ ನನಗೆ ಹೆಮ್ಮೆ: ಪೋಷಕರ ದಿನದ ಶುಭಾಶಯಗಳು

5.
ನಿಮ್ಮ ಮಗಳಾಗಿರುವುದು ನನ್ನ ಅದೃಷ್ಟ, ನನ್ನ ಬದುಕಿನಲ್ಲಿ ಪ್ರತಿಯೊಂದು ಹಂತದಲ್ಲಿ ಸಪೋರ್ಟಿವ್ ಆಗ ನೀವಿರುವುದೇ ನನ್ನ ಶಕ್ತಿ- ಪೋಷಕರ ದಿನದ ಶುಭಾಶಯಗಳು

6.
ನಾನು ಗೆದ್ದಾಗ ತಾವೇ ಗೆದ್ದಂತೆ ಹೆಮ್ಮೆಯಿಂದ ಬೀಗುವ, ನಾನು ಸೋತಾಗ ಏನೂ ಆಗಿಲ್ಲ, ಎಲ್ಲಾ ಸರಿ ಹೋಗುತ್ತೆ ಎಂದು ಮತ್ತೆ ನನ್ನಲ್ಲಿ ಭರವಸೆ ತುಂಬುವ, ನಾನು ನಕ್ಕಾಗ ನಗುವ, ಅತ್ತಾಗ ಕಣ್ಣೀರು ಒರೆಸುವ ಜೀವಗಳ ನನಗಾಗಿ ಈ ಭೂಮಿಯಲ್ಲಿರುವುದು ನೀವಿಬ್ಬರೇ, ಥ್ಯಾಂಕ್ಯೂ ಅಪ್ಪ-ಅಮ್ಮಾ
ಪೋಷಕರ ದಿನದ ಶುಭಾಶಯಗಳು

7.
ಈ ಜಗತ್ತಿನ ದಿ ಬೆಸ್ಟ್ ಪೇರೇಂಟ್ಸ್ ನೀವು, ನಿಮ್ಮ ಆದರ್ಶದಂತೆ ಬದುಕುವ ಜವಾಬ್ದಾರಿ ನನ್ನದು ಎಂದು ಪ್ರಾಮಿಸ್ ಮಾಡುತ್ತೇನೆ



Click it and Unblock the Notifications