Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
Father's Day 2025: ಅಪ್ಪಂದಿರ ದಿನಕ್ಕೆ ಶುಭ ಕೋರಲು ಇಲ್ಲಿದೆ ವಿಶೇಷ ಸಂದೇಶಗಳು!
ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ಅಪ್ಪ... ಅಮ್ಮನ ಪ್ರೀತಿ ಆಕೆ ತೋರುವ ಮಮತೆಯಲ್ಲಿ ಕಾಣುತ್ತದೆ. ಆದರೆ ಅಪ್ಪ ಆಗಲ್ಲ, ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದರಲ್ಲಿ ಪ್ರೀತಿ ತೋರಿಸಲು ಪ್ರಯತ್ನಿಸುತ್ತಾನೆ.
ಅಮ್ಮಂದಿರ ದಿನವನ್ನು ನಾವು ಎಷ್ಟು ಸ್ಪೆಷಲ್ ಆಗಿ ಆಚರಿಸುತ್ತೇವೆಯೋ ಅಷ್ಟೇ ಸ್ಪೆಷಲ್ ಆಗಿ ಅಪ್ಪಂದಿರ ದಿನವನ್ನು ಆಚರಣೆ ಮಾಡಬೇಕು. ಸಾಮಾನ್ಯವಾಗಿ ಅಪ್ಪನಿಗೆ ನಮ್ಮ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಕೂಡ ಅವರು ಅದನ್ನು ತೋರ್ಪಡಿಸೋದಿಲ್ಲ. ಆದ್ರೆ ಮಗ/ಮಗಳಾಗಿ ನೀವು ನಿಮ್ಮ ಅಪ್ಪನಿಗೆ ಈ ದಿನ ಅಕ್ಕರೆಯಿಂದ ಅಪ್ಪಂದಿರ ದಿನಕ್ಕೆ ಶುಭ ಕೋರಬಹುದು. ಈ ಮೂಲಕ ನಿಮ್ಮ ಪ್ರೀತಿಯನ್ನು ತೋರ್ಪಡಿಸಬಹುದು.

ಕೆಲ ಅಪ್ಪಂದಿರುವ ಮಕ್ಕಳ ಜೊತೆ ಸ್ನೇಹಿತರಂತೆ ಇರುತ್ತಾರೆ, ಇನ್ನು ಕೆಲವರು ತುಂಬಾ ಸ್ಟ್ರಿಕ್ಟ್, ಹಾಗಂತ ಅವರಿಗೆ ಮಕ್ಕಳ ಮೇಲೆ ಪ್ರೀತಿಯಿಲ್ಲ ಎಂದಲ್ಲ, ಆದರೆ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಅದಾಗಿರುತ್ತದೆ ಅಷ್ಟೇ...ಒಬ್ಬ ಅಪ್ಪನ ಪ್ರೀತಿ ಎಂಥದ್ದು ಮಗಳಿಗೆ ತಿಳಿಯುವುದು ಅವಳು ಮದುವೆಯಾಗಿ ಹೀಗುವಾಗ, ಅದೇ ಮಗನಿಗೆ ತಿಳಿಯುವುದು ತಾನು ತಂದೆಯಾದಾಗ.
ಒಬ್ಬ ತಂದೆಗೆ ತನ್ನ ಮಕ್ಕಳ ಎಲ್ಲಾ ಜವಾಬ್ದಾರಿಗಳಿರುತ್ತದೆ. ಅದನ್ನು ನಿಭಾಯಿಸುವುದರಲ್ಲಿಯೇ ತನ್ನ ಬದುಕನ್ನು ಸವೆಸುತ್ತಾನೆ. ತನ್ನ ಮಕ್ಕಳು ತಾನು ಬಯಸಿದಂತೆ ಉತ್ತಮ ವ್ಯಕ್ತಿಗಳಾಗಿ ಬೆಳೆದರೆ ಆ ಸಾರ್ಥಕತೆ ತಂದೆಯ ಕಣ್ಣುಗಳಲ್ಲಿ ಕಾಣಬಹುದು. ಜೂನ್ 15ಕ್ಕೆ ವಿಶ್ವ ತಂದೆಯರ ದಿನವನ್ನು ಆಚರಿಸಲಾಗುವುದು. ಇಲ್ಲಿ ನಾವು ಕೆಲವೊಂದು ಕೋಟ್ಸ್ ನೀಡಿದ್ದೇವೆ. ನಿಮ್ಮ ತಂದೆಗೆ ಸೂಟ್ ಆಗುವ ಕೋಟ್ ಅವರಿಗೆ ಕಳುಹಿಸಿ, ಖಂಡಿತ ಅವರು ಖುಷಿ ಪಡುತ್ತಾರೆ...

ಕೋಟ್ 1
1. ನನಗೆ ತಾಯಿ ಬದುಕು ನೀಡಿದರೆ, ತಂದೆ ಬದುಕುವ ಕನಸುಗಳನ್ನು ತುಂಬಿದ್ದಾರೆ, ನನ್ನ ಕೈ ಹಿಡಿದು ಭವಿಷ್ಯ ಕಟ್ಟುವ ಭರವಸೆ ತುಂಬಿದ್ದಾರೆ, ಅಪ್ಪಾ ನನ್ನ ಒಬ್ಬ ಉತ್ತಮ ವ್ಯಕ್ತಿಯನ್ನಾಗಿಸಿದ್ದಕ್ಕೆ ಧನ್ಯವಾದಗಳು...

ಕೋಟ್ 2
2. ಇಂದಿಗೂ, ಎಂದೆಂದಿಗೂ ನನ್ನ ಅತ್ಯಾಪ್ತ ಸ್ನೇಹಿತನಾಗಿರುವ ಅಪ್ಪಾ, ನಿನ್ನ ಪಡೆದ ನಾನು ತುಂಬಾ ಅದೃಷ್ಟಶಾಲಿ... ಹ್ಯಾಪಿ ಫಾದರ್ಸ್ ಡೇ

ಕೋಟ್ 3
3. ನೀವು ನನಗೆ ಹೇಗೆ ಬದುಕಬೇಕೆಂದು ಹೇಳಿಕೊಡಲಿಲ್ಲ, ಬದಲಿಗೆ ತೋರಿಸಿಕೊಟ್ಟಿದ್ದೀರಿ, ಬದುಕುವ ಕಲೆ ಕಲಿಸಿದ ನನ್ನಪ್ಪನಿಗೆ ಪ್ರೀತಿಯ ಅಪ್ಪುಗೆ ಜೊತೆಗೆ ಅಪ್ಪಂದಿರ ದಿನದ ಶುಭಾಶಯಗಳು

ಕೋಟ್ 4
4. ಯಾರು ಬೇಕಾದರೂ ಅಪ್ಪನಾಗಬಹುದು, ಆದರೆ ಒಳ್ಳೆಯ ಅಪ್ಪನಾಗುವುದು ಕೆಲವರಷ್ಟೇ, ಅದರಲ್ಲೊಬ್ಬರು ನೀವು, ಅಪ್ಪಾ ನೀವು ತುಂಬಾ ಸ್ಪೆಷಲ್, ನೀವು ನನಗೆ ಆಟ ಕಲಿಸಿದ್ದೀರಿ, ಅದರಲ್ಲೂ ಸರಿಯಾಗಿ ಆಡುವುದು ಹೇಗೆ ಎಂದು ಕಲಿಸಿಕೊಟ್ಟಿದ್ದೀರಿ, ಲವ್ ಯೂ ಅಪ್ಪಾ.... ಅಪ್ಪಂದಿರ ದಿನದ ಶುಭಾಶಯಗಳು

ಕೋಟ್ 5
5. ನೀನು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣ ಹೇಗಪ್ಪಾ ತೀರಿಸಲಿ, ನೀನು ಆ ದೇವರು ನನಗೆ ಕೊಟ್ಟ ಅಮೂಲ್ಯವಾದ ಗಿಫ್ಟ್, ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್.. ಅಪ್ಪಾ ನೀನು ಹೆಮ್ಮೆ ಪಡುವ ಮಗಳು ನಾನಾಗುವೆ, ಇದು ನನ್ನ ಪ್ರಾಮಿಸ್... ಹ್ಯಾಪಿ ಫಾದರ್ಸ್ ಡೇ..

ಕೋಟ್ 6
6. ನೀನು ನಮಗಾಗಿ ಹರಿಸುವ ಒಂದೊಂದು ಬೆವರಿನ ಹನಿಯ ಋಣ ಹೇಗಪ್ಪಾ ತೀರಿಸಲಿ, ನೀನು ಆ ದೇವರು ನನಗೆ ಕೊಟ್ಟ ಅಮೂಲ್ಯವಾದ ಗಿಫ್ಟ್, ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್.. ಅಪ್ಪಾ ನೀನು ಹೆಮ್ಮೆ ಪಡುವ ಮಗ ನಾನಾಗುವೆ, ಇದು ನನ್ನ ಪ್ರಾಮಿಸ್... ಹ್ಯಾಪಿ ಫಾದರ್ಸ್ ಡೇ..

ಕೋಟ್ 7
7. ಯಾರು ನನಗೆ ಯಾರು ನಿನ್ನ ಫೇವರೆಟ್ ಹೀರೋ ಎಂದು ಕೇಳುತ್ತಾರೋ ಅವರಿಗೆ ನಾನು ಹೇಳುವೆ, ನನ್ನ ಬದುಕಿನಲ್ಲಿ ನಾನು ಕಂಡ ಅತ್ಯಂತ ಸೂಪರ್ ಹೀರೋ ಅಂದರೆ ನನ್ನಪ್ಪ ಎಂದು.. ಅಪ್ಪಾ ನನಗಾಗಿ ನಿನ್ನ ಬದುಕು ಸವೆಸುತ್ತಿರುವ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು, ಅಪ್ಪಂದಿರ ದಿನದ ಶುಭಾಶಯಗಳು, ಲವ್ ಯೂ.....

ಕೋಟ್ 8
8. ಒಬ್ಬ ಒಳ್ಳೆಯ ತಂದೆಯಾಗಲು ಮೊದಲು ಹೆಂಡತಿಗೆ ಒಳ್ಳೆಯ ಗಂಡನಾಗಿರಬೇಕು ಅಂತಾರೆ, ಅದು ನೀನಾಗಿದ್ದೀಯಾ, ನಿನ್ನ ಪಡೆದ ನಾವು ಅದೃಷ್ಟವಂತರು, ಹ್ಯಾಪಿ ಫಾದರ್ಸ್ ಡೇ...

ಕೋಟ್ 9
9. ದೇಶ ಕಾಯುವ ಸೈನಿಕನಂತೆ ನಮ್ಮ ರಕ್ಷಣೆ ಮಾಡುವ ಯೋಧ ನೀನು, ನನಗೆ ನೀನು ದಿ ಬೆಸ್ಟ್ ಅಪ್ಪಾ... ಅಪ್ಪಂದಿರ ದಿನದ ಶುಭಾಶಯಗಳು

ಕೋಟ್ 10
10. ತಾಯಿ ಮಮತೆಯ ಮಡಿಲು ನೀಡಿದರೆ, ತಂದರೆ ರಕ್ಷಣೆಯ ಭುಜ ನೀಡುತ್ತಾನೆ...ಅಪ್ಪಂದಿರ ದಿನದ ಶುಭಾಶಯಗಳು



Click it and Unblock the Notifications
