For Quick Alerts
ALLOW NOTIFICATIONS  
For Daily Alerts

ಲೈಂಗಿಕ ಸಂಪರ್ಕದ ವೇಳೆ ಮಾತಿನಲ್ಲೇ ಮೋಡಿ ಮಾಡಿ ಗೆಲ್ಲುವ ರಾಶಿಚಕ್ರಗಳು

|

ದಂಪತಿಗಳ ನಡುವಿನ ಸಂಬಂಧ, ಪ್ರೀತಿ, ಅರ್ಥೈಸಿಕೊಳ್ಳುವಿಕೆ, ನಂಬಿಕೆ, ಭಾವನಾತ್ಮಕ ಬಂಧ ಇನ್ನಷ್ಟು ಸದೃಢವಾಗಲು ಇಬ್ಬರ ನಡುವಿನ ಸಂಬಂಧ ಹೇಗಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಪರಸ್ಪರರ ದೈಹಿಕ ಸಂಬಂಧ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ಆದರೆ ಈ ವಿಚಾರದಲ್ಲಿ ಪ್ರತಿಯೊಬ್ಬರು ವಿಭಿನ್ನ ಎಂದೇ ಹೇಳಬಹುದು. ಕೆಲವರು ಅತ್ಯಾಕರ್ಷಕ ದೈಹಿಕ ಸಂಬಂಧದ ಕಲ್ಪನೆಯನ್ನು ನಂಬಬುತ್ತಾರೆ, ಇವರು ಲೈಂಗಿಕತೆಯ ವೇಳೆ ಯಾವುದೇ ಮಾತುಗಳನ್ನಾಡಲು, ಸಂಗಾತಿಯನ್ನು ವರ್ಣಿಸುವುದಾಗಲಿ ಇಷ್ಟಪಡುವುದಿಲ್ಲ. ಇನ್ನೂ ಕೆಲವರು ಲೈಂಗಿಕ ಸಂದರ್ಭಗಳಲ್ಲಿ ಉತ್ತಮ ಹಾಸ್ಯ ಮತ್ತು ಆಸಕ್ತಿದಾಯಕ ಸಂಭಾಷಣೆಗಳು, ಸಂಗಾತಿಯನ್ನು ವರ್ಣಿಸುತ್ತಾ ಗಮನ ಸೆಳೆಯುತ್ತಾರೆ, ಸಂಗಾತಿಯ ಜತೆ ಉತ್ತಮ ಸಂಭಾಷಣೆಗಳನ್ನು ಮಾಡುತ್ತಾ ಗೌರವಿಸುವವರು ಹಲವರಿದ್ದಾರೆ. ಈ ಬಗ್ಗೆ ಜ್ಯೋತಿಶಾಸ್ತ್ರ ಸಹ ಹೇಳುತ್ತದೆ.

ರಾಶಿಚಕ್ರದ ಪ್ರಕಾರ ಯಾವೆಲ್ಲಾ ರಾಶಿಚಕ್ರಗಳು ದೈಹಿಕ ಸಂಪರ್ಕದ ವೇಳೆ ತಮ್ಮ ಮಾತುಗಳ ಮೂಲಕವೂ ಗಮನ ಸೆಳೆಯಲು ಬಯಸುತ್ತಾರೆ, ಆ ಮೂಲಕ ತಮ್ಮ ಸಂಗಾತಿಗೆ ಹೆಮ್ಮ ಪಡಿಸುತ್ತಾರೆ ಮುಂದೆ ತಿಳಿಯೋಣ:

 ಕರ್ಕ ರಾಶಿ

ಕರ್ಕ ರಾಶಿ

ಪ್ರೀತಿ ಮತ್ತು ಪ್ರಣಯದ ವಿಷಯಕ್ಕೆ ಬಂದಾಗ ಕರ್ಕ ರಾಶಿಯವರು ನಿಜವಾಗಿಯೂ ಭಾವುಕರು. ಅವರು ತಮ್ಮ ಭಾವನೆಗಳನ್ನು ಮತ್ತು ಅದನ್ನು ತಮ್ಮ ಸಂಗಾತಿಗೆ ವ್ಯಕ್ತಪಡಿಸುವುದನ್ನು ನಂಬುತ್ತಾರೆ, ಅಲ್ಲದೇ ಉತ್ತಮ ಕೇಳುಗರು ಹೌದು. ಈ ರಾಶಿಯವರ ದೈಹಿಕ ಪ್ರೀತಿಯು ತಮ್ಮ ಸಂಗಾತಿಯ ಮೇಲಿನ ಪ್ರೀತಿ, ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಇವರು ಎಂದಿಗೂ ಲೈಂಗಿಕತೆ ಮತ್ತು ಈ ವೇಳೆ ನಡೆಸುವ ಪ್ರೀತಿಯ ಸಂಭಾಷಣೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಜನಿಸಿದವರು ಮಾತುಗಾರರು. ಇವರ ಜತೆ ಮೊದಲ ಬಾರಿಗೆ ಸಂಭಾಷಣೆ ನಡೆಸಿದಾಗ ಅಶ್ಲೀಲ ಮಾತುಗಳನ್ನಾಡುವವರು ಮತ್ತು ನಿಗೂಢ ವ್ಯಕ್ತಿಗಳು ಎಂದು ಎನಿಸಬಹುದು, ಆದರೆ ಅವರನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅವರಲ್ಲಿರುವ ಮಹಾನ್ ಮಾತಿನ ಶಕ್ತಿ, ಕೌಶಲ್ಯ, ಸಂಭಾಷಣಾವಾದಿತ್ವವನ್ನು ನೀವೇ ಗುರುತಿಸಿ ಮೆಚ್ಚುತ್ತೀರಿ. ಅವರ ಕುತೂಹಲಕಾರಿ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾದರು, ಇವರು ಒಂದೇ ವಿಷಯದ ಹಿಂದೆ ಸುತ್ತುವರೆದು ಸಮಯ ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ, ತಮ್ಮ ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸಿಬಿಡುತ್ತಾರೆ. ಮಿಥುನ ರಾಶಿಯವರು ನಿಮ್ಮ ಸಂಗಾತಿಯಾಗಿದ್ದರೆ ನಿಜಕ್ಕೂ ನೀವು ಅದೃಷ್ಟವಂತರು, ಇವರು ನಿಮ್ಮ ಸಂಬಂಧದಲ್ಲಿ ಎಂದಿಗೂ ಬೇಸರ ಅಥವಾ ಮಂದ ಭಾವನೆ ಮೂಡಿಸುವಂತೆ ಮಾಡುವುದೇ ಇಲ್ಲ. ಇವರ ಸಂಭಾಷಣೆಯನ್ನು ನೀವೆ ಹೆಚ್ಚು ಅನುಭವಿಸುತ್ತೀರಾ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ತಮ್ಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಇಷ್ಟಪಡುತ್ತಾರೆ. ಆದ್ದರಿಂದಲೇ ಸಂಬಂಧದ ವಿಷಯಕ್ಕೆ ಬಂದಾಗ ಅವರು ಉತ್ತಮ ಮಾತುಗಾರರನ್ನು ಮಾತ್ರವಲ್ಲದೆ ಉತ್ತಮ ಕೇಳುಗರೂ ಸಹ ಹೌದು. ದೈಹಿಕ ಅನ್ಯೋನ್ಯತೆಯ ಭಾವನೆಗಿಂತ ಹೆಚ್ಚಾಗಿ, ಅವರು ತಮ್ಮ ಸಂಭಾಷಣೆಗಳಿಂದ ನಿಮ್ಮನ್ನು ಪ್ರೀತಿಸುವ, ಮೋಹಿಸುವ ಸಾಧ್ಯತೆಯಿದೆ.

ಧನು ರಾಶಿ

ಧನು ರಾಶಿ

ಸಂಬಂಧದ ವುಷಯದಲ್ಲಿ ಧನು ರಾಶಿಯವರನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ, ಅಷ್ಟು ಸುಲಭವಾಗಿ ಕೆಳಕ್ಕೆ ಇಳಿಸಲು ಸಹ ಸಾಧ್ಯವಿಲ್ಲ. ಇವರು ಆ ಕ್ಷಣಕ್ಕೆ ತಮ್ಮ ಸುತ್ತ ಇಲ್ಲದೇ ಇರಬಹುದು ಆದರೆ, ತಮ್ಮ ಮಾತಿನ ಮೂಲಕವೇ ತಮ್ಮ ಇರುವಿಕೆಯನ್ನು ತೋರಿಸುತ್ತಾರೆ. ಇನ್ನು ತಮ್ಮ ಸಂಗಾತಿಯ ಜತೆ ಒಟ್ಟಾಗಿರುವಾಗ ತಮ್ಮ ಸಂಗಾತಿಯ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಉಳಿಯುವ ಭಾವಪೂರ್ಣ ಸಂಭಾಷಣೆಗಳನ್ನು ಆಡುತ್ತಾರೆ, ಗೌರವಿಸುತ್ತಾರೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರ ಸಂಭಾಷಣೆಗಳು ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತವೆ. ಅವರ ಬೌದ್ಧಿಕ ಮಟ್ಟ ಹೆಚ್ಚಾಗಿರುವುದರಿಂದಲೇ ತಮ್ಮ ಸಂಭಾಷಣೆಯನ್ನು ಸಾಕಷ್ಟು ಬುದ್ದಿವಂತಿಕೆಯಿಂದ ಆಡುತ್ತಾರೆ ಮತ್ತು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೇಗೆ ಮಾತನಾಡಬೇಕೆಂದು ಇವರಿಗೆ ಚೆನ್ನಾಗಿ ತಿಳಿದಿದೆ. ಇತರ ರಾಶಿಚಕ್ರ ಚಿಹ್ನೆಗಳಿಗಿಂತ ಕುಂಭ ರಾಶಿಯವರ ಮಾತಿನ ಶೈಲಿಯಲ್ಲೇ ಹೆಚ್ಚು ಲೈಂಗಿಕ ಶಕ್ತಿಯು ಅಡಗಿದೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

Zodiac signs who value good conversations over good sex

Here we are discussing about Good Conversations Over Good Sex Is Strength Of These Zodiac. If you or your partner fall under any of these zodiac signs, then you’re surely for keeps. Read more.
X