Horoscope Today 24 March 2023: ಶುಕ್ರವಾರ: ಯಾವೆಲ್ಲಾ ರಾಶಿಗಳಿಗೆ ಈ ಅದೃಷ್ಟದ ದಿನ

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್‌ 24ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ಪಕ್ಷ: ಶುಕ್ಲಪಕ್ಷ
ತಿಥಿ: ತೃತೀಯ
ನಕ್ಷತ್ರ: ಅಶ್ವಿನಿ
ರಾಹುಕಾಲ: ಬೆಳಗ್ಗೆ 10:56ರಿಂದ ಮಧ್ಯಾಹ್ನ 12:26ರವರೆಗೆ

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಸಂತಸದ ದಿನ. ಈ ದಿನ ತುಂಬಾ ಖುಷಿಯಾಗಿರುತ್ತೀರಿ. ಉದ್ಯಮಿಗಳು ತಮ್ಮ ಅಪೂರ್ಣವಾದ ಕೆಲಸ ಪೂರ್ಣಗೊಳಿಸಬಹುದು. ಹಣದ ವಿಷಯದಲ್ಲಿ, ದಿನವು ಉತ್ತಮವಾಗಿರುತ್ತದೆ. ನಿಮ್ಮ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡಿ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 14

ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 9 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಉದ್ಯೋಗಸ್ಥರಿಗೆ ಇಂದು ಸ್ವಲ್ಪ ಸಮಧಾನವಾಗುವುದು, ಏಕೆಂದರೆ ಇಷ್ಟು ದಿನ ಎದುರಿಸುತ್ತಿದ್ದ ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ. ಕೆಲಸದ ಕಡೆಗೆ ಗಮನಹರಿಸಲು ಸಾಧ್ಯವಾಗುವುದು. ಹಣದ ವಿಷಯದಲ್ಲಿ ಈ ದಿನವು ದುಬಾರಿಯಾಗಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಹಣ ಖರ್ಚಾಗಬಹುದು. ಆರೋಗ್ಯದ ವಿಷಯದಲ್ಲೂ ಯಾವುದೇ ಸಮಸ್ಯೆ ಇರಲ್ಲ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 16

ಅದೃಷ್ಟದ ಸಮಯ: ಬೆಳಿಗ್ಗೆ 4:25 ರಿಂದ ಮಧ್ಯಾಹ್ನ 2 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ನಿಮ್ಮ ಪ್ರಸ್ತುತ ಕೆಲಸದಿಂದ ನೀವು ತೃಪ್ತಿ ಹೊಂದಿಲ್ಲದಿದ್ದರೆ, ಉದ್ಯೋಗವನ್ನು ಬದಲಾಯಿಸಲು ಇದು ಸರಿಯಾದ ಸಮಯ. ಇಂದು ಉದ್ಯಮಿಗಳಿಗೆ ಏರಿಳಿತಗಳಿಂದ ಕೂಡಿರಲಿದೆ. ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಕುಟುಂಬದ ವಾತಾವರಣದಲ್ಲಿ ಸಂತೋಷ ಇರುತ್ತದೆ. ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 36

ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಉದ್ಯೋಗಸ್ಥರಿಗೆ ಈ ದಿನ ಉತ್ತಮವಾಗಿದೆ. ಉದ್ಯಮಿಗಳು ಅವಸರದಲ್ಲಿ ಯಾವುದೇ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಲಾಗಿದೆ. ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಮೌನವಾಗಿರುವ ಬದಲಿಗೆ ಮಾತನಾಡುವ ಮೂಲಕ ಪರಿಹರಿಸುವುದು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಸಿಹಿ ಪದಾರ್ಥಗಳಿಂದ ದೂರವಿರಿ.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 44

ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಕೆಲಸದ ವಿಷಯದಲ್ಲಿ ನೋಡುವುದಾರೆ ಈ ದಿನ ಚೆನ್ನಾಗಿರಲಿದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಉದ್ಯಮಿಗಳು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ನೀವು ಔಷಧಿಗಳು, ಲೇಖನ ಸಾಮಗ್ರಿಗಳು, ಬಟ್ಟೆಗಳು, ಸೌಂದರ್ಯವರ್ಧಕಗಳು ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಲಾಭದಾಯಕವಾಗಿರುತ್ತದೆ. ಮನೆಯ ವಾತಾವರಣ ಸ್ವಲ್ಪ ಉದ್ವಿಗ್ನವಾಗಿ ಉಳಿಯುವ ಸಾಧ್ಯತೆಯಿದೆ. ಹಣದ ವಿಚಾರದಲ್ಲಿ ಮನೆಯಲ್ಲಿ ಮಾತುಕತೆ ಬರಬಹುದು. ಆರೊಗ್ಯದ ಬಗ್ಗೆ ಹೇಳುವುದಾದರೆ ಈ ದಿನ ಮಿಶ್ರಫಲ.

ಅದೃಷ್ಟದ ಬಣ್ಣ: ಗಾಢ ಹಳದಿ

ಅದೃಷ್ಟದ ಸಂಖ್ಯೆ: 18

ಅದೃಷ್ಟದ ಸಮಯ: ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಕುಟುಂಬದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದನ್ನು ಬಗೆಹರಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಹಣಕ್ಕೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಯೋಚನೆ ಮಾಡಿ ತೆಗೆದುಕೊಳ್ಳಿ. ಕೆಲಸದ ಮುಂಭಾಗದಲ್ಲಿ ಈ ದಿನವು ಸರಾಸರಿಯಾಗಿರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಅದೃಷ್ಟದ ಬಣ್ಣ: ಕೆಂಪು

ಅದೃಷ್ಟದಸ ಸಂಖ್ಯೆ: 20

ಅದೃಷ್ಟದ ಸಮಯ: ಬೆಳಗ್ಗೆ 10:50 ರಿಂದ ಸಂಜೆ 4:20 ರವರೆಗೆ

ತುಲಾ ರಾಶಿ

ತುಲಾ ರಾಶಿ

ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ , ಈ ದಿನ ಖುಷಿಯಾಗಿರುವಿರಿ. ಕೆಲಸದ ವಿಷಯದಲ್ಲಿ ಈ ದಿನ ನಿಮಗೆ ಉತ್ತಮವಾಗಿರಲಿದೆ.. ನೀವು ಉದ್ಯಮಿಯಾಗಿದ್ದರೆ ಮತ್ತು ಇತ್ತೀಚೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ಈ ಸಮಯದಲ್ಲಿ ನೀವು ಅವುಗಳ ಪ್ರಚಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಮನೆಯವರೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 9

ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಹೊಸ ವಾಹನ ಇತ್ಯಾದಿಗಳನ್ನು ಖರೀದಿಸಲು ನೀವು ಬಹಳ ದಿನಗಳಿಂದ ಯೋಚಿಸುತ್ತಿದ್ದರೆ ಶೀಘ್ರವೇ ನಿಮ್ಮ ಆಸೆ ಈಡೇರಲಿದೆ. ಇಂದು ವ್ಯಾಪಾರಸ್ಥರಿಗೆ ತುಂಬಾ ಲಾಭದಾಯಕವಾಗಿರಲಿದೆ. ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಸ್ಥರು ಕಚೇರಿಯಲ್ಲಿ ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ಈ ದಿನ ಯಾವುದೇ ಸಮಸ್ಯೆಗಳಿಲ್ಲ.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 24

ಅದೃಷ್ಟದ ಸಮಯ: ಬೆಳಿಗ್ಗೆ 4:20 ರಿಂದ ಮಧ್ಯಾಹ್ನ 3 ರವರೆಗೆ

ಧನು ರಾಶಿ

ಧನು ರಾಶಿ

ಅನಗತ್ಯ ವಿಷಯಗಳ ಕಡೆ ಗಮನಹರಿಸಿದರೆ ನಿಮ್ಮ ಕೆಲಸದತ್ತ ಗಮನ ಹರಿಸಬೇಕು. ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸೂಕ್ಷ್ಮ ವಿಷಯದಲ್ಲಿ, ನಿಮ್ಮ ನಿರ್ಧಾರವನ್ನು ನೀವು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಆತುರ ಬೇಡ. ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಇಂದು ಮಿಶ್ರಫಲ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಕೆಟ್ಟ ಚಟಗಳಿಂದ ದೂರವಿರುವುದು ಒಳ್ಳೆಯದು.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 16

ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ

ಮಕರ ರಾಶಿ

ಮಕರ ರಾಶಿ

ವ್ಯಾಪಾರಸ್ಥರು ಈ ದಿನ ವ್ಯವಹಾರದ ಕಡೆಗೆ ಅಧಿಕ ಗಮನ ನೀಡಬೇಕು. ಉದ್ಯೋಗಿಗಳಿಗೆ ಅತಿಯಾದ ಆತ್ಮವಿಶ್ವಾ ಒಳ್ಳೆಯದಲ್ಲ ಎಂಬ ಸಲಹೆ ನೀಡಲಾಗಿದೆ. ಪ್ರೇಮಿಗಳಿಗೆ ವಿವಾಹಿತರಿಗೆ ಈ ದಿನ ಉತ್ತಮವಾಗಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬಜೆಟ್‌ಗಿಂತ ಅಧಿಕ ಖರ್ಚು ಮಾಡಬೇಡಿ, ಆರೋಗ್ಯದ ಕಡೆಗೆ ಗಮನಹರಿಸಿ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 5

ಅದೃಷ್ಟದ ಸಮಯ: ಸಂಜೆ 6:45 ರಿಂದ ರಾತ್ರಿ 8 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ಉದ್ಯೋಗಸ್ಥರು ಈ ದಿನ ಒಳ್ಳೆಯ ದಿನ. ಎಲ್ಲಾ ಕೆಲಸಗಳು ನಿಮ್ಮ ಯೋಜನೆಯಂತೆ ಪೂರ್ಣಗೊಳ್ಳಿದೆ. ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸಗಳು ಸ್ಥಗಿತಗೊಂಡಿದ್ದರೆ ಇಂದು ಆ ಸಮಸ್ಯೆ ಬಗೆಹರಿಯಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.

ಅದೃಷ್ಟದ ಬಣ್ಣ: ಕೆನೆ

ಅದೃಷ್ಟದ ಸಂಖ್ಯೆ: 35

ಅದೃಷ್ಟದ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ

ಮೀನ ರಾಶಿ

ಹಣದ ವಿಷಯದಲ್ಲಿ ಈ ದಿನ ಒತ್ತಡದಿಂದ ಕೂಡಿರಲಿದೆ. ಹೆಚ್ಚುತ್ತಿರುವ ವೆಚ್ಚಗಳು ನಿಮ್ಮ ಕಷ್ಟಗಳನ್ನು ಹೆಚ್ಚಿಸಬಹುದು. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ. ಉದ್ಯಮಿಗಳು ತಮ್ಮ ನಷ್ಟವನ್ನು ಸರಿದೂಗಿಸಲು ಅವಕಾಶವನ್ನು ಪಡೆಯಬಹುದು. ಉದ್ಯೋಗಿಗಳಿಗೆ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯ ಚೆನ್ನಾಗಿರಲಿದೆ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 30

ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 7 ರವರೆಗೆ

English summary

Dina Bhavishya -March 24 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 24 March 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Friday, March 24, 2023, 4:00 [IST]
X
Desktop Bottom Promotion