Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
Horoscope Today 17 March 2023: ಶುಕ್ರವಾರ: ತುಲಾ ರಾಶಿಯವರಿಗೆ ಶುಭ ದಿನ, ಉಳಿದ ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 17ರ ರಾಶಿಫಲ ನೋಡೋಣ:

ಸಂವತ್ಸರ: ಶುಭಕೃತ್
ಆಯನ: ದಕ್ಷಿಣಾಯಣ
ಋತು: ಹೇಮಂತ
ಮಾಸ: ಚೈತ್ರ
ಪಕ್ಷ: ಕೃಷ್ಣಪಕ್ಷ
ತಿಥಿ: ದಶಮಿ
ನಕ್ಷತ್ರ: ಉತ್ತರ ಆಷಾಢ
ರಾಹುಕಾಲ: ಬೆಳಗ್ಗೆ 10:58ರಿಂದ ಮಧ್ಯಾಹ್ನ 12:28ರವರೆಗೆ

ಮೇಷ ರಾಶಿ
ಈ ದಿನ ನಿಮಗೆ ಚೆನ್ನಾಗಿರಲಿದೆ. ಉದ್ಯಮಿಗಳು ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಉದ್ಯೋಗಿಗಳಿಗೂ ಈ ದಿನ ಚೆನ್ನಾಗಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಕೂಡ ಈ ದಿನ ಒಳ್ಳೆಯದಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ

ವೃಷಭ ರಾಶಿ
ನೀವು ನಿರುದ್ಯೋಗಿಗಳಾಗಿದ್ದರೆ ಇಂದು ಉದ್ಯೋಗ ಅವಕಾಶ ದೊರೆಯಬಹುದು. ವ್ಯಾಪಾರಸ್ಥರಿಗೆ ಈ ದಿನ ಅನುಕೂಲಕರವಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಬೆನ್ನುಹುರಿ ಸಮಸ್ಯೆಯಿದ್ದರೆ ಈ ದಿನ ನೀವು ಜಾಗರೂಕರಾಗಿರಬೇಕು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1:20

ಮಿಥುನ ರಾಶಿ
ಪ್ರೇಮಿಗಳಿಗೆ ಈ ದಿನ ಅನುಕೂಲಕರವಲ್ಲ, ಇಬ್ಬರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಹಣದ ವಿಷಯದಲ್ಲಿ, ದಿನವು ತುಂಬಾ ದುಬಾರಿಯಾಗಿದೆ. ಇಂದು ಹಣ ಕೂಡ ಹೆಚ್ಚು ಖರ್ಚಾಗಲಿದೆ. ಕೆಲಸದ ಒತ್ತಡ ಅಧಿಕವಿರಲಿದೆ. ನಿಮ್ಮ ಆರೋಗ್ಯ ದುರ್ಬಲವಾಗಿರುತ್ತದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 29
ಅದೃಷ್ಟಸ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 12:30

ಕರ್ಕ ರಾಶಿ
ಉದ್ಯೋಗಸ್ಥರಿಗೆ ಇಂದು ಅತ್ಯಂತ ಒಳ್ಳೆಯ ದಿನ, ನಿಮ್ಮ ಶ್ರಮಕ್ಕೆ ಉತ್ತಮ ಫಲ ಸಿಗಲಿದೆ. ವ್ಯಾಪಾರಸ್ಥರಿಗೆ ಕೆಲವು ಸವಾಲುಗಳು ಎದುರಾಗಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಹಣಕಾಸಿನ ತೊಂದರೆ ಬಗೆಹರಿಯಲಿದೆ. ಮನೆಯವರಿಗೂ ಸಮಯ ಕೊಡಿ.
ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 37
ಅದೃಷ್ಟದ ಸಮಯ: ಮಧ್ಯಾಹ್ನ 12:30 ರಿಂದ 7:55 ರವರೆಗೆ

ಸಿಂಹ ರಾಶಿ
ಇಂದು ಸವಾಲಿನ ದಿನ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಮಾನಸಿಕವಾಗಿ ಬಲವಾಗಿರಬೇಕು. ಹಣದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಅನಗ್ಯತ ಖರ್ಚುಗಳಿಂದ ದೂರವಿರಿ. ಯೋಚಿಸದೆ ಹಣದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿರಬಹುದು
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ 5:30 ರವರೆಗೆ

ಕನ್ಯಾ ರಾಶಿ
ಅದೃಷ್ಟದ ಬಲವಿದೆ. ಆದ್ದರಿಂದ ಇಂದು ನಿಮ್ಮ ಯಾವುದೇ ಸ್ಥಗಿತಗೊಂಡ ಕೆಲಸವು ಪೂರ್ಣಗೊಳ್ಳುತ್ತದೆ. ನೀವು ಉದ್ಯಮಿಯಾಗಿದ್ದರೆ ಮತ್ತು ವಿದೇಶದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ, ಇಂದು ನಿಮಗೆ ಬಹಳ ಮುಖ್ಯವಾಗಿರುತ್ತದೆ. ಉದ್ಯೋಗಸ್ಥರಿಗೆ ಇಂದು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ದುಂದು ವೆಚ್ಚ ಮಾಡಬೇಡಿ. ಸಂಗಾತಿಯೊಂದಿಗಿನ ಮನಸ್ತಾನ ಮಾತನಾಡುವ ಮೂಲಕ ಸರಿಪಡಿಸಿ.
ಆರೋಗ್ಯದ ವಿಷಯದಲ್ಲಿ, ದಿನವು ಮಿಶ್ರಫಲ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 39
ಅದೃಷ್ಟದ ಸಮಯ: ಸಂಜೆ 4:05 ರಿಂದ ರಾತ್ರಿ 8 ರವರೆಗೆ

ತುಲಾ ರಾಶಿ
ಉದ್ಯೋಗಸ್ಥರಿಗೆ ಈ ದಿನ ಒಳ್ಳೆಯದಿದೆ. ಉದ್ಯಮಿಗಳು ಬಯಸಿದ ಲಾಭವನ್ನು ಪಡೆಯುತ್ತಾರೆ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರೂ ಒಳ್ಳೆಯ ಲಾಭ ಪಡೆಯಬಹುದು. ಹಣದ ಸಮಸ್ಯೆ ಬಗೆಹರಿಯಲಿದೆ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿರುತ್ತದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ 3 ಗಂಟೆಗೆ

ವೃಶ್ಚಿಕ ರಾಶಿ
ವೈಯಕ್ತಿಕ ಜೀವನದ ಸಮಸ್ಯೆಗಳು ಕೆಲಸದ ಮೇಲೆ ಪ್ರಭಾವ ಬೀರಬಹುದು. ನಿಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸುವುದು ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಉತ್ತಮ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಆರೋಗ್ಯದ ಕಡೆ ಗಮನ ಕೊಡಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಗ್ಗೆ11:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ

ಧನು ರಾಶಿ
ಧನು ರಾಶಿಯ ವಿದ್ಯಾರ್ಥಿಗಳಿಗೆ ಇಂದು ಅತ್ಯಂತ ಮಹತ್ವದ ದಿನವಾಗಲಿದೆ. ನೀವು ಇತ್ತೀಚೆಗೆ ಯಾವುದೇ ಪರೀಕ್ಷೆಯನ್ನು ನೀಡಿದ್ದರೆ ಉತ್ತಮ ಫಲಿತಾಂಶ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಖುಷಿ ಇರುತ್ತದೆ. ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ. ಆರೋಗ್ಯದ ಕಡೆ ಗಮನ ಹರಿಸಿ.
ಅದೃಷ್ಟದ ಬಣ್ಣ: ತಿಳಿ ಹಳದಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಗ್ಗೆ4:40ರಿಮದ ನಿಂದ 3 ಗಂಟೆಯವರೆಗೆ

ಮಕರ ರಾಶಿ
ಈ ದಿನ ಒಳ್ಳೆಯದಿದೆ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಜನರು ಇಂದು ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯುತ್ತೀರಿ. ಮತ್ತೊಂದೆಡೆ, ಇಂದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 8 ರವರೆಗೆ

ಕುಂಭ ರಾಶಿ
ಹಣದ ವಿಷಯದಲ್ಲಿ ಈ ದಿನ ನಿಮಗೆ ಮಿಶ್ರಫಲ. ನಿಮ್ಮ ಆದಾಯ ಹೆಚ್ಚಾಗಬಹುದು, ಆದರೆ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡಲು ಹೋಗಬೇಡಿ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆರೋಗ್ಯದ ವಿಷಯದಲ್ಲಿ, ದಿನವು ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 13
ಅದೃಷ್ಟದ ಸಮಯ: ಬೆಳಗ್ಗೆ 10:10 ನಿಂದ ಮಧ್ಯಾಹ್ನ 12:25

ಮೀನ ರಾಶಿ
ಮೀನ ರಾಶಿಯ ಪ್ರೇಮಿಗಳಿಗೆ, ವಿವಾಹಿತರಿಗೆ ಈ ದಿನ ರೊಮ್ಯಾಂಟಿಕ್ ಆಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕೆಲಸದ ಒತ್ತಡ ಅಧಿಕವಿರಲಿದೆ. ಕೆಲಸದ ಕಡೆ ತುಂಬಾ ಗಮನಹರಿಸಿ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಆಕಾಶ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಗ್ಗೆ 7:55 ರಿಂದ 11:30 ರವರೆಗೆ



Click it and Unblock the Notifications











