Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಾರದ ದಿನ ಭವಿಷ್ಯ: 18 ಜೂನ್ 2020
ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344
ಈ ದಿನದ ರಾಶಿಫಲ ಹೇಗಿದೆ ನೋಡೋಣ:

ಮೇಷ
ಈ ದಿನ ನಿಮ್ಮ ಆರೋಗ್ಯದ ಕಡೆ ಜಾಗ್ರತೆ ವಹಿಸಿ. ತಣ್ಣೀರು ಕುಡಿಯುವುಉದ, ಶೀತವಾಗುವ ವಸ್ತುಗಳನ್ನು ತಿನ್ನುವುದು ಮಾಡಬೇಡಿ. ಆರೋಗ್ಯದ ಕಡೆ ನಿರ್ಲಕ್ಷ್ಯ ತೋರಿದರೆ ಪರಿಸ್ಥಿತಿ ಗಂಭೀರವಾಗಬಹುದು. ಇನ್ನು ಹಣಕಾಸಿನ ವಿಷಯದಲ್ಲೂ ಜಾಗ್ರತೆವಹಿಸಿ. ಇನ್ನು ವ್ಯಾಪಾರಸ್ಥರಿಗೆ ಲಾಭ ದೊರೆಯಲಿದೆ. ಕುಟುಂಬದವರ ಬೆಂಬಲ ನಿಮಗೆ ದೊರೆಯುವುದು, ವೈವಾಹಿಕ ಜೀವನ ಖುಷಿಕರವಾಗಿರಲಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಗ್ಗೆ 7:15ರಿಂದ ಮಧ್ಯಾಹ್ನ 12.45ರವರೆಗೆ

ವೃಷಭ:
ವೈಯಕ್ತಿಕ ಜೀವನದ ಕಡೆ ಹೆಚ್ಚು ಗಮನ ನೀಡಿ, ಕೆಲವೊಂದು ಕೌಟಂಬಿಕ ಸಮಸ್ಯೆಗಳು ಈ ದಿನ ಕಾಡಬಹುದು, ಈ ಸಂದರ್ಭದಲ್ಲಿ ಜಾಗ್ರತೆ ಹಾಗೂ ತಾಳ್ಮೆಯಿಂದ ವರ್ತಿಸಿ. ಮೂರನೇಯವರು ಮೂಗು ತೋರಿಸದಂತೆ ಜಾಗ್ರತೆವಹಿಸಿ. ಇನ್ನು ಉದ್ಯೋಗಸ್ಥರಾಗಿದ್ದರೆ ಸಹೋದದ್ಯೋಗಿಗಳ ಜೊತೆ ತರ್ಕ ಮಾಡಲು ಹೋಗಬೇಡಿ. ಇನ್ನು ಕೋಪವನ್ನು ನಿಯಂತ್ರಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಸಂಜೆ 4 ಗಂಟೆಯಿಂದ ರಾತ್ರಿ 9.45ರವರೆಗೆ

ಮಿಥುನ
ವೃತ್ತಿಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು. ನಿಮ್ಮ ಯೋಜನೆ ಪ್ರಕಾರವೇ ಇಂದು ಕೆಲಸ ಕಾರ್ಯಗಳು ನಡೆಯಲಿದೆ. ಇನ್ನು ಹಣಕಾಸಿನ ಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರಲ್ಲಿ ಆರೋಗ್ಯ ಸಮಸ್ಯೆ ಕಾಡುವುದರಿಂದ ನಿಮಗೆ ಚಿಂತೆಯುಂಟಾಗುವುದು, ಇನ್ನು ಸಂಗಾತಿ ಜೊತೆಗೆ ಸಣ್ಣ-ಪುಟ್ಟ ವೈಮನಸ್ಸು ಮೂಡುವ ಸಾಧ್ಯತೆ ಇದೆ, ಆದ್ದರಿಂದ ನಿಮ್ಮ ಮಾತುಗಳನ್ನು ಹಿಡಿತದಲ್ಲಿಡಿ, ಆಗ ಎಲ್ಲವೂ ಸರಿಯಾಗುವುದು.
ಅದೃಷ್ಟದ ಬಣ್ಣ: ಕಡು ಹಸಿರು
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಸಂಜೆ 5.15ರಿಂದ ರಾತ್ರಿ 10.45ರವರೆಗೆ

ಕರ್ಕ
ವ್ಯಾಪಾರಸ್ಥರಿಗೆ ಈ ದಿನ ಶುಭಕರವಾಗಿದೆ. ಹೊಸ ಕೆಲಸ ಪ್ರಾರಂಭಿಸಲು ಈ ದಿನ ಸೂಕ್ತವಾಗಿದೆ, ಆದರೆ ಸಣ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ಕುಟುಂಬದವರೊಂದಿಗೆ ಖುಷಿಯಾಗಿ ಸಮಯ ಕಳೆಯಬಹುದು, ಇನ್ನು ಹಣಕಾಸು ಸ್ಥಿತಿ ಉತ್ತಮವಾಗಿದ್ದು, ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಒಟ್ಟಿನಲ್ಲಿ ಕರ್ಕ ರಾಶಿಯವರು ಈ ದಿನ ಯಾವುದೇ ಚಿಂತೆಯಿಲ್ಲದೆ ಕಳೆಯಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ

ಸಿಂಹ
ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ದಿನ ಸ್ವಲ್ಪ ತೊಂದರೆ ಎದುರಾಗಲಿದೆ, ಆದ್ದರಿಂದ ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆವಹಿಸುವುದು ಒಳ್ಳೆಯದು. ಬಾಕಿ ಉಳಿಸಿರುವ ಕೆಲಸ ಮುಗಿಸುವುದು ಒಳ್ಳೆಯದು. ಉದ್ಯಮಿಗಳಿಗೆ ಈ ದಿನ ಆರಾಮದಾಯಕವಾಗಿದೆ, ಇನ್ನು ಕೋರ್ಟ್ ಕೇಸ್ ಇದ್ದರೆ ಜಯ ನಿಮ್ಮದಾಗಿರುತ್ತದೆ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ, ಕುಟುಂಬದವರ ಜೊತೆ ಖುಷಿಯಾಗಿರುವಿರಿ.
ಅದೃಷ್ಟದ ಬಣ್ಣ: ಮೆರೂನ್
ಅದೃಷ್ಟದ ಸಂಖ್ಯೆ: 32
ಅದೃಷ್ಟದ ಸಮಯ: ಬೆಳಗ್ಗೆ 11 ಗಂಟೆಯಿಂದ 2.30ರವರೆಗೆ

ಕನ್ಯಾ
ಉದ್ಯೋಗಸ್ಥರಿಗೆ ಈ ದಿನ ಅಷ್ಟು ಅನುಕೂಲಕರವಾಗಿಲ್ಲ,ವಿಷಯ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿ. ಮನೆಯಲ್ಲೂ ಅಷ್ಟೆ ತಾಳ್ಮೆಯಿಂದ ಮಾತನಾಡಿ, ನಿಮ್ಮ ಕೋಪ ಮನೆಯ ನೆಮ್ಮದಿ ಹಾಳು ಮಾಡುವುದರಿಂದ ಕೋಪ ನಿಯಂತ್ರಿಸಿ. ಇನ್ನು ಆರೋಗ್ಯದ ಕಡೆಯೂ ಸ್ವಲ್ಪ ಗಮನ ನೀಡುವುದು ಒಳ್ಳೆಯದು.
ಅದೃಷ್ಟದ ಬಣ್ಣ: ಪಿಂಕ್
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಸಂಜೆ 6 ಗಂಟೆಯಿಂದ ರಾತ್ರಿ 8.45ರವರೆಗೆ

ತುಲಾ
ಹಣಕಾಸಿನ ತೊಂದರೆ ಉಂಟಾಗದಿರಲು ಜಾಗ್ರತೆವಹಿಸಬೇಕು, ಮೊದಲಿಗೆ ಅನಾವಶ್ಯಕ ಖರ್ಚು ಮಾಡಬಾರದು, ಆದಾಯದ ಕಡೆ ಗಮನ ನೀಡಿ. ನಿಮ್ಮ ಕಠಿಣಶ್ರಮಕ್ಕೆ ಫಲ ಸಿಗಲಿದೆ. ಇನ್ನು ಉದ್ಯೋಗಸ್ಥರು ಕೆಲಸದ ಜಾಗದಲ್ಲಿ ಯಾರೊಂದಿಗೂ ತರ್ಕ ಮಾಡಲು ಹೋಗಬೇಡಿ. ಉದ್ಯಮಿಗಳಿಗೆ ಲಾಭ ದೊರೆಯಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಇನ್ನು ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿದರೆ ಒಳ್ಳೆಯದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಗ್ಗೆ 10.10 ಗಂಟೆಯಿಂದ 12.25ರವರೆಗೆ

ವೃಶ್ಚಿಕ
ಇವತ್ತು ನಿಮಗೆ ಮಿಶ್ರಫಲ ದೊರೆಯಲಿದೆ. ಉದ್ಯೋಗಸ್ಥರಿಗೆ ಈ ದಿನ ಸಾಮಾನ್ಯ ದಿನವಾಗಿರಲಿದೆ, ಹೆಚ್ಚಿನ ಕೆಲಸದ ಒತ್ತಡವಿರುವುದಿಲ್ಲ. ಇನ್ನು ಹೊಸ ಬ್ಯುಸಿನೆಸ್ ಬಗ್ಗೆ ಯೋಚಿಸುತ್ತಿದ್ದರೆ ಪ್ರತಿಯೊಂದು ನಿರ್ಧಾರವನ್ನು ತುಂಬಾ ಜಾಗ್ರತೆವಹಿಸಿ ತೆಗೆದುಕೊಳ್ಳಿ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನ ಹರಿಸಿ. ಇನ್ನು ಮನೆಯವರ ಜೊತೆ ಮಾತಿನ ತರ್ಕ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಆಹಾರದ ಕಡೆ ಗಮನ ನೀಡಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಗ್ಗೆ 7.50ರಿಂದ 11.30ರವರೆಗೆ

ಧನು
ಈ ದಿನ ಉತ್ತಮವಾಗಿ ಪ್ರಾರಂಭವಾಗಲಿದೆ. ಬಾಕಿ ಉಳಿಸಿದ ಕೆಲಸ ಕೂಡ ಈ ದಿನ ಪೂರ್ಣವಾಗಲಿದೆ. ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಈ ದಿನ ಸೂಕ್ತವಾಗಿದೆ, ಆರೋಗ್ಯ ಕೂಡ ಉತ್ತಮವಾಗಿದ್ದು ಈ ದಿನ ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಕಳೆಯುವಿರಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 5 ಗಂಟೆಯಿಂದ ರಾತ್ರಿ 8.20ರವರೆಗೆ

ಮಕರ
ಉದ್ಯೋಗಸ್ಥರಾಗಿದ್ದರೆ ಈ ದಿನ ನಿಮ್ಮ ಕೆಲಸಕ್ಕೆ ಮೇಲಾಧಿಕಾರಿ/ಬಾಸ್‌ನಿಂದ ಮೆಚ್ಚುಗೆ ಗಳಿಸುವಿರಿ. ವ್ಯಾಪಾರಸ್ಥರಿಗೆ ಈ ದಿನ ಸ್ವಲ್ಪ ಏರಳಿತ ಕಾಣಬಹುದು. ಇನ್ನು ಹಣದ ವಿಷಯದಲ್ಲಿ ನೋಡುವುದಾದರೆ ಸಾಲ ಮಾಡಲು ಹೋಗಬೇಡಿ, ನಿಮ್ಮ ಖರ್ಚು ಕೂಡ ಆದಾಯದ ಒಳಗೆ ನಿಭಾಯಿಸಲು ಪ್ರಯತ್ನಿಸಿ. ನಿಮ್ಮ ಪ್ರೀತಿ ಪಾತ್ರರರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ತೆಳು ಹಳದಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಗ್ಗೆ 4.15ರಿಂದ 3 ಗಂಟೆಯವರೆಗೆ

ಕುಂಭ
ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ದಿನ ತುಂಬಾ ಮಹತ್ವದಾಗಿದೆ. ಒಂದು ದೊಡ್ಡ ಸಮಸ್ಯೆಗೆ ಪರಿಹಾರ ದೊರೆಯಲಿದೆ. ನಿಮ್ಮ ಶ್ರಮಕ್ಜೆ ಫಲ ಸಿಗಲಿದೆ. ನಿಮಗೆ ಈ ದಿನ ಹಣಕಾಸಿನ ನೆರವು ಕುಡ ದೊರೆಯಲಿದೆ. ಇನ್ನು ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆ ಕಾಣಬಹುದು, ಜಾಗ್ರತೆಯಿಂದ ನಿಭಾಯಿಸಿ. ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಗ್ಗೆ 10.45ರಿಂದ ಮಧ್ಯಾಹ್ನ 12.25ರವರೆಗೆ

ಮೀನ
ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ದಿನ ಉತ್ತಮವಾಗಿರಲಿದೆ. ಹಳೆ ಸಾಲ ಪಾವತಿ ಮಾಡುವಿರಿ. ಉದ್ಯೋಗದ ಜಾಗದಲ್ಲೂ ಉತ್ತಮ ಫಲ ದೊರೆಯಲಿದೆ. ಕೌಟಂಬಿಕ ಜೀವನ ಸುಖಕರವಾಗಿರಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿದರೆ ಯಾವುದೇ ಸಮಸ್ಯೆ ಕಾಡುವುದಿಲ್ಲ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಸಂಜೆ 5.30 ಗಂಟೆಯಿಂದ ರಾತ್ರಿ 9ರವರೆಗೆ
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344



Click it and Unblock the Notifications