Latest Updates
-
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್
ಶನಿವಾರದ ದಿನ ಭವಿಷ್ಯ (28-09-2019)
ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ಆಂಜನೇಯ ವಾಯುಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.

ಮೇಷ ರಾಶಿ: 21 ಮಾರ್ಚ್ -19 ಏಪ್ರಿಲ್
ಈ ದಿನ ನಿಮ್ಮದಾಗಿರುತ್ತದೆ. ನೀವು ನಿಮ್ಮ ಸಾಮಥ್ರ್ಯವನ್ನು ತೋರಿಸಲು ಕೈಲಾದಷ್ಟು ಪ್ರಯತ್ನ ಮಾಡಬೇಕು. ನಿಮ್ಮ ಯೋಚನೆಯಂತೆಯೇ ಕೆಲವರು ಸವಾಲುಗಳನ್ನು ಎಸೆಯಬಹುದು. ನೀವು ಹೋಗುವ ದಾರಿಯಲ್ಲಿ ಒಂದಿಷ್ಟು ಹಠಮಾರಿ ವರ್ತನೆಯನ್ನು ತೋರುವಿರಿ. ನೀವು ಎಲ್ಲಾ ಸಂಗತಿಗಳಲ್ಲೂ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದುವುದು ಸೂಕ್ತ. ಇದರಿಂದ ಸಾಕಷ್ಟು ಉತ್ತಮ ಫಲವನ್ನು ಪಡೆದುಕೊಳ್ಳುವಿರಿ.

ವೃಷಭ ರಾಶಿ: 20 ಏಪ್ರಿಲ್ -20 ಮೇ
ಇಂದು ನೀವು ಪ್ರಣಯ-ಪ್ರೀತಿಯನ್ನು ಚೆನ್ನಾಗಿ ಪಡೆದುಕೊಳ್ಳುವಿರಿ. ಕೆಲವು ಸಂಗತಿಗಳ ಬಗ್ಗೆ ನಿಮಗೆ ಕುತೂಹಲ ಉಂಟಾಗುವುದು. ಆ ವಿಷಯಗಳ ಬೆನ್ನತ್ತಿ ಹೋಗುವಿರಿ. ನೀವು ವಿಶೇಷ ವಿಚಾರಗಳಲ್ಲಿ ಪ್ರಾಯೋಗಿಕ ವಿಧಾನಗಳನ್ನು ಅನುಸರಿಸುವುದು ಸೂಕ್ತ. ಕೆಲವು ವಿಷಯದಲ್ಲಿ ನೀವು ನಿಯಂತ್ರಣವನ್ನು ಹೊಂದಿರಬೇಕು. ನಿಮ್ಮ ಹತ್ತಿರದವರು ಅಥವಾ ಆಪ್ತರು ಹುತಾತ್ಮರಾದ ವಿಷಯವನ್ನು ಕೇಳುವ ಸಾಧ್ಯತೆಗಳಿವೆ.

ಮಿಥುನ ರಾಶಿ: 21 ಮೇ -20 ಜೂನ್
ಇಂದು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ನಿರ್ಣಯಗಳು ವರ್ಧಿಸಬಹುದು. ನಿಮ್ಮ ಕೆಲವು ಚಿಂತನೆಗಳು ಒಂದು ಬದಿಯಿಂದ ವಿಪರೀತಕ್ಕೆ ಹೋಗಬಹುದು. ಎಲ್ಲಾ ಸಂಗತಿಗಳಲ್ಲೂ ಮೌಲ್ಯಗಳನ್ನು ಗುರುತಿಸಿ. ನಿಮ್ಮ ತರ್ಕಬದ್ಧ ಮನಸ್ಸನ್ನು ಬದಿಗಿಟ್ಟು ನೀವು ಹೃದಯದ ಮಾತನ್ನು ಅಂತಿಮವಾಗಿ ನ್ಯಾಯಾಧೀಶರನ್ನಾಗಿ ಮಾಡಿ. ಆಗ ನಿಮ್ಮ ಕೆಲಸ ಹಾಗೂ ನಿರ್ಣಯಗಳು ಶಕ್ತಿಯಿಂದ ಕೂಡಿರುತ್ತದೆ. ಸುಂದರವಾದ ಮತ್ತು ಸಮಾಧಾನಕರವಾದ ಸಂಗತಿಯ ಬಗ್ಗೆ ನೀವು ಆಕರ್ಷಣೆಗೆ ಒಳಗಾಗಬಹುದು.

ಕರ್ಕ ರಾಶಿ: 21 ಜೂನ್ 22 ಜುಲೈ
ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿರಿಸಿಕೊಳ್ಳಬೇಕು. ನಿಮ್ಮ ತೀಕ್ಷಣವಾದ ನೋಟವು ಸತ್ಯವನ್ನು ತಿಳಿದುಕೊಳ್ಳಲು ಸಹಾಯ ಮಾಡುವುದು. ನಿಮ್ಮ ಮನಸ್ಸು ಮತ್ತು ಹೃದಯದ ನಿರ್ಧಾರಗಳು ಒಂದೇ ರೀತಿಯಲ್ಲಿ ಇರುತ್ತವೆ. ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರುವುದು. ನೀವು ಹಿಂದೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಒಮ್ಮೆ ಸೂಕ್ತ ರೀತಿಯಲ್ಲಿ ಚಿಂತಿಸಿ. ಆಗ ನಿಮ್ಮ ತರ್ಕಬದ್ಧ ಭಾವನೆಗಳು ಏನು ಎನ್ನುವುದನ್ನು ನೀವೇ ಅರ್ಥಮಾಡಿಕೊಳ್ಳುವಿರಿ.

ಸಿಂಹ ರಾಶಿ: 23 ಜುಲೈ-22 ಆಗಸ್ಟ್
ಇಂದಿನ ದಿನವನ್ನು ನೀವು ಅತ್ಯಂತ ಉತ್ಸಾಹದಿಂದ ಕಳೆಯಲು ಪ್ರಯತ್ನಿಸಿ. ಇಂದು ನಿಮಗೆ ಉತ್ತಮ ಸಮಯ ಎನ್ನಬಹುದು. ನಿಮ್ಮ ಗುರಿ ಹಾಗೂ ಸಾಧನೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತೀರಿ. ಇತರರು ಇದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಬಹುದು. ದೊಡ್ಡ ಸಂಗತಿಯ ವಿಚಾರಗಳಿಗಾಗಿ ನಿಮ್ಮ ಹುಡುಕಾಟ ಮುಂದುವರಿಯುವುದು. ನಿಮ್ಮ ಮುಂದಿರುವ ಅದ್ಭುತ ಸಂಗತಿಗಳ ಸಂಪರ್ಕವನ್ನು ನೀವು ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಕನ್ಯಾ ರಾಶಿ: 23 ಆಗಸ್ಟ್ -22 ಸಪ್ಟೆಂಬರ್
ಪ್ರೀತಿ ಮತ್ತು ಪ್ರಣಯವು ಇಂದಿನ ಪ್ರಮುಖ ಸಂಗತಿಯಾಗಿರುತ್ತದೆ. ಈ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳು ನಿಮ್ಮೊಡನೆ ಸುಗಮವಾಗಿ ಸಾಗುವುದು. ನಿಮ್ಮ ಮನಸ್ಸು ಸಾಮಾನ್ಯಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಆಳವಾದ ಜ್ಞಾನಕ್ಕಾಗಿ ನಿಮ್ಮ ಹುಡುಕಾಟವು ಸಾಮಾನ್ಯದ್ದಕ್ಕಿಂತ ಹೆಚ್ಚಿನ ಶ್ರಮದಿಂದ ಕೂಡಿರುತ್ತದೆ. ಸೃಜನಶೀಲ ಮನೋಭಾವವು ಸಾಹಸ ಕೆಲಸದೆಡೆಗೆ ಆಸಕ್ತಿ ತೋರುವುದು.

ತುಲಾ ರಾಶಿ: 23 ಸಪ್ಟೆಂಬರ್ -22 ಅಕ್ಟೋಬರ್
ಇಂದು ನೀವು ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ನಿಮ್ಮ ಚಿಂತನೆ ಹಾಗೂ ಮನೋಭಾವಗಳನ್ನು ಆದಷ್ಟು ನಿಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ಪ್ರೀತಿ ಹಾಗೂ ಪ್ರಣಯದ ಬಗ್ಗೆ ನಿರ್ಲಕ್ಷ್ಯ ತೋರದಿರಿ. ಹಿಂದಿನಿನ ಪರಿಸ್ಥಿತಿಗಳಿಗಿಂತ ಇಂದು ನಿಮಗೆ ಹೆಚ್ಚಿನ ತಾಳ್ಮೆ ಅಗತ್ಯವಾಗಿರುತ್ತದೆ. ಅಪರಿಚಿತ ವ್ಯಕ್ತಿಗಳಿಂದ ನಿಮಗೆ ತೊಡಕು ಉಂಟಾಗಬಹುದು. ಹಾಗೊಮ್ಮೆ ಅವರು ನಿಮಗೆ ತಿಳಿದಿರುವ ವ್ಯಕ್ತಿಗಳೇ ಆಗಿದ್ದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ.

ವೃಶ್ಚಿಕ ರಾಶಿ: 23 ಅಕ್ಟೋಬರ್ 21 ನವೆಂಬರ್
ನಿಮ್ಮ ಮನಸ್ಸು ಇಂದು ಉತ್ತಮ ಜರಡಿಯಂತೆ ಕೆಲಸ ಮಾಡುವುದು. ಅದು ಸಣ್ಣ-ಪುಟ್ಟ ಸಂಗತಿಗಳನ್ನೂ ಸೂಕ್ಷ್ಮವಾಗಿ ಪರಿಗಣಿಸುವುದು. ನಿಮ್ಮ ಗಮನಕ್ಕೆ ಬಾರದೆ ಯಾವುದೂ ನಡೆಯುವುದಿಲ್ಲ. ನೀವು ನಿಮ್ಮ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಹಿಂಜರಿಯುವ ಅಗತ್ಯವಿಲ್ಲ. ನಿಮಗೆ ಅಗತ್ಯವಾದ ವಿಷಯಗಳ ಬಗ್ಗೆ ಹಾಗೂ ಹೊಂದಿರುವ ಯೋಜನೆಗಳ ಬಗ್ಗೆ ಸೂಕ್ತ ನಿರ್ಣಯ ಅಥವಾ ನಿರ್ಧಾರವನ್ನು ಕೈಗೊಳ್ಳಬಹುದು. ಆದರೆ ಸೂಕ್ತ ಪರಿಶೀಲನೆ ಹಾಗೂ ಚಿಂತನೆಯನ್ನು ನಡೆಸುವುದು ಅತ್ಯಗತ್ಯ.

ಧನು ರಾಶಿ: 22 ನವೆಂಬರ್-21 ಡಿಸೆಂಬರ್
ಪ್ರೀತಿ ಹಾಗೂ ಪ್ರಣಯದ ವಿಷಯ ಬಂದಾಗ ನಿಮಗೆ ಮುಳ್ಳಿನ ಹಾಸಿಗೆಯಲ್ಲಿ ಕುಳಿತ ಅನುಭವ ಉಂಟಾಗಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಘರ್ಷಗಳು ಉಂಟಾದರೆ ನೀವು ಆಶ್ಚರ್ಯ ಪಡುವ ಅಗತ್ಯವಿಲ್ಲ. ನೀವು ಸುಂದರ ಬದುಕನ್ನು ಹೊಂದುವ ಕನಸನ್ನು ಹೊಂದಿದ್ದರೆ, ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಅಥವಾ ಅಡೆತಡೆಗಳ ಬಗ್ಗೆಯೂ ಸೂಕ್ತ ಗಮನ ಹಾಗೂ ಪರಿಹಾರವನ್ನು ಕೈಗೊಳ್ಳಬೇಕಾಗುವುದು. ನಿಮ್ಮ ಸಂಗಾತಿಯನ್ನು ಬಿಟ್ಟು ಇತರೊಂದಿಗೆ ಸಂಬಂಧ ಹೊಂದುವ ಕನಸಿದ್ದರೆ ಅದನ್ನು ಕೈ ಬಿಡುವುದು ಸೂಕ್ತ.

ಮಕರ ರಾಶಿ: 22 ಡಿಸೆಂಬರ್ -19 ಜನವರಿ
ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಪ್ರೀತಿಯು ನಿಮ್ಮ ಕಡೆ ಇರುವುದು. ನಿಮ್ಮ ಆಂತರಿಕ ಶಕ್ತಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ನಿಮ್ಮ ಆತ್ಮವಿಶ್ವಾಸವು ಉತ್ತಮವಾಗಿರುತ್ತದೆ. ದೌರ್ಬಲ್ಯಗಳನ್ನು ಮೆಟ್ಟಲು ನೀವು ಉತ್ತಮ ಚಟುವಟಿಕಾ ಶೀಲರಾಗಿ ಇರಬೇಕು. ದೌರ್ಬಲ್ಯಗಳನ್ನು ಬದಿಗೊತ್ತುವ ಕೆಲಸ ಮಾಡಿ. ಆಗ ಒಂದಷ್ಟು ಉತ್ತಮ ಫಲ ದೊರೆಯುವುದು.

ಕುಂಭ ರಾಶಿ: 20 ಜನವರಿ- 18 ಫೆಬ್ರವರಿ
ನಿಮಗೆ ಎದುರಾಗುವ ಪರಿಸ್ಥಿತಿಗಳನ್ನು ನೀವು ನಿಮ್ಮ ಬುದ್ಧಿ ಉಪಯೋಗಿಸುವುದರ ಮೂಲಕ ನಿಯಂತ್ರಿಸಬೇಕು. ನಿಮ್ಮ ಸ್ವಂತ ಬುದ್ಧಿಯನ್ನು ಉಪಯೋಗಿಸಿ ನಿರ್ಣಯವನ್ನು ಕೈಗೊಳ್ಳಿ. ವಿಷಯಗಳಿಗೆ ಉತ್ತರವನ್ನು ಹುಡುಕುವ ಬದಲು ಆ ಸಂಗತಿಯ ಆಳ ಮತ್ತು ಸೂಕ್ಷ್ಮತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ನಿಮಗೆ ಸಿಗುವ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿ.

ಮೀನ ರಾಶಿ: 19 ಫೆಬ್ರುವರಿ-20 ಮಾರ್ಚ್
ಇಂದು ನೀವು ಮಾನಸಿಕವಾಗಿ ಉತ್ಸುಕರಾಗಿರುತ್ತೀರಿ. ನೀವು ಆತಂಕದಿಂದ ಸಂವಹನ ನಡೆಸುವಿರಿ ಎಂದು ಭಾವಿಸುತ್ತೀರಿ. ಇತ್ತೀಚೆಗೆ ನಿಮ್ಮ ಜೀವನದಲ್ಲಿ ಪ್ರವೇಶ ಪಡೆದಿರಬಹುದು. ಅವರೊಂದಿಗೆ ನೀವು ಗಾಢ ಸಂಬಂಧ ಹೊಂದಲು ಬಯಸುವಿರಿ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸೂಕ್ತ ಚಿಂತನೆ ನಡೆಸುವುದು ಜಾಣತನ. ನಿಮ್ಮ ಕಲ್ಪನೆಗಳು ದೂರವಾಗಲು ಬಿಡಬೇಡಿ. ನಿಮಗೆ ಕಾಲ್ಪನಿಕ ಹಾಗೂ ವಾಸ್ತವದ ಸಂಗತಿಯ ವ್ಯತ್ಯಾಸವನ್ನು ಕಂಡುಹಿಡಿಯಲು ಕಷ್ಟವಾಗುವುದು.



Click it and Unblock the Notifications











