Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ವಿದ್ಯಾರ್ಥಿಗಳು ಒಳ್ಳೆಯ ಮಾರ್ಕ್ಸ್ ಪಡೆಯಲು ಚಾಣಕ್ಯ ಹೇಳಿದ ಸೂತ್ರಗಳಿವು
"ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್" ಎಂಬ ಮಾತಿನಂತೆ ವಿದ್ಯಾರ್ಥಿ ಜೀವನದಲ್ಲಿ ನಾವು ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಕೊಂಚ ಎಡವಿದ್ರೂ ಕೂಡ ಅದು ನಮ್ಮ ಜೀವನದ ದಿಕ್ಕನ್ನೇ ಬದಲಿಸಿ ಬಿಡ್ಬಹುದು. ಚಾಣಕ್ಯನ ಮಾತಿನ ಪ್ರಕಾರ ವಿದ್ಯಾರ್ಥಿಗಳು ಓದಿನ ಕಡೆಗೆ ಡೆಡಿಕೇಟೆಡ್ ಆಗಿ ಇರ್ಬೇಕು.

ಶಿಕ್ಷಣದ ಪ್ರತಿ ಹಂತದಲ್ಲಿ ಯಾವ ವಿದ್ಯಾರ್ಥಿ ಸೀರಿಯಸ್ ಆಗಿ ಇರ್ತಾನೋ ಆ ವ್ಯಕ್ತಿ ಮಾತ್ರ ಮುಂದೊಂದು ದಿನ ಮಹಾನ್ ವ್ಯಕ್ತಿಯಾಗೋದಕ್ಕೆ ಸಾಧ್ಯ. ನೀವೇನಾದ್ರು ಚಾಣಕ್ಯನ ಈ ಸೂತ್ರಗಳನ್ನ ಪಾಲಿಸಿದ್ರೆ ಖಂಡಿತ ಮುಂದೊಂದು ದಿನ ಮಹಾನ್ ಸಾಧಕರಾಗಿ ಬದಲಾಗುವುದರಲ್ಲಿ ಅನುಮಾನವೇ ಇಲ್ಲ.

ಶಿಸ್ತು, ಸಮಯಪ್ರಜ್ಞೆ
ವಿದ್ಯಾರ್ಥಿಯಾದವನಿಗೆ ಶಿಸ್ತು ತುಂಬಾನೇ ಮುಖ್ಯ. ಯಾವ ವ್ಯಕ್ತಿ ತನ್ನ ಜೀವನಶೈಲಿಯಲ್ಲಿ ಶಿಸ್ತನ್ನು ಅಳವಡಿಸಿಕೊಂಡಿರುತ್ತಾನೋ ಅವನಿಗೆ ಮುಂದೆ ಯಶಸ್ಸಿಗಾಗಿ ಹೋರಾಠ ಮಾಡಬೇಕೆಂದಿಲ್ಲ. ಶಿಸ್ತಿನಿಂದ ಇದ್ದ ವ್ಯಕ್ತಿ ಮುಂದೆ ತನ್ನ ಸ್ವಂತ ಬುದ್ಧಿಯಿಂದ ಏನನ್ನೂ ಬೇಕಾದ್ರು ಗೆಲ್ಲಬಹುದು. ಇದರ ಜೊತೆಗೆ ಸಮಯ ಪಾಲನೆ ತುಂಬಾನೇ ಮುಖ್ಯ. ನಮ್ಮ ಜೀವನ ಶೈಲಿ ಹೇಗಿರಬೇಕು ಅಂದರೆ ನಾವು ಯಾರಿಗಾಗಿಯೂ ನಿಲ್ಲಬಾರದು ಸಮಯದ ಜೊತೆ ಓಡುತ್ತಿರಬೇಕು. ಯಾವುದೇ ಕೆಲಸವಾದ್ರು ಸರಿಯಾದ ಸಮಯಕ್ಕೆ ಮುಗಿಸಿ ಗುರಿ ತಲುಪುವ ಕಡೆಗೆ ನಮ್ಮ ಹೆಜ್ಜೆ ಇರಬೇಕು.

ಒಡನಾಡ ಚೆನ್ನಾಗಿರಲಿ
ಚಾಣಕ್ಯನ ನೀತಿಯ ಪ್ರಕಾರ ಒಬ್ಬರ ಒಡನಾಟ ಮಾಡುವಾಗ ತುಂಬಾನೇ ಕೇರ್‌ಫುಲ್ ಆಗಿರ್ಬೇಕು. ನಮ್ಮ ಒಡನಾಟ ಹೇಗಿರ್ಬೇಕು ಅಂದ್ರೆ ಅದರಿಂದ ನಮಗೆ ಉಪಯೋಗವಾಗುವಂತಿರಬೇಕು ಮತ್ತು ಜ್ಞಾನವು ವೃದ್ಧಿಯಾಗಬೇಕು. ನೀವೇನಾದರು ಕೆಟ್ಟವರ ಸಂಗ ಮಾಡಿದ್ರೆ ಅದು ನಿಮ್ಮ ಭವಿಷ್ಯಕ್ಕೆ ಅಪಾಯವನ್ನು ತಂದೊಡ್ಡಬಹುದು. ಕೆಟ್ಟವರ ಸಹವಾಸ ನಿಮ್ಮ ಕೌಶಲ್ಯ, ಪ್ರತಿಭೆಯನ್ನು ಕೊಲ್ಲಬಹುದು. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಒಳ್ಳೆಯವರ ಸಂಗ ಮಾಡಿದ್ರೆ ಉತ್ತಮ.

ಸೋಮಾರಿತನ ಬಿಟ್ಟು ಬಿಡಿ
ಸೋಮಾರಿತನವನ್ನು ಬಿಟ್ಟು ಬಿಡಿ ಎಂದು ಚಾಣಕ್ಯನ ನೀತಿಗಳಲ್ಲಿ ಉಲ್ಲೇಖವಾಗಿದೆ. ಸೋಮಾರಿತನವೇ ವಿದ್ಯಾರ್ಥಿಗಳ ದೊಡ್ಡ ಶತ್ರು. ಹೀಗಾಗಿ ಸೋಮಾರಿತನವನ್ನು ಆದಷ್ಟು ಅವೈಡ್ ಮಾಡಿ. ಒಂದು ಬಾರಿ ಗುರಿ ಸಿದ್ಧವಾಯ್ತು ಅಂದ್ರೆ ಅದರೆಡೆಗೆ ಕೆಲಸ ಮಾಡಲು ಶುರು ಮಾಡಿ. ಏಕೆಂದರೆ ಸೋಮಾರಿತನ ನಿಮ್ಮನ್ನು ಗುರಿಯೆಡೆಗೆ ಕೆಲಸ ಮಾಡಲು ಬಿಡೋದಿಲ್ಲ. ನೀವು ಯಾವುದೇ ಕೆಲಸವನ್ನು ಮಾಡಬೇಕು ಅನ್ಕೋಂಡ್ರು ಇವತ್ತು ಬೇಡ ನಾಳೆ ಎಂದು ನಿಮ್ಮನ್ನು ಹಿಂದೆ ತಳ್ಳುತ್ತದೆ. ಇದನ್ನು ಸರಿ ಪಡಿಸಿಕೊಳ್ಳದೇ ಹೋದರೆ ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಲು ಸಿದ್ಧರಾಗಿ. ಹಾಗಾಗಿ ನಿಮ್ಮ ಇಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರಿ.

ಮಾದಕ ವಸ್ತುಗಳಿಂದ ದೂರವಿರಿ
ವಿದ್ಯಾರ್ಥಿಗಳ ಮಾದಕ ವಸ್ತುಗಳತ್ತ ಬಹು ಬೇಗ ಆಕರ್ಷಿತರಾಗುತ್ತಾರೆ. ಆದ್ರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಅಷ್ಟೇ ಅಲ್ಲ, ನಿಮ್ಮ ಭವಿಷ್ಯದ ಗುರಿಯನ್ನೇ ತಪ್ಪಿಸಿ ಬಿಡುವಷ್ಟು ಶಕ್ತಿಶಾಲಿ. ಹಾಗಾಗಿ ವಿದ್ಯಾರ್ಥಿಗಳು ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ತುಂಬಾನೇ ಜಾಗರೂಕರಾಗಿ ಆಗಿ ಇರ್ಬೇಕು. ಅಮಲು ಪದಾರ್ಥಗಳನ್ನು ಹತ್ತಿರ ಸುಳಿಯೋದಕ್ಕೂ ಬಿಡಬೇಡಿ.

ದುರಾಸೆಯನ್ನು ಬಿಟ್ಟುಬಿಡಿ
ವಿದ್ಯಾರ್ಥಿಗಳನ್ನು ದುರಾಸೆ ಇರಲೇ ಬಾರದು ಎಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾರೆ. ದುರಾಸೆ ಮನುಷ್ಯ ಅತ್ಯಂತ ಕೆಟ್ಟ ಗುಣ. ದುರಾಸೆ ಇರುವ ವ್ಯಕ್ತಿಗಳು ಯಾವತ್ತಿಗೂ ಕಷ್ಟಪಡುವುದು ಇಷ್ಟ ಪಡೋದಿಲ್ಲ, ಬದಲಾಗಿ ಅಡ್ಡ ದಾರಿ ಹಿಡಿಯುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ದುರಾಸೆಯಿಂದ ದೂರವಿರಬೇಕು.

ಮನೋರಂಜನೆಯೇ ಜೀವನವಾಗಬಾರದು
ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಮನೋರಂಜನೆಯೂ ತುಂಬಾನೇ ಮುಖ್ಯ. ಆದರೆ ಮನೋರಂಜನೆಯೇ ಜೀವನವಾಗಬಾರದು. ಓದಿನ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಬಿಡುವಿನ ಸಮಯದಲ್ಲಿ ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಉದಾಹರಣೆಗೆ ಸ್ಪೋರ್ಟ್ಸ್, ಡಾನ್ಸ್, ಚಿತ್ರಕಲೆ, ಸಂಗೀತ ಮುಂತಾದವು. ಆದ್ರೆ ಅತೀಯಾದ ಟಿವಿ, ಮೊಬೈಲ್ ಬಳಕೆ ಒಳ್ಳೆಯದಲ್ಲ. ಇವೆಲ್ಲ ಮಿತವಾಗಿದ್ರೆ ಉತ್ತಮ.

ಸಿಟ್ಟಿಗಿಂತ ದೊಡ್ಡ ಶತ್ರುವಿಲ್ಲ
ಆಚಾರ್ಯ ಚಾಣಕ್ಯ ಹೇಳೋ ಪ್ರಕಾರ ಸಿಟ್ಟಿಗಿಂತ ದೊಡ್ಡ ಶತ್ರುವಿಲ್ಲ. ಸಿಟ್ಟು ಬಂದಾಗ ,ಮನುಷ್ಯ ತನ್ನ ಸ್ಥಿಮಿತವನ್ನೇ ಕಳೆದುಕೊಂಡು ಬಿಡುತ್ತಾನೆ. ಈ ವೇಳೆ ಮನುಷ್ಯ ಯೋಚನೆ ಮತ್ತು ಅರ್ಥ ಮಾಡಿಕೊಳ್ಳೋ ಸಾಮರ್ಥ್ಯವನ್ನೇ ಕಳೆದುಕೊಂಡು ಬಿಡುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳು ಯಾವಾಗಲೂ ಸಿಟ್ಟಿನಿಂದ ಒಂದು ಹೆಜ್ಜೆ ದೂರವಿರಬೇಕು. ಬೆಳಗ್ಗೆ ಎದ್ದು ಯೋಗ, ಧ್ಯಾನ ಮಾಡೋದ್ರಿಂದ ಮನಸ್ಸನ್ನು ಕಂಟ್ರೋಲ್ ಮಾಡಬಹುದು.

ಕಾಮಪ್ರಚೋದಿತ ಚಟುವಟಿಕೆಗಳಿಂದ ದೂರವಿರಿ
ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಪ್ರೀತಿ, ಪ್ರೇಮ, ಕಾಮ ಚಟುವಟಿಕೆಯಿಂದ ದೂರವಿರಿ. ಒಂದು ವೇಳೆ ವಿದ್ಯಾರ್ಥಿಗಳು ಈ ಗೀಳಿಗೆ ಇಳಿದು ಬಿಟ್ಟರೆಂದರೆ ಇದರಿಂದ ಹೊರ ಬರೋದು ಕಷ್ಟವಾಗಬಹುದು. ಅಷ್ಟೇ ಅಲ್ಲ, ಇದರಿಂದಾಗಿ ಏಕಾಗ್ರತೆಯೂ ಕಡಿಮೆ ಆಗುತ್ತದೆ. ಜೊತೆಗೆ ಆರೋಗ್ಯ ಹಾಗೂ ಓದಿನ ಕಡೆಗೆ ಗಮನ ಕಡಿಮೆಯಾಗುತ್ತದೆ.
ಉತ್ತಮ ವ್ಯಕ್ತಿಯಾಗಿ ಮಹೋನ್ನತ್ತ ಸಾಧಕರಾಗಬೇಕು ಎಂದು ಭಯಸಿದವರು ಚಾಣಕ್ಯನ ಈ ಎಂಟು ನೀತಿಗಳು ಪಾಲಿಸಲೇಬೇಕು. ಭವಿಷ್ಯದಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಿಸಲು ಇದು ನೆರವಾಗಲಿದೆ.



Click it and Unblock the Notifications