Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಈ ರಾಶಿಯ ಹುಡುಗರು ಫ್ಲರ್ಟ್ ಮಾಡೋದ್ರಲ್ಲಿ ಎತ್ತಿದ ಕೈಯಂತೆ!
ಹುಡುಗರು ಸಾಮಾನ್ಯವಾಗಿ ಫ್ಲರ್ಟ್ ಮಾಡುವುದು ಎದುರಿರುವ ಹುಡುಗಿಯನ್ನ ಮೆಚ್ಚಿಸಲು ಎಂಬ ಮಾತಿದೆ. ತಮ್ಮ ಮಾತಿನ ಮೂಲಕ ಮೋಡಿ ಮಾಡಿ, ಆಕೆಯನ್ನು ಸೆಳೆಯುವುದೇ ಇದರ ಉದ್ದೇಶ. ಆದರೆ, ಕೆಲವರಿಗೆ ಇದು ನೀರು ಕುಡಿದಷ್ಟೇ ಸುಲಭದ ಕೆಲಸ. ಕ್ಷಣ ಮಾತ್ರದಲ್ಲೇ ತಮ್ಮದುರುಗಿರುವ ಹುಡುಗಿಯ ಜೊತೆ ಫ್ಲರ್ಟ್ ಮಾಡಿ, ಆಕೆಯ ಸ್ನೇಹವನ್ನು ಗಳಿಸಿಕೊಳ್ಳುತ್ತಾರೆ. ಇವರು ಫ್ಲರ್ಟಿಂಗ್‌ನಲ್ಲಿ ಎತ್ತಿದ ಕೈ. ಹಾಗಾದರೆ, ಜ್ಯೋತಿಷ್ಯದ ಪ್ರಕಾರ, ಹುಡುಗಿಯರ ಹೃದಯವನ್ನು ಬಹಳ ಬೇಗನೇ ಗೆಲ್ಲುವ ರಾಶಿಚಕ್ರಗಳಾವುವು ನೋಡೋಣ.
ಫ್ಲರ್ಟಿಂಗ್ ಮಾಡುವುದರಲ್ಲಿ ಯಾವ ರಾಶಿಯ ಹುಡುಗರು ಬಹಳ ಮುಂದಿರುತ್ತಾರೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ ರಾಶಿ:
ಈ ರಾಶಿಯ ಹುಡುಗರ ಶೈಲಿಯೇ ಬೇರೆ. ಹುಡುಗಿಯರು ತಕ್ಷಣವೇ ಅವರ ಕಡೆಗೆ ಆಕರ್ಷಿತರಾಗುತ್ತಾರೆ. ಏಕೆಂದರೆ, ಇವರು ತುಂಬಾ ಮಾತನಾಡುತ್ತಾರೆ ಮತ್ತು ಯಾರನ್ನು ಬೇಕಾದರೂ ತಮ್ಮ ಮಾತಿನಲ್ಲಿಯೇ ಮೋಡಿ ಮಾಡಿ ತಮ್ಮತ್ತ ಸೆಳೆದುಕೊಂಡು ಬಿಡುತ್ತಾರೆ. ಜೊತೆಗೆ ಇವರು ಮುಕ್ತ ಮನಸ್ಸಿನವರು. ಅವರು ಇಷ್ಟಪಡುವ ಹುಡುಗಿಯನ್ನು ಮೆಚ್ಚಿಸಲು ಫ್ಲರ್ಟಿಂಗ್ ಮಾಡಲು ಪ್ರಾರಂಭಿಸುತ್ತಾನೆ. ಫ್ಲರ್ಟಿಂಗ್ ಅವರ ಅಭ್ಯಾಸ. ಕೆಲವೊಮ್ಮೆ ತಮ್ಮ ಪ್ರೀತಿಯ ಸಂಗಾತಿಯ ಮುಂದೆ ಬೇರೆಯವರೊಂದಿಗೆ ಫ್ಲರ್ಟ್ ಮಾಡಲು ಪ್ರಾರಂಭಿಸುತ್ತಾರೆ. ಏಕೆಂದರೆ ಫ್ಲರ್ಟ್ ಮಾಡುವುದು ಇವರ ವ್ಯಕ್ತಿತ್ವ.

ಮಿಥುನ ರಾಶಿ:
ಈ ರಾಶಿಯ ಹುಡುಗರು ಫ್ಲರ್ಟಿಂಗ್‌ನಲ್ಲಿ ತುಂಬಾ ಮುಂದಿರುತ್ತಾರೆ. ಇವರು ಯಾವುದೇ ಹುಡುಗಿಯನ್ನು ಕಂಡ ಕ್ಷಣದಿಂದ ಫ್ಲರ್ಟ್ ಮಾಡಲು ಪ್ರಾರಂಭಿಸುತ್ತಾರೆ. ಅವರು ತಕ್ಷಣವೇ ಇವರ ಕಡೆಗೆ ಆಕರ್ಷಿತರಾಗುತ್ತಾರೆ. ತನ್ನ ಗೆಳತಿಯನ್ನು ರಾಣಿಯನ್ನಾಗಿ ನೋಡಿಕೊಂಡು, ಅವಳಿಗೆ ಜಗತ್ತಿನ ಸುಖವನ್ನು ನೀಡುತ್ತಾನೆ. ಇವರು ತುಂಬಾ ರೋಮ್ಯಾಂಟಿಕ್ ಸ್ವಭಾವದವರು. ಅವರ ಸಂಗಾತಿಗೆ ವಿಶೇಷ ಭಾವನೆ ಮೂಡಿಸಲು ಅವರ ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತಾರೆ.

ಕರ್ಕ ರಾಶಿ:
ಈ ರಾಶಿಯ ಹುಡುಗರು ಮಾತಿನ ಮಲ್ಲರು. ಯಾರನ್ನೇ ಆಗಲಿ, ತಕ್ಷಣವೇ ತಮ್ಮ ಮಾತಿನಿಂದಲೇ ತಮ್ಮ ಕಡೆ ಸೆಳೆದುಕೊಂಡು ಬಿಡುತ್ತಾರೆ. ಇವರ ಮಾತಿಗೆ ಹುಡುಗಿಯರು ಬೇಗನೇ ಆಕರ್ಷಿತರಾಗಿ, ಇವರ ಸ್ನೇಹವನ್ನು ಬಯಸುತ್ತಾರೆ. ಫ್ಲರ್ಟ್ ಮಾಡುವುದರಲ್ಲಿ ಇವರಿಗಿಂತ ನಿಸ್ಸೀಮರಿಲ್ಲ. ತಾವು ಪ್ರೀತಿಸುವ ಹುಡುಗಿಯನ್ನು ಸಹ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಸಿಂಹ ರಾಶಿ:
ಈ ರಾಶಿಯ ಹುಡುಗರು ಕೂಡ ಬಹಳ ಬೇಗ ಆಕರ್ಷಿತಾಗುತ್ತಾರೆ. ಇವರ ವ್ಯಕ್ತಿತ್ವವು ತುಂಬಾ ಆಕರ್ಷಕವಾಗಿದ್ದು, ಹುಡುಗಿಯರು ತಕ್ಷಣವೇ ಅವನ ಕಡೆಗೆ ವಾಲುತ್ತಾರೆ. ಅವರು ತಮ್ಮ ಸಿಹಿ ಮಾತುಗಳಿಂದ ಹುಡುಗಿಯರನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಇವರು ಅತ್ಯುತ್ತಮ ಗೆಳೆಯ ಮತ್ತು ಪತಿ ಎಂದು ಸಾಬೀತುಪಡಿಸುತ್ತಾರೆ. ಪ್ರೇಮ ಸಂಬಂಧದಲ್ಲಿದ್ದರೂ ಬೇರೆ ಯಾವುದೇ ಹುಡುಗಿಯ ಜೊತೆ ಚೆಲ್ಲಾಟವಾಡಲು ಹಿಂಜರಿಯುವುದಿಲ್ಲ.



Click it and Unblock the Notifications











