Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ಹುಟ್ಟಿದ ತಿಂಗಳನ್ನು ಆಧರಿಸಿ ಯಾವ ಹರಳು ಧರಿಸಿದರೆ ಅದೃಷ್ಟ
ನಾವು ಮಾಡುವ ಪ್ರತಿಯೊಂದು ಕೆಲಸವೂ ಉತ್ತಮವಾಗಬೇಕು, ಯಶಸ್ವಿಯಾಗಬೇಕು, ಯಾವುದೇ ಅಡೆತಡೆಗಳು ಬರಬಾರದು ಎಂದು ಎಲ್ಲರೂ ಅಪೇಕ್ಷಿಸುತ್ತೇವೆ. ಆದರೆ ಹಲವಾರು ಕಾರಣಗಳಿಂದ ಕೆಲವು ಕೆಲಸಗಳು ಅರ್ಧಕ್ಕೆ ನಿಲ್ಲುತ್ತದೆ, ಇನ್ನು ಹಲವು ಆಗುವುದೇ ಹೀಗೆ ಸಮಸ್ಯೆಗಳು ಎದುರಾಗುತ್ತದೆ.
ನಮ್ಮ ಜೀವನದಲ್ಲಿ ಸಮಸ್ಯೆಗಳು ಎದುರಾಗಬಾರದು ಅಥವಾ ಅದನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಇರಬೇಕು ಎಂದು ಜ್ಯೋತಿಷಿಗಳು ನಮಗೆ ಹರಳುಗಳನ್ನು/ ಬರ್ತ್‌ಸ್ಟೋನ್ ಅನ್ನು ಧರಿಸಲು ಸಲಹೆ ನೀಡುತ್ತಾರೆ. ಇದನ್ನು ನಾವು ಹುಟ್ಟಿದ ಸಮಯ ಹಾಗೂ ತಿಂಗಳನ್ನು ಆಧರಿಸಿ ನಿರ್ಣಯಿಸಲಾಗುತ್ತದೆ.
ಈ ಹರಳನ್ನು ಧರಿಸುವುದರಿಂದ ಅದೃಷ್ಟ, ಸಂತೋಷ, ಉತ್ತಮ ಆರೋಗ್ಯ, ಎಲ್ಲರಿಂದ ರಕ್ಷಣೆ ನಮ್ಮದಾಗುತ್ತದೆ ಎಂದು ನಂಬಲಾಗಿದೆ.
ಹಾಗಿದ್ದರೆ ನಾವು ಹುಟ್ಟಿದ ಮಾಸವನ್ನು ಆಧರಿಸಿ ಯಾವ ಮಾಸದಲ್ಲಿ ಜನಿಸಿದವರು ಯಾವ ಹರಳನ್ನು ಧರಿಸಬೇಕು ಎಂಬುದನ್ನು ಮುಂದೆ ತಿಳಿಯೋಣ:

ಜನವರಿ - ಪದ್ಮರಾಗ
ಜನವರಿಯಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ಪದ್ಮಶಿಲೆ ಅಂದರೆ ಗಾರ್ನೆಟ್. ಈ ಪದ್ಮಶಿಲೆ ಹರಳನ್ನು ಧರಿಸಿದರೆ ಮುಖ್ಯವಾಗಿ ಪ್ರಯಾಣದ ಸಮಯದಲ್ಲಿ ನಮ್ಮನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಭಾವಿಸಲಾಗಿದೆ. ಈ ರತ್ನವು ದಾಳಿಂಬೆ ಬೀಜದ ಬಣ್ಣ ಮತ್ತು ಆಕಾರವನ್ನು ಹೋಲುತ್ತದೆ.

ಫೆಬ್ರವರಿ - ಅಮೆಥಿಸ್ಟ್
ಫೆಬ್ರವರಿಯಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ಅಮೆಥಿಸ್ಟ್. ಈ ರತ್ನ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಧರಿಸುವವರಿಗೆ ಧೈರ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ. ಒಂದು ಕಾಲದಲ್ಲಿ, ರಾಜವಂಶಸ್ಥರು ಮಾತ್ರ ಈ ರತ್ನವನ್ನು ಧರಿಸುತ್ತಿದ್ದರು. ಅಮೆಥಿಸ್ಟ್ ಮಾದಕದ್ರವ್ಯದ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಪ್ರಾಚೀನ ಗ್ರೀಕರು ಭಾವಿಸಿದ್ದರು.

ಮಾರ್ಚ್ - ಅಕ್ವಾಮರೀನ್
ಮಾರ್ಚ್ ನಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ಅಕ್ವಾಮರೀನ್. ಅಕ್ವಾಮರೀನ್, ಹೃದಯ, ಪಿತ್ತಜನಕಾಂಗ ಮತ್ತು ಹೊಟ್ಟೆಯ ರೋಗಗಳನ್ನು ಗುಣಪಡಿಸುತ್ತದೆ ಎನ್ನಲಾಗುತ್ತದೆ. ಅಲ್ಲದೆ ಆಕ್ವಾಮರೀನ್ ಸಾಗರ ಅಪಾಯಗಳ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ ಎಂದು ನಾವಿಕರು ನಂಬಿದ್ದಾರೆ.

ಏಪ್ರಿಲ್ - ವಜ್ರ
ಏಪ್ರಿಲ್ ನಲ್ಲಿ ಜನಿಸಿದವರು ವಜ್ರ ಧರಿಸಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಶಾಶ್ವತ ಪ್ರೀತಿಯ ಸಂಕೇತವಾಗಿರುವುದರ ವಜ್ರ ಧೈರ್ಯವನ್ನು ತರುತ್ತದೆ ಎಂದು ಭಾವಿಸಲಾಗಿದೆ. ಹಿಂದೂ ಪುರಾಣಗಳಲ್ಲಿ, ವಜ್ರ ದೇವತೆಗಳ ರಾಜನಾದ ಇಂದ್ರನ ಆಯುಧವಾಗಿತ್ತು.

ಮೇ - ಪಚ್ಚೆ
ಮೇನಲ್ಲಿ ಹುಟ್ಟಿದವರ ಜನ್ಮಶಿಲೆ ಪಚ್ಚೆ. ಪಚ್ಚೆ ರತ್ನವು ಬುಧ ಗ್ರಹವನ್ನು ಸೂಚಿಸುತ್ತದೆ. ಪಚ್ಚೆ ಬಹಳ ಹಿಂದಿನಿಂದಲೂ ಫಲವತ್ತತೆ, ಪುನರ್ಜನ್ಮ ಮತ್ತು ಪ್ರೀತಿಗೆ ಸಂಬಂಧಿಸಿದೆ. ಪಚ್ಚೆ ರತ್ನವು ಬುದ್ಧಿವಂತಿಕೆ, ಬೆಳವಣಿಗೆ, ಯಶಸ್ಸು, ಮತ್ತು ತಾಳ್ಮೆಯನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ.

ಜೂನ್ - ಮುತ್ತು
ಜೂನ್ನಲ್ಲಿ ಹುಟ್ಟಿದವರ ಜನ್ಮಶಿಲೆ ಮುತ್ತು. ಮುತ್ತು ಹೊಳೆಯುವ ಚಂದ್ರನನ್ನು ಪ್ರತಿನಿಧಿಸುತ್ತದೆ. ಮುತ್ತು ಸೂದೀರ್ಘಕಾಲದ ಶುದ್ಧತೆಯ ಸಂಕೇತವಾಗಿದೆ. ಅಲ್ಲದೆ, ಸೌಂದರ್ಯ, ಹೊಳಪು ಮತ್ತು ಸಾಮರಸ್ಯದ ಸಂಕೇತವಾಗಿದೆ.

ಜುಲೈ - ಮಾಣಿಕ್ಯ
ಜುಲೈನಲ್ಲಿ ಹುಟ್ಟಿದವರು ರತ್ನಗಳ ರಾಜ ಮಾಣಿಕ್ಯ ಧರಿಸಿದರೆ ಶುಭ ಎನ್ನಲಾಗುತ್ತದೆ. ವಿಶ್ವದ ಶಕ್ತಿಯ ಮೂಲ ಸೂರ್ಯ ಮಾಣಿಕ್ಯವನ್ನು ಪ್ರತಿನಿಧಿಸುತ್ತದೆ. ಇದು ಧರಿಸಿದವರನ್ನು ಕೆಟ್ಟದ್ದರಿಂದ ರಕ್ಷಿಸುತ್ತದೆ ಎಂದು ನಂಬಲಾಗುತ್ತದೆ. ಮಾಣಿಕ್ಯದ ಆಳವಾದ ಕೆಂಪು ಬಣ್ಣವು ಪ್ರೀತಿ, ಅಧಿಕಾರ, ಖ್ಯಾತಿ, ಸಂಪತ್ತು ಮತ್ತು ಉತ್ಸಾಹವನ್ನು ಸೂಚಿಸುತ್ತದೆ.

ಆಗಸ್ಟ್ - ಪೆರಿಡಾಟ್
ಆಗಸ್ಟ್ ನಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ಪೆರಿಡಾಟ್, ಅಂದರೆ ಒಂದು ರೀತಿಯ ಪಚ್ಚೆ, ಇದನ್ನು ಸಂಜೆಪಚ್ಚೆ ಎಂದೂ ಸಹ ಕರೆಯುತ್ತಾರೆ. ಪೆರಿಡಾಟ್ ಹರಳನ್ನು ಸೂರ್ಯ ಸಂಕೇತಿಸುತ್ತದೆ. ಇದು ಶಕ್ತಿಯನ್ನು ಸಂಕೇತಿಸುತ್ತದೆ. ಈ ರತ್ನ ಧರಿಸಿದವರನ್ನು ದುಃಸ್ವಪ್ನಗಳಿಂದ ರಕ್ಷಿಸುತ್ತದೆ, ಶಾಂತವಾಗಿರಿಸುತ್ತದೆ, ಪ್ರೇರೇಪಣೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಸೆಪ್ಟೆಂಬರ್ - ನೀಲಮಣಿ
ಸೆಪ್ಟೆಂಬರ್ ನಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ನೀಲಮಣಿ. ರತ್ಮಗಳಲ್ಲೇ ಅತ್ಯಂತ ಪ್ರಭಾವಶಾಲಿ ಹರಳು ಈ ನೀಲಮಣಿ. ಈ ನೀಲಮಣಿ ರತ್ನದ ಅಧಿದೇವತೆ ಶನಿ. ಇದನ್ನು ಇತರೆ ಯಾವುದೇ ಹರಳಿನ ಜೊತೆಗೆ ಧರಿಸಬಾರದು ಎಂದು ಹೇಳಲಾಗುತ್ತದೆ. ದುಷ್ಟಶಕ್ತಿ, ವಿಷದಿಂದ ರಕ್ಷಿಸುತ್ತದೆ ಎಂದು ಭಾವಿಸಲಾಗಿದೆ. ಅಲ್ಲದೆ, ನೀಲಮಣಿ ಶುದ್ಧತೆ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಆರೋಗ್ಯ ಸುಧಾರಣೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಆಕ್ಟೋಬರ್ - ವೈಢೂರ್ಯ
ಅಕ್ಟೋಬರ್ ನಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ವೈಢೂರ್ಯ. ವೈಢೂರ್ಯ ನಿಷ್ಠೆ ಮತ್ತು ವಿಶ್ವಾಸವನ್ನು ಸಂಕೇತಿಸುತ್ತದೆ. ದುಷ್ಕೃತ್ಯವನ್ನು ಹಿಮ್ಮೆಟ್ಟಿಸಲು ಮತ್ತು ದೃಷ್ಟಿಯನ್ನು ರಕ್ಷಿಸಲು ವೈಢೂರ್ಯ ಧರಿಸಲಾಗುತ್ತದೆ.

ನವೆಂಬರ್ - ನೀಲಮಣಿ
ನವೆಂಬರ್ ನಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ನೀಲಮಣಿ. ತೋಪಾಜ್ ಎಂದು ಹೇಳಲಾಗುವ ನೀಲಮಣಿ ಪ್ರೀತಿ ಮತ್ತು ವಾತ್ಸಲ್ಯವನ್ನು ಸಂಕೇತಿಸುತ್ತದೆ. ಇದು ಧರಿಸಿದವರಿಗೆ ಹೆಚ್ಚಿನ ಶಕ್ತಿ ಮತ್ತು ಬುದ್ಧಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ಡಿಸೆಂಬರ್ - ಕ್ಷೀರ ಸ್ಫಟಿಕ
ಡಿಸೆಂಬರ್ ನಲ್ಲಿ ಹುಟ್ಟಿದವರು ಧರಿಸಬೇಕಾದ ಹರಳು ಕ್ಷೀರ ಸ್ಫಟಿಕ. ಕ್ಷೀರ ಸ್ಫಟಿಕವನ್ನು ಪ್ರೀತಿಯ ಮೋಡಿ ಎಂದು ಪರಿಗಣಿಸಲಾಗಿದೆ. ಇದು ಅದೃಷ್ಟ ಮತ್ತು ಯಶಸ್ಸಿನ ಸಂಕೇತವಾಗಿದೆ, ಮತ್ತು ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಅದನ್ನು ಧರಿಸಿದವರನ್ನು ಹಾನಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. ವೈಡೂರ್ಯದ ಉಂಗುರಗಳು ದುಷ್ಟಶಕ್ತಿಗಳನ್ನು ದೂರವಿರಿಸುತ್ತದೆ ಎಂದು ಭಾವಿಸಲಾಗಿದೆ.



Click it and Unblock the Notifications











