Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಈ ರಾಶಿಯ ಹುಡುಗ/ಹುಡುಗಿಯರು ಮದುವೆಯಾದರೆ ಬಾಳು ಬಂಗಾರವಂತೆ!
ನಾವೆಲ್ಲರೂ ನಮ್ಮ ಜೀವನದ ಪ್ರತಿ ಸೆಕೆಂಡನ್ನು ಸಾರ್ಥಕಗೊಳಿಸುವ ಒಬ್ಬ ಜೀವನ ಸಂಗಾತಿಯನ್ನು ಹುಡುಕುತ್ತೇವೆ. ಅಂದರೆ, ನಮ್ಮ ಸೋಲ್ಮೇಟ್, ಆದರೆ, ಈ ಸೋಲ್ಮೇಟನ್ನು ಹುಡುಕುವುದು ತುಂಬಾ ಕಷ್ಟ ಎಂಬುದು ಹೆಚ್ಚಿನವರ ವಾದ. ಕೆಲವೊಮ್ಮೆ ನಮ್ಮ ನಡುವೆಯೇ ಇದ್ದರೂ, ಅವರನ್ನು ಗುರುತಿಸಲಾಗದಂತಹ ಅಸಹಾಯಕ ಸ್ಥಿತಿ. ಅದಕ್ಕಾಗಿ ನಾವಿಂದು, ನಿಮ್ಮ ಜೀವನವನ್ನು ಸಂತೋಷವಾಗಿಡುವ ಸಂಗಾತಿ ಯಾವ ರಾಶಿಚಕ್ರಕ್ಕೆ ಸೇರಿರುತ್ತಾರೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಇದು ನಿಮ್ಮ ಆತ್ಮ ಸಂಗಾತಿಯನ್ನು ಹುಡುಕಲು ಸಹಾಯ ಮಾಡುವ ಅಂಶಗಳಲ್ಲಿ ಒಂದಾಗಿದೆ.
ಮದುವೆಗೆ ಸೂಕ್ತವಾಗಿರುವ ರಾಶಿಚಕ್ರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೀನ ರಾಶಿ:
ಇವರು ಪೋಷಿಸುವ ವ್ಯಕ್ತಿತ್ವವನ್ನು ಹೊಂದಿದ್ದು, ತಮ್ಮ ಪಾಲುದಾರರಿಗೆ, ಅತ್ಯುತ್ತಮ ಆವೃತ್ತಿಯನ್ನೇ ತೋರುತ್ತಾರೆ. ಮೀನ ರಾಶಿಯವರನ್ನು ಆದರ್ಶ ಸಂಗಾತಿ ಎಂದು ಕರೆಯಲಾಗುತ್ತದೆ, ಏಕೆಂದರೆ ಅವರು ಸೂಕ್ಷ್ಮ ಜೊತೆಗೆ ಅಗತ್ಯವಿದ್ದಾಗ ನಿಷ್ಠುರವಾಗಿಯೂ ಇರುತ್ತಾರೆ. ಅಷ್ಟೇ ಅಲ್ಲ, ಇವರು ತುಂಬಾ ರೋಮ್ಯಾಂಟಿಕ್ ಆಗಿದ್ದು, ಅತ್ಯುತ್ತಮ ಪಾಲುದಾರರಲ್ಲಿ ಒಬ್ಬರು. ಈ ರಾಶಿಯವರ ವೈವಾಹಿಕ ಜೀವನ ಆರಾಮದಾಯಕವಾಗಿರುತ್ತದೆ.

ಮೇಷ ರಾಶಿ:
ಈ ರಾಶಿಯವರು ತಮ್ಮ ಜೀವನವನ್ನು, ಅತ್ಯಂತ ಅದ್ಭುತವಾದ ರೂಪದಲ್ಲಿ ಅನುಭವಿಸುವವರು. ಇದರರ್ಥ ನೀವು ಮೇಷ ರಾಶಿಯೊಂದಿಗೆ ಇದ್ದಾಗ, ಜೀವನವು ಎಂದಿಗೂ ನೀರಸವಾಗಿರುವುದಿಲ್ಲ. ಅವರು ತುಂಬಾ ನಿಷ್ಠಾವಂತ ಮತ್ತು ಭಾವೋದ್ರಿಕ್ತ ಪ್ರೇಮಿಗಳಾಗಿರುತ್ತಾರೆ. ಜೊತೆಗೆ ಇವರು ಬದ್ಧ ಸಂಬಂಧದಲ್ಲಿದ್ದಾಗ ತುಂಬಾ ಗಂಭೀರವಾಗಿರುತ್ತಾರೆ.

ವೃಷಭ ರಾಶಿ:
ಇವರು ಪ್ರಾಮಾಣಿಕ, ನಿಷ್ಠಾವಂತ ಜನರು, ಸಂಬಂಧಗಳನ್ನು ಮತ್ತು ಮದುವೆಯನ್ನು ತುಂಬಾ ಗೌರವಿಸುತ್ತಾರೆ. ಇವರ ಜೊತೆಗಿರುವುದು ತುಂಬಾ ಆರಾಮದಾಯಕ ಅನುಭವ ನೀಡುವುದರಿಂದ, ಅವರ ಸುತ್ತಲೇ ಇರುವಂತೆ ಪ್ರೇರೇಪಿಸುತ್ತಾರೆ. ಇವರು ತುಂಬಾ ಕಠಿಣ ಕೆಲಸಗಾರರು ಮತ್ತು ವೃತ್ತಿ ಮತ್ತು ಸಂಬಂಧಗಳಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ನಿರ್ಮಿಸುವತ್ತ ಗಮನಹರಿಸುತ್ತಾರೆ. ಆದ್ದರಿಂದ, ಇವರು ಮದುವೆಗೆ ಉತ್ತಮ ವ್ಯಕ್ತಿ.

ಕರ್ಕ ರಾಶಿ:
ಕರ್ಕಾಟಕ ರಾಶಿಯವರ ಜೀವನದಲ್ಲಿ ಪ್ರೀತಿ ಮತ್ತು ಸಂಬಂಧಗಳು ಮುಖ್ಯ ಆದ್ಯತೆಯಾಗಿದೆ. ಅವರು ಎಲ್ಲಾ ರೀತಿಯ ಸಂಬಂಧಗಳಲ್ಲಿ ಪ್ರೀತಿಯನ್ನು ಹೆಚ್ಚು ಗೌರವಿಸುತ್ತಾರೆ ಮತ್ತು ಸಂಬಂಧ ಅಥವಾ ಮದುವೆಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳಲು ತಮ್ಮೆಲ್ಲಾ ಶಕ್ತಿಯನ್ನು ಉಪಯೋಗಿಸುತ್ತಾರೆ. ಇವರು ತಮ್ಮ ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರುತ್ತಾರೆ.

ಸಿಂಹ ರಾಶಿ:
ಸಿಂಹ ರಾಶಿಯವರೊಂದಿಗೆ ಎಂದಿಗೂ ಬೇಸರವಾಗುವ ಕ್ಷಣವಿಲ್ಲ. ಅವರು ತಮ್ಮ ಪಾಲುದಾರರ ಕಡೆಗೆ ತುಂಬಾ ಭಾವೋದ್ರಿಕ್ತ ಮತ್ತು ಪ್ರೀತಿಪಾತ್ರರಾಗಿರುತ್ತಾರೆ. ಸಿಂಹ ರಾಶಿಯನ್ನು ತಮ್ಮ ಜೀವನ ಸಂಗಾತಿಯಾಗಿ ಹೊಂದಲು ತುಂಬಾ ಅದೃಷ್ಟವೆಂದು ಭಾವಿಸುತ್ತಾರೆ. ಇವರು ತುಂಬಾ ಕರುಣಾಮಯಿ, ಉದಾರ ಮತ್ತು ಪ್ರೇರಕರಾಗಿದ್ದಾರೆ, ಇದು ಅವರನ್ನು ಸಂಭಾವ್ಯ ಪಾಲುದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸುತ್ತದೆ.



Click it and Unblock the Notifications
