For Quick Alerts
ALLOW NOTIFICATIONS  
For Daily Alerts

ನಗರಗಳ ಬ್ಯಾಚುಲರ್ಸ್ ಗರ್ಲ್ಸ್ ರೂಂ ಸ್ಟೋರಿ ! ರೂಂನಲ್ಲಿ ಏನುಂಟು, ಏನಿಲ್ಲ?

|

ಮನೆಯಲ್ಲಿ ಬಡತನ, ದುಡಿಯುವ ಅನಿವಾರ್ಯತೆಯಿಂದಾಗಿ ಇನ್ನೂ ಓದುವ ಆಸೆಯಿದ್ದರೂ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಮಹಾನಗರಿ ಬೆಂಗಳೂರು ಸೇರಿಕೊಂಡೆ. ಬೆಂಗಳೂರು ಹೇಳಿ-ಕೇಳಿ ಮಹಾನಗರಿ ಇಲ್ಲಿ ಯಾರೂ ಗೊತ್ತಿಲ್ಲ, ಏನೂ ತಿಳಿದಿಲ್ಲ. ಬದುಕು ಕಟ್ಟಬೇಕೆಂಬ ಅದಮ್ಯ ಉತ್ಸಾಹ ಮಾತ್ರ ನನ್ನಲ್ಲಿ ಅಗಾಧವಾಗಿತ್ತು.

ನನಗಿಂತ ಮೊದಲೇ ನಮ್ಮೂರಿನ ಕೆಲವು ಹೆಣ್ಣು ಮಕ್ಕಳು ಮಾಯಾನಗರಿ ಸೇರಿದ್ದರು, ಅದಾಗಲೇ ಅವರೆಲ್ಲ ಇಲ್ಲಿನ ಪಿಜಿ(ಪೇಯಿಂಗ್ ಗೆಸ್ಟ್) ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ತಿಂಗಳಿಗೆ ಎಲ್ಲ ಕಟ್ ಆಗಿ ಸಿಗುತ್ತಿದ್ದ ಸಂಬಳ 8 ಸಾವಿರ, ಅದರಲ್ಲಿ 4,500 ರೂ. ಪಿಜಿಗೆ ಕಟ್ಟಬೇಕಿತ್ತು, ಉಳಿದದ್ದು ಖರ್ಚಿಗೆ. ದುಡಿಯುವುದಕ್ಕೆ ಬಂದಿದ್ದರೂ ಉಳಿತಾಯ ಆಗುತ್ತಿರಲಿಲ್ಲ. ಇದರಿಂದ ನಮ್ಮೂರಿನ 4 ಹುಡುಗಿಯರು ಒಂದು ತೀರ್ಮಾನಕ್ಕೆ ಬಂದಿದ್ದರು.

ಸೋಡ ಹಾಕಿದ ಅನ್ನ ಸಾಕಿತ್ತು

ಸೋಡ ಹಾಕಿದ ಅನ್ನ ಸಾಕಿತ್ತು

ಎಲ್ಲರೂ ಸೇರಿ ಒಂದು ರೂಂ ಮಾಡಿದರೆ ಸ್ವಲ್ಪ ಹಣ ಉಳಿಸಬಹುದು ಅನ್ನುವುದು ಅವರ ಲೆಕ್ಕಾಚಾರ. ಜೊತೆಗೆ ಕೋಳಿ ಗೂಡಿನಂತ ರೂಂ ನಲ್ಲಿ, ಸೋಡ ಹಾಕಿದ ಅನ್ನ ತಿಂದು ಅವರಿಗೆ ಸಾಕಾಗಿ ಹೋಗಿತ್ತು. ಹೀಗಾಗಿ ತಮ್ಮದೇ ಒಂದು ರೂಂ ಮಾಡುವ ತೀರ್ಮಾನಕ್ಕೆ ಬಂದಿದ್ದರು.

ಅವರು ನಾಲ್ವರ ಜೊತೆ ಐದನೆಯವಳಾಗಿ ನನ್ನ ಎಂಟ್ರಿ ಆಯಿತು. ಒಂದು ಚಿಕ್ಕ ಹಾಲ್, ಒಂದು ರೂಂ, ಕಿಚನ್ ನಲ್ಲಿ ನಮ್ಮ ಸಂಸಾರ. ಬೆಳಗ್ಗೆ ಬೇಗ ಎದ್ದು ಎಲ್ಲರೂ ಸೇರಿ ತಿಂಡಿ, ಮಧ್ಯಾಹ್ನ ಬಾಕ್ಸ್ ಗೆ ರೆಡಿ ಮಾಡಿಕೊಂಡು ಹೊರಟರೆ ಮತ್ತೆ ಗೂಡು ಸೇರುವುದು ರಾತ್ರಿಯೇ, ಎಲ್ಲರೂ ಬೇರೆ ಬೇರೆ ಕಡೆ ಕೆಲಸ ಮಾಡುವವರೇ. ಕೆಲವರು ಬೇಗ ಮನೆ ತಲುಪಿದರೆ ಇನ್ನೂ ಕೆಲವರು ಬಹಳ ತಡವಾಗಿ ಬರುತ್ತಿದ್ದರು.

ಏನುಂಟು ಏನಿಲ್ಲ

ಏನುಂಟು ಏನಿಲ್ಲ

ಬೇಗ ಬಂದವರು ರಾತ್ರಿ ಅಡುಗೆಗೆ ಸಿದ್ಧತೆ ನಡೆಸಿದರೆ, ಲೇಟಾಗಿ ಬಂದವರು ಪಾತ್ರೆ ತೊಳೆದು ಕ್ಲೀನ್ ಮಾಡುತ್ತಿದ್ದರು. ಬರುವುದು ಸ್ವಲ್ಪ ತಡವಾದರೂ ಫೋನ್, ಹುಷಾರಿಲ್ಲದಿದ್ದರೆ ಎಲ್ಲರ ಆರೈಕೆ, ಬೇಸರವಾದರೆ ಸಮಾಧಾನದ ಮಾತುಗಳು, ಕಷ್ಟ ಬಂದರೆ ಜೊತೆ ನಿಲ್ಲುವ ಗೆಳತಿಯರು, ಜೊತೆಗೆ ಶಾಪಿಂಗ್, ವಾರದಲ್ಲೊಮ್ಮೇ ಸ್ಪೈಸಿ ಚಿಕನ್, ಒಬ್ಬರ ಬಟ್ಟೆ ಇನ್ನೊಬ್ಬರು ಹಾಕಿಕೊಳ್ಳುವುದು, ಚಪ್ಪಲಿ ಎಕ್ಸಚೇಂಜ್, ಹುಡುಗ ಪ್ರಪೋಸ್ ಮಾಡಿದರೆ ಸಲಹೆ, ಒಂದಷ್ಟು ಕಾಮಿಡಿ ಮಾತುಗಳು ಏನುಂಟು ಏನಿಲ್ಲ, ನಮ್ಮದೇ ಲೋಕವಾಗಿತ್ತು.

ಕುಟುಂಬಕ್ಕಿಂತ ಹೆಚ್ಚಿನ ಪ್ರೀತಿಯನ್ನೇ ಪಡೆದೆ

ಕುಟುಂಬಕ್ಕಿಂತ ಹೆಚ್ಚಿನ ಪ್ರೀತಿಯನ್ನೇ ಪಡೆದೆ

ಒಂದು ಕುಟುಂಬ ಕೊಡಬಹುದಾದ್ದಕ್ಕಿಂತ ಹೆಚ್ಚಿನದನ್ನು ನಾನು ಪಡೆದುಕೊಂಡಿದ್ದು ನನ್ನ ಗೆಳತಿಯರ ರೂಂನಲ್ಲೇ. ನಮ್ಮಲ್ಲಿ ಮುನಿಸು ಇರಲಿಲ್ಲವೆಂದಲ್ಲ, ಆದರೆ ಎಲ್ಲರೂ ಬೇಗ ಸರಿ ಹೋಗುತ್ತಿದ್ದೆವು. ತಿಂಗಳ ರೇಷನ್, ಹಾಲು, ತರಕಾರಿ, ಬಾಡಿಗೆ, ಕರೆಂಟ್ ಬಿಲ್, ಗ್ಯಾಸ್ ಅಬ್ಬಾ ಒಂದಾ ಎರಡಾ ಮನೆ ಎಲ್ಲಾ ಜವಬ್ದಾರಿ ನಮ್ಮ ಮೇಲೆ, ಆದರೂ ಏನೋ ಒಂಥರ ಖುಷಿ.

ಮತ್ತೆ ದಿನ ಬೇಕೆಂದು ದೇವರಲ್ಲಿ ಕೇಳುವೆ

ಮತ್ತೆ ದಿನ ಬೇಕೆಂದು ದೇವರಲ್ಲಿ ಕೇಳುವೆ

ತಿಂಗಳ ಸಂಬಳ ನಂತರ ಮಾಡುವ ಶಾಪಿಂಗ್, ಹೊಸದಾಗಿ ಕಲಿತ ಅಡುಗೆ, ರಾತ್ರಿಇಡೀ ಆಡಿದ ಮಾತುಗಳು ನೆನಪುಗಳು ಅತೀ ಮಧುರ. ಆ ರೂಂನಲ್ಲಿ ಕಳೆದ ಪ್ರತಿ ಕ್ಷಣ ಸುಂದರ ಅನುಭೂತಿ. ಈಗಲೂ ಆ ರೂಂ ಇದೆ, ಆದರೆ ನಾವಿಲ್ಲ ಅಷ್ಟೇ. ಎಲ್ಲರೂ ಜೀವನದಲ್ಲಿ ಮುನ್ನಡೆದಿದ್ದೇವೆ, ನಮ್ಮ ನಮ್ಮ ಕುಟುಂಬದ ಜೊತೆ ಆದರೆ ಸ್ನೇಹ, ಸಂಬಂಧ, ನೆನಪುಗಳು ಮಾತ್ರ ಇಂದಿಗೂ ಹಸಿರಾಗಿದೆ. ದೇವರೇನಾದರೂ ನನ್ನೆದುರು ಬಂದು ನಿಂಗೇನು ಬೇಕು ಕೇಳಿದರೆ ಮತ್ತೆ ಅದೇ ರೂಂ, ಅದೇ ಗೆಳತಿಯರು, ಅದೇ ಜೀವನದ ಬೇಡಿಕೆ ಇಡುವೆ.

Read more about: insync ಜೀವನ
English summary

Bachelor Girls Room Story

Now a days Girls are coming from village to earn money and to take family responsibility. but they earn here very small amount and they cant afford to lead middle class life in cities. so finally few girls will jointly stayed in a single room. here story is going to tell you about how was there life, comedy, fun things.
Story first published: Tuesday, August 27, 2019, 10:54 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more