Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಡಿಸೆಂಬರ್ 2021: ವಿವಾಹಕ್ಕೆ ಯೋಗ್ಯವಾಗಿರುವ ದಿನಾಂಕಗಳ ಪಟ್ಟಿ ಇಲ್ಲಿದೆ
ಯಾವುದೇ ಶುಭಕಾರ್ಯ ಮಾಡುವ ಮೊದಲು ಶುಭ ದಿನ ಹಾಗೂ ಮುಹೂರ್ತ ನೋಡುವುದು ಬಹಳ ಮುಖ್ಯ. ಅದರಲ್ಲೂ ಮದುವೆಯಂತಹ ಜೀವನದ ಪ್ರಮುಖ ಹಂತವನ್ನು ತಲುಪುವಾಗ ಒಳ್ಳೆಯ ದಿನ ನೋಡಲೇಬೇಕು. ಇದರಿಂದ ದಂಪತಿಗಳಿಬ್ಬರು ಸುಖವಾದ ಜೀವನ ನಡೆಸುತ್ತಾರೆ ಎಂಬ ನಂಬಿಕೆ.
ನೀವೇನಾದರೂ, ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ನಲ್ಲಿ ಮದುವೆಯಾಗಲು ಉತ್ತಮ ದಿನಗಳನ್ನು ಹುಡುಕುತ್ತಿದ್ದರೆ, ನಾವಿಂದು 2021ರ ಡಿಸೆಂಬರ್ನಲ್ಲಿ ವಿವಾಹಕ್ಕಿರುವ ಶುಭ ದಿನಾಂಕಗಳು ಹಾಗೂ ಮುಹೂರ್ತಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

2021 ಡಿಸೆಂಬರ್ನಲ್ಲಿ ಮದುವೆಗೆ ಶುಭದಿನಾಂಕ ಹಾಗೂ ಮುಹೂರ್ತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ನಾವೀಗ ವರ್ಷದ ಕೊನೆಯ ತಿಂಗಳತ್ತ ಕಾಲಿಡುತ್ತೀದ್ದೇವೆ. ಡಿಸೆಂಬರ್ ಅಂದರೆ ನೆನಪಾಗೋದೇ ಚಳಿಗಾಲ ಜೊತೆಜೊತೆಗೆ ಮದುವೆ-ಮುಂಜಿ ಮೊದಲಾದ ಕಾರ್ಯಕ್ರಮಗಳ ಸರದಿ ಸಾಲು. ಮಾರ್ಗಶಿರ ಮಾಸ ಪ್ರಾರಂಭವಾಗುತ್ತಿದ್ದಂತೆ ಮದುವೆ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುತ್ತವೆ. ಈ ಕಾಲ ವಿವಾಹಕ್ಕೆ ಅತೀ ಸೂಕ್ತ ಎಂದು ಹೇಳಲಾಗುತ್ತದೆ. ಅತ್ತ ಮಳೆಯ ಜಂಜಾಟವೂ ಇಲ್ಲದೇ, ಇತ್ತ ಬಿಸಿಲ ಬೇಗೆಯೂ ಇಲ್ಲದೇ, ಆರಾಮವಾಗಿ ಮದುವೆಯ ಸಂಭ್ರಮವನ್ನು ಅನುಭವಿಸಲು ಸಾಧ್ಯವಾಗುವುದು ಡಿಸೆಂಬರ್ನಲ್ಲಿ ಮಾತ್ರ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಡಿಸೆಂಬರ್ ತಿಂಗಳಲ್ಲಿ ಇರುವ ಉತ್ತಮ ವಿವಾಹ ದಿನಾಂಕಗಳ ಬಗ್ಗೆ ಈ ಕೆಳಗೆ ಮಾಹಿತಿಯಿದೆ.
ಡಿಸೆಂಬರ್ನಲ್ಲಿ ಮದುವೆಗೆ ಶುಭದಿನಾಂಕ ಹಾಗೂ ಮುಹೂರ್ತಗಳು:
ಡಿಸೆಂಬರ್ 1, 2021 ಬುಧವಾರ ಸಂಜೆ 6.47ರಿಂದ ಬೆಳಿಗ್ಗೆ 6.27ರವರೆಗೆ
ಡಿಸೆಂಬರ್ 2, 2021 ಗುರುವಾರ ಬೆಳಿಗ್ಗೆ 6.27ರಿಂದ ಸಂಜೆ 4.28ರವರೆಗೆ
ಡಿಸೆಂಬರ್ 6, 2021 ಸೋಮವಾರ ಬೆಳಿಗ್ಗೆ 2.19ರಿಂದ ಮರುದಿನ ಬೆಳಗ್ಗೆ 6.27ರವರೆಗೆ
ಡಿಸೆಂಬರ್ 7, 2021 ಮಂಗಳವಾರ ಬೆಳಿಗ್ಗೆ 6.29ರಿಂದ ಮಧ್ಯಾಹ್ನ 1.02ರವರೆಗೆ
ಡಿಸೆಂಬರ್ 11, 2021 ಶನಿವಾರ ರಾತ್ರಿ 10.32ರಿಂದ ಮರುದಿನ ಬೆಳಿಗ್ಗೆ 6.32ರವರೆಗೆ
ಡಿಸೆಂಬರ್ 13, 2021 ಸೋಮವಾರ ಬೆಳಿಗ್ಗೆ 6.33ರಿಂದ ಸಂಜೆ 7.34ರವರೆಗೆ



Click it and Unblock the Notifications

