Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
2019ರ ನವೆಂಬರ್‌ನಲ್ಲಿ ಗೃಹಪ್ರವೇಶಕ್ಕೆ ಶುಭ ದಿನಾಂಕ ಮತ್ತು ಮುಹೂರ್ತಗಳು
ಸ್ವಂತ ಮನೆಯ ಕನಸು ಯಾರಿಗೆ ತಾನೆ ಇಲ್ಲ ಹೇಳಿ. ಕುಟುಂಬದ ಎಲ್ಲರಿಗೂ ನೆಮ್ಮದಿ, ಸಂತೋಷವನ್ನು ನೀಡುವ ನೆಚ್ಚಿನ ತಾಣವಾದ ಮನೆಯನ್ನು ಸ್ವಂತವಾಗಿ ಹೊಂದಬೇಕು ಎಂಬುದು ಬಹುತೇಕರ ಕನಸು. ಅಂಥಾ ಕನಸು ನನಸಾದ ವೇಳೆ ಮನೆಗೆ ಸಂಪ್ರದಾಯದಂತೆ ಶುಭ ಮುಹೂರ್ತದಲ್ಲಿ ಗೃಹ ಪ್ರವೇಶದ ಪೂಜೆ ನೆರವೇರಿಸಿ ನೂತನ ಮನೆಯನ್ನು ಪ್ರವೇಶಿಸುತ್ತೇವೆ. ಇದೇ ವೇಳೆ ನೂತನ ಮನೆಯನ್ನು ಪ್ರವೇಶಿಸಿದ ನಂತರ ಯಾವುದೇ ಸಂಕಷ್ಟಗಳು ಎದುರಾಗದಂತೆ ಕಾಪಾಡು ಎಂದು ಹೋಮ-ಹವನಗಳನ್ನು ಕೈಗೊಂಡು ದೇವರನ್ನು ಪ್ರಾರ್ಥಿಸುತ್ತೇವೆ.

ನೀವೂ ನವೆಂಬರ್ ತಿಂಗಳಲ್ಲಿ ಹೊಸ ಮನೆಯನ್ನು ಖರೀದಿಸಿದ್ದೀರಾ, ನೂತನ ಮನೆಯ ಗೃಹಪ್ರವೇಶಕ್ಕೆ ಶುಭ ದಿನಾಂಕ ಹಾಗೂ ಮುಹೂರ್ತವನ್ನು ಹುಡುಕುತ್ತಿದ್ದೀರಾ? ಚಿಂತೆ ಬೇಡ. ನಾವು ನಿಮಗೆ ಸಹಾಯ ಮಾಡಲಿದ್ದೇವೆ. ನೂತನವಾಗಿ ಖರೀದಿಸಿದ ಅಥವಾ ಕಟ್ಟಿದ ಮನೆಗೆ ನವೆಂಬರ್ ಮಾಸದಲ್ಲಿ ಯಾವ ದಿನದಂದು, ಯಾವ ಮುಹೂರ್ತ, ನಕ್ಷತ್ರ ಹಾಗೂ ತಿಥಿಯಲ್ಲಿ ಪ್ರವೇಶಿಸಿದರೆ ಅದೃಷ್ಟ ಒಲಿಯುತ್ತದೆ, ಶುಭವಾಗುತ್ತದೆ ಎಂದು ಮುಂದಿನ ಲೇಖನದಲ್ಲಿ ವಿವರಿಸಿದ್ದೇವೆ.

ಹೊಸ ಮನೆಯ ಗೃಹ ಪ್ರವೇಶಕ್ಕೆ ಈ ದಿನಗಳು ಶುಭ
2 ನವೆಂಬರ್ 2019
ನವೆಂಬರ್ 2ರ ಶನಿವಾರದಂದು ಬೆಳಿಗಿನ ಜಾವ 01:31ರಿಂದ ಮರುದಿನ ನವೆಂಬರ್ 03ರ ಮುಂಜಾನೆ 06:34ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ಉತ್ತರ ಆಶಾಢ
ತಿಥಿ: ಸಪ್ತಮಿ

9 ನವೆಂಬರ್ 2019
ನವೆಂಬರ್ 9ರ ಶನಿವಾರದಂದು ಮಧ್ಯಾಹ್ನ 2:39ರಿಂದ ಮರುದಿನ ನವೆಂಬರ್ 10ರ ಮುಂಜಾನೆ 6:39ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ರೇವತಿ
ತಿಥಿ: ತ್ರಯೋದಶಿ

13 ನವೆಂಬರ್ 2019
ನವೆಂಬರ್ 13ರ ಬುಧವಾರದಂದು ರಾತ್ರಿ 10:02ರಿಂದ ಮರುದಿನ ನವೆಂಬರ್ 14ರ ಬೆಳಿಗ್ಗೆ 06:42ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ರೋಹಿಣಿ
ತಿಥಿ: ದ್ವಿತೀಯ

14 ನವೆಂಬರ್ 2019
ನವೆಂಬರ್ 14ರ ಗುರುವಾರದಂದು ಬೆಳಿಗ್ಗೆ 06.42ರಿಂದ ಮರುದಿನ ನವೆಂಬರ್ 15ರ ಬೆಳಿಗ್ಗೆ 06:43ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ರೋಹಿಣಿ, ಮೃಗಶಿರ್ಷ
ತಿಥಿ: ದ್ವಿತೀಯಾ, ತ್ರಿತಿಯಾ

15 ನವೆಂಬರ್ 2019
ನವೆಂಬರ್ 15ರ ಶುಕ್ರವಾರದಂದು ಬೆಳಿಗ್ಗೆ 06:43ರಿಂದ ಸಂಜೆ 07:46ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ಮೃಗಶಿರ್ಷ
ತಿಥಿ: ತೃತೀಯ

21 ನವೆಂಬರ್ 2019-
ನವೆಂಬರ್ 21ರ ಗುರುವಾರದಂದು ಬೆಳಿಗ್ಗೆ 06:30ರಿಂದ ಮರುದಿನ ನವೆಂಬರ್ 22ರ ಬೆಳಿಗ್ಗೆ 06:49ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ಉತ್ತರಾ ಫಲ್ಗುಣಿ
ತಿಥಿ: ದಶಮಿ

22 ನವೆಂಬರ್ 2019
ನವೆಂಬರ್ 22ರ ಶುಕ್ರವಾರದಂದು ಬೆಳಿಗ್ಗೆ 06:49ರಿಂದ ಸಂಜೆ 04:42ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ಉತ್ತರಾ ಫಲ್ಗುಣಿ
ತಿಥಿ: ದಶಮಿ, ಏಕಾದಶಿ

30 ನವೆಂಬರ್ 2019
ನವೆಂಬರ್ 30ರ ಶನಿವಾರದಂದು ಸಂಜೆ 06:05ರಿಂದ ಮರುದಿನ ಡಿಸೆಂಬರ್ 01ರ ಬೆಳಿಗ್ಗೆ 06:56ರ ವರೆಗೆ ಶುಭ ಮುಹೂರ್ತವಿದೆ.
ನಕ್ಷತ್ರ: ಉತ್ತರ ಆಶಾಢ
ತಿಥಿ: ಪಂಚಮಿ

8 ನವೆಂಬರ್ 2019
ನವೆಂಬರ್ 8ರ ಶುಕ್ರವಾರದಂದು ಗೃಹ ಪ್ರವೇಶಕ್ಕೆ ಶುಭ ಮುಹೂರ್ತವಿದೆ ಆದರೂ ತುಂಬಾ ಕಡಿಮೆ ಅವಧಿಯ ಮುಹೂರ್ತವಿರುವುದರಿಂದ ಇಂದು ಮನೆ ಪ್ರವೇಶಕ್ಕೆ ಸೀಕ್ತ ದಿನವಲ್ಲ ಎಂದೇ ಪರಿಗಣಿಸಬಹುದು.



Click it and Unblock the Notifications