Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
Aditya Hrudayam Stotram : ಆದಿತ್ಯ ಹೃದಯಂ ಮಂತ್ರ ಸಿಗಲಿದೆ ಈ ಪ್ರಯೋಜನಗಳು
ಸೂರ್ಯ ದೇವನನ್ನುಪ್ರಾರ್ಥಿಸುವಾಗ ನಿತ್ಯ ಹೃದಯ ಸ್ತೋತ್ರ ಪಠಿಸಿದರೆ ತುಂಬಾನೇ ಪ್ರಯೋಜನ ಸಿಗಲಿದೆ, ಇಡೀ ವಿಶ್ವಕ್ಕೆ ಬೆಳಕು ನೀಡುವ ಸೂರ್ಯನ ಒಲಿಸಿಕೊಂಡರೆ ಜೀವನದಲ್ಲಿ ಅಪಾರ ಯಶಸ್ಸು ಸಿಗಲಿದೆ.

ಆದಿತ್ಯ ಹೃದಯಂ ಮಂತ್ರ
ಹೃದಯ ಎಂಬ ಪದವು ಎಲ್ಲರನ್ನು ಪೋಷಿಸುವ ಮತ್ತು ಗುಣಪಡಿಸುವವನನ್ನು ಸೂಚಿಸುತ್ತದೆ. ಹೀಗಾಗಿ, ಈ ಸೂರ್ಯ ಮಂತ್ರವನ್ನು ಪಠಿಸಿದರೆ ಆದಿತ್ಯನ ಆತ್ಮ ಮತ್ತು ಹೃದಯದಿಂದಲೇ ಜೀವನದಲ್ಲಿ ಸಕಾರಾತ್ಮಕತೆಯನ್ನು ಪಡೆಯುವಿರಿ. ಇದು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಲು ಆತ್ಮವಿಶ್ವಾಸ ತುಂಬುವುದು. ಆದ್ದರಿಂದ ಆದಿತ್ಯ ಮಂತ್ರ ತುಂಬಾ ಪವರ್‌ಫುಲ್ ಆಗಿದೆ.
ಈ ಮಂತ್ರ ಪಠಣೆಯಿಂದ ನಿಮ್ಮ ಯಶಸ್ಸು ಹೆಚ್ಚಲಿದೆ
ಈ ಮಂತ್ರ ಪಠಣೆಯಿಂದ ನೀವು ಮಾಡುವ ಕ್ಷೇತ್ರದಲ್ಲಿ ಯಶಸ್ಸು ಪಡೆಯುವಿರಿ, ಸೂರ್ಯನ ಆಶೀರ್ವಾದವಿದ್ದರೆ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೀರಿ. ಈ ಮಂತ್ರದ ಪ್ರಭಾವದಿಂದಾಗಿ ನಿಮ್ಮ ಜ್ಞಾನ ಹೆಚ್ಚುವುದು, ನಿಮ್ಮಲ್ಲಿ ಉತ್ತಮ ನಡವಳಿಕೆ ಕಂಡು ಬರುವುದು. ಏನಾದರೂ ನೆಗೆಟಿವ್ ಆಲೋಚನೆಗಳಿದ್ದರೆ ದೂರಾಗುವುದು, ಜೀವನವನ್ನು ಸಕಾರತ್ಮಕತೆಯಿಂದ ನೋಡುವಿರಿ.
ಆದಿತ್ಯ ಹೃದಯಂ ಮಂತ್ರ:
।। ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್
ಜಯಾವಹಂ ಜಪಂ ನಿತ್ಯಮಕ್ಷಯಂ ಪರಮಂ ಶಿವಮ್ ।।
ಅರ್ಥ - ಇದು ಆದಿತ್ಯ ಹೃದಯಂ ಎಂಬ ಪವಿತ್ರ ಸ್ತೋತ್ರವಾಗಿದ್ದು, ಎಲ್ಲಾ ಶತ್ರುಗಳನ್ನು ನಾಶಪಡಿಸುತ್ತದೆ ಮತ್ತು ಇದನ್ನು ಯಾವಾಗಲೂ ಜಪಿಸುವುದರಿಂದ ನಿಮಗೆ ವಿಜಯ ಮತ್ತು ಶಾಶ್ವತ ಸಂತೋಷವನ್ನು ಸೂರ್ಯ ದೇವ ನೀಡಲಿದ್ದಾನೆ ಎಂಬ ಅರ್ಥ ನೀಡುತ್ತದೆ.
ಆದಿತ್ಯ ಹೃದಯ ಸ್ತೋತ್ರ ಭಾನುವಾರ ಪಠಿಸಿದರೆ ತುಂಬಾ ಒಳ್ಳೆಯದು
ಹಿಂದೂ ಧರ್ಮದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಮೀಸಲಿದೆ. ಹೇಗೆ ಶನಿವಾರ ಶನಿ ದೇವನನ್ನು, ಮಂಗಳವಾರ ಹನುಮಂತನನ್ನು ಪೂಜಿಸುತ್ತೇವೋ ಅದೇ ರೀತಿ ಭಾನುವಾರ ಸೂರ್ಯನನ್ನು ಪೂಜಿಸಲಾಗುವುದು.
ಭಾನುವಾರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ಆದಿತ್ಯ ಹೃದಯ ಸ್ತೋತ್ರ ಪಠಿಸಿದರೆ ಒಳ್ಳೆಯದು. ಈ ಸ್ತೋತ್ರ ಪಠಿಸುವವರು ಆ ದಿನ ಉಪ್ಪು, ಗೋಧಿ, ಮದ್ಯ-ಮಾಂಸದ ಆಹಾರಗಳನ್ನು ದೂರವಿಡಬೇಕು.
ಈ ಮಂತ್ರ ಹೇಳುವ ಮುಖಾಂತರ ಸೂರ್ಯನಿಂದ ಆಶೀರ್ವಾದ ಬೇಡಲಾಗುವುದು.
ಸೂರ್ಯ ದೇವನ ಆಶೀರ್ವಾದವಿದ್ದರೆ ಜೀವನದಲ್ಲಿ ಕಷ್ಟಗಳನ್ನು ಸುಲಭವಾಗಿ ಎದುರಿಸುವ ಶಕ್ತಿ ಸಿಗುವುದು.
ಈ ಮಂತ್ರ ಅಭ್ಯಾಸ ಮಾಡುತ್ತಿದ್ದರೆ ಅದರ ಪಾಸಿಟಿವ್ ವೈಬ್ಸ್ ಅನುಭವಕ್ಕೆ ಬರುವುದು.
ಆದಿತ್ಯ ಹೃದಯಂ ಮಂತ್ರವನ್ನು ಪಠಿಸಿದರೆ ಈ ಪ್ರಯೋಜನಗಳಿವೆ:
* ನೀವು ಈಮಂತ್ರ ಪ್ರತಿದಿನ ಪಠಿಸಿದರೆ ನಿಮ್ಮಲ್ಲಿರುವ ಕೋಪ, ಅಹಂಕಾರ ಇವೆಲ್ಲಾ ಕಡಿಮೆಯಾಗಿ ತುಂಬಾನೇ ಪ್ರಬುದ್ಧರಾಗಿ ವರ್ತಿಸುತ್ತೀರಿ.
* ಈ ಮಂತ್ರ ಪಠಿಸುವುದರಿಂದ ಕೆಟ್ಟ ಆಲೋಚನೆ, ದುರಾಸೆ ಇವೆಲ್ಲಾ ದೂರಾಗುವುದು.
* ಮನಸ್ಸಿನಲ್ಲಿ ಒತ್ತಡ ಕಡಿಮೆಯಾಗಿ ಒಳ್ಳೆಯ ನಿರ್ಧಾರಗಳನ್ನು ಗೊಂದಲವಿಲ್ಲದೆ ತೆಗೆದುಕೊಳ್ಳುವಿರಿ.
* ಈ ಮಂತ್ರ ಪ್ರತಿದಿನ ಪಠಿಸಿದರೆ ಧಾರ್ಮಿಕ ವಿಷಯಗಳ ಕಡೆ ಆಸಕ್ತಿ ಹೆಚ್ಚುವುದು, ಬದುಕನ್ನುತುಂಬಾ ಪಾಸಿಟಿವ್ ಆಗಿ ನೋಡುತ್ತೀರಿ.
* ನಿಮ್ಮ ಕಾರ್ಯಗಳನ್ನು ಉತ್ತಮವಾಗಿ ಮಾಡುವ ಆತ್ಮವಿಶ್ವಾಸ ಸಿಗುವುದರಿಂದ ನಿಮ್ಮ ಕಾರ್ಯಗಳಲ್ಲಿ ಲಾಭ ಗಳಿಸುತ್ತೀರಿ.
* ಆದಿತ್ಯ ಹೃದಯ ಸ್ತೋತ್ರ ಮಂತ್ರವನ್ನು ಪ್ರತಿದಿನ ಪಠಿಸಿ.
ಆದಿತ್ಯ ಹೃದಯಂ ಮಂತ್ರವನ್ನು ಯಾರು ಪಠಿಸಬಹುದು?
ಈ ಮಂತ್ರವನ್ನು ಪ್ರತಿಯೊಬ್ಬರು ಪಠಿಸಬಹುದು.
* ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೇ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಿ. ನಂತರ ಈ ಮಂತ್ರ ಪಠಿಸಿ. ಈ ಸೂರ್ಯ ಮಂತ್ರವನ್ನು ಪಠಿಸುವುದರಿಂದ ಸೂರ್ಯನ ಆಶೀರ್ವಾದ ಸಿಗಲಿದೆ.
ಸೂರ್ಯ ಮಂತ್ರ ಪಠಿಸುವುದರಿಂದ ಈ ಅನುಭವಗಳು ಉಂಟಾಗುವುದು
* ಸೂರ್ಯ ಮಂತ್ರ ಪಠಣವು ದೇಹವನ್ನು ಚೈತನ್ಯಗೊಳಿಸುತ್ತದೆ ಹಾಗೂ ನಿಮ್ಮ ಮನಸ್ಸನ್ನು ನಕಾರಾತ್ಮಕ ಆಲೋಚನೆಗಳಿಂದ ದೂರವಿಡುತ್ತದೆ.
* ಇದು ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸುತ್ತದೆ.
* ಮಂತ್ರ ಪಠಣೆ ಮಾಡುವುದರಿಂದ ನೀವು ನಿಮ್ಮ ಜೀವನದಲ್ಲಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತೀರಿ.
* ನಿಮ್ಮಲ್ಲಿ ಏಕಾಗ್ರತೆ ಹೆಚ್ಚಾಗುವುದು, ಇದರಿಂದಾಗಿ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಪಡೆಯುತ್ತೀರಿ.
* ಈ ಮಂತ್ರ ಪಠಿಸುವುದರಿಂದ ನಿಮ್ಮಲ್ಲಿ ದೈರ್ಯ ಹೆಚ್ಚಲಿದೆ.



Click it and Unblock the Notifications


