Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರುಡ ಪುರಾಣದ ಪ್ರಕಾರ ಸಾವಿನ ಕೊನೆ ಕ್ಷಣ ಮನುಷ್ಯರಿಗೆ ಈ ಅನುಭವಗಳಾಗುವುದು
"ಸಾವು" ಈ ಪದವೇ ಭಯಾನಕ. ಸಾವಾಗಲಿ, ಸಾವಿನ ಸಂದೇಶವನ್ನಾಗಲಿ ಯಾರೋಬ್ಬರು ಬಯಸೋದಿಲ್ಲ. ನಮಗೆ ಇಂತಹದ್ದೇ ಸಾವು ಬರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ನಿಮಗೊತ್ತಾ ಸಾವಿನ ಸಮಯದಲ್ಲಿ ಮನುಷ್ಯನ ನರಕ ಯಾತನೆಯನ್ನೇ ಅನುಭವಿಸುತ್ತಾನಂತೆ.

ಗರುಡ ಪುರಾಣದಲ್ಲಿ ಸಾವಿನ ಕೆಲವು ಕ್ಷಣಗಳಿಗೂ ಮೊದಲು ನಡೆಯೋ ಕೆಲವು ಘಟನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಮನುಷ್ಯ ಸಾವಿಗೂ ಮೊದಲು ನರಳಾಡೋದಕ್ಕೆ ಶುರು ಮಾಡುತ್ತಾನೆ. ಕೆಲವೊಂದು ಕ್ಷಣಗಳಲ್ಲಿ ಆತನ ಬಾಯಿಯಿಂದ ಒಂದು ಮಾತು ಹೊರಡೋದಿಲ್ಲ. ಬರೀ ಕಣ್ಣಲ್ಲಿ ನೀರು ಮಾತ್ರ ಬರುತ್ತಂತೆ ಇದಕ್ಕೆಲ್ಲಾ ಕಾರಣ ಏನು ಗೊತ್ತಾ? ಗರುಡ ಪುರಾಣವು ಸಾವಿನ ಆ ಭಯಾನಕ ನೋವಿನ ಬಗ್ಗೆ ಏನು ಹೇಳುತ್ತೆ ಅನ್ನೋದನ್ನ ಹೇಳ್ತೀವಿ.
ಸಾವಿನ ಆ ಕಡೆ ಕ್ಷಣಗಳು
ಭೂಮಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ದಿನ ಸಾಯಲೇಬೇಕು. ಸಾವು ಅನ್ನೋದು ನಾವು ನೀವು ಅಂದುಕೊಂಡಷ್ಟು ಸುಲಭವಾಗಿರೋದಿಲ್ವಂತೆ. ಸಾವಿನ ಸಂದರ್ಭದಲ್ಲಿ ಮನುಷ್ಯ ಭಯಾನಕ ನೋವನ್ನ ಅನುಭವಿಸುತ್ತಾನೆ. ಇದೇ ಕಾರಣಕ್ಕೆ ಮನುಷ್ಯರು ಸಾವಿಗೆ ಅಷ್ಟೊಂದು ಹೆದರೋದು. ಸಾವಿನ ಕಡೆ ಗಳಿಗೆಯಲ್ಲಿ ಅನೇಕ ಜನರಿಗೆ ಮಾತೇ ಹೊರಡೋದಿಲ್ಲ. ಇನ್ನೂ ಕೆಲವರು ಪ್ರಾಣ ಪಕ್ಷಿ ಇನ್ನೇನು ಹಾರಿ ಹೋಗುತ್ತೆ ಅನ್ನೋವಾಗ ಅಳೋದಕ್ಕೆ ಶುರು ಮಾಡ್ತಾರೆ. ಇದಕ್ಕೆಲ್ಲಾ ಕಾರಣವೇನು? ಈ ಸಾವಿನ ರಹಸ್ಯಗಳ ಗರುಡ ಪುರಾಣದಲ್ಲಿ ಉಲ್ಲೇಖವಾಗಿರೋ ಈ ಸಂಗತಿಗಳ ಬಗ್ಗೆ ಮೊದಲು ತಿಳಿದುಕೊಳ್ಳಿ.
ಎಲ್ಲಾ ನೆನಪುಗಳು ಕಣ್ಣಮುಂದೆ ಬಂದು ಬಿಡುತ್ತೆ
ಗರುಡ ಪುರಾಣದ ಪ್ರಕಾರ ಒರ್ವ ವ್ಯಕ್ತಿ ಸಾವನ್ನಪ್ಪುವ ಸಂದರ್ಭದಲ್ಲಿ ಆತನಲ್ಲಿ ದೈವೀಕ ಭಾವ ಮೂಡುತ್ತಂತೆ. ಸಾಯೋ ಕೊನೆ ಗಳಿಗೆಯಲ್ಲಿ ಆತನ ಜೀವನದಲ್ಲಿ ಆದ ಸಿಹಿ-ಕಹಿ ಘಟನೆಗಳನ್ನು ಆತ ನೆನಪಿಸಿಕೊಳ್ಳುತ್ತಾನಂತೆ. ಎಲ್ಲಾ ಘಟನೆಗಳು ಆತನ ಕಣ್ಮುಂದೆ ಬಂದು ಬಿಡುತ್ತಂತೆ. ಇದಾದ ಬಳಿಕ ಆತ ತನ್ನ ಹೊಸ ಜೀವನವನ್ನು ಶುರು ಮಾಡುತ್ತಾನೆ.
ಚೇಳು ಕಡಿತದಂತಹ ಭಯಾನಕ ನೋವು ಅನುಭವಿಸುತ್ತಾನೆ
ಸಾವಿನ ಕ್ಷಣದಲ್ಲಿ ಯಮರಾಜ ಬಂದು ನಮ್ಮ ಜೀವವನ್ನು ತೆಗೆದುಕೊಂಡು ಹೋಗುತ್ತಾನೆ. ಈ ವೇಳೆ ಆತನಿಗೆ ನೂರು ಚೇಳುಗಳು ಒಟ್ಟಿಗೆ ಕಡಿದ ಅನುಭವವಾಗುತ್ತಂತೆ. ಅತೀವ ನೋವು, ಹಿಂಸೆಯನ್ನು ಅವರು ಅನುಭವಿಸುತ್ತಾರೆ. ಇದೇ ವೇಳೆ ಆತನ ಗಂಟಲು ಒಣಗಿ ಬಾಯಿಯಿಂದ ಜೊಲ್ಲು ಹೊರಬರಲು ಶುರುವಾಗುತ್ತದೆ.
ಯಮಧೂತನನ್ನು ಕಂಡು ವ್ಯಕ್ತಿ ಭಯಭೀತನಾಗುತ್ತಾನೆ
ಸಾವಿನ ಕೊನೆಯ ಕೆಲ ಗಂಟೆಗಳಲ್ಲಿ ಯಮಧೂತನ ಸಂದೇಶ ವಾಹಕರು ಮೊದಲಿಗೆ ಬರುತ್ತಾರೆ. ಗರುಡ ಪುರಾಣದ ಪ್ರಕಾರ ಯಮಧೂತ ನೋಡೋದಕ್ಕೆ ತುಂಬಾನೇ ಭಯಾನಕವಾಗಿರುತ್ತಾನಂತೆ. ಆತನ ಕಣ್ಣುಗಳನ್ನು ಕಂಡು ಸಾಮಾನ್ಯ ಜನ ಬೆಚ್ಚಿ ಬೀಳುತ್ತಾರಂತೆ. ಯಮರಾಜನನ್ನು ಕಂಡಾಕ್ಷಣ ಭಯದಲ್ಲೇ ಮಲವಿಸರ್ಜನೆಯೂ ಆಗುತ್ತಂತೆ.
ಹೆಬ್ಬೆರಳಿನ ಗಾತ್ರದ ಆತ್ಮ ದೇಹದಿಂದ ಹೊರಬರುತ್ತದೆ
ಗರುಡ ಪುರಾಣದ ಪ್ರಕಾರ ಸಾವಿನ ಸಂದರ್ಭದಲ್ಲಿ ಹೆಬ್ಬೆರಳಿನ ಗಾತ್ರದ ಜೀವಿಯು ವ್ಯಕ್ತಿಯ ದೇಹದಿಂದ ಹೊರಬರುತ್ತದೆ. ಯಮರಾಜನ ದೂತರು ಆ ಆತ್ಮವನ್ನು ಸೆರೆಹಿಡಿದು ಯಮಲೋಕಕ್ಕೆ ಪ್ರಯಾಣಿಸುತ್ತಾರೆ. ಯಮಧೂತರು ಅದನ್ನು ಕಟ್ಟಿ ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರಂತೆ.
ಪಾಪಗಳನ್ನು ನೆನೆಯುತ್ತಾ ನರಕದೆಡೆಗೆ ಪಯಣ
ಯಮಧೂತರೊಂದಿಗೆ ನರಕದ ಕಡೆಗೆ ಪಯಣ ಬೆಳೆಸುತ್ತಿರುವಾಗ ಯಮರಾಜನು ಪಾಪಿಗಳಿಗೆ ನೀಡುವ ಚಿತ್ರಹಿಂಸೆಯ ಬಗ್ಗೆ ಹೇಳುತ್ತಾನೆ. ಈ ಸಮಯದಲ್ಲಿ ಆ ವ್ಯಕ್ತಿ ಆತನ ಮಾಡಿದ ಪಾಪಗಳ ಬಗ್ಗೆ ನೆನೆಯುತ್ತಾ ನರಕದ ಕಡೆಗೆ ಹೆಜ್ಜೆ ಹಾಕುತ್ತಾನೆ. ಅಲ್ಲಿ ಎದುರಾಗೋ ನರಕ ಯಾತನೆಯನ್ನು ನೆನೆದು ಆತ ಭಯಭೀತನಾಗಿ ಕಣ್ಣೀರಿಡುತ್ತಾನೆ.
ಸಾವು ಅನ್ನೋದೇ ಕ್ರೂರಿ ಅಂತಹ ಸಾವು ಬರೋದೆ ಬೇಡ. ತಪ್ಪು ಮಾಡೋದು ಸಹಜ ಆದರೆ ತಿದ್ದಿಕೊಂಡು ನಡೆಯಬೇಕು. ಈ ಭೂಮಿಯಲ್ಲಿ ಎಷ್ಟು ದಿನ ಬದುಕಿರುತ್ತೇವೆಯೋ ಗೊತ್ತಿಲ್ಲ. ನಮ್ಮಿಂದ ಯಾರಿಗಾದರೂ ಒಳ್ಳೆಯದಾಗದಿದ್ದರೂ ಪರವಾಗಿಲ್ಲ. ಆದರೆ ಕೆಟ್ಟದು ಮಾತ್ರ ಮಾಡಬೇಡಿ.



Click it and Unblock the Notifications














