Latest Updates
-
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್!
2019ರಲ್ಲಿ ಐದು ರಾಶಿಯವರ ಬದುಕಿನಲ್ಲಿ ಮಹತ್ತರ ಬದಲಾವಣೆ ಕಾಣಲಿದೆಯಂತೆ!
ಬದಲಾವಣೆ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ನೀಡುವುದು. ಧನಾತ್ಮಕ ಬದಲಾವಣೆಯು ವ್ಯಕ್ತಿಯ ಮನಸ್ಸಿಗೆ ಒಂದು ಬಗೆಯ ಹಿತ ಹಾಗೂ ಸಮಾಧಾನವನ್ನು ನೀಡುತ್ತದೆ. ಅದೇ ಋಣಾತ್ಮಕ ಬದಲಾವಣೆಯು ವ್ಯಕ್ತಿಯ ಮನಸ್ಸಿಗೆ ನೋವನ್ನುಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸುಂದರವಾದ ಜೀವನವನ್ನು ನೋಡುತ್ತಿದ್ದೇವೆ ಎಂದಾಗ ಅದರಲ್ಲಿ ಬದಲಾವಣೆಯನ್ನು ಕಾಣಲು ಇಷ್ಟ ಪಡುವುದಿಲ್ಲ. ಅದೇ ಬದಲಾವಣೆಯನ್ನು ಬಯಸುತ್ತಿರುವಾಗ ಬದಲಾವಣೆ ಎನ್ನುವುದು ಸಿಗದೆ ಇದ್ದರೂ ಸಾಕಷ್ಟು ಚಿಂತನೆ ಕಾಡುವುದು. 2019ರ ವರ್ಷದಲ್ಲಿ ಕೆಲವು ರಾಶಿಚಕ್ರದವರು ಗಮನಾರ್ಹ ಬದಲಾವಣೆಯನ್ನು ಕಂಡುಕೊಳ್ಳುವರು ಎಂದು ಹೇಳಲಾಗುವುದು....

ಗ್ರಹಗತಿಗಳ ಪ್ರಭಾವ
ಗ್ರಹಗತಿಗಳ ಪ್ರಭಾವ ಹಾಗೂ ಅವರ ಸಂಚಾರದ ಪ್ರಭಾವದಿಂದ ಸಾಕಷ್ಟು ಬದಲಾವಣೆಯನ್ನು ಅನುಭವಿಸಬೇಕಾಗುವುದು. ಹನ್ನೆರಡು ರಾಶಿಚಕ್ರದವರು ವಿಭಿನ್ನ ಬಗೆಯ ಅನುಭವ ಹಾಗೂ ಬದಲಾವಣೆಯನ್ನು ಜೀವನದಲ್ಲಿ ಕಾಣಲಿದ್ದಾರೆ. ಅದರಲ್ಲಿ ಐದು ರಾಶಿಚಕ್ರದವರು ಹೆಚ್ಚು ಧನಾತ್ಮಕ ಹಾಗೂ ಋಣಾತ್ಮಕ ಬದಲಾವಣೆಯನ್ನು ಕಂಡುಕೊಳ್ಳಲಿದ್ದಾರೆ. ಅದು ಅವರ ಜೀವನದ ಮಹತ್ತರವಾದ ಬದಲಾವಣೆಯಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಗ್ರಹಗಳ ಬದಲಾವಣೆ ಹೇಗಿರುತ್ತವೆ? ಅವರ ಬದಲಾವಣೆಗೆ ಒಳಗಾಗುವ ಪ್ರಮುಖ ರಾಶಿಚಕ್ರಗಳು ಯಾವವು? ಅವರು ಯಾವ ಬಗೆಯ ಬದಲಾವಣೆಯನ್ನು ಕಂಡು ಕೊಳ್ಳಲಿದ್ದಾರೆ? ಅದು ಅವರ ಮಾನಸಿಕ ಸ್ಥಿತಿಗೆ ಹಾಗೂ ಬದುಕಿಗೆ ಯಾವ ತಿರುವನ್ನು ತಂದುಕೊಡುವುದು? ಆ ರಾಶಿಚಕ್ರಗಳ ಪಟ್ಟಿಯಲ್ಲಿ ನೀವು ಇದ್ದೀರಾ? ಎನ್ನುವುದನ್ನು ತಿಳಿಯಲು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ನೋಡಿ ತಿಳಿಯಿರಿ.

ವೃಷಭ
ಬೇಸರದಿಂದ ಕೂಡಿರುವ ದೈನಂದಿನ ಜೀವನಕ್ಕೆ ಇದೀಗ ವಿದಾಯ ಹೇಳುವ ಸಮಯ ಬಂದಿದೆ. ಮುಂದಿನ ಬದಲಾವಣೆ ಅಂದರೆ 2019ರಲ್ಲಿ ಹೊಸ ಬದಲಾವಣೆಯು ಅನಾವರಣಗೊಳ್ಳುತ್ತದೆ. ಇದರಿಂದ ನೀವು ಹೆಚ್ಚು ವಿಶ್ವಾಸ ಮತ್ತು ಧೈರ್ಯಶಾಲಿ ವ್ಯಕ್ತಿಯಾಗಿ ನಿಲ್ಲುವಿರಿ. ವಿಶೇಷವಾಗಿ ನಿಮ್ಮ ಪ್ರೀತಿಯ ವಿಷಯದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುವುದು. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಶ್ರಮದಿಂದ ಕೂಡಿರುವ ಕೆಲಸವನ್ನು ಮಾಡಲು ನಿಮ್ಮ ಮನಸ್ಸು ಪ್ರೇರೇಪಣೆ ನೀಡುವುದು. ಮೇ ತಿಂಗಳಿನಿಂದ ಸಪ್ಟೆಂಬರ್ ತಿಂಗಳವರೆಗೆ ನೀವು ಮಾಡಿದ ಪ್ರಯತ್ನ ಹಾಗೂ ಕೈಗೊಂಡ ಯೋಜನೆಗಳಿಗೆ ಅತ್ಯುತ್ತಮ ಪ್ರತಿಫಲವನ್ನು ಕಂಡುಕೊಳ್ಳುವಿರಿ.

ವೃಷಭ
ಏಪ್ರಿಲ್ ಮತ್ತು ಜೂನ್‍ತಿಂಗಳಲ್ಲಿ ಹಣಕಾಸಿಗೆ ಸಂಬಂಧಿಸಿದ ಉತ್ತಮ ಬದಲಾವಣೆಯನ್ನು ಕಂಡುಕೊಳ್ಳಬಹುದು. ಅಲ್ಲದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಂಬಂಧವನ್ನು ಕಂಡುಕೊಳ್ಳುವಿರಿ. 2019ರಲ್ಲಿ ಎಲ್ಲಾ ಪಾಲುದಾರಿಕೆಯ ವ್ಯವಹಾರ ಹಾಗೂ ಕೆಲಸಗಳಲ್ಲಿ ಅಭಿವೃದ್ಧಿ ಹಾಗೂ ಯಶಸ್ಸನ್ನು ಕಾಣಲು ಅತ್ಯುತ್ತಮ ವರ್ಷವಾಗಲಿದೆ. ವೃಷಭ ರಾಶಿಯವರಿಗೆ ಉತ್ತಮ ಅವಕಾಶ ಎಂದರೆ ಯಾವುದಾದರೂ ಉತ್ತಮ ಗುರಿಯನ್ನು ಹೊಂದಿದ್ದರೆ ಈ ವರ್ಷ ನಿಮಗೆ ಅತ್ಯುತ್ತಮ ಸಮಯವಾಗಲಿದೆ. ಜೂನ್ ತಿಂಗಳ ಆರಂಭದಲ್ಲಿ ಪೂರ್ವ ಸಿದ್ಧತೆಯನ್ನು ಕೈಗೊಳ್ಳಬಹುದು. ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲು ಸೂಕ್ತ ಸಮಯ ಎಂದು ಜ್ಯೋತಿಷ್ಯ ಶಾಸ್ತ್ರ ಸಲಹೆ ನೀಡುವುದು.

ಸಿಂಹ
2019ರ ವರ್ಷವು ಈ ರಾಶಿಯವರಿಗೆ ಅರ್ಥಮಾಡಿಕೊಳ್ಳುವ ಮತ್ತು ಅರಿವಿನ ಒಂದು ವರ್ಷವಾಗಿದೆ. ನೀವು ನಿಮ್ಮ ಕನಸುಗಳನ್ನು ವಾಸ್ತವದ ರೂಪಕ್ಕೆ ತರಲು ಒಂದು ಅಗತ್ಯವಾದ ಕ್ರಮವನ್ನು ಕೈಗೊಳ್ಳುವಿರಿ. ಅದು ನಿಮಗೆ ಸಾಕಷ್ಟು ಸಹಕಾರ ಹಾಗೂ ಸಂತೋಷವನ್ನು ನೀಡುವುದು. ಕೆಲವು ಸಂಗತಿಗಳಲ್ಲಿ ಮೃದುವಾದ ಸವಾರಿಯನ್ನು ಪಡೆದುಕೊಳ್ಳುವಿರಿ. ಅದು ನಿಮಗೆ ಸುಲಭವಾದ ಸಂಗತಿಯಾಗಲಿದೆ. ವರ್ಷದ ಆರಂಭದ ಕೆಲವು ತಿಂಗಳಲ್ಲಿ ಸ್ನೇಹಿತರು ಮತ್ತು ಸಂಬಂಧಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವಿರಿ. ಪ್ರೀತಿ ಮತ್ತು ಹಣಕಾಸು ಎರಡೂ ವಿಷಯದಲ್ಲಿ ಇತರ ವ್ಯಕ್ತಿಗಳಿಂದ ಆಶ್ಚರ್ಯಕರವಾದ ಲಾಭ ಹಾಗೂ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಅದು ನಿಮಗೆ ಆಶ್ಚರ್ಯವನ್ನು ತಂದುಕೊಡುವುದು.

ಸಿಂಹ
ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚು ಉತ್ಪಾದಕ ಸಮಯವಾಗಿರುತ್ತದೆ. ನಿಮ್ಮ ಉತ್ತಮ ಅವಕಾಶಗಳು: ನಿಮಗೆ ಉತ್ತಮ ಹಂತವು ಜೂನ್ ತಿಂಗಳ ಕೊನೆಯಿಂದ ಆರಂಭವಾಗುವುದು. ಅಕ್ಟೋಬರ್ ಆರಂಭದ ವರೆಗೆ ಉತ್ತಮವಾಗಿರುತ್ತದೆ. ಈ ವರ್ಷದಲ್ಲಿ ನೀವು ಸಾಕಷ್ಟು ಉತ್ಸಾಹ ಹಾಗೂ ಯಶಸ್ಸನ್ನು ಪಡೆದುಕೊಳ್ಳುವಿರಿ. ಈ ವರ್ಷವು ನಿಮಗೆ ಪ್ರಮುಖ ಬೆಳವಣಿಗೆಯ ಹಂತವನ್ನು ತಂದುಕೊಡುವುದು ಎಂದು ಹೇಳಲಾಗುವುದು.

ಕನ್ಯಾ
2019ರ ಆರಂಭದ ವರ್ಷದಲ್ಲಿ ಸಾಕಷ್ಟು ನಾಚಿಕೆ ಸ್ವಭಾವದಿಂದ ಹೊರಬರುವಿರಿ. ನಿಮ್ಮ ಮನಸ್ಸು ಹಾಗೂ ಜೀವನದಲ್ಲಿ ಹೊಂದಿರುವ ಸಾಕಷ್ಟು ಭಯ ಹಾಗೂ ಚಿಂತೆಯಿಂದ ಹೊರ ಬಂದು ಜೀವನದಲ್ಲಿ ಸೂಕ್ತ ನಿಯಂತ್ರಣವನ್ನು ತೆಗೆದು ಕೊಳ್ಳುವುದು. ಇದರಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆ ಹಾಗೂ ಶ್ರೇಯಸ್ಸನ್ನು ಪಡೆದುಕೊಳ್ಳುವಿರಿ ಎನ್ನುವುದನ್ನು ನೆನೆಪಿನಲ್ಲಿಟ್ಟು ಕೊಳ್ಳಬೇಕಿದೆ. ಹಾಗಾಗಿ ಇವರು ತಮ್ಮ ಮಾರ್ಗದ ಬಗ್ಗೆ ಸೂಕ್ತ ನಿರ್ಧಾರವನ್ನು ಸಹ ತೆಗೆದುಕೊಳ್ಳಬೇಕು.
Most Read:2019ರ ಮಕರ ಸಂಕ್ರಾಂತಿ: ಮೂರು ರಾಶಿಯವರು ಕಠಿಣ ಸಮಯವನ್ನು ಎದುರಿಸಬೇಕಾಗಬಹುದು!

ಕನ್ಯಾ
ವೈಯಕ್ತಿಕವಾಗಿ ಹಾಗೂ ವೃತ್ತಿಪರ ವಿಚಾರದಲ್ಲೂ ಸಾಕಷ್ಟು ಅನುಕೂಲ ಹಾಗೂ ಅಭಿವೃದ್ಧಿಯನ್ನು ಕಂಡುಕೊಳ್ಳುವಿರಿ. ಸಂಬಂಧ ಹಾಗೂ ವಿವಾಹಕ್ಕೆ ಅತ್ಯುತ್ತಮ ವರ್ಷವಾಗಲಿದೆ. ಇವರು ತಮ್ಮ ಹೊಸ ಆಲೋಚನೆಗಳಿಗೆ ಹಾಗೂ ಗುರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತಾರೆ. ಆಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳ ಕಾಲದಲ್ಲಿ ಆಹಾರದ ಬಗ್ಗೆ ಸೂಕ್ತ ಎಚ್ಚರಿಕೆಯನ್ನು ಹೊಂದ ಬೇಕಾಗುವುದು. ಉತ್ತಮ ಅವಕಾಶಗಳು: ನಿಮ್ಮ ನಂಬಿಕೆ ಮತ್ತು ಕನಸುಗಳು ನಿಜವಾಗುವುದು. ಗುರುವಿನ ಪ್ರಭಾವ ಇರುವುದರಿಂದ ಸಾಕಷ್ಟು ಉತ್ತಮ ಫಲವನ್ನು ಅನುಭವಿಸುವಿರಿ ಎಂದು ಹೇಳಲಾಗುವುದು.

ಮಕರ
2019ರ ವರ್ಷವು ಮಕರ ರಾಶಿಯವರಿಗೆ ಅತ್ಯುತ್ತಮ ಅಥವಾ ಬಹುದೊಡ್ಡ ವರ್ಷವಾಗಲಿದೆ. ನೀವು ಯಾವುದೇ ಸಂಗತಿಯ ಬಗ್ಗೆ ಚಿಂತೆ ಅಥವಾ ಭಯವನ್ನು ಹೊಂದುವುದಿಲ್ಲ. ನೀವು ಪ್ರೀತಿಪಾತ್ರರೊಂದಿಗೆ ಹಾಗೂ ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಸಂಬಂಧವನ್ನು ಪಡೆದುಕೊಳ್ಳುವಿರಿ. ನಿಮಗಾಗಿ ಆತ್ಮೀಯ ಜೊತೆಗಾರರನ್ನು ಪಡೆದುಕೊಳ್ಳುವರು. ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಹೆದರಿಕೆ ಅಥವಾ ಹಿಂಜರಿಕೆಗೆ ಒಳಗಾಗುವುದಿಲ್ಲ ಎಂದು ಹೇಳಬಹುದು. ವರ್ಷದ ಆರಂಭದಲ್ಲಿ ಸಾಕಷ್ಟು ಅನುಚಿತ ಸನ್ನಿವೇಶಗಳನ್ನು ಎದುರಿಸಬೇಕಾಗುವುದು. ವರ್ಷದ ಆರಂಭದಲ್ಲಿ ಕೆಲವು ತಿಂಗಳಗಳ ಕಾಲ ಉತ್ತಮ ನಿರ್ಧಾರವನ್ನು ಕೈಗೊಳ್ಳುವಿರಿ. ಮೇ ತಿಂಗಳಿನಿಂದ ಆಗಸ್ಟ್ ತಿಂಗಳಗಳ ವರೆಗೆ ಕೆಲವು ಪ್ರಮುಖ ಪಾಠವನ್ನು ಕಲಿಯುವಿರಿ.

ಮಕರ
ಉತ್ತಮ ಅವಕಾಶಗಳು: ಈ ವರ್ಷ ನೀವು ಉತ್ತಮ ಸಂವಹನವನ್ನು ಹೊಂದುವ ವರ್ಷವಾಗಿದೆ. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ತೆರೆದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಅದೃಷ್ಟದಲ್ಲಿ ಸಾಕಷ್ಟು ಉತ್ತಮ ಅವಕಾಶಗಳು ತೆರೆದುಕೊಳ್ಳುವುದು. ವರ್ಷದ ಆರಂಭದಿಂದಲೇ ಸಾಕಷ್ಟು ಗುರಿಯನ್ನು ಹೊಂದಿರುವುದರಿಂದ ಅವೆಲ್ಲವೂ ಸಾಕಾರಗೊಳ್ಳುವುದು. ಜುಲೈನಿಂದ ಸಪ್ಟೆಂಬರ್ ತಿಂಗಳಗಳವರೆಗೆ ನಿಮಗೆ ಉತ್ತಮ ಸಮಯ ಎಂದು ಹೇಳಲಾಗುವುದು.

ಮೀನ
2019ರ ವರ್ಷವು ಇವರಿಗೆ ಬದಲಾವಣೆಯ ವರ್ಷವಾಗಲಿದೆ. ನೀವು ನಿಮ್ಮ ಅನುಮಾನ ಹಾಗೂ ಭಯವನ್ನು ಪಕ್ಕಕ್ಕೆ ಇರಿಸಿ. ನಿಮ್ಮ ಕನಸನ್ನು ಸಾಕಾರಗೊಳಿಸಲು ಮುಂದುವರಿಯಿರಿ ಎಂದು ಸಲಹೆ ನೀಡಲಾಗುವುದು. ಅಲ್ಲದೆ ಈ ವರ್ಷವು ಮೀನ ರಾಶಿಯವರಿಗೆ ಹೊಸ ಮತ್ತು ಅಸಮಾನ್ಯ ಘಟನೆಗಳು ಸಂಭವಿಸುವುದು. ಹೊಸದನ್ನು ಅನುಭವಿಸಲು ನೀವು ದಿನನಿತ್ಯದ ಜೀವನದ ಎಲ್ಲಾ ಪ್ರದೇಶಗಳನ್ನು ಉತ್ತಮಗೊಳಿಸುತ್ತದೆ. ಇತರ ಜನರು ನಿಮ್ಮ ಸುತ್ತಲು ನಿರ್ಬಂಧಗಳನ್ನು ಹಾಕಲು ಪ್ರಯತ್ನಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ಬಂಡಾಯ ಪ್ರವೃತ್ತಿಯನ್ನು ಸಹ ತೋರಿಸಬಹುದು. ನೀವು ಹಿಡಿದಿರುವ ಎಲ್ಲಾ ಸಂಬಂಧಗಳಿಂದಲೂ ಪ್ರಬುದ್ಧ ರಾಗಿರುತ್ತೀರಿ.

ಮೀನ
ಅವಕಾಶಗಳು: ನಿಮಗೆ ಈ ವರ್ಷ ಗ್ರಹಗತಿಗಳ ಸಹಕಾರ ಉತ್ತಮವಾಗಿರುವುದರಿಂದ ಎಲ್ಲಾ ಹಂತದಲ್ಲೂ ಸಾಕಷ್ಟು ಯಶಸ್ಸು ಹಾಗೂ ಗಿರಿಸಾಧನೆಯನ್ನು ಸಾಧಿಸುವರು. ಜನವರಿಯಿಂದ ಮಾರ್ಚ್ ಮಧ್ಯದ ಅವಧಿಯಲ್ಲಿ ಸಾಕಷ್ಟು ಹೊಸ ಕ್ಷೇತ್ರಗಳಲ್ಲಿ ಪ್ರವೇಶ ಪಡೆದುಕೊಳ್ಳುವಿರಿ. ನಿಮಗೆ ಸಹಾಯ ಮಾಡಲು ನಿಮ್ಮ ಗ್ರಹಗಳು ನಿಮ್ಮ ಪರವಾಗಿ ಇರುತ್ತವೆ. ನಿಮ್ಮ ಆಲೋಚನೆಗಳನ್ನು ಉತ್ತೇಜಿಸಲು ಇದು ಉತ್ತಮ ಸಮಯವಾಗಿರುತ್ತದೆ.



Click it and Unblock the Notifications











