Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
24-3-2019: ಭಾನುವಾರದ ದಿನ ಭವಿಷ್ಯ
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.
ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟು ಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ(24 ಮಾರ್ಚ್ 2019)
ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಶತ್ರುವಿನ ಎಲ್ಲಾ ವರಸೆಗಳನ್ನು ತಿಳಿಯುವುದರಿಂದ ನಿಮ್ಮ ರಾಜಕೀಯ ಜೀವನಕ್ಕೆ ಒಂದು ಹೊಸ ತಿರುವು ಮೂಡುವುದು. ನಿಮ್ಮ ಬಗೆಗಿನ ವಿಶೇಷ ಪರೀಕ್ಷೆಗೆ ಸದ್ಯವೇ ಕಾಲ ಕೂಡಿಬರುವುದು. ಎಲ್ಲಾ ವಿಚಾರಗಳಲ್ಲಿಯೂ ವಿವೇಕ ದೊಂದಿಗೆ ಕಾರ್ಯ ಪೂರೈಸಿ. ಸಂಗಾತಿಯ ಸಲಹೆಯಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು.8050559094 ಅದೃಷ್ಟ ಸಂಖ್ಯೆ:2

ವೃಷಭ
ಸಾಂಕೇತಿಕವಾದ ನಿಮ್ಮ ಪ್ರತಿಭಟನೆ, ಪ್ರತಿಪಾದನೆ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಸರಳವಾಗಿ ಮಾತನಾಡಿ ಬೃಹತ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಬೇರೆಯವರ ಹಣಕಾಸಿನ ವಿಷಯದಲ್ಲಿ ಮೂಗು ತೂರಿಸದಿರಿ.ಕಾರ್ಯದಲ್ಲಿ ಸಿದ್ದಿ ಇದೆಯಾದರೂ ಏರುತಗ್ಗಿನ, ಕಲ್ಲುಮುಳ್ಳಿನ ಬಿರುದಾರಿಯಲ್ಲಿ ಸಾಗಬೇಕಾಗಿರುವುದರಿಂದ ಎಚ್ಚರಿಕೆ ಅಗತ್ಯ. ಆದಷ್ಟು ಕುಲದೇವರನ್ನು ಪ್ರಾರ್ಥನೆ ಮಾಡಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.8050559094 ಅದೃಷ್ಟ ಸಂಖ್ಯೆ:1

ಮಿಥುನ
ಆರೋಗ್ಯದಲ್ಲಿ ನಿರಾಸಕ್ತಿ ಹೊಂದಬೇಡಿ. ಸರ್ರನೆ ಉಂಟಾಗುವ ಅಶಕ್ತತೆಯಿಂದ ಕಿರಿಕಿರಿ ಉಂಟಾಗುವುದು. ಮನೆ ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆಯಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಕಾಯಿಲೆಯಿಂದ ಬೇಗ ಗುಣಮುಖರಾಗುವಲ್ಲಿ ಸಹಕಾರಿಯಾಗುವುದು. ನಿಮ್ಮ ಜತೆಗಾರರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಅತ್ಯುತ್ತಮ ಕ್ಷ ಣಗಳು ವ್ಯರ್ಥವಾಗದಿರುವಂತೆ ನೋಡಿಕೊಳ್ಳಿ. ಇನ್ನೊಬ್ಬರ ಮರ್ಜಿಗೆ ಒಳಗಾಗಿ ನಿಮ್ಮತನವನ್ನು ನೀವು ಬಿಟ್ಟುಕೊಡದಿರಿ. ಇದರಿಂದ ಮುಂದೆ ಒಳಿತಾಗುವುದು.8050559094 ಅದೃಷ್ಟ ಸಂಖ್ಯೆ:4

ಕಟಕ
ಮಕ್ಕಳು, ಕೆಲಸಗಾರರು, ಕೆಲವು ಸರ್ಕಾರಿ ಅಧಿಕಾರಿಗಳು ಒತ್ತಡ ತರುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ವ್ಯವಹರಿಸಿರಿ. ಕೋಪ ಅನೇಕ ಅನರ್ಥಗಳಿಗೆ ಕಾರಣವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ರಾಜಕೀಯ ತಂತ್ರಗಾರಿಕೆ, ರಾಜಕೀಯ ದಾಳಗಳು ಉರುಳುವುದು ಇತ್ಯಾದಿ ಇದ್ದೇ ಇರುತ್ತದೆ. ಮನದಾಳದ ಮಾತಿನಿಂದ ಜನಪ್ರಿಯತೆ ಹೊಂದುವಿರಿ. ಹಮ್ಮಿಕೊಂಡ ಕಾರ್ಯಗಳಲ್ಲಿ ಗಣ್ಯರನೇಕರ ಬೆಂಬಲ ದೊರೆಯುವುದು. 8050559094 ಅದೃಷ್ಟ ಸಂಖ್ಯೆ:6

ಸಿಂಹ
ನಿಮ್ಮ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಬೇರೆ ಕೆಲಸಗಳನ್ನು ಎತ್ತಿಕೊಳ್ಳುವ ಸಾಹಸ ಬೇಡ. ಜನ್ಮಶನಿ ವಿನಾಕಾರಣ ಅಪವಾದಗಳನ್ನು ನಿಮ್ಮ ಮೇಲೆ ಹೇರಲು ಕಾಯುತ್ತಿರುವನು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ ಜಯಶೀಲರಾಗಿ.ಮಕರ:- ಮೃಷ್ಟಾನ್ನ ಭೋಜನ ಸವಿಯುವ ಸಾಧ್ಯತೆ ಇದೆ ಅಥವಾ ಸುಂದರ ಪ್ರದೇಶಗಳ ವೀಕ್ಷ ಣೆಗಾಗಿ ಸಮಯವನ್ನು ಮೀಸಲಿಡುವಿರಿ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಮನಸ್ಸಿಗೆ ಮುದ ನೀಡುವುದು. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. 8050559094 ಅದೃಷ್ಟ ಸಂಖ್ಯೆ:5

ಕನ್ಯಾ
ಹಲಸಿನ ಹಣ್ಣನ್ನು ಸೂಜಿಯಿಂದ ಕತ್ತರಿಸಲು ಆಗುವುದಿಲ್ಲ. ಅದಕ್ಕೆ ಹರಿತವಾದ ಚಾಕು ಬೇಕಾಗುತ್ತದೆ. ಹಾಗಾಗಿ ನಿಮ್ಮ ವಿರೋಧಿಗಳನ್ನು ಎದುರಿಸಲು ಸೌಮ್ಯತೆ ಸಾಕಾಗುವುದಿಲ್ಲ. ನೀವು ಕೂಡಾ ಕೆಲವೊಮ್ಮೆ ರೋಷಾವೇಶ ವ್ಯಕ್ತಪಡಿಸಬೇಕಾಗುವುದು. ಪ್ರತಿಯೊಂದು ಕಾರ್ಯದಲ್ಲೂ ಅಡೆತಡೆ ಉಂಟಾಗುತ್ತಿದೆ ಎಂಬ ಭಾವನೆಯಿದ್ದಲ್ಲಿ ಮಾತಾ ದುರ್ಗಾದೇವಿಯನ್ನು ಪ್ರಾರ್ಥಿಸಿ. ಬಡವರಿಗೆ ಆಹಾರ ನೀಡಿ. ಪ್ರಯಾಣ ಕಾಲದಲ್ಲಿ ಸ್ವಲ್ಪ ಉದ್ದಿನಕಾಳುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.8050559094 ಅದೃಷ್ಟ ಸಂಖ್ಯೆ:4

ತುಲಾ
ಗುರುತರವಾದ ಆರೋಪದ ಬಗ್ಗೆ ವಿರೋಧಿಗಳು ಜೇಡರ ಬಲೆಯನ್ನು ರಚಿಸುತ್ತಿದ್ದಾರೆ ಮತ್ತು ಅದರಲ್ಲಿ ಸಿಕ್ಕಿ ಹಾಕಿ ಕೊಳ್ಳುವಂಥ ಸಂದರ್ಭವನ್ನು ಸೃಷ್ಟಿಸುತ್ತಿರುವರು. ಈ ಬಗ್ಗೆ ಎಚ್ಚರಕೆ ಇರಲಿ. ಗುರುವಿನ ಮಂತ್ರವನ್ನು ಜಪಿಸಿ.ಗೃಹಸಂಬಂಧಿ ಬಿಕ್ಕಟ್ಟುಗಳು ಹೊರಬರದಂತೆ ನಿಗಾ ವಹಿಸಿ. ಬಾಳ ಸಂಗಾತಿ ಯೊಂದಿಗೆ ಮನಸ್ತಾಪ ಬೇಡ. ಅವರು ಮನೆತನದ ವಿಚಾರವಾಗಿ ಬಹು ಹೋರಾಟ ಮಾಡುತ್ತಿರುವರು. ಅವರ ವಿಚಾರಧಾರೆಗಳನ್ನು ಗೌರವಿಸಿ ಆದರಿಸಿ.8050559094 ಅದೃಷ್ಟ ಸಂಖ್ಯೆ:8

ವೃಶ್ಚಿಕ
ನಿಮ್ಮ ಮನಸ್ಸಂಕಲ್ಪಗಳ ಪ್ರಕಾರದಂತೆಯೇ ಜೀವನ ಮುಂದು ವರಿಸಬೇಕೆಂಬ ಹಠ ಬೇಡ. ಎಲ್ಲಾ ಭಾನುವಾರವೂ ರಜಾ ದಿನವಾಗಿರಬಹುದು. ಆದರೆ ಎಲ್ಲಾ ರಜಾ ದಿನಗಳು ಭಾನುವಾರ ಆಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ವ್ಯವಹರಿಸುವಾಗ ತಾಳ್ಮೆಯಿರಲಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು. ಅವರ ಕೆಲವು ತಪ್ಪುಗಳನ್ನು ಮನ್ನಿಸಿ ಅವರ ಮೇಲೆ ಪ್ರೀತಿ ಕರುಣೆ ತೋರಿ. ಇದರಿಂದ ಅವರು ನಿಮ್ಮ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುಕೂಲವಾಗುವುದು.8050559094 ಅದೃಷ್ಟ ಸಂಖ್ಯೆ:6

ಧನುಸ್ಸು
ಆಧುನಿಕ ಮನೋಭಾವದಿಂದ ನಿಮ್ಮ ಮನೆಯ ಮಂಗಳ ಕಾರ್ಯಗಳಿಗೆ ಗ್ರೀನ್ ಸಿಗ್ನಲ್ ತೋರುವಿರಿ. ಆದಾಗ್ಯೂ ಈ ವಿಷಯದಲ್ಲಿ ಬಂಧು ಮಿತ್ರರೊಡನೆ ಸೌಹಾರ್ದಯುತವಾಗಿ ಚರ್ಚಿಸಿ ಕಾರ್ಯವನ್ನು ಹಮ್ಮಿಕೊಳ್ಳಿ.ಪದೇ ಪದೆ ದೇಹಾಲಸ್ಯ, ಅನಾರೋಗ್ಯಗಳಿದ್ದರೆ ತುಸು ವಿಶ್ರಾಂತಿ ಪಡೆಯಿರಿ. ವೈದ್ಯರ ಸಲಹೆಯಂತೆ ಸಕಾಲದಲ್ಲಿ ಔಷಧೋಪಚಾರ ತೆಗೆದುಕೊಳ್ಳಿ. ಇದರಿಂದ ಒಳಿತಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ಕುಲದೇವರನ್ನು ಪ್ರಾರ್ಥನೆ ಮಾಡಿ. 8050559094 ಅದೃಷ್ಟ ಸಂಖ್ಯೆ:4

ಮಕರ
ಎದುರಾಳಿಗಳು ವೃಥಾ ವಾದ ಮಾಡಿ ನಿಮ್ಮ ದಿಕ್ಕನ್ನು ತಪ್ಪಿಸುವ ಸಾಧ್ಯತೆ ಇದೆ. ಆದರೆ ಆತ್ಮವಿಶ್ವಾಸದಿಂದ ನೀವು ಅಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸುವಿರಿ. ಕೀಳರಿಮೆ ಬಿಟ್ಟು ಎಲ್ಲರೊಂದಿಗೂ ಬೆರೆಯಿರಿ. ಅದು ಹೆಚ್ಚು ಕ್ರಿಯಾಶೀಲತೆ ತಂದು ಕೊಡುವುದು.ಜೀವನ ನಿಂತ ನೀರಾಗಿದೆ ಏನೇ ಮಾಡಿದರೂ ನೆಮ್ಮದಿ ಇಲ್ಲ ಎಂಬ ಭಾವನೆ ತೊರೆದು ಮುನ್ನುಗ್ಗಿ. ಧೈರ್ಯ ಶಾಲಿಗೆ ಭಗವಂತನೂ ಸಹಾಯ ಮಾಡುವನು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು. 8050559094 ಅದೃಷ್ಟ ಸಂಖ್ಯೆ:8

ಕುಂಭ
ಜನ್ಮಸ್ಥ ಶನಿಯು ಆಲಸ್ಯವನ್ನುಂಟು ಮಾಡಿರುವನು. ಮನೆಯ ಎಲ್ಲೆಡೆ ರಾಶಿ ಬಿದ್ದ ಹಳೆಯ ಕಾಗದ, ಮರಮುಟ್ಟು ಮತ್ತು ತ್ಯಾಜ್ಯ ವಸ್ತುಗಳನ್ನು ಗುಜರಿಗೆ ಹಾಕಿ ಮನೆಯನ್ನು ಶುದ್ಧಿ ಮಾಡಿಕೊಳ್ಳಿ. ಜೀವನದಲ್ಲಿ ಲವಲವಿಕೆ ಮೂಡುವುದು.ಹಳೆ ಕಾಲದಿಂದ ನಡೆದು ಬರುತ್ತಿರುವ ಕುಟುಂಬ ಸಂಪ್ರದಾಯದ ಬಗ್ಗೆ ಗಮನ ಹರಿಸಿ. ಗುರುವಿನ ಶುಭ ಸಂಚಾರದಿಂದಾಗಿ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವವು. ಕೆಲವರಿಗೆ ಸಂತತಿ ಭಾಗ್ಯ ಉಂಟಾಗುವುದು.8050559094 ಅದೃಷ್ಟ ಸಂಖ್ಯೆ:2

ಮೀನ
ಸದಾ ಕ್ರಿಯಾಶೀಲ ವ್ಯಕ್ತಿ ಆಗಿರುವ ನೀವು ವಿವಿಧ ರಂಗದಲ್ಲಿ ಮುಂಚೂಣಿಯಲ್ಲಿರುತ್ತೀರಿ. ಇದರಿಂದ ನಿಮ್ಮ ಮೇಲಧಿಕಾರಿಗಳು ನಿಮ್ಮ ಬಗ್ಗೆ ಗೌರವ ಪ್ರೀತಿ ತೋರುವರು. ಆದರೆ ಹಣಕಾಸಿನ ಪರಿಸ್ಥಿತಿಯು ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಜಮೀನಿನ ವಿಷಯದಲ್ಲಿ ಒಂದು ರಾಜಿಸೂತ್ರವನ್ನು ಮಧ್ಯವರ್ತಿಗಳು ತರುವರು. ಅದನ್ನು ಒಂದೇ ಮನಸ್ಸಿನಿಂದ ಒಪ್ಪಿಕೊಳ್ಳಿ. ಇದರಿಂದ ನಿಮ್ಮ ಮುಂದಿನ ಕಾರ್ಯಗಳಿಗೆ ಒಳಿತಾಗುವುದು.8050559094 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 8050559094 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 8050559094 call/ whatsapp



Click it and Unblock the Notifications











