Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮುಖ ನೋಡಿದ ತಕ್ಷಣ ನಿಮ್ಮ ಮದುವೆ ಬಗ್ಗೆ ಹೇಳಬಹುದು!
ಇಂದಿನ ದಿನಗಳಲ್ಲಿ ಹೆಚ್ಚಾಗಿ ಪುರುಷರು ಹಾಗೂ ಮಹಿಳೆಯರು ಮದುವೆಯಾಗುವ ವಯಸ್ಸು 25ರ ಬಳಿಕ. ಯಾಕೆಂದರೆ ಅವರು ತಮ್ಮ ಉದ್ಯೋಗದಲ್ಲಿ ಒಂದು ನೆಲೆ ಕಂಡುಕೊಳ್ಳಲು ಬಯಸುವರು ಮತ್ತು ಅದೇ ರೀತಿಯಾಗಿ ತಮ್ಮ ಗುರಿ ಸಾಧನೆ ಮಾಡಿದ ಬಳಿಕ ಮದುವೆಯ ಬಗ್ಗೆ ಆಲೋಚನೆ ಮಾಡುವರು. ಹೀಗಾಗಿ ಹೆಚ್ಚಿನವರು ಮದುವೆಯು ವಿಳಂಬವಾಗುವುದು. ಮದುವೆ ವಿಳಂಬವಾಗುವ ಕಾರಣದಿಂದಾಗಿ ಹಲವಾರು ಸಮಸ್ಯೆಗಳು ಬರಬಹುದು. ಆದರೆ ಈ ಲೇಖನದಲ್ಲಿ ನಾವು ಚರ್ಚಿಸಲು ಹೊರಟಿರುವುದು ಮದುವೆ ವಿಳಂಬವಾಗುವ ಬಗ್ಗೆ. ಮದುವೆ ವಿಳಂಬವಾಗುತ್ತದೆ ಎಂದು ನಿಮ್ಮ ಮುಖವನ್ನು ನೋಡಿ ಹೇಳಬಹುದಂತೆ! ಹೌದು, ಚೀನಾದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಖ ನೋಡಿಕೊಂಡು ನಿಮಗೆ ಮದುವೆ ವಿಳಂಬವಾಗಲಿದೆಯಾ ಎಂದು ಹೇಳಬಹುದು. ಇದನ್ನು ನಾವು ಮುಖದ ಶಾಸ್ತ್ರವೆಂದು ಹೇಳಬಹುದು. ಚೀನಾದ ಮುಖ ಓದುವವರ ಪ್ರಕಾರ ಕೆಲವೊಂದು ವಿಚಾರಗಳಿಂದ ಮದುವೆ ವಿಳಂಬವಾಗುವ ಬಗ್ಗೆ ತಿಳಿದುಕೊಳ್ಳಬಹುದು. ಇದು ಹೇಗೆ ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ದಪ್ಪ, ನೇರ ಮತ್ತು ಕಠಿಣ ಕೂದಲು
ಚೀನಾದ ಮುಖಶಾಸ್ತ್ರಜ್ಞರ ಪ್ರಕಾರ ವ್ಯಕ್ತಿಯೊಬ್ಬನ ಕೂದಲು ತುಂಬಾ ದಪ್ಪವಾಗಿದ್ದರೆ ಅದು ನೇರವಾಗಿ ರಕ್ತಕ್ಕೆ ಸಂಬಂಧಿಸಿದ್ದಾಗಿದೆ. ದಪ್ಪಗಿನ ಕೂದಲು ಇರುವಂತಹ ವ್ಯಕ್ತಿಗಳು ಯಾವುದಕ್ಕೂ ಬಗ್ಗದ ವ್ಯಕ್ತಿಗಳಾಗಿರುವರು. ಈ ಹಿನ್ನೆಲೆಯಲ್ಲಿ ಅವರು ಮದುವೆಯು ವಿಳಂಬವಾಗುವುದು. ಕೂದಲು ನೇರ ಮತ್ತು ಕಠಿಣವಾಗಿದ್ದರೂ ಇದು ಮದುವೆ ವಿಳಂಬದ ಸೂಚನೆಯಾಗಿದೆ ಎಂದು ಚೀನಾದ ಮುಖ ಶಾಸ್ತ್ರಜ್ಞ ಯಾಂಗ್ ಅವರು ಹೇಳುತ್ತದೆ. ಕೂದಲು ದಪ್ಪ, ನೇರ ಮತ್ತು ಒರಟಾಗಿದ್ದರೆ ಅದು ಪುರುಷರು ಹಾಗೂ ಮಹಿಳೆಯರಲ್ಲಿ ವಿಳಂಬ ಮದುವೆಯ ಲಕ್ಷಣಗಳಾಗಿವೆ.

ಚಾಚಿಕೊಂಡಿರುವ ಹಣೆ
ಚೀನಾದ ಮುಖ ಶಾಸ್ತ್ರಜ್ಞರ ಪ್ರಕಾರ ಹಣೆಯು ಐದು ಅಂಶಗಳಿಂದ ಅಗ್ನಿಯನ್ನು ಸಂಬಂಧಿಸಿದ್ದಾಗಿದೆ. ಈ ಕಾರಣದಿಂದಾಗಿ ಮುಂದಿನ ಭಾಗ ಅಥವಾ ಬದಿಯಲ್ಲಿ ಚಾಚಿಕೊಂಡಿರುವ ಹಣೆಯಿದ್ದರೆ ಅಂತಹ ವ್ಯಕ್ತಿಗಳಲ್ಲಿ ಹೆಚ್ಚಿನ ಅಗ್ನಿಯಂಶ ಇದೆ ಎಂದು ಹೇಳಬಹುದು. ಇಂತಹ ಹಣೆ ಹೊಂದಿರುವಂತಹ ಮಹಿಳೆಯರು ಯಾವಾಗಲೂ ಪುರುಷರಲ್ಲಿ ಮಾನಸಿಕ ಖಿನ್ನತೆ ಉಂಟು ಮಾಡುವರು. ಇದರ ಪರಿಣಾಮವಾಗಿ ಅವರ ಮದುವೆ ಮತ್ತು ಸಂಬಂಧದ ಮೇಲೆ ಪರಿಣಾಮ ಬೀರುವುದು.
Most Read: ಈತ ಐದು ದಿನ ಹಿಂದಿನ ಹಳಸಿದ ಆಹಾರ ತಿಂದು ಸೋಂಕು ತಗುಲಿ ಸಾವನ್ನಪ್ಪಿದ!

ದೊಡ್ಡ ಹಣೆ
ದೊಡ್ಡ ಹಣೆ ಇದ್ದರೂ ಇದು ಹೆಚ್ಚಿನ ಅಗ್ನಿ ಮತ್ತು ಬದಲಾಗುವಂತಹ ಮನಸ್ಥಿತಿಯ ಲಕ್ಷಣವಾಗಿರುವುದು. ಇಂತಹ ಹಣೆ ಹೊಂದಿರುವಂತಹ ವ್ಯಕ್ತಿಗಳು ಆಯ್ಕೆಯಲ್ಲಿ ತುಂಬಾ ನಿಷ್ಕ್ರೀಯರಾಗಿರುವರು ಮತ್ತು ಈ ಕಾರಣದಿಂದಾಗಿ ಅವರು ಮದುವೆ ವಿಚಾರದಲ್ಲಿ ತುಂಬಾ ವಿಳಂಬ ಮಾಡುವರು.

ತೆಳುವಾದ ಹುಬ್ಬುಗಳು
ತುಂಬಾ ಸಣ್ಣ ಹಾಗೂ ತೆಳು ಹುಬ್ಬು ಹೊಂದಿರುವಂತಹ ವ್ಯಕ್ತಿಗಳು ಸಾಮಾನ್ಯವಾಗಿ ತಾಳ್ಮೆ ಮತ್ತು ಜೀವನದಲ್ಲಿ ಮುಂದೆ ಸಾಗದಿರುವ ವ್ಯಕ್ತಿಗಳು. ಆದರೆ ಇವರು ಸಂಬಂಧಕ್ಕೆ ತುಂಬಾ ಅರ್ಪಿಸಿಕೊಂಡಿರುವರು. ಇದೇ ಕಾರಣದಿಂದಾಗಿ ಇವರು ಸೋದರತೆ, ಮಕ್ಕಳು ಅಥವಾ ಮದುವೆಯನ್ನು ತುಂಬಾ ಸಾಮಾನ್ಯವೆಂದು ಪರಿಗಣಿಸುವರು ಮತ್ತು ಇದರಿಂದ ಮದುವೆ ವಿಳಂಬ ಮಾಡುವರು.

ತುಂಬಾ ದಪ್ಪಗಿನ ಹುಬ್ಬುಗಳು
ತುಂಬಾ ದಪ್ಪಗಿನ ಹುಬ್ಬುಗಳು ಇರುವಂತಹ ವ್ಯಕ್ತಿಗಳು ಪ್ರತಿಯೊಂದು ವಿಚಾರದ ಬಗ್ಗೆಯೂ ಅತಿಯಾಗಿ ಆಲೋಚನೆ ಮಾಡುವರು. ಅನಗತ್ಯ ಅಥವಾ ಅತಿಯಾಗಿ ವರ್ಣಿಸಿದ ವಿಚಾರಗಳನ್ನು ಅವರು ಹಾಗೆ ಬಿಟ್ಟು ಬಿಡಲಾರರು. ಇದರ ಪರಿಣಾಮವಾಗಿ ಅವರು ಹಲವಾರು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವರು ಮತ್ತು ಇದರಿಂದಾಗಿ ಅವರ ಮದುವೆಯು ವಿಳಂಬವಾಗುವುದು.



Click it and Unblock the Notifications
