Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಈತ ಐದು ದಿನ ಹಿಂದಿನ ಹಳಸಿದ ಆಹಾರ ತಿಂದು ಸೋಂಕು ತಗುಲಿ ಸಾವನ್ನಪ್ಪಿದ!
ಒಳ್ಳೆಯ ಆಹಾರ ತಿಂದರೂ ಅದು ಹೊಟ್ಟೆಯಲ್ಲಿ ವಿಷವಾಗುವಂತಹ ಕಾಲವಿದು. ಇನ್ನು ಹಳಸಿದ ಆಹಾರ ತಿಂದರೆ ಅವರ ಆರೋಗ್ಯ ಹೇಗಾಗಬಹುದು ಎಂದು ನೀವೇ ಒಂದು ಸಲ ಆಲೋಚನೆ ಮಾಡಿ. ಯಾಕೆಂದರೆ ಹಳಸಿದ ಆಹಾರದಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವ ಕಾರಣ ಇದು ನಮ್ಮ ದೇಹಕ್ಕೆ ವಿಷವಾಗುವುದು.
ಸರಿಯಾದ ತಾಪಮಾನ ಮತ್ತು ಪರಿಸ್ಥಿತಿಯಲ್ಲಿ ಆಹಾರವನ್ನು ಸಂರಕ್ಷಿಸಿ ಇಡದೇ ಇದ್ದರೆ ಆಗ ಅದರಿಂದ ಆಹಾರವು ಕೆಡುವುದು ಮತ್ತು ಅದು ವಿಷವಾಗುವುದು.

ಇಲ್ಲೊಬ್ಬ ವ್ಯಕ್ತಿ ಹಳಸಿದ ಸ್ಪಾಗೆಟ್ಟಿ(ಇಟಲಿಯಲ್ಲಿ ಸಿಗುವ ತೆಳುವಾದ ಪಾಸ್ತಾದಂತಹ ಆಹಾರ)ಯನ್ನು ತಿಂದು ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ಐದು ದಿನಗಳ ಹಿಂದಿನ ಹಳಸಿದ ಆಹಾರ ತಿಂದ ಪರಿಣಾಮ ಉಂಟಾದ ಸೋಂಕಿನಿಂದ ಆತ ಸಾವನ್ನಪ್ಪಿದ್ದಾನೆ. ಇದರ ಬಗ್ಗೆ ಇನ್ನಷ್ಟು ತಿಳಿಯಲು ನೀವು ಮುಂದೆ ಓದುತ್ತಾ ಸಾಗಿ...

ಘಟನೆ ನಡೆದದ್ದು 2008ರಲ್ಲಿ
ಈ ಅಪರೂಪದ ಘಟನೆಯು ನಡೆದಿರುವುದು 2008ರಲ್ಲಿ. ಆದರೆ ಇತ್ತೀಚೆಗೆ ಈ ಪ್ರಕರಣದ ಬಗ್ಗೆ ಮಾಧ್ಯಮವೊಂದು ಬೆಳಕು ಚೆಲ್ಲಿದೆ. ಐದು ದಿನಗಳ ಕಾಲ ಹಳಸಿದ ಸ್ಪಾಗೆಟ್ಟಿ ತಿಂದ ವ್ಯಕ್ತಿಗೆ ನಿಜವಾಗಿಯೂ ಏನು ಆಗಿದೆ ಎಂದು ಇಲ್ಲಿ ಬಹಿರಂಗಪಡಿಸಲಾಗಿದೆ.

ಆತನ ಗುರುತನ್ನು ಗೌಪ್ಯವಾಗಿಡಲಾಗಿದೆ
ಈ ವಿದ್ಯಾರ್ಥಿಯನ್ನು ಕೇವಲ ಎಜೆ ಎಂದು ಮಾತ್ರ ಗುರುತಿಸಲಾಗಿದೆ. ಆತನ ಗುರುತನ್ನು ಗೌಪ್ಯವಾಗಿಡಲಾಗಿದೆ. ಆತ ಹಳಸಿದ ಸ್ಪಾಗೆಟ್ಟಿ ತೀಂದ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದ. ಐದು ದಿನಗಳ ಮೊದಲು ಮಾಡಿದ್ದ ಮತ್ತು ಕೋಣೆಯ ತಾಪಮಾನದಲ್ಲಿ ಇಟ್ಟಿದ್ದ ಇದನ್ನು ಆತ ಸೇವಿಸಿದ್ದ.

ಸ್ಪಾಗೆಟ್ಟಿ ತಿನ್ನುವ ಮೊದಲು ಆತನಿಗೆ ಎಚ್ಚರಿಸಲಾಗಿತ್ತು!
ಆತ ತುಂಬಾ ಹಸಿದಿದ್ದ ಮತ್ತು ಹಳಸಿದ ಸ್ಪಾಗೆಟ್ಟಿ ತಿನ್ನುವ ಮೊದಲು ಆತನಿಗೆ ಎಚ್ಚರಿಸಲಾಗಿತ್ತು. ಆದರೆ ಆಟವಾಡಲು ತೆರಳುವ ಮೊದಲು ಆತ ಹಸಿವಾಗಿದ್ದ ಕಾರಣ ಇದನ್ನು ತಿಂದ. ಆಟವಾಡುತ್ತ ಇದ್ದ ಆತ ಅರ್ಧ ಗಂಟೆಯಲ್ಲೇ ಮನೆಗೆ ಮರಳಿದ ಮತ್ತು ಅವನ ಆರೋಗ್ಯ ಸರಿಯಿರಲಿಲ್ಲ. ಮಲಗುವುದಕ್ಕೆ ಮೊದಲು ಆತನಿಗೆ ಗಂಟೆಗಟ್ಟಲೆ ಅತಿಯಾದ ಜ್ವರದಲ್ಲಿ ಮೇಲಕ್ಕೆ ಎತ್ತಿದಂತೆ ಆಗುತ್ತಿತ್ತು.

ಮಲಗಿದ ಬಳಿಕ ಮತ್ತೆ ಏದ್ದೇಳಲಿಲ್ಲ
ಮಧ್ಯರಾತ್ರಿ ವೇಳೆ ಆತನಿಗೆ ನಿದ್ರೆ ಬಂದಿತ್ತು ಮತ್ತು ಯಾವುದೇ ರೀತಿಯ ಔಷಧಿ ಅಗತ್ಯವಿಲ್ಲವೆಂದು ಭಾವಿಸಿ ಹಾಗೆ ನಿದ್ರೆಗೆ ಜಾರಿದ. ಹಳಸಿದ ಆಹಾರ ತಿಂದ ಪರಿಣಾಮ ಆತನ ಆರೋಗ್ಯವು ಎಷ್ಟು ಕೆಟ್ಟಿದೆ ಎಂದು ಪಾಪ ಆ ಹುಡುಗನಿಗೆ ತಿಳಿಯಲೇ ಇಲ್ಲ. ಆತ ನಿದ್ರೆಯಲ್ಲೇ ಸಾವನ್ನಪ್ಪಿದ.

ಶವಪರೀಕ್ಷೆ ಬಹಿರಂಗಪಡಿಸಿತು
ಆತ ಆಹಾರ ವಿಷವಾದ ಪರಿಣಾಮ ತಕ್ಷಣವೇ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ವರದಿಯು ಹೇಳಿದೆ. ಹಳಸಿದ ಸ್ಪಾಗೆಟ್ಟಿಯಲ್ಲಿ ಇದ್ದಂತಹ ಬ್ಯಾಸಿಲಸ್ ಸೀರೆಸ್ ಎನ್ನುವ ಬ್ಯಾಕ್ಟೀರಿಯಾದಿಂದಾಗಿ ಸಾವು ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಹಳಸಿದ ಸ್ಪಾಗೆಟ್ಟಿಯಲ್ಲಿದ್ದ ಅತಿಯಾದ ಬ್ಯಾಕ್ಟೀರಿಯಾದಿಂದಾಗಿ ಲಿವರ್ ತನ್ನ ಕಾರ್ಯನಿರ್ವಹಿಸಲು ವಿಫಲವಾಗಿ ಸಾವು ಸಂಭವಿಸಿದೆ ಎಂದು ಶವಪರೀಕ್ಷೆ ವರದಿಯು ಹೇಳಿವೆ.

ಆತನಿಗೆ ದಾಳಿ ಮಾಡಿದ ಬ್ಯಾಕ್ಟೀರಿಯಾ
ಬ್ಯಾಸಿಲಸ್ ಸೀರೆಸ್ ಎನ್ನುವಂತಹ ಬೀಜಕ ಉತ್ಪತ್ತಿ ಮಾಡುವ ಬ್ಯಾಕ್ಟೀರಿಯಾವು ವಿಷವನ್ನು ಉಂಟು ಮಾಡಿದೆ. ಈ ವಿಷದಿಂದಾಗಿ ವಾಂತಿ ಮತ್ತು ಭೇದಿ ಕಾಣಿಸಿಕೊಳ್ಳುವುದು. ರೋಗಿಯು ಈ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಆಗ ಪ್ರಾಣಹಾನಿ ಸಂಭವಿಸುವಂತಹ ಸಾಧ್ಯತೆಯು ಹೆಚ್ಚಾಗಿ ಇರುವುದು. ಎಜೆ ಪ್ರಕರಣದಲ್ಲಿ ಕೂಡ ಇದೇ ರೀತಿ ಆಗಿದೆ ಎನ್ನುತ್ತವೆ ವರದಿಗಳು.

ಈ ಘಟನೆಯ ನೀತಿ
ಸರಿಯಾದ ಕ್ರಮದಲ್ಲಿ ಮತ್ತು ತುಂಬಾ ವಾಸನೆ ಉಂಟು ಮಾಡುತ್ತಿರುವಂತಹ ಆಹಾರವನ್ನು ತಿಂದರೆ ಆಗ ಅದರಿಂದ ಆರೋಗ್ಯದ ಮೇಲೆ ಪರಿಣಾಮ ಆಗುವುದು ಖಚಿತ ಎಂದು ಈ ವೈದ್ಯರು ಹೇಳುವರು.



Click it and Unblock the Notifications











