Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ತಪ್ಪಾದ ಅಭ್ಯರ್ಥಿಗೆ ಮತ ನೀಡಿರುವುದಕ್ಕೆ ತನ್ನ ಬೆರಳನ್ನೇ ಕತ್ತರಿಸಿಕೊಂಡ ವ್ಯಕ್ತಿ
ಮತದಾನ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಇರುವ ಅಮೂಲ್ಯವಾದ ಹಕ್ಕು. ಸೂಕ್ತ ಅಭ್ಯರ್ಥಿಗೆ ಬಹು ಮತ ನೀಡುವುದರ ಮೂಲಕ ಆರಿಸಿ ತರುವುದು ನಿಯಮ. ಈ ಒಂದು ಶ್ರೇಷ್ಠ ಹಕ್ಕನ್ನು ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ಅಭ್ಯರ್ಥಿಗೂ ಇರುತ್ತದೆ. ಪ್ರಜಾ ಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತಿಯೊಬ್ಬ ವಯಸ್ಕರಿಗೂ ತಮ್ಮ ನೆಚ್ಚಿನ ನಾಯಕನನ್ನು ಆರಿಸುವ ಹಕ್ಕನ್ನು ನಮ್ಮ ದೇಶದಲ್ಲಿ ನೀಡಲಾಗಿದೆ. ಮತ ನೀಡುವ ಹಕ್ಕನ್ನು ಬಳಸಿಕೊಂಡು ದೇಶದ ಅಭಿವೃದ್ಧಿಗೆ ದುಡಿಯುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಉತ್ತಮ ಉದ್ದೇಶವನ್ನು ಪ್ರತಿಯೊಬ್ಬ ಅಭ್ಯರ್ಥಿ ಹೊಂದಿರಬೇಕು.
ದೇಶ ಅಭಿವೃದ್ಧಿ ಕಾಣಬೇಕು, ಅಭಿವೃದ್ಧಿ ಹೊಂದಿರುವ ರಾಷ್ಟ್ರದಲ್ಲಿ ನಮ್ಮ ರಾಷ್ಟ್ರವೂ ಒಂದಾಗಬೇಕು, ದೇಶದಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ದೇಶದ ಪ್ರಜೆಗಳಿಗೆ ತೊಂದರೆ ಉಂಟಾಗದಂತೆ ನಿರ್ಣಯ ಕೈಗೊಳ್ಳುವಂತಹ ನಾಯಕನ ಆಯ್ಕೆ ಮಾಡಬೇಕು ಎನ್ನುವಂತಹ ಸಂಗತಿಗಳನ್ನು ಮನದಲ್ಲಿ ಇಟ್ಟುಕೊಂಡು ರಾಷ್ಟ್ರದ ನಾಯಕನ ಆಯ್ಕೆ ಆಗಬೇಕು. ಆಗಲೇ ದೇಶದಲ್ಲಿ ಅಭಿವೃದ್ಧಿ ಉಂಟಾಗುವುದು.

ದೇಶದಲ್ಲಿ ಇರುವ ಎಲ್ಲಾ ವ್ಯಕ್ತಿಗಳ ಆಯ್ಕೆ, ಮಾನಸಿಕ ಚಿಂತನೆ, ಉದ್ದೇಶ, ನಿಲುವು ಎಲ್ಲವೂ ವಿಭಿನ್ನತೆಯಿಂದ ಕೂಡಿರುತ್ತದೆ. ಹಾಗಾಗಿ ರಾಷ್ಟ್ರ ನಾಯಕರ ಆಯ್ಕೆಗಳ ವಿಚಾರದಲ್ಲಿ ಭಿನ್ನತೆಗಳು ಇರುವುದು ಸಹಜವಾಗಿರುತ್ತದೆ. ಯಾರ ಆಯ್ಕೆಯಲ್ಲಿ ಬಹುಮತ ಇರುತ್ತದೆಯೋ ಅಂತಹ ವ್ಯಕ್ತಿಗಳು ಆಯ್ಕೆಯಾಗಿ ಬರುತ್ತಾರೆ. ಅದೇ ಪ್ರಜಾ ಪ್ರಭುತ್ವ ರಾಷ್ಟ್ರದ ನಿಯಮಗಳು.
ಮತ ನೀಡುವುದು ಅಥವಾ ಮತದಾನ ಮಾಡುವುದು ಎಂದರೆ ಅತ್ಯಂತ ಮಹತ್ತರವಾದ ಕರ್ತವ್ಯ ಹಾಗೂ ಹಕ್ಕು. ಇಂತಹ ಹಕ್ಕು ಹಾಗೂ ಕರ್ತವ್ಯದಲ್ಲಿ ಯಾವುದೇ ಲೋಪ ದೋಷಗಳು ಉಂಟಾಗಬಾರದು. ಹಾಗೊಮ್ಮೆ ನಮ್ಮ ಮತದಾನ ತಪ್ಪು ಆಯ್ಕೆಯಾಗಿದ್ದರೆ. ತಪ್ಪಾದ ಅಭ್ಯರ್ಥಿಯು ಆಯ್ಕೆ ಆಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಹಾಗಾಗಿ ಪ್ರತಿ ಒಂದೊಂದು ಮತವು ಅತ್ಯಂತ ಅಮೂಲ್ಯವಾದದ್ದು. ಈ ಹಿನ್ನೆಲೆಯಲ್ಲಿಯೇ ಬ್ರಷ್ಟಾಚಾರ ಹಾಗೂ ಆಮಿಷಗಳನ್ನು ಒಡ್ಡುವ ಮೂಲಕ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುವವರೇ ಹೆಚ್ಚಾಗಿದ್ದಾರೆ.
ಇಂತಹ ವಿಚಾರದಲ್ಲಿ ಹುಬ್ಬೇರಿಸುವಂತಹ ಕೆಲಸವನ್ನು ಉತ್ತರ ಪ್ರದೇಶದ ಯುವಕನೊಬ್ಬ ಮಾಡಿದ್ದಾನೆ. ಹೌದು, ಪವನ್ ಕುಮಾರ್ ಎನ್ನುವ 25 ವರ್ಷದ ಯುವಕನೊಬ್ಬ ತಪ್ಪಾದ ವ್ಯಕ್ತಿಗೆ ಮತ ನೀಡಿದ್ದೇನೆ ಎಂದು ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ. ನೀವು ನಿಮ್ಮ ಆಯ್ಕೆಯ ಅಭ್ಯರ್ಥಿಯೇ ಆರಿಸಿ ಬರಬೇಕು, ನಮ್ಮ ರಾಷ್ಟ್ರವನ್ನು ಆಳುವ ನಾಯಕನಾಗಬೇಕು ಎನ್ನುವ ಹಂಬಲ ಇರುತ್ತದೆ. ಆದರೆ ಅದೇ ಯಾವುದೋ ಒಂದು ಸಣ್ಣ ತಪ್ಪಿನಿಂದ ನಿಮ್ಮ ಮತ ಬೇರೆ ವ್ಯಕ್ತಿಗೆ ನೀವೇ ನೀಡಿದ್ದೀದ್ದರೆ ಏನು ಮಾಡುತ್ತಿದ್ದಿರಿ? ಅಂತಹ ಸಂದರ್ಭದಲ್ಲಿ ನಿಮ್ಮ ಮಾನಸಿಕ ಚಿಂತನೆಗಳು ಹೇಗಿರುತ್ತಿದ್ದವು? ಎನ್ನುವುದರ ಬಗ್ಗೆ ಒಮ್ಮೆ ಯೋಚಿಸಿ.
ಇದೇ ರೀತಿಯ ಸನ್ನಿವೇಶ ಪವನ್ ಕುಮಾರ್ ಎನ್ನುವ ಉತ್ತರ ಪ್ರದೇಶದ ವ್ಯಕ್ತಿಗೆ ಎದುರಾಗಿತ್ತು. ತನ್ನ ಯಾವುದೋ ಒಂದು ಸಣ್ಣ ತಪ್ಪಿನಿಂದಾಗಿ ತಾನು ಅಂದುಕೊಂಡ ವ್ಯಕ್ತಿಗೆ ಮತ ನೀಡುವುದರ ಬದಲಿಗೆ ವಿರೋಧ ಪಕ್ಷದ ಅಭ್ಯರ್ಥಿಗೆ ನೀಡಿದ್ದಾನೆ. ಇದರ ಹಿನ್ನೆಲೆಯಲ್ಲಿಯೇ ಅತ್ಯಂತ ಬೇಸರಕ್ಕೆ ಒಳಗಾಗಿ ತನ್ನ ತೋರು ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಹೆಚ್ಚು ಜನರು ಇದನ್ನು ನೋಡುವುದರ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈ ಸಂಗತಿ ಹಾಗೂ ವೀಡಿಯೋ ನೋಡಿದ ಬಳಿಕ ನಿಮ್ಮ ಅಭಿಪ್ರಾಯ ಏನು ಎನ್ನುವುದರ ಬಗ್ಗೆ ಚಿಂತನೆ ನಡೆಸಿ, ಅಭಿಪ್ರಾಯ ತಿಳಿಸಿ.



Click it and Unblock the Notifications