Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಂತಾನಹರಣ ಚಿಕಿತ್ಸೆ ಮಾಡಿಸಿಯೂ ಪತ್ನಿ ಗರ್ಭಿಣಿಯಾದಳು!
ಗರ್ಭಧಾರಣೆ ಮಾಡುವುದು ತುಂಬಾ ಸಂಭ್ರಮದ ಕ್ಷಣ. ಆದರೆ ಗರ್ಭ ಧರಿಸಲು ನಿಮಗೆ ಇಷ್ಟವಿಲ್ಲದೆ ಇರುವಾಗ ಇದು ನಡೆದರೆ ಆಗ ಖಂಡಿತವಾಗಿಯೂ ಆಘಾತ ಆಗುವುದು. ಕೆಲವೊಂದು ತಡೆಗಳನ್ನು ನಿವಾರಣೆ ಮಾಡಿಕೊಂಡು ದಂಪತಿಯು ಗರ್ಭನಿರೋಧಕ ವ್ಯವಸ್ಥೆ ಮಾಡಿಕೊಳ್ಳುವರು. ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿಯೂ ಗರ್ಭ ನಿಲ್ಲದಂತೆ ಮಾಡಬಹುದು. ಒಂದೆರಡು ಮಕ್ಕಳಾದ ಬಳಿಕ ಮಹಿಳೆಯು ಗರ್ಭ ನಿಲ್ಲದಂತೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವಳು ಅಥವಾ ಪುರುಷ ಕೂಡ ಹಾಗೆ ಮಾಡಬಹುದು.

ಆದರೆ ಇಂತಹ ಮುನ್ನೆಚ್ಚರಿಕೆ ಕ್ರಮಗಳು ವಿಫಲವಾದರೆ ಆಗ ಏನು ಮಾಡಬೇಕು ಮತ್ತು ನೀವು ಮುನ್ನೆಚ್ಚರಿಕೆ ವಹಿಸಿಯೂ ಗರ್ಭಧಾರಣೆ ಮಾಡಿದರೆ? ಪುರುಷನು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಾನೆ. ಆದರೂ ಆತನ ಪತ್ನಿ ಮಾತ್ರ ಗರ್ಭಧರಿಸಿದರೆ ಆಗ ಹೇಗಾಗಬಹುದು ಎಂದು ಊಹಿಸಿ. ಈ ಸಂಪೂರ್ಣ ಘಟನೆ ಬಗ್ಗೆ ನೀವು ಓದಿಕೊಳ್ಳಿ.

ಇನ್ನು ಮಕ್ಕಳು ಬೇಡ ಎಂದು ದಂಪತಿ ನಿರ್ಧರಿಸಿದರು
ತೈಪೇಯಿಯ ದಂಪತಿಗೆ ಅದಾಗಲೇ ಮೂರು ಮಂದಿ ಮಕ್ಕಳಿದ್ದ ಕಾರಣದಿಂದಾಗಿ ಇನ್ನು ಮುಂದೆ ಮಕ್ಕಳು ಬೇಡ ಎಂದು ನಿರ್ಧಾರ ಮಾಡಿಬಿಟ್ಟರು ಮತ್ತು ಇನ್ನು ಹೆಚ್ಚು ಮಕ್ಕಳನ್ನು ಸಾಕಲು ಅವರಿಗೆ ಸಾಧ್ಯವಿರಲಿಲ್ಲ.

ಸಂತಾನಹರಣ ಚಿಕಿತ್ಸೆ ಮಾಡಲು ದಂಪತಿ ನಿರ್ಧರಿಸಿದರು
ದಂಪತಿಯು ಸಂತಾನಹರಣ ಚಿಕಿತ್ಸೆ ಮಾಡಲು ನಿರ್ಧಾರ ಮಾಡಿದರು. ಇದರಿಂದ ಲೈಂಗಿಕ ಜೀವನವನ್ನು ಹೆಚ್ಚು ಆನಂದಿಸಲು ಪುರುಷನು ಸಂತಾನಹರಣ ಚಿಕಿತ್ಸೆಗೆ ಮುಂದಾದ.

ದಂಪತಿಗೆ ಆಘಾತ ಕಾದಿತ್ತು
ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಎರಡು ವರ್ಷಗಳ ಬಳಿಕ ಪತ್ನಿ ಮತ್ತೆ ಗರ್ಭಿಣಿಯಾಗಿದ್ದಳು. ಸಂತಾನಹರಣ ಚಿಕಿತ್ಸೆಯು ವಿಫಲವಾಗಿದೆ ಮತ್ತು ಗರ್ಭಧಾರಣೆಯನ್ನು ಮುಂದುವರಿಸಲು ಅವರು ನಿರ್ಧಾರ ಮಾಡಿದರು.

ವೈದ್ಯರು ವಿಭಿನ್ನ ಸಂಶೋಧನೆ ಮಾಡಿದರು
ಸ್ತ್ರೀರೋಗ ತಜ್ಞರು ಸಂತಾನಹರಣ ಚಿಕಿತ್ಸೆ ವಿಫಲವಾಗಿದೆ ಮತ್ತು ಮೂತ್ರ ತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದರು. ಈ ಪರೀಕ್ಷೆ ಮಾಡಿಸಿಕೊಂಡ ವೇಳೆ ಅವರಿಗೆ ದೊಡ್ಡ ಆಘಾತ ಕಾದಿತ್ತು. ಯಾಕೆಂದರೆ ಆ ವ್ಯಕ್ತಿಯ ವೀರ್ಯಗಳು ತುಂಬಾ ಬಲಿಷ್ಠವಾಗಿದ್ದವು ಮತ್ತು ಇದರಿಂದ ಅದು ತುಂಬಾ ಚೆನ್ನಾಗಿ ಈಜಿಕೊಂಡು ಹೋಗಿ ಪತ್ನಿಯನ್ನು ಗರ್ಭಿಣಿಯನ್ನಾಗಿ ಮಾಡಿದೆ.



Click it and Unblock the Notifications
