Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ನಕಲಿ ಫೋಟೋಗಳು-ಇದನ್ನೆಲ್ಲಾ ನಂಬಬೇಡಿ!!
ಇಂಟರ್ನೆಟ್ ನಲ್ಲಿ ಎಷ್ಟು ಸತ್ಯವಿದೆಯೋ ಅಷ್ಟೇ ಸುಳ್ಳು ಇದೆ. ಹೀಗಂತ ಸಾಮಾಜಿಕ ಜಾಲತಾಣಗಳು ಹೆಚ್ಚಾಗುತ್ತಾ ಇರುವಂತೆ ಫೋಟೊಶಾಪ್ ಮಾಡಲ್ಪಟ್ಟಿರುವಂತಹ ಹಲವಾರು ವಿಡಿಯೋ ಹಾಗೂ ಫೋಟೊಗಳು ನಮಗೆ ಕಾಣಸಿಗುವುದು. ಇದು ಸತ್ಯವೋ ಅಥವಾ ಸುಳ್ಳೋ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟ. ಜನರು ಕೂಡ ಕೆಲವೊಮ್ಮೆ ಇದು ಸತ್ಯವೆಂದು ನಂಬಿ ಅದನ್ನು ಫಾರ್ವಡ್ ಮಾಡುವರು.
ಕೆಲವು ಫೋಟೊಗಳು ತುಂಬಾ ತಮಾಷೆಯಾಗಿ ಇರುವುದು. ಇದನ್ನು ಫೋಟೊಶಾಪ್ ಮಾಡಿದವರಿಗೆ ನಿಜವಾಗಿಯೂ ಒಂದು ಸೆಲ್ಯೂಟ್ ಹೊಡೆಯಬೇಕು. ಯಾಕೆಂದರೆ ಅದು ನೈಜವೆನ್ನುವಂತೆ ಅವರು ನಿರ್ಮಿಸಿರುವರು. ಇಂತಹ ಫೋಟೊಗಳು ತುಂಬಾ ವೈರಲ್ ಆಗುವುದು. ನೀವು ಕೂಡ ಇಂತಹ ಎಷ್ಟೋ ಫೋಟೊಗಳನ್ನು ನೋಡಿರಬಹುದು. ಕೆಲವು ನಕಲಿ ಫೋಟೊಗಳು ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ...

ಸಿಂಹವು ಸಿಟಿ ಸ್ಕ್ಯಾನ್ ಯಂತ್ರದೊಳಗೆ ಹೋಗುತ್ತಿರುವುದು!
ಈ ಚಿತ್ರವು 1970ರದ್ದು. ಈ ಚಿತ್ರವನ್ನು ಸಿನಿಮಾ ನಿರ್ಮಾಣ ಕಂಪೆನಿಯು ತನ್ನ ಬಗ್ಗೆ ಹೇಳಿಕೊಳ್ಳಲು ಬಳಸಿಕೊಳ್ಳಲಾಗುತ್ತಿತ್ತು.

ಇದು ಖಂಡಿತವಾಗಿಯೂ ಎಡಿಟ್ ಮಾಡಲ್ಪಟ್ಟಿರುವ ಫೋಟೋ
ಇದು ತುಂಬಾ ಪಾಪದ ಬೆಕ್ಕು. ಆದರೆ ಫೋಟೊಶಾಪ್ ಕರಾಮತ್ತು ಹೇಗಿದೆ ಅಂದರೆ ಅದಕ್ಕೆ ಒಂದು ಬಿಳಿ ಹುಬ್ಬನ್ನು ಅಳವಡಿಸಿ, ಬೆಕ್ಕು ಗುರಾಯಿಸುವಂತೆ ಮಾಡಲಾಗಿದೆ.

9/11 ನ ನಕಲಿ ಚಿತ್ರ, ಇದನ್ನು ನಾವು ನಿಜವೆಂದೇ ನಂಬಿದ್ದೆವು!
9//11 ದಾಳಿಗೆ ಕೆಲವೇ ಕ್ಷಣಗಳ ಮೊದಲು ಪ್ರವಾಸಿಯೊಬ್ಬ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುವ ಚಿತ್ರವನ್ನು ನಾವೆಲ್ಲರೂ ನಿಜವೆಂದೇ ನಂಬಿದ್ದೆವು. ಆದರೆ ಇದು ನಕಲಿ ಫೋಟೊ!

ಸ್ಫೋಟದ ವೇಳೆ ಐನ್ ಸ್ಟೈನ್ ಸೈಕಲ್ ಚಲಾಯಿಸುತ್ತಿರುವುದಲ್ಲ!
ಬಾಂಬ್ ಸ್ಫೋಟದ ವೇಳೆ ಐನ್ ಸ್ಟೈನ್ ಸೈಕಲ್ ಚಲಾಯಿಸುತ್ತಿರುವುದು ನಿಜವಾದ ಫೋಟೊ ಅಲ್ಲ. ಈ ಫೋಟೊವನ್ನು ಎರಡು ಫೋಟೊಗಳನ್ನು ಜೋಡಿಸಿಕೊಂಡು ತಯಾರು ಮಾಡಲಾಗಿದೆ.

ಈ ಬಾಹ್ಯಾಕಾಶ ನೌಕೆ ಕೂಡ ನಕಲಿ!
ಈ ಬಾಹ್ಯಾಕಾಶ ನೌಕೆ ಕೂಡ ನಕಲಿಯಾಗಿದೆ. ಆದರೆ ಇದನ್ನು ಫೋಟೊಶಾಪ್ ನಲ್ಲಿ ಎಡಿಟ್ ಮಾಡಿದ ವ್ಯಕ್ತಿಗೆ ಸಲಾಂ. ಯಾಕೆಂದರೆ ಈ ಚಿತ್ರವನ್ನು ನೋಡಿದಾಗ ಇದರಲ್ಲಿ ನೈಜ ಯಾವುದು ಮತ್ತು ನಕಲಿ ಯಾವುದು ಎಂದು ತಿಳಿಯುವುದು ತುಂಬಾ ಕಠಿಣವಾಗಿದೆ.

ಈ ಪುರಾತನ ಚಿತ್ರವು ಪ್ರತೀ ವರ್ಷ ದೀಪಾವಳಿ ವೇಳೆ ಪ್ರಸಾರವಾಗುತ್ತಿರುವುದು!
ದೀಪಾವಳಿ ವೇಳೆ ನಾಸಾವು ಬಿಡುಗಡೆ ಮಾಡಿರುವಂತಹ ಚಿತ್ರವು ಇದಾಗಿದೆ ಎಂದು ನಾವೆಲ್ಲರೂ ನಂಬಿದ್ದೆವು. ಆದರೆ ಇದು ನಕಲಿ ಚಿತ್ರ ಎಂದು ನೀವು ನಂಬಲೇಬೇಕು.

ಇಂತಹ ಜಿರಾಫೆ ಭೂಲೋಕದಲ್ಲೇ ಇಲ್ಲ!
ದನದ ರೀತಿಯಲ್ಲಿ ಇರುವಂತಹ ಈ ಜಿರಾಫೆ ತುಂಬಾ ಸುಂದರವಾಗಿ ಕಾಣಿಸುವುದು. ಆದರೆ ದುರಾದೃಷ್ಟದಿಂದ ಇದು ನಕಲಿ ಚಿತ್ರ.
Most Read: ಋತುಚಕ್ರದ ರಕ್ತವನ್ನು ತನ್ನ ಮುಖಕ್ಕೆ ಹಾಗೂ ಮೈಗೆ ಸವರಿಕೊಂಡ ಮಹಿಳೆ!

ಇದು ಎಡಿಟ್ ಮಾಡಲ್ಪಟ್ಟಿರುವುದು ಎಂದು ಸ್ಪಷ್ಟ!
ಈ ಚಿತ್ರವು ನಿಜವಲ್ಲವೆಂದು ನೀವು ಊಹೆ ಮಾಡಿದ್ದೀರಾ? ಇದು ತುಂಬಾ ಭಿನ್ನವಾಗಿದ್ದರೂ ನಕಲಿ ಎನ್ನುವುದಂತೂ ನಿಜ.

ಇದು ಖಂಡಿತವಾಗಿಯೂ ಬಣ್ಣ ಹಚ್ಚುವ ಸ್ಪರ್ಧೆಯಲ್ಲ!
ನೀವು ಖಂಡಿತವಾಗಿಯೂ ಈ ರೀತಿಯ ಸಿಂಹ ಎಲ್ಲಿಯೂ ನೋಡಲಾರಿರಿ. ಕಪ್ಪು ಸಿಂಹವು ಇಲ್ಲವೆಂದು ಎಲ್ಲರಿಗೂ ತಿಳಿದಿದೆ. ಇದು ಬಿಳಿ ಸಿಂಹಕ್ಕೆ ಕಪ್ಪು ಬಣ್ಣ ಹಚ್ಚಿರುವುದು. ಇದನ್ನು ಪೈಂಟಿಂಗ್ ಸ್ಪರ್ಧೆಗೆ ಕಳುಹಿಸಬಹುದು!

ಇದು ಖಂಡಿತವಾಗಿಯೂ ಅದ್ಭುತ ಕ್ರಿಯಾತ್ಮಕತೆ!
ಈ ಚಿತ್ರವು ಎರಡು ಚಿತ್ರಗಳ ಮಿಶ್ರಣವಾಗಿದೆ. ಬಂಡೆಕಲ್ಲಿನ ಮೇಲೆ ಕೋಟೆಯೊಂದು ಇರುವುದು ನಕಲಿ. ಆದರೆ ಈ ಚಿತ್ರವನ್ನು ನೈಜ ಚಿತ್ರದಂತೆ ಮಾಡಿರುವಂತಹ ವ್ಯಕ್ತಿಯನ್ನು ನಾವು ಪ್ರಶಂಸೆ ಮಾಡಲೇಬೇಕಾಗಿದೆ.



Click it and Unblock the Notifications
