Latest Updates
-
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ?
ಋತುಚಕ್ರದ ರಕ್ತವನ್ನು ತನ್ನ ಮುಖಕ್ಕೆ ಹಾಗೂ ಮೈಗೆ ಸವರಿಕೊಂಡ ಮಹಿಳೆ!
ಯಾರಾದರೂ ದೇಹಕ್ಕೆ ರಕ್ತ ಸವರಿಕೊಳ್ಳುವುದನ್ನು ನೋಡಿದರೆ ಆಗ ನಮಗೆ ನಡುಕ ಉಂಟಾಗುವುದು. ಅದನ್ನು ನೋಡಿದರೆ ನಮಗೆ ಏನೋ ಒಂದು ರೀತಿಯಲ್ಲಿ ಭಯ ಮೂಡುವುದು. ಯಾಕೆಂದರೆ ಸಾಮಾನ್ಯವಾಗಿ ಮನಸ್ಥಿತಿಯು ಸರಿಯಾಗಿರುವಂತಹ ವ್ಯಕ್ತಿಯು ಈ ಕೆಲಸ ಮಾಡಲು ಹಿಂಜರಿಯುವರು. ಆದರೆ ಇಲ್ಲೊಬ್ಬರು ಮಹಿಳೆಯು ಋತುಚಕ್ರದ ರಕ್ತವನ್ನು ತನ್ನ ದೇಹಕ್ಕೆ ಸವರಿಕೊಳ್ಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗಿರ ಬಹುದು. ಡೆಮಾಟ್ರಾ ನೆಕ್ಸ್ ಎನ್ನುವ ಮಹಿಳೆಯು ತನ್ನ ಋತುಚಕ್ರದ ರಕ್ತದ ನಿಜವಾದ ಫೋಟೊವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಆಕೆ ಈ ರಕ್ತವನ್ನು ತನ್ನ ಮುಖ ಮಾತ್ರವಲ್ಲದೆ, ಸಂಪೂರ್ಣ ದೇಹಕ್ಕೂ ಸವರಿಕೊಂಡಿದ್ದಾರೆ. ಈ ವಿಚಿತ್ರ ಘಟನೆ ಬಗ್ಗೆ ನೀವು ಮುಂದಕ್ಕೆ ಓದಿಕೊಳ್ಳಿ

ಆಕೆ ಗರ್ಭನಿರೋಧಕ ಮಾತ್ರೆ ಸೇವಿಸುತ್ತಿದ್ದಳು!
ಆಕೆ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರು. ಇದರಿಂದಾಗಿ ಆಕೆ ತನ್ನ ಋತುಚಕ್ರದ ಬಗ್ಗೆ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆಕೆ ತನ್ನ ಋತುಚಕ್ರದ ರಕ್ತ ಸಂಗ್ರಹಿಸಲು ಆರಂಭಿಸಿದರು ಮತ್ತು ಒಂದು ದಿನ ಆಕೆ ಈ ರಕ್ತವನ್ನು ತನ್ನ ಮುಖ ಹಾಗೂ ಸಂಪೂರ್ಣ ದೇಹಕ್ಕೆ ಸವರಿಕೊಂಡು ಅದರ ಫೋಟೋವನ್ನು ಆನ್ ಲೈನ್ ನಲ್ಲಿ ಹರಿಯಬಿಟ್ಟರು.

ಆಕೆ ಋತುಚಕ್ರವನ್ನು ವಿವರಿಸಿದಳು
ಆಕೆ ತನ್ನ ಪೋಸ್ಟ್ ನಲ್ಲಿ, ``ನಮ್ಮ ದೇಹದಲ್ಲಿ ನಾವು ಎಷ್ಟೊಂದು ನಾಚಿಕೆ ಪಟ್ಟುಕೊಳ್ಳುತ್ತೇವೆ ಮತ್ತು ನಾವು ಇದನ್ನು ಆರಂಭದಲ್ಲಿ ಹೊರಹಾಕುವ ತನಕ ಹೆಚ್ಚಿನವರು ಇದನ್ನು ಮನವರಿಕೆ ಮಾಡಿಕೊಳ್ಳುವುದೇ ಇಲ್ಲ. ಋತುಚಕ್ರ ಎನ್ನುವುದು ತಿಂಗಳ ಅದ್ಭುತವಾದ ಮ್ಯಾಜಿಕ್ ಸಮಯವಾಗಿದ್ದು, ಇಲ್ಲಿ ಅಗಾಧ ಶಕ್ತಿ ಇದೆ ಮತ್ತು ಆದರೆ ಸಮಾಜವು ನಮ್ಮನ್ನು ಈ ಸಮಯದಲ್ಲಿ ದೂರವಿರಿಸಲು ಪ್ರಯತ್ನಿಸಿದೆ.''

ಆಕೆ ಮಹಿಳೆಯರೊಂದಿಗೆ ಸಂಪರ್ಕ ಸಾಧಿಸಲು ಬಯಸಿದರು
ಆಕೆ ಇನ್ ಸ್ಟಾಗ್ರಾಮ್ ನಲ್ಲಿ ತನ್ನ ಋತುಚಕ್ರದ ಬಗ್ಗೆ ಕೆಲವೊಂದು ಫೋಟೊಗಳನ್ನು ಹಂಚಿಕೊಂಡಿದ್ದು, ಇದರಿಂದ ಮಹಿಳೆಯರು ತಮ್ಮ ಋತುಚಕ್ರದೊಂದಿಗೆ ಸಂಪರ್ಕ ಸಾಧಿಸಿದರೆ, ಆಗ ಅದು ತುಂಬಾ ಖುಷಿಯನ್ನು ನೀಡಲಿದೆ ಎಂದು ಆಕೆ ಹೇಳಿದ್ದಾರೆ. ಋತುಚಕ್ರದ ರಕ್ತದೊಂದಿಗೆ ಚಿತ್ರಕಲೆ ಮಾಡಬಹುದು ಅಥವಾ ಅದನ್ನು ಭೂಮಿ ಮೇಲೆ ಕೂಡ ಹಾಕಬಹುದು ಎಂದು ಆಕೆ ಹೇಳಿಕೊಂಡಿದ್ದಾರೆ. ನಿಮ್ಮದೇ ಆಗಿರುವ ರಕ್ತವನ್ನು ಸ್ಪರ್ಶಿಸುವುದು ಒಂದು ರೀತಿಯಲ್ಲಿ ಆರಾಮ ನೀಡುವುದು ಹಾಗೂ ಇದೊಂದು ಸುಂದರ ವಿಚಾರ ಎಂದು ಆಕೆ ಬರೆದಿದ್ದಾರೆ.

ಆಕೆ ಸೆಕ್ಸ್ ಕೋಚ್ ಆಗಿರುವರು
ಡೆಮೆಟ್ರಾ ಲಾಸ್ ಏಂಜಲೀಸ್ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಸೆಕ್ಸ್ ಕೋಚ್ ಆಗಿರುವರು. ಐಯುಡಿ ಹಾಕಿಕೊಂಡಿದ್ದ ಕಾರಣದಿಂದಾಗಿ ತನಗೆ ಋತುಚಕ್ರವು ತುಂಬಾ ಯಾತನಾಮಯವಾಗಿತ್ತು ಎಂದು ಆಕೆ ಹೇಳಿಕೊಂಡಿದ್ದಾರೆ. ತೀವ್ರ ನೋವಿನಿಂದ ಬಳಲಿದ ಬಳಿಕ ಆಕೆ ಇದನ್ನು ತೆಗೆಯಲು ನಿರ್ಧರಿಸಿದರು ಮತ್ತು ಇದರ ಬಳಿಕ ಆಕೆ ಋತುಚಕ್ರವನ್ನು ತುಂಬಾ ಪ್ರೀತಿಸಲು ಆರಂಭಿಸಿದರು.

ನೆಟ್ಟಿಗರಿಂದ ಆಕೆಯ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ
ಡೆಮಟ್ರಾ ತನ್ನ ಋತುಚಕ್ರದ ರಕ್ತವನ್ನು ಮೈಗೆ ಸವರಿಕೊಂಡಿರುವ ಫೋಟೊವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿರುವುದಕ್ಕೆ ಧನಾತ್ಮಕ ಹಾಗೂ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ತನ್ನ ಮಲವನ್ನು ಕೂಡ ಆಕೆ ಮುಖಕ್ಕೆ ಸವರಿಕೊಳ್ಳಬಹುದು ಎಂದು ಕೆಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದು ಕಡೆಯಲ್ಲಿ ಕೆಲವು ಜನರು ಆಕೆಗೆ ತನ್ನ ಋತುಚಕ್ರದ ನೈಜ ಫೋಟೋವನ್ನು ಹಂಚಿಕೊಳ್ಳಲು ಪ್ರೋತ್ಸಾಹ ನೀಡಿದ್ದಾರೆ. ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು? ಅಭಿಪ್ರಾಯ ಬಿಚ್ಚಿಡಲು ಕಮೆಂಟ್ ಬಾಕ್ಸ್ ಗೆ ಹೋಗಿ...



Click it and Unblock the Notifications
