Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪತಿ ಸಂತಾಹರಣ ಚಿಕಿತ್ಸೆ ಮಾಡಿದರೂ ಗರ್ಭ ಧರಿಸಿದ ಮಹಿಳೆ!!
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಿಮಗೆ ಮಕ್ಕಳು ಬೇಕೆಂದು ಅನಿಸುವುದಿಲ್ಲ. ಇದರಿಂದ ವಿವಿಧ ರೀತಿಯ ಗರ್ಭಧಾರಣೆ ತಡೆಯಲು ಪ್ರಯತ್ನಿಸುವಿರಿ. ಕೆಲವು ದಂಪತಿ ಕಾಂಡೋಮ್ ಬಳಸಿದರೆ, ಇನ್ನು ಕೆಲವರು ಗರ್ಭ ನಿರೋಧಕ ಮಾತ್ರೆ ಸೇವಿಸುವರು. ಹೀಗಿದ್ದರೂ ನೀವು ಗರ್ಭ ಧರಿಸಿದರೆ ಆಗ ಖಂಡಿತವಾಗಿಯೂ ನಿಮಗೆ ತುಂಬಾ ನಿರಾಶೆ ಹಾಗೂ ಆಘಾತವಾಗುವುದು.

ಅದರಲ್ಲೂ ಪುರುಷನೊಬ್ಬ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಬಳಿಕ ಮಹಿಳೆಯು ಗರ್ಭ ಧರಿಸಿದರೆ ಆಗ ಅಲ್ಲಿನ ಪರಿಸ್ಥಿತಿ ಊಹಿಸುವುದು ತುಂಬಾ ಕಷ್ಟ. ಪತಿಯು ತನ್ನ ಪತ್ನಿಗೆ ಇನ್ನು ಮಕ್ಕಳು ಬೇಡವೆಂದು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ಆದರೆ ಮುಂದೆ ಆಗಿರುವುದೇ ಬೇರೆ...ಇದನ್ನು ಓದಲು ನೀವು ತಯಾರಾಗಿ...

ಇನ್ನು ಮಕ್ಕಳು ಬೇಡವೆಂದು ದಂಪತಿ ನಿರ್ಧರಿಸಿದರು
ತೈಪೇಯಿಯ ದಂಪತಿಗೆ ಅದಾಗಲೇ ಮೂರು ಮಕ್ಕಳಿದ್ದರು ಮತ್ತು ಇನ್ನು ಹೆಚ್ಚಿನ ಮಕ್ಕಳ ಖರ್ಚುವೆಚ್ಚ ನೋಡಲು ಕಷ್ಟವಾಗಿದ್ದ ಕಾರಣದಿಂದಾಗಿ ಅವರು ಮುಂದೆ ಮಕ್ಕಳು ಬೇಡವೆಂದು ನಿರ್ಧಾರ ಮಾಡಿದರು.

ಸಂತಾನಹರಣ ಚಿಕಿತ್ಸೆ ಮಾಡಲು ನಿರ್ಧರಿಸಿದರು
ಪತಿ ಸಂತಾಣಹರಣ ಚಿಕಿತ್ಸೆ ಮಾಡಿಸಿಕೊಂಡರೆ ಆಗ ಆತ ಲೈಂಗಿಕ ಜೀವನವನ್ನು ಆನಂದಿಸಬಹುದು ಎಂದು ಆ ದಂಪತಿಯು ನಿರ್ಧಾರ ಮಾಡಿದ್ದರು.

ದಂಪತಿಗೆ ಆಘಾತ ಕಾದಿತ್ತು
ಸಂತಾನಹರಣ ಚಿಕಿತ್ಸೆ ನಡೆಸಿದ ಎರಡು ವರ್ಷಗಳ ಬಳಿಕ ಪತ್ನಿಯು ಗರ್ಭಿಣಿಯಾಗಿರುವುದು ಕಂಡುಬಂದಿದೆ. ಸಂತಾನಹರಣ ಚಿಕಿತ್ಸೆಯು ವಿಫಲವಾಗಿದೆ ಮತ್ತು ಗರ್ಭ ಉಳಿಸಿಕೊಳ್ಳಲು ಅವರು ನಿರ್ಧಾರ ಮಾಡಿದರು.

ವೈದ್ಯರು ವಿಭಿನ್ನ ಶೋಧ ಮಾಡಿದರು
ಸ್ತ್ರೀರೋಗ ತಜ್ಞರು ಸಂತಾನಹರಣ ಚಿಕಿತ್ಸೆಯು ವಿಫಲವಾಗಿದೆ ಎಂದು ತಿಳಿಸಿದ ಬಳಿಕ ಪತಿಗೆ ಶಸ್ತ್ರಚಿಕಿತ್ಸೆ ಮಾಡಿರುವಂತಹ ವೈದ್ಯರನ್ನು ಭೇಟಿ ಮಾಡಿ ಅವರಿಂದ ಪರೀಕ್ಷಿಸಿಕೊಳ್ಳಲು ಸೂಚಿಸಿದರು. ಈ ವೇಳೆ ಪರೀಕ್ಷೆ ಮಾಡಿದ ವೈದ್ಯರಿಗೆ ದೊಡ್ಡ ಆಘಾತ ಕಾದಿತ್ತು ಮತ್ತು ಆತನ ವೀರ್ಯವು ಅದ್ಭುತವಾಗಿ ಬಲಿಷ್ಠವಾಗಿತ್ತು ಮತ್ತು ಇದರ ಪರಿಣಾಮವಾಗಿ ಅದು ಪತ್ನಿಯನ್ನು ಗರ್ಭಿಣಿಯನ್ನಾಗಿ ಮಾಡಿದೆ.



Click it and Unblock the Notifications
