Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಈ ಮೂರು ರಾಶಿಚಕ್ರದವರು ಹೇಳುವ ವಿಚಾರಗಳು ಭವಿಷ್ಯದಲ್ಲಿ ನಿಜವಾಗುತ್ತದೆಯಂತೆ!
ಕಳೆದ ವಾರವಷ್ಟೇ ನಿಮ್ಮ ಸ್ನೇಹಿತರು ಅಥವಾ ಆತ್ಮೀಯರು ಹೇಳಿರುವ ವಿಚಾರವು ಈ ವಾರದಲ್ಲಿ ಸಂಭವಿಸಿದ್ದು ನಿಮ್ಮ ಗಮನಕ್ಕೆ ಬಂದಿರಬಹುದು. ಆ ಕುರಿತು ನಿಮಗೆ ಒಂದಿಷ್ಟು ಅಚ್ಚರಿಯು ಉಂಟಾಗಿರುವ ಸಾಧ್ಯತೆಗಳು ಇರುತ್ತವೆ. ಇಲ್ಲವೇ ನಿಮ್ಮ ಮನೆಯಲ್ಲಿರುವ ನಿಮ್ಮ ಆಪ್ತರು ಅಥವಾ ಸಹೋದರಿಯರು ಯಾರಾದರೂ ಈ ರೀತಿ ಮುಂಚಿತವಾಗಿ ಹೇಳಿದ ವಿಷಯಗಳು ಮುಂದಿನ ದಿನದ ಭವಿಷ್ಯದಲ್ಲಿ ಸಂಭವಿಸುತ್ತದೆ ಎನ್ನುವುದನ್ನು ಗಮನಿಸಿದ್ದೀರಾ?

ಅವರಿಗೆ ಹೇಗೆ ಆಭಾವನಗೆಗಳು ಬರುತ್ತದೆ?
ಕೆಲವು ಜನರು ಊಹಿಸಿದಂತೆ ಸನ್ನಿವೇಶಗಳು ಜರುಗುತ್ತವೆ. ಅವರು ಹೇಳಿದಂತೆಯೇ ಪರಿಸ್ಥಿತಿಗಳು ಬದಲಾವಣೆಯನ್ನು ಕಾಣಬಹುದು. ಹೌದು, ಕರುಳು ಭಾವನೆ ಹಾಗೂ ಅಂತಃಸ್ಮರಣೆಯ ಶಕ್ತಿಯಿಂದ ಕೆಲವರು ಮುಂದೆ ನಡೆಯುವ ವಿಚಾರಗಳನ್ನು ಸುಲಭವಾಗಿ ಊಹಿಸುತ್ತಾರೆ. ವಾಸ್ತವವಾಗಿ ಅಂತಹ ವ್ಯಕ್ತಿಗಳಿಗೆ ಅಂತದೃಷ್ಟಿಯು ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ಭವಿಷ್ಯದ ಬಗ್ಗೆ ಅವರಿಗೆ ಒಂದು ಬಗೆಯ ಸೂಚನೆ ಹಾಗೂ ಆಲೋಚನೆಗಳು ಇರುತ್ತವೆ ಎಂದು ಹೇಳಲಾಗುವುದು. ಅಲ್ಲದೆ ಭವಿಷ್ಯದ ನೋಟಗಳ ಬಗ್ಗೆ ಅವರು ಸ್ಪಷ್ಟವಾಗಿ ಚಿಂತನೆನಡೆಸುತ್ತಾರೆ.

ಇವೆಲ್ಲವೂ ನಕ್ಷತ್ರಗಳ ಆಟ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯ ನುಡಿಯುವುದು ಅಥವಾ ಮುಂದಿನ ಸಂಗತಿಯನ್ನು ಈಗಲೇ ಹೇಳುವ ಸಾಮಥ್ರ್ಯವನ್ನು ವ್ಯಕ್ತಿ ಆತನ ನಕ್ಷತ್ರ ಹಾಗೂ ಗ್ರಗಳ ಪ್ರಭಾವದಿಂದ ಹೇಳುತ್ತಾನೆ ಎಂದು ಹೇಳಲಾಗುವುದು. ನಾವು ಹುಟ್ಟಿದ ಘಳಿಗೆಯಿಂದ ಹಿಡಿದು ನಮ್ಮ ಜೀವನದುದ್ದಕ್ಕೂ ನಕ್ಷತ್ರಗಳು ಮತ್ತು ಗ್ರಹಗಳು ಮಹತ್ತರವಾದ ಬದಲಾವಣೆ ಹಾಗೂ ಪ್ರಭಾವವನ್ನು ಬೀರುತ್ತಲೇ ಇರುತ್ತವೆ ಎಂದು ಹೇಳಲಾಗುವುದು. ಹಾಗಾಗಿಯೇ ರಾಶಿಚಕ್ರಗಳ ಅನ್ವಯದಲ್ಲಿ ವ್ಯಕ್ತಿ ವಿಶೇಷತೆಯನ್ನು ಪಡೆದುಕೊಂಡಿರುತ್ತಾನೆ ಎನ್ನಲಾಗುವುದು.

ಇವರಿಗೆ ಗ್ರಹಗಳು ಸೂಚಿಸುವಂತೆ ನಡೆದುಕೊಳ್ಳುವರು
ಕೆಲವು ರಾಶಿಚಕ್ರದವರು ಹೇಳುವ ಸಂಗತಿಗಳು ನಿಜವಾಗಬಹುದು. ಇಲ್ಲವೇ ಮುಂದೆ ನಡೆಯುವ ಸಂಗತಿಯನ್ನು ಮುಂಚೆಯೇ ಹೇಳಬಹುದು. ಇದಕ್ಕೆ ಕಾರಣ ರಾಶಿಚಕ್ರದೊಂದಿಗೆ ಹೊಂದಿರುವ ಸಂಬಂಧ ಅಥವಾ ಶಕ್ತಿಯೇ ಕಾರಣ ಎಂದು ಹೇಳಲಾಗುವುದು. ಇದು ಬ್ರಹ್ಮಾಂಡದ ಹತ್ತಿರದ ಘಟನೆಯನ್ನು ರೂಪಿಸಲು ಸಹಾಯ ಮಾಡುತ್ತದೆ. ವಿಶೇಷ ರಾಶಿಚಕ್ರದ ವ್ಯಕ್ತಿಗಳು ಕೆಲವು ವಿಷಯಗಳನ್ನು ಬಳ ಆಳವಾಗಿ ಅನುಭವಿಸುವರು. ಅದನ್ನು ಜೀವನದಲ್ಲಿ ಆಕಸ್ಮಿಕವಾಗಿ ಅನುಭವಿಸುವ ಸಾಧ್ಯತೆಗಳು ಇರುತ್ತವೆ. ಈ ರೀತಿಯ ಶಕ್ತಿಯನ್ನು ಹೊಂದಿರುವ ರಾಶಿಚಕ್ರ ಹಾಗೂ ಅವರ ಅಂತಃಪ್ರಜ್ಞೆಯ ಬಗ್ಗೆ ಈ ಮುಂದೆ ವಿವರಿಸಲಾಗಿದೆ.

ಕರ್ಕ
ಈ ರಾಶಿಚಕ್ರದ ವ್ಯಕ್ತಿಗಳು ಬಹಳ ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಇವರು ಇತರರಿಗೆ ಸಹಾನುಭೂತಿ ಹಾಗೂ ಅವರ ಭಾವನೆಯನ್ನು ಬಹುಬೇಗ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಇತರರ ಅಗತ್ಯತೆಗಳನ್ನು ಬಹುಬೇಗ ಅರ್ಥಮಾಡಿಕೊಳ್ಳುತ್ತಾರೆ. ಕರ್ಕ ರಾಶಿಯವರಿಗೆ ದುಃಖದ ಸಂಗತಿಗಳನ್ನು ನೋಡುವಾಗ ಹೃದಯ ಬಹಳ ಮರುಗುವುದು. ಇವರು ಚಂದ್ರನಿಂದ ಹೆಚ್ಚು ಪ್ರಭಾವ ಹೊಂದಿರುವುದರಿಂದ ಮುಂದೆ ನಡೆಯುವ ಸಂಗತಿಯನ್ನು ಊಹಿಸಬಲ್ಲ ಶಕ್ತಿಯನ್ನು ಒಳಗೊಂಡಿರುತ್ತಾರೆ ಎಂದು ಹೇಳಲಾಗುವುದು.

ವೃಶ್ಚಿಕ
ಈ ರಾಶಿಯ ವ್ಯಕ್ತಿಗಳು ಹೆಚ್ಚು ಮಾತನಾಡುವುದಿಲ್ಲ. ಹಾಗೊಮ್ಮೆ ಮಾತನಾಡಲು ಪ್ರಾರಂಭಿಸಿದರೆ ತಮಾಷೆಗಳ ಮಳೆಯನ್ನು ಸುರಿಸುತ್ತಾರೆ. ಇವರು ಮುಂದೆ ಏನಾದರೂ ತಪ್ಪು ಸಂಭವಿಸುವುದು ಎನ್ನುವುದನ್ನು ಬಹುಬೇಗ ಊಹಿಸುತ್ತಾರೆ. ಅಂತೆಯೇ ಭವಿಷ್ಯದಲ್ಲಿ ಅದು ಸಂಭವಿಸುವುದು. ಇವರು ಮಂಗಳ ಗ್ರಹದಿಂದ ಹೆಚ್ಚು ಪ್ರಭಾವಿತರಾಗಿರುತ್ತಾರೆ. ಹಾಗಾಗಿಯೇ ಭವಿಷ್ಯದ ಸಂಗತಿಯನ್ನು ಸುಂದರವಾಗಿ ಹಾಗೂ ಸುಲಭವಾಗಿ ಊಹಿಸುತ್ತಾರೆ ಎನ್ನಲಾಗುವುದು.

ಮೀನ
ಇವರು ನೆಫ್ಚೂನ್ ಗ್ರಹದಿಂದ ಆಳಲ್ಪಟ್ಟ ರಾಶಿಯವರಾಗಿರುತ್ತಾರೆ. ಹಾಗಾಗಿಯೇ ಇವರು ಎಲ್ಲವನ್ನೂ ಹೇಗೆ ಬೇಕಾದರೂ ಅನುಭವಿಸುವ ಹಾಗೂ ಊಹಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಸುತ್ತಲಿನ ಜನರ ಭಾವನೆಯನ್ನು ಬಹಳ ಸುಲಭವಾಗಿ ಊಹಿಸಬಲ್ಲರು. ಇವರು ತಮ್ಮದೇ ಆದ ಜಗತ್ತಿನಲ್ಲಿ ಮುಳುಗಿರುತ್ತಾರೆ. ಎಲ್ಲಾ ಸಮಯದಲ್ಲಿ ಎಲ್ಲವನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಮ್ಮ ಸುತ್ತಲಿನಲ್ಲಿ ನಡೆಯುವ ಹಠಾತ್ ಬದಲಾವಣೆಯನ್ನು ಬಹಳ ವೇಗವಾಗಿ ಗುರುತಿಸುವರು. ಜೊತೆಗೆ ಮುಂದೆ ನಡೆಯುವ ಸಂಗತಿಗಳ ಬಗ್ಗೆ ಸೂಕ್ತ ರೀತಿಯಲ್ಲಿ ಊಹಿಸಬಲ್ಲರು.



Click it and Unblock the Notifications