For Quick Alerts
ALLOW NOTIFICATIONS  
For Daily Alerts

  ಜೂನ್ ತಿಂಗಳಲ್ಲಿ ಈ ಮೂರು ರಾಶಿಯವರ ಅದೃಷ್ಟವೇ ಬದಲಾಗಲಿದೆ...

  By Hemanth
  |

  ರಾಶಿಚಕ್ರಗಳು ಪ್ರತೀ ತಿಂಗಳಿಗೆ ಅನುಗುಣವಾಗಿ ಬದಲಾಗುತ್ತಾ, ಅದರ ಫಲಾಫಲಗಳಲ್ಲಿ ವ್ಯತ್ಯಾಸ ಉಂಟಾಗುವುದು. ಅದೇ ರೀತಿ ಜೂನ್ ತಿಂಗಳಲ್ಲಿ ಯಾವ ರಾಶಿಯವರಿಗೆ ಉತ್ತಮವೆಂದು ನಮ್ಮ ಜ್ಯೋತಿಷಿಗಳು ಇಲ್ಲಿ ಹೇಳಿದ್ದಾರೆ. ಈ ಲೇಖನದಲ್ಲಿ ಜೂನ್ ತಿಂಗಳಲ್ಲಿ ಕೆಲವು ರಾಶಿಯವರ ಸಮಯವು ಹೇಗಿರಲಿದೆ ಎನ್ನುವ ಬಗ್ಗೆ ಹೇಳಲಿದ್ದೇವೆ. ಜೂನ್ ತಿಂಗಳನ್ನು ಮದುವೆಗೆ ತುಂಬಾ ಒಳ್ಳೆಯ ಸಮಯವೆಂದು ಕರೆಯಲಾಗುತ್ತದೆ. ಹೊಸತನ ಹಾಗೂ ಆಹ್ಲಾದ ಉಂಟು ಮಾಡುವ ಜೂನ್ ತಿಂಗಳಲ್ಲಿ ಯಾವ ರಾಶಿಯವರು ತುಂಬಾ ಅದೃಷ್ಟವಂತರು ಎಂದು ಈ ಲೇಖನದಿಂದ ತಿಳಿಯಿರಿ...

  ಮಿಥುನ: ಮೇ 21-ಜೂನ್ 20

  ಮಿಥುನ: ಮೇ 21-ಜೂನ್ 20

  ಮಿಥುನ ರಾಶಿಯವರ ಮೊದಲ ಮನೆಯಲ್ಲಿ ಸೂರ್ಯ ಮತ್ತು ಬುಧನಿದ್ದಾನೆ. ಈ ಅವಧಿಯಲ್ಲಿ ಅವರಿಬ್ಬರಿಂದ ಹೆಚ್ಚಿನ ಶಕ್ತಿ ಹಾಗೂ ಅದ್ಭುತವಾ ಅಧಿಕಾರವು ಸಿಗುವುದು. ಈ ತಿಂಗಳಲ್ಲಿ ಮಿಥುನ ರಾಶಿಯವರು ತಮ್ಮ ಮನಸ್ಸಿನಲ್ಲಿರುವುದನ್ನು ಏನು ಬೇಕಾದರೂ ಮಾಡಬಹುದು. ಇದನ್ನು ಹೊರತುಪಡಿಸಿ, ತಮ್ಮ ವೃತ್ತಿ ಕಡೆ ಮತ್ತು ಮನದೊಳಗಿನ ಆಕಾಂಕ್ಷೆಗಳಿಗೆ ಗಂಭೀರವಾಗಿ ಗಮನಹರಿಸಬೇಕಾದ ಸಮಯವಿದು. ವೃತ್ತಿಯಲ್ಲಿ ನಿಮಗೆ ಭಡ್ತಿ ಅಥವಾ ಸಂಬಳದಲ್ಲಿ ಹೆಚ್ಚಳವಾಗಬಹುದು. ಜೂನ್ 26ರಂದು ಹುಣ್ಣಿಮೆಯಂದು ಇವರು ಹೆಚ್ಚಿನ ಕಾಳಜಿ ವಹಿಸಬೇಕು. ಯಾಕೆಂದರೆ ಈ ದಿನದಂದು ಶನಿಯ ವಿರುದ್ಧಗತಿ ನಡೆಯಲಿರುವ ಕಾರಣ ಎಂಟನೇ ಮನೆಯಲ್ಲಿ ಸಾವು ಮತ್ತು ಮರುಜನ್ಮವು ನಡೆಯುವುದು. ಈ ದಿನ ನೀವು ಹಗೆ ಸಾಧಿಸಬೇಕೆಂಬ ಬಯಕೆ ತೀವ್ರವಾಗಬಹುದು. ಇಂತಹ ವ್ಯಕ್ತಿಗಳು ಹೆಚ್ಚು ಜಾಗರೂಕರಾಗಿರಬೇಕು.

  ಮಿಥುನ: ಮೇ 21-ಜೂನ್ 20

  ಮಿಥುನ: ಮೇ 21-ಜೂನ್ 20

  ಇನ್ನು ಜೂನ್ ತಿಂಗಳಲ್ಲಿ ಮಿಥುನ ರಾಶಿಯವರು ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಬೇಕಾಗುವುದು. ತಿಂಗಳ ಹೆಚ್ಚಿನ ಸಮಯ ಕೌಟುಂಬಿಕ ವಿಚಾರಗಳು ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತವೆ. ವಿವಿಧ ಗ್ರಹಗಳ ಸಂಚಾರ ಹಾಗೂ ಬದಲಾವಣೆಗಳು ವೃತ್ತಿ ಜೀವನವನ್ನು ತಳ್ಳಲು ಸಹಾಯ ಮಾಡುವುದು. ಅಲ್ಲದೆ ವೃತ್ತಿ ಜೀವನದಲ್ಲಿ ಸಾಕಷ್ಟು ವಿಶೇಷ ಬದಲಾವಣೆಯನ್ನು ಕಾಣುತ್ತಾರೆ. ಸಾಕಷ್ಟು ಪ್ರತಿಕೂಲವಾದ ಹಾಗೂ ಕ್ಲಿಷ್ಟಕರವಾದ ಸಂದರ್ಭಗಳನ್ನು ಎದುರಿಸಬೇಕಾಗುವುದು. ನಿಮ್ಮ ಸ್ನೇಹ ಮತ್ತು ಸ್ವಾಭಾವಿಕ ಗುಣಗಳಿಂದ ಸಮಸ್ಯೆಗಳನ್ನು ನಿಭಾಯಿಸುವಿರಿ. ಸಾಮಾಜಿಕ ಜೀವನದಲ್ಲಿ ನಿಮ್ಮ ಮಟ್ಟವು ಉತ್ತಮ ಸ್ಥಾನದಲ್ಲಿ ಇರುವುದು. ಪ್ರಭಾವಶಾಲಿ ಜನರ ಪರಿಚಯವಾಗುವ ಸಾಧ್ಯತೆಗಳಿರುತ್ತವೆ. ಸಾಕಷ್ಟು ಒತ್ತಡದ ಜೀವನವನ್ನು ಅನುಭವಿಸಬೇಕಾದ್ದರಿಂದ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ

  ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ತಿಂಗಳ ಆರಂಭದ ಸಮಯದಲ್ಲಿ ಸಾಕಷ್ಟು ಒತ್ತಡ ಹಾಗೂ ಚಿಂತೆಗಳು ಕಾಡುವ ಸಾಧ್ಯತೆಗಳು ಹೆಚ್ಚು. ಜೂನ್ 21ರ ನಂತರದ ದಿನಗಳಲ್ಲಿ ಸ್ವಲ್ಪ ಆರಾಮದಾಯಕ ಅನುಭವ ಉಂಟಾಗುವುದು. ವೈಯಕ್ತಿಕ ಜೀವನಕ್ಕೆ ಲಾಭದಾಯಕವಾಗಿರುತ್ತದೆ. ಹೊಸ ಪ್ರೀತಿಯ ಸಂಪರ್ಕವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

  ಕರ್ಕಾಟಕ: ಜೂನ್ 21-ಜುಲೈ 22

  ಕರ್ಕಾಟಕ: ಜೂನ್ 21-ಜುಲೈ 22

  ಕರ್ಕಾಟಕ ರಾಶಿಯವರಿಗೆ ತಿಂಗಳ ಮೊದಲಾರ್ಧದಲ್ಲಿ ಶುಕ್ರನು ತಮ್ಮ ರಾಶಿಯಲ್ಲಿ ಉಲ್ಬಣಗೊಂಡಿರುವಂತೆ ಗೋಚರಿಸುವುದು. ಈ ಅವಧಿಯಲ್ಲಿ ಅವರು ಒಂದು ಕಾಂತಿಯುತವಾಗಿರುವ ಸುಂದರ ಶಕ್ತಿ ಪಡೆಯಲಿದ್ದು, ಇದರ ಮೂಲಕ ಜನರನ್ನು ಆಕರ್ಷಿಸುವರು. ಇನ್ನೊಂದು ಕಡೆಯಲ್ಲಿ ಇವರ ಉಪಸ್ಥಿತಿಯಲ್ಲಿ ಹಲವಾರು ಮಂದಿ ಲಾಭ ಪಡೆಯಲು ಪ್ರಯತ್ನಿಸುವರು. 12ನೇ ಮನೆಯಲ್ಲಿರುವಂತಹ ಸೂರ್ಯನು ಆಧಾತ್ಮದ ಬೆಂಕಿ ಹಚ್ಚು ಕಾರಣದಿಂದಾಗಿ ಪರಾನುಭೂತಿ ಮತ್ತು ಅಂತದೃಷ್ಟಿತ್ವ ಪಡೆಯುವರು. ಇದರಿಂದಾಗಿ ಇವರಲ್ಲಿ ವಿಶೇಷವಾಗಿರುವ ಶಕ್ತಿ ಬರುವುದು. ತಾವು ತುಂಬಾ ನಂಬಿಕೊಂಡಿರುವ ಜನರೊಂದಿಗೆ ಮಾತ್ರ ಇವರು ಮುಕ್ತವಾಗಿರಬೇಕು. ಈ ರಾಶಿಯವರು ಜೂನ್ ತಿಂಗಳಲ್ಲಿ ಶಕ್ತಿಯ ಉತ್ತುಂಗದಲ್ಲಿ ಇರುವರು. ಇನ್ನು ಕರ್ಕಾಟಕ ರಾಶಿಯವರನ್ನು ಎಲ್ಲಾ ರೀತಿಯಲ್ಲೂ ತುಂಬಾ ವೇಗವಾಗಿ ಸಾಗಿ, ವಿಚಾರವನ್ನು ಭದ್ರಪಡಿಸಿ ಕೊಳ್ಳಬೇಕೆಂದು ಬಯಸುವರು. ಇವರು ನಿಮ್ಮನ್ನು ತಮ್ಮ ಕನಸಿನ ಭಾಗವಾಗಬೇಕೆಂದು ಕೂಡ ಬಯಸುವರು. ಇನ್ನೊಂದು ಬದಿಯಲ್ಲಿ ಇವರು ಹಣ, ಆಹಾರ, ಮನೆ, ಸೌಂದರ್ಯ, ಚಾಣಕ್ಷತೆ ಇತ್ಯಾದಿ ಒದಗಿಸುವರು. ಇದರಿಂದ ನಿಮ್ಮನ್ನು ಸಂಬಂಧಲ್ಲಿ ಉಳಿಸಿಕೊಳ್ಳುವುದು ಅವರ ಪ್ರಯತ್ನ.

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ತುಲಾ ರಾಶಿಯವರಿಗೆ ಕಳೆದ ಕೆಲವು ತಿಂಗಳುಗಳು ಆರ್ಥಿಕ ಹಾಗೂ ವೃತ್ತಿಪರವಾಗಿ ತುಂಬಾ ಕಠಿಣ ಸಮಯವಾಗಿತ್ತು. ಈ ತಿಂಗಳಲ್ಲಿ ಅವರು ಬಯಸಿರುವಂತಹ ಉನ್ನತಿಗೇರುವಂತಹ ತಿರುವನ್ನು ಪಡೆಯುವರು. ಸಂಭ್ರಮ ಹಾಗೂ ಸಂತೋಷದ ಐದನೇ ಮನೆಯಲ್ಲಿ ಮಂಗಳನು ಇರುವುದರಿಂದ ಇವರ ಕ್ರಿಯಾತ್ಮಕತೆಗೆ ಅಂತ್ಯವಿರಲ್ಲ ಮತ್ತು ಅವರು ದೈನಂದಿನ ಜೀವನವು ತುಂಬಾ ಮನೋರಂಜನೆ ಹಾಗೂ ಖುಷಿಯಿಂದ ಇರುವುದು.ಇನ್ನೊಂದು ಬದಿಯಲ್ಲಿ ಇವರ ಶಕ್ತಿಯು ಆಶಾವಾದ ಮತ್ತು ಧನಾತ್ಮಕತೆಯತ್ತ ಸಾಗಲಿದೆ. ಎರಡೂ ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುವುದು. ಜೂನ್ 26ರಂದು ಪೂರ್ಣಿಮೆಯಾಗಿರುವ ಕಾರಣದಿಂದ ಶನಿಯ ವಿಕೋಪವು ನಾಲ್ಕನೇ ಮನೆಯಲ್ಲಿ ನಡೆಯುವ ಕಾರಣದಿಂದ ಕುಟುಂಬದಲ್ಲಿ ಕೆಲವೊಂದು ಕಲಹ ಮತ್ತು ನಾಟಕಗಳು ನಡೆಯಬಹುದು. ಇನ್ನೊಂದು ಕಡೆಯಲ್ಲಿ ಈ ರಾಶಿಯವರು ತಮ್ಮ ಮೊದಲ ಅಭಿಪ್ರಾಯವನ್ನು ನಂಬಬಾರದು ಮತ್ತು ದೀರ್ಘವಾಗಿ ಚಿಂತಿಸಿದ ಬಳಿಕ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು.

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ಇನ್ನು ಜೂನ್ ತಿಂಗಳಲ್ಲಿ ತುಲಾ ರಾಶಿಯವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಪ್ರಸಿದ್ಧಿಯನ್ನು ಪಡೆದುಕೊಳ್ಳುವರು. ಈ ವರ್ಷಪೂರ್ತಿ ನೀವು ಧನಾತ್ಮಕ ಪರಿಸ್ಥಿತಿಯನ್ನೇ ಹೆಚ್ಚಾಗಿ ಅನುಭವಿಸಲಿದ್ದೀರಿ. ಜೀವನದ ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಆಂತರಿಕವಾಗಿ ತೊಳಲಾಟಕ್ಕೆ ಒಳಗಾಗುವಿರಿ. ಅಂತಹ ಘರ್ಷಣೆಗಳ ಮೂಲ ಕಾರಣವನ್ನು ಅರ್ಥೈಸಿಕೊಂಡು, ಅವುಗಳ ಸುಧಾರಣೆಗೆ ಮುಂದಾಗಬೇಕು. ನಿಮ್ಮ ಜೀವನದಲ್ಲಿ ನೀವು ಯಾವ ದಿಕ್ಕಿಗೆ ಸಾಗಬೇಕು ಎನ್ನುವುದನ್ನು ನಿರ್ಧರಿಸಲು ಇದೊಂದು ಉತ್ತಮವಾದ ಸಮಯ. ನಿಮ್ಮ ಮೃದು ಸ್ವಭಾವವನ್ನು ಅರಿತು ಇತರ ವ್ಯಕ್ತಿಗಳು ಅದರ ಸದುಪಯೋಗ ಪಡಿಸಿಕೊಳ್ಳಲು ಬಿಡದಿರಿ. ನಿಮ್ಮ ಪರಿಪೂರ್ಣ ಸಮತೋಲನ ಸಾಮಥ್ರ್ಯ ಅಥವಾ ಕೌಶಲ್ಯದಿಂದ ವೃತ್ತಿ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ಆಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುವುದಿಲ್ಲ. ನಿಮ್ಮ ಅಧೀನದಲ್ಲಿರುವ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗುವಿರಿ. ಯಾವುದೇ ಅಡೆತಡೆ ಎದುರಾದರೂ ನಿಮ್ಮ ಗುರಿಯನ್ನು ಸಾಧಿಸುವುದನ್ನು ಮರೆಯದಿರಿ. ತಿಂಗಳ ಮಧ್ಯದ ಅವಧಿಯಲ್ಲಿ ಗ್ರಹಗತಿಗಳ ಪ್ರಭಾವದಿಂದ ವೃತ್ತಿ ಜೀವನದಲ್ಲಿ ವಿಭಿನ್ನವಾದ ತಿರುವನ್ನು ಪಡೆದುಕೊಳ್ಳುವಂತೆ ಒತ್ತಾಯಕ್ಕೆ ಒಳಗಾಗುವ ಸಾಧ್ಯತೆಗಳಿವೆ. ವೃತ್ತಿ ನಿರ್ಧಾರದಲ್ಲಿ ಬೇರೊಂದು ಯೋಜನೆಯನ್ನು ಕೈಗೊಳ್ಳುವ ಹವಣಿಕೆಯಿದ್ದರೆ ಅದರ ಬಗ್ಗೆ ಸಂಪೂರ್ಣವಾದ ಖಚಿತತೆಯನ್ನು ಪಡೆದುಕೊಳ್ಳಿ.

  English summary

  zodiac-signs-who-will-have-the-best-time-in-june

  Each of the zodiac signs would undergo new changes in the coming month and our astro experts reveal about the lucky zodiacs for the month of June. Here, in this article, we are revealing to you the details of the zodiac signs that are going to experience the best of times in the coming month of June.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more