Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಆರು ರಾಶಿಯವರು ಗುಟ್ಟಿನ ರಹಸ್ಯವನ್ನು ಯಾವುದೇ ಕಾರಣಕ್ಕೂ ಬಾಯಿಬಿಡರು!
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಅನೇಕ ವಿಚಾರಗಳು ಅಡಗಿರುತ್ತವೆ. ಕೆಲವು ಗುಟ್ಟಿನ ರೀತಿಯಲ್ಲಿ ಇರಬಹುದು ಅಥವಾ ಸಾಮಾಜಿಕವಾಗಿಯೇ ಇರಬಹುದು. ಪ್ರತಿಯೊಂದು ಸಹ ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ವ್ಯಕ್ತಿ ಮೇಲ್ನೋಟಕ್ಕೆ ಹೆಚ್ಚು ಸಂತೋಷದಿಂದ ಇರುವಂತೆ ಕಾಣಬಹುದು. ಆದರೆ ಅವನ ಅಂತರಾಳದಲ್ಲಿ ಅನೇಕ ದುಃಖದ ಸಂಗತಿಗಳು ಅಡಗಿರಬಹುದು. ಇನ್ನೂ ಕೆಲವರು ಎದುರಿಗೆ ಬಹಳ ಒಳ್ಳೆಯವರಂತೆ ಕಂಡರೂ ಒಳಗೊಳಗೆ ಅನೇಕ ಪಿತೂರಿಗಳನ್ನು ಕೈಗೊಳ್ಳಬಹುದು.
ಈ ರೀತಿಯ ಗುಟ್ಟಿನ ವಿಚಾರವನ್ನು ಅಥವಾ ಮರೆಮಾಚಿದ ವಿಚಾರಗಳನ್ನು ಶಾಶ್ವತವಾಗಿ ಮರೆ ಮಾಚಲು ಸಾಧ್ಯವಿಲ್ಲ. ಅದು ಒಂದಲ್ಲಾ ಒಂದು ದಿನ ಆಚೆ ಬಂದೇ ಬರುತ್ತದೆ ಎಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಜೀವನದುದ್ದಕ್ಕೂ ತಮ್ಮ ಗುಟ್ಟನ್ನು ಕಾಪಾಡಿಕೊಳ್ಳುತ್ತಾರೆ. ಅಲ್ಲದೆ ಇತರರು ನಂಬಿಕೆ ಇಟ್ಟು ಹೇಳಿಕೊಂಡ ವಿಚಾರವನ್ನು ಎಲ್ಲೂ ಬಾಯ್ಬಿಡದೆ ಕಾಯ್ದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಅರಿಯಿರಿ...

ವೃಶ್ಚಿಕ
ಈ ರಾಶಿಚಕ್ರದವರೊಂದಿಗೆ ನೀವು ನಿಮ್ಮ ರಹಸ್ಯವನ್ನು ಹೇಳಿಕೊಂಡಿದ್ದರೆ ಇವರು ಎಂದಿಗೂ ಯಾರಲ್ಲೂ ಹೇಳುವುದಿಲ್ಲ. ಈ ವ್ಯಕ್ತಿಗಳ ಬಗ್ಗೆ ನೀವು ಭರವಸೆ ಹೊಂದಬಹುದು. ಇವರು ರಹಸ್ಯದ ವಿಚಾರವನ್ನು ಯಾರಲ್ಲೂ ಹೇಳದೆ ತಮ್ಮಲ್ಲೇ ಇರಿಸಿಕೊಳ್ಳುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನೀವು ನಿಮ್ಮ ರಹಸ್ಯದ ಸಂಗತಿಯನ್ನು ಹೇಳಿಕೊಂಡರೆ ಯಾರಲ್ಲೂ ಹೇಳಬಾರದು ಎಂದು ನೀವು ಖಚಿತಪಡಿಸಿಕೊಳ್ಳಿ.ಅಲ್ಲದೆ ಇವರು ಸುಳ್ಳು ಮತ್ತು ಅನ್ಯಾಯಕ್ಕೆ ಎಂದಿಗೂ ಮನ್ನಣೆ ಮತ್ತು ಕ್ಷಮೆಯನ್ನು ನೀಡುವುದಿಲ್ಲ. ತಮ್ಮ ಪ್ರೀತಿ ಪಾತ್ರರಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಈ ರಾಶಿಯ ಜನರು ವಿವಿಧ ಗುಣಗಳನ್ನು ಹೊಂದಿದ್ದು ಧೈರ್ಯವಂತರಾಗಿರುವುದು ಇದರಲ್ಲೊಂದು. ಸಾಮಾನ್ಯವಾಗಿ ತಮ್ಮ ಚಟುವಟಿಕೆಯ ಬಗ್ಗೆ ಇವರು ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಾರೆ. ಇದೇ ಕಾರಣಕ್ಕೆ ಇವರು ಜೀವನದ ಇನ್ನೊಂದು ಮಗ್ಗುಲಿನ ಸಂತೋಷವನ್ನು ಕಳೆದುಕೊಳ್ಳುತ್ತಾರೆ. ಹೀಗೆ ಕಳೆದುಕೊಂಡಿರುವುದನ್ನು ಪಡೆಯಲು ಇವರು ಮುನ್ನುಗ್ಗಲು ಹೆಚ್ಚಾಗಿ ಯತ್ನಿಸುವುದಿಲ್ಲ.

ವೃಷಭ
ಈ ರಾಶಿಯವರು ಭರವಸೆ ಮತ್ತು ರಹಸ್ಯಗಳನ್ನು ಉಳಿಸಿಕೊಳ್ಳಲು ಅತ್ಯುತ್ತಮವಾಗಿ ತಿಳಿದುಕೊಂಡಿರುತ್ತಾರೆ. ನೀವು ನಿಮ್ಮ ರಹಸ್ಯವನ್ನು ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎಂದು ಬಯಸಿದರೆ ಈ ರಾಶಿಯ ವ್ಯಕ್ತಿಗಳು ಪರಿಪೂರ್ಣರಾಗಿರುತ್ತಾರೆ. ಇವರು ಸಮಸ್ಯೆಯನ್ನು ತಾಳ್ಮೆಯಿಂದ ಕೇಳುತ್ತಾರೆ. ಜೊತೆಗೆ ಕೈಯಲ್ಲಾದ ಸಹಾಯ ಮಾಡಲು ಮುಂದಾಗುತ್ತಾರೆ. ಜನರು ಇವರಿಂದ ರಹಸ್ಯವನ್ನು ಹೊರಹಾಕಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ.

ಕನ್ಯಾ
ಈ ಚಿಹ್ನೆಯವರು ಅತ್ಯುತ್ತಮ ರೀತಿಯಲ್ಲಿ ರಹಸ್ಯವನ್ನು ಕಾಯ್ದುಕೊಳ್ಳುತ್ತಾರೆ. ಇವರು ಎಲ್ಲಾ ಸಮಯದಲ್ಲೂ ನಿಮ್ಮಕಡೆ ನಿಲ್ಲುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೆ ಅತ್ಯಂತ ಕಠಿಣ ಸಂದರ್ಭದಲ್ಲಿ ನಿಮ್ಮ ಪರವಾಗಿ ನಿಲ್ಲುತ್ತಾರೆ. ಇವರು ಅತ್ಯಂತ ಸ್ಮಾರ್ಟ್ ವ್ಯಕ್ತಿಗಳಾಗಿರುವಂತೆ ವಿಶ್ವಾಸಾರ್ಹ ವ್ಯಕ್ತಿಗಳೂ ಆಗಿರುತ್ತಾರೆ. ಇವರಿಗೆ ಕೆಲವು ವಿಷಯಗಳು ಯಾವಾಗಲೂ ವೈಯಕ್ತಿಕವಾಗಿ ಉಳಿಯಬೇಕು ಎನ್ನುವುದು ಅರಿತಿರುತ್ತಾರೆ. ಅಷ್ಟೇ ಅಲ್ಲದೆ ಇವರು ತಾವು ಹೇಗೆ ಪ್ರಗತಿ ಕಂಡೆವು? ಬದುಕಿಗೆ ಸಹಾಯ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲ. ಇವರು ಜೀವನದಲ್ಲಿ ಸರಳವಾದ ವಿಷಯಗಳನ್ನು ಆನಂದಿಸುತ್ತಾರೆ. ಈ ರಾಶಿಯ ಜನರು ಶಿಸ್ತುಬದ್ಧರಾಗಿದ್ದು ತಮ್ಮ ನಿತ್ಯದ ಚಟುವಟಿಕೆಯಲ್ಲಿ ಒಪ್ಪ ಓರಣಗಳನ್ನೇ ಬಯಸುತ್ತಾರೆ. ಇವರಿಗೆ ತಮ್ಮ ಕೆಲಸದಲ್ಲಿಯೇ ಆಗಲಿ ಸಂಬಂಧಪಟ್ಟ ಇತರರಿಂದ ಪಡೆಯುವ ಸಹಾಯಗಳೇ ಆಗಲಿ ಓರಣವಾಗಿರಬೇಕು. ಇದಕ್ಕಾಗಿ ಇವರು ಕಠಿಣ ಕ್ರಮಗಳನ್ನು ಕೈಗೊಳ್ಳುವ ಧೈರ್ಯವನ್ನು ಪ್ರಕಟಿಸುತ್ತಾರೆ.

ಮಕರ
ಈ ವ್ಯಕ್ತಿಗಳು ನಿಮ್ಮ ರಹಸ್ಯಗಳನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಅಲ್ಲದೆ ತಮ್ಮ ಬಳಕೆಗಾಗಿ ಮಾಹಿತಿಯನ್ನು ದುರುಪಯೋಗ ಪಡಿಸಿಕೊಳ್ಳುವ ಗೋಜಿಗೂ ಮುಂದಾಗರು. ಅದೆಂತಹದ್ದೇ ರಹಸ್ಯವಿದ್ದರೂ ತಮ್ಮಲ್ಲೇ ಇರಿಸಿಕೊಳ್ಳುತ್ತಾರೆ. ಇವರನ್ನು ನಂಬಿಕೆಗೆ ಅರ್ಹ ವ್ಯಕ್ತಿಗಳು ಎನ್ನಬಹುದು. ಅಷ್ಟೇ ಅಲ್ಲದೆ ಇವರು ಬಹಳ ಗಟ್ಟಿ ಮನಸ್ಸಿನವರು ಎಂದು ಹೇಳಬಹುದು. ಯಾವುದೇ ತೊಂದರೆ ಅಥವಾ ಅಪಘಾತಗಳಿಂದ ಅವರು ಎಂದಿಗೂ ಸಿಲುಕಿಕೊಳ್ಳುವುದಿಲ್ಲ. ಅವರು ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಾಣುವವರೆಗೂ ಹೋರಾಡುತ್ತಾರೆ. ಈ ರಾಶಿಯ ಜನರು ಸಾಮಾನ್ಯವಾಗಿ ನಿಯಮಗಳನ್ನು ಪಾಲಿಸುವವರಾಗಿದ್ದು ಉತ್ತಮ ಪ್ರೇಮಿಗಳೂ ಆಗಿರುತ್ತಾರೆ. ಇವರು ಸಂಪ್ರದಾಯಸ್ಥರೂ, ಹಠಮಾರಿಗಳೂ ಆಗಿರುತ್ತಾರೆ. ಹೊಸ ವಿಷಯಕ್ಕೆ ಇವರನ್ನು ಒಲಿಸುವುದು ಮತ್ತು ಬದಲಿಸುವುದೇ ಬಹಳ ತ್ರಾಸದಾಯಕ ಕಾರ್ಯವಾಗಿದೆ.

ಮೀನ
ಈ ರಾಶಿಚಕ್ರದವರು ಇತರರು ಹೇಳಿದ ವಿಚಾರವನ್ನು ಗೌರವಾನ್ವಿತವಾಗಿ ಸ್ವೀಕರಿಸುತ್ತಾರೆ. ವಿಷಯಗಳನ್ನು ಬಹಿರಂಗ ಪಡಿಸಿ ಯಾರೊಬ್ಬರ ಗೌರವ ಮತ್ತು ವಿಶ್ವಾಸವನ್ನು ಮುರಿಯಲು ಇವರು ಇಷ್ಟಪಡುವುದಿಲ್ಲ. ಇವರು ಅತ್ಯಂತ ಅರ್ಥಗರ್ಭಿತರಾಗಿರುತ್ತಾರೆ. ಇವರಲ್ಲಿ ಹೇಳಿಕೊಂಡ ವಿಚಾರವನ್ನು ಇವರು ಸತ್ತರೂ ಬಾಯಿಬಿಡುವುದಿಲ್ಲ.

ಸಿಂಹ
ಗಾಸಿಪ್‍ಗಳಿಂದ ಯಾವ ಬಗೆಯ ಹಾನಿ ಉಂಟಾಗುತ್ತದೆ ಎನ್ನುವುದರ ಕಲ್ಪನೆ ಇವರಿಗೆ ಇರುತ್ತದೆ. ಇವರು ಯಾರ ರಹಸ್ಯವನ್ನು ಬಯಲು ಮಾಡುವ ಕೆಲಸಕ್ಕೆ ಮುಂದಾಗುವುದಿಲ್ಲ. ವಿಶ್ವಾಸಾರ್ಹ ವ್ಯಕ್ತಿಗಳಾಗಿ ರಹಸ್ಯವನ್ನು ಗುಟ್ಟಾಗಿಯೇ ಇಡುತ್ತಾರೆ. ಇನ್ನು ಇವರು ಸದಾ ಅಗತ್ಯತೆ ಹಾಗೂ ಪ್ರಗತಿಯೆಡೆಗೆ ನಡೆಯಲು ಬಯಸುತ್ತಾರೆ. ಯಾವ ಮಾಹಿತಿಯನ್ನು ನಿರ್ಲಕ್ಷಿಸುವುದಿಲ್ಲ. ಜೊತೆಗೆ ಯಾವುದೇ ಮಾಹಿತಿಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲದೆ ಈ ರಾಶಿಯ ಜನರು ಜನ್ಮತಃ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇವರು ಸದಾ ಆಕರ್ಷಣೆಯ ಕೇಂದ್ರವಾಗಿರಬೇಕು ಎಂದು ಆಶಿಸುತ್ತಾರೆ. ಎಲ್ಲರೂ ಇವರನ್ನು ಇಷ್ಟಪಡಬೇಕು ಎಂದು ಬಯಸುತ್ತಾರೆ. ಇದೇ ಕಾರಣಕ್ಕೆ ಇವರು ತಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ಹೊರಗೆಡವುವ ಧೈರ್ಯ ತೋರುತ್ತಾರೆ.



Click it and Unblock the Notifications











