Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಈ ಮೂರು ರಾಶಿಯವರು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸಬಲ್ಲರು!
ಕೆಲವರು ತಾವು ಇದ್ದ ಪರಿಸರ ಅಥವಾ ಸ್ಥಳದಲ್ಲಿ ಒಂದು ಬಗೆಯ ಸಂತೋಷ ಹಾಗೂ ವ್ಯವಸ್ಥೆಯಿರುವಂತೆ ನೋಡಿಕೊಳ್ಳುತ್ತಾರೆ. ಒಂದೇ ಬಗೆಯ ವಿಧಾನವನ್ನು ಹೊಂದಿದ್ದರೆ ಅದನ್ನು ಬದಲಿಸಿ ಹೊಸತನವನ್ನು ತುಂಬುವಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಅವರು ಇದ್ದಲ್ಲಿ ಏನೋ ಒಂದು ಬಗೆಯ ಹೊಸತನ ಹಾಗೂ ಸಂತೋಷ ನೆಲೆಸುವಂತೆ ಮಾಡುವರು.
ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವರು ಎಷ್ಟೇ ಹತಾಷೆ ಅಥವಾ ಬೇಸರದಲ್ಲಿದ್ದರೂ ಬಹುಬೇಗ ತಮ್ಮ ನೋವನ್ನು ಮರೆಯುತ್ತಾರೆ. ಬದಲಿಗೆ ತಮ್ಮ ಸುತ್ತಲಿನ ಜನರೊಂದಿಗೆ ಬೆರೆಯುವುದು, ಅಲ್ಲಿಯ ವಾತಾವರಣದ ಬದಲಾವಣೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ವ್ಯಕ್ತಿಗಳ ಸಾಲಲ್ಲಿ ನೀವು ಇದ್ದೀರಾ? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಜೋತಿಷ್ಯ ಶಾಸ್ತ್ರದ ಪ್ರಕಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶೀಚಕ್ರದವರು ವಿಶೇಷವಾದ ಕೌಶಲ್ಯವನ್ನು ಹೊಂದಿರುತ್ತಾರೆ. ಅವರ ರಾಶಿಚಕ್ರ, ನಕ್ಷತ್ರ ಹಾಗೂ ಗ್ರಹಗಳ ಪ್ರಭಾವದಿಂದ ವಿಶೇಷ ಸಾಮಥ್ರ್ಯವನ್ನು ಹೊಂದಿರುತ್ತಾರೆ. ತಮ್ಮ ಆಲೋಚನೆ, ಸ್ಥಿರತೆ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ತಮ್ಮ ಜಗತ್ತನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರ ವಿಶೇಷ ಗುಣಗಳಿಂದಾಗಿ ಜಗತ್ತು ಬದಲಾವಣೆ ಹಾಗೂ ಹೊಸತನವನ್ನು ಪಡೆದುಕೊಳ್ಳುವುದು ಎಂದು ಹೇಳಲಾಗುವುದು.

ಮೇಷ
ಈ ರಾಶಿಯ ವ್ಯಕ್ತಿಗಳು ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಆದರೂ ಅನ್ಯಾಯವನ್ನು ಸಹಿಸಿಕೊಳ್ಳುವ ವ್ಯಕ್ತಿಗಳಾಗಿರುವುದಿಲ್ಲ. ಉತ್ಸಾಹ ಭರಿತ ವ್ಯಕ್ತಿಗಳಾದ ಇವರು ಕೆಲವು ಸಂದರ್ಭದಲ್ಲಿ ಶಾಂತವಾಗಿರಲು ಬಯಸುತ್ತಾರೆ. ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳೂ ಆಗಿರುತ್ತಾರೆ. ಅಗತ್ಯವಿರುವ ಶಕ್ತಿಯ ಮಟ್ಟವನ್ನು ಹೊಂದಿರುತ್ತಾರೆ. ಇವರು ತಾವಿರುವ ಪರಿಸರ ಹಾಗೂ ವಿಶ್ವವನ್ನೂ ಸಹ ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸುವಂತಹ ಸಾಮಥ್ರ್ಯವನ್ನು ಹೊಂದಿರುತ್ತಾರೆ.

ಕನ್ಯಾ
ಈ ರಾಶಿಯ ವ್ಯಕ್ತಿಗಳು ತಮ್ಮ ಆಲೋಚನೆಗಳನ್ನು ಅಷ್ಟು ಸುಲಭವಾಗಿ ಬಹಿರಂಗಪಡಿಸುವುದಿಲ್ಲ. ಇವರು ದೊಡ್ಡ ಯೋಜಕರಾಗಿರುತ್ತಾರೆ. ಇವರಲ್ಲಿ ಹಠಾತ್ ಪ್ರವೃತ್ತಿ ಇದ್ದರೂ ವಿಷಯಗಳನ್ನು ಸೂಕ್ತ ರೀತಿಯಲ್ಲಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಬಹುತೇಕ ಸಂದರ್ಭದಲ್ಲೂ ಕಾರ್ಯ ನಿರ್ವಾಹಕರಾಗಿರುವ ಇವರು ಇತರರೊಂದಿಗೆ ಬಹು ಆತ್ಮೀಯತೆಯಿಂದ ಮಾತನಾಡಬಲ್ಲರು. ಇವರು ಇತರರ ಬಗ್ಗೆ ಸೂಕ್ತ ಆಲೋಚನೆ ಹಾಗೂ ವಿಶ್ಲೇಷಣೆ ಮಾಡಬಲ್ಲರು. ಇವರು ಬಲವಾದ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಮನಸ್ಸು ಮಾಡಿದರೆ ತಾವು ಇರುವ ಪ್ರದೇಶ ಅಥವಾ ವಿಶ್ವವನ್ನೇ ಬದಲಾವಣೆ ಮಾಡಬಲ್ಲರು.

ಕುಂಭ
ಈ ರಾಶಿಯ ವ್ಯಕ್ತಿಗಳು ಇತರ ವ್ಯಕ್ತಿಗಳಿಗಿಂತ ವಿಭಿನ್ನವಾದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಸ್ವಭಾವತಃ ಜಿಜ್ಞಾಸೆ ಮತ್ತು ಜೀವನದಲ್ಲಿ ಸರಿಯಾದ ವಿಷಯಗಳನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಭಾವನಾತ್ಮಕ ಜೀವಿಗಳಾದ ಇವರು ಪ್ರಪಂಚದಾದ್ಯಂತ ನಡೆಯುವ ಅನ್ಯಾಯಗಳನ್ನು ಸಹಿಸಿಕೊಳ್ಳದ ವ್ಯಕ್ತಿಗಳು. ಇವರು ಅನ್ಯಾಯದ ವಿರುದ್ಧ ಎದ್ದೇಳುವರು. ಕೌಶಲ್ಯ ಭರಿತ ಗುಪ್ತಚರರಾದ ಇವರು ಪ್ರಪಂಚವನ್ನು ಸೂಕ್ತ ರೀತಿಯಲ್ಲಿ ಸುಧಾರಣೆ ಕಾಣುವಂತೆ ಹಾಗೂ ಬದಲಾವಣೆ ಹೊಂದುವಂತೆ ಮಾಡುವರು.



Click it and Unblock the Notifications