ಈ ರಾಶಿಚಕ್ರದವರು ಎಂದಿಗೂ ನಿರಾಶೆಯಿಂದಲೇ ಕೂಡಿರುತ್ತಾರೆ

Posted By: Deepu
Subscribe to Boldsky

ಒಂದು ನಾಣ್ಯಕ್ಕೆ ಎರಡು ಮುಖ ಇದ್ದಂತೆ, ಸಮಾಜದಲ್ಲಿ ಎರಡು ರೀತಿಯ ಮನಃಸ್ಥಿತಿಯವರನ್ನು ನೋಡಬಹುದು. ಕೆಲವರು ಎಂತಹ ಪರಿಸ್ಥಿತಿ ಬಂದರು ಸಮಾಧಾನ ಚಿತ್ತರಾಗಿರುತ್ತಾರೆ. ತಮ್ಮನ್ನು ತಾವು ಸಂತೋಷದಲ್ಲಿಟ್ಟುಕೊಂಡಿರುತ್ತಾರೆ. ಜೊತೆಗೆ ತಮ್ಮ ಜೊತೆ ಇರುವವರನ್ನು ಸಹ ಖುಷಿಯಿಂದ ಇರುವಂತೆ ಮಾಡುತ್ತಾರೆ. ಇನ್ನೂ ಕೆಲವರು ಸದಾ ನಕಾರಾತ್ಮಕ ಚಿಂತನೆಯನ್ನೇ ಹೆಚ್ಚಾಗಿ ಮಾಡುತ್ತಾರೆ. ಇರುವ ಖುಷಿಯನ್ನು ಅನುಭವಿಸುವ ಬದಲು ಕಷ್ಟಗಳನ್ನು ನೆನೆಯುವುದು ಅಥವಾ ಮುಂದೆ ಉಂಟಾಗಬಹುದಾದ ಸನ್ನಿವೇಶಗಳ ಕಲ್ಪನೆಯನ್ನು ಇವರೇ ಕಲ್ಪಿಸಿಕೊಂಡು ಕೊರಗುತ್ತಾರೆ. ಜೊತೆಗೆ ತಮ್ಮ ಸುತ್ತಲಿರುವವರ ಖುಷಿಯನ್ನು ಹಾಳುಮಾಡುತ್ತಾರೆ.

ಸ್ವಭಾವತಃ ನಿರಾಶೆಯ ಮನಃಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳು ಕೇವಲ ಅವರು ಬೆಳೆದು ಬಂದಿರುವ ವಾತಾವರಣದ ಪ್ರಭಾವಕ್ಕೆ ಒಳಗಾಗಿರುವುದಿಲ್ಲ. ಜೊತೆಗೆ ಅವರ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವದಿಂದಲೂ ಕೆಲವು ಸ್ವಭಾವಗಳು ರೂಢಿಯಲ್ಲಿ ಇರುತ್ತವೆ. ಖಗೋಳ ಸಂಶೋಧನೆಯ ಆಧಾರದ ಮೇಲೆ ವ್ಯಕ್ತಿ ಕೋಪಗೊಳ್ಳುತ್ತಾನೆ. ಮೊಂಡುತನದ ಸ್ವಭಾವ ರೂಢಿಸಿಕೊಳ್ಳುತ್ತಾರೆ. ಹಾಗಾದರೆ ನಿಮ್ಮ ಸ್ವಭಾವ ಯಾವ ರೀತಿಯ ಗುಣಗಳಿಂದ ಕೂಡಿದೆ? ನೀವು ಯಾವ ರಾಶಿ ಚಕ್ರದವರು ಎನ್ನುವ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲದಲ್ಲಿ ಇದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

- ಈ ರಾಶಿಯವರು ವಿಮರ್ಶಕರು ಹಾಗೂ ಹಾಸ್ಯ ಸ್ವಭಾವದವರಾಗಿರುತ್ತಾರೆ. ಬೇರೆ ವ್ಯಕ್ತಿಗಳು ಎಷ್ಟೇ ಕಷ್ಟಪಟ್ಟರೂ ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ.

- ಸೂರ್ಯನ ಚಿಹ್ನೆಯನ್ನು ಒಳಗೊಂಡಿರುವ ಇವರು ಎಲ್ಲಾ ವಿಚಾರದಲ್ಲೂ ಅವರದ್ದೇ ಆದ ಕೆಲವು ಅಂಶಗಳ ಪರಿಗಣಿಸಿ ನಿರ್ಧಾರ ಕೈಗೊಳ್ಳುತ್ತಾರೆ.

- ಇವರು ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ದೋಷಗಳನ್ನು ಕಂಡು ಹಿಡಿಯುತ್ತಿರುತ್ತಾರೆ. ಇವರು ಅತಿಯಾದ ನಿರೀಕ್ಷೆ ಹೊಂದುವ ಬದಲು ಕಡಿಮೆ ನಿರೀಕ್ಷೆಗಳನ್ನು ಹೊಂದುವುದು ಸೂಕ್ತ.

- ಯಾವುದೇ ರೀತಿಯಲ್ಲೂ ಅವರನ್ನು ಮನವರಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅವರ ಪ್ರಕಾರ ಅವರು ಅಂದುಕೊಂಡಿದ್ದು ಸರಿ. ನೀವು ತಪ್ಪಾಗಿ ಇರುತ್ತೀರಿ.

- ಅವರು ಏನು ಅಂದುಕೊಂಡಿರುತ್ತಾರೋ ಅದು ಸರಿಯಾಗಿರುತ್ತದೆ. ಅವರೊಂದಿಗೆ ವಾದಿಸುವ ಬದಲು ಆ ಸಮಯದಲ್ಲಿ ಸುಮ್ಮನಿರುವುದು ಸೂಕ್ತ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

- ಈ ರಾಶಿಯವರು ಎಲ್ಲದರಲ್ಲೂ ದೋಷವನ್ನು ಹುಡುಕುತ್ತಾರೆ.

- ಇವರು ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟು ಸಾಧ್ಯವೋ ಅಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.

- ಈ ರಾಶಿಯವರ ಸ್ನೇಹಿತರಾಗಿದ್ದರೆ ನೀವು ಪರಿಪೂರ್ಣತೆಯನ್ನು ಹೊಂದಿರುವ ವ್ಯಕ್ತಿಗಳು ಎಂದು ಹೇಳಬಹುದು. ಈ ರಾಶಿಯವರು ಆಂತರಿಕ ಸಂಘರ್ಷಗಳನ್ನು ಒಳಗೊಂಡಿರುತ್ತಾರೆ. ಅತ್ಯಂತ ನಿರಾಶದಾಯಕ ಭಾವನೆಯನ್ನು ಹೊಂದಿರುತ್ತಾರೆ.

- ಎಲ್ಲರೂ ಅವರಿಗೆ ಸುಲಭವಾಗಿ ಬರಲು ಮತ್ತು ಅವರು ಅಗತ್ಯವಿರುವ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಾಗದೆ ಇದ್ದಾಗ ತಮ್ಮ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಭವಿಷ್ಯವನ್ನು ಟೀಕಿಸುವುದು ಮತ್ತು ಶಪಿಸುತ್ತಾರೆ.

ಕನ್ಯಾ: 23 ಆಗಸ್ಟ್ -23 ಸೆಪ್ಟೆಂಬರ್

ಕನ್ಯಾ: 23 ಆಗಸ್ಟ್ -23 ಸೆಪ್ಟೆಂಬರ್

- ಈ ರಾಶಿಯವರನ್ನು ವಿಮರ್ಶಾತ್ಮಕ ವ್ಯಕ್ತಿಗಳು ಎಂದು ಹೇಳಬಹುದು. ಇವರು ಎಲ್ಲದರಲ್ಲೂ ದೋಷವನ್ನು ಕಂಡುಕೊಳ್ಳುತ್ತಾರೆ. ಜೊತೆಗೆ ಇತರರಲ್ಲೂ ದೋಷವನ್ನು ಹುಡುಕುತ್ತಾರೆ.

- ಈ ರಾಶಿಚಕ್ರದವರು ತಮ್ಮ ನಿರೀಕ್ಷೆಗೆ ಅನುಗುಣವಾಗಿ ಬದುಕುತ್ತಿಲ್ಲ ಎಂದು ಭಾವಿಸುತ್ತಾರೆ. ಜೀವನದಲ್ಲಿ ತಾವು ಸೋತಿದ್ದೀವಿ ಎಂದುಕೊಳ್ಳುತ್ತಾರೆ.

- ಇವರು ತೀರ್ವವಾದ ಕೆಲಸಗಾರರು ಎಂದು ಹೇಳಬಹುದು.

- ಇವರು ಕೆಲವು ವಿಚಾರದಲ್ಲಿ ಸಂಪೂರ್ಣತೆಯನ್ನು ಪಡೆಯಲು ಪರಿಪೂರ್ಣತೆಯ ಸಿದ್ಧಾಂತವು ವಿಭಿನ್ನವಾಗಿದೆ ಎಂದು ಅವರು ಅಂದುಕೊಳ್ಳುತ್ತಾರೆ.

- ಕೆಲವು ವಿಚಾರದಲ್ಲಿ ಪ್ರಾಯೋಗಿಕ ನಿರ್ಣಯವನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ. ಸಕಾರಾತ್ಮಕ ಯೋಚನೆ ಮಾಡುವ ಬದಲು ನಕಾರಾತ್ಮಕ ಯೋಚನೆಯನ್ನು ಮಾಡುತ್ತಾರೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

- ಈ ರಾಶಿಯವರು ಯಾವುದೇ ಸನ್ನಿವೇಶವನ್ನು ಎದುರಿಸಲು ಅಸಮರ್ಥರಾಗಿರುತ್ತಾರೆ. ಇವರಲ್ಲಿ ಇರುವ ಕೆಲವು ಗಂಭೀರವಾದ ನಕಾರಾತ್ಮಕ ಮತ್ತು ನಿರಾಶದಾಯಕ ಗುಣಗಳೇ ಇದಕ್ಕೆ ಕಾರಣ ಎಂದು ಹೇಳಲಾಗುವುದು.

- ಸಾಮಾನ್ಯವಾಗಿ ಅಷ್ಟು ಚಿಂತಕರಾಗದಿದ್ದರೂ ಅನಗತ್ಯವಾಗಿ ಕೆಲವು ವಿಚಾರಗಳಿಗೆ ಚಿಂತಿಸುತ್ತಾರೆ. ಇವರ ದೃಷ್ಟಿಕೋನವು ಋಣಾತ್ಮಕವನ್ನು ಒಳಗೊಂಡಿದೆ ಎಂದು ಹೇಳಬಹುದು.

- ಇವರನ್ನು ಮನವರಿಕೆ ಮಾಡುವುದು ಅಥವಾ ಯಾವುದಾದರೂ ವಿಚಾರವಾಗಿ ಇವರ ಮನಸ್ಸನ್ನು ಗೆಲ್ಲುವುದು ಬಹಳ ಕಷ್ಟ ಎಂದೇ ಹೇಳಬಹುದು.

- ಈ ರಾಶಿಯವರು ಏನು ಎನ್ನುವುದನ್ನು ತಿಳಿದುಕೊಳ್ಳಲು ಕಷ್ಟವಾಗುವುದು.

English summary

zodiac-signs-that-are-the-most-pessimistic

Like every coin has two sides, there are two types of people that exist on Planet Earth - one, the optimistic type who are just happy souls that spread love and are easy to go with always. And second, the pessimistic souls who find faults for the heck of finding and are not so easy going.