For Quick Alerts
ALLOW NOTIFICATIONS  
For Daily Alerts

ನೀವು ಆಡೋ ಮಾತು ನಿಮ್ಮದಲ್ಲ... ನಿಮ್ಮ ರಾಶಿಚಕ್ರದ ಪ್ರಭಾವದ್ದು!

By Deepu
|

ನೀವು ತುಂಬಾ ಮಾತನಾಡುವ ವ್ಯಕ್ತಿಗಳಾಗಿದ್ದರೆ ಅದು ನಿಮ್ಮ ತಪ್ಪಲ್ಲ. ಅದು ರಾಶಿ ಚಕ್ರದ ಪ್ರಭಾವ ಎಂದರೆ ನಂಬುತ್ತೀರಾ? ನಿಜ, ವ್ಯಕ್ತಿಯ ಭವಿಷ್ಯ, ನೋವು-ನಲಿವು ಎನ್ನುವುದು ಹೇಗೆ ರಾಶಿ ಚಕ್ರವನ್ನು ಆದರಿಸಿರುತ್ತದೆಯೋ ಹಾಗೆಯೇ ನಾವು ಆಡುವ ಮಾತುಗಳು ಸಹ ರಾಶಿ ಚಕ್ರದ ಪ್ರಭಾವದಿಂದಲೇ ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ. ನೀವು ಅತಿಯಾಗಿ ಮಾತನಾಡುತ್ತೀರಿ, ಅದರಿಂದ ಇತರ ಬೈಗುಳಕ್ಕೆ ನೀವು ಒಳಗಾಗುತ್ತೀರಿ ಎಂದಾದರೆ ನೀವು ಸುಲಭವಾಗಿ ರಾಶಿ ಚಕ್ರವನ್ನು ದೂಷಿಸಬಹುದು.

ಕೆಲವು ರಾಶಿ ಚಕ್ರಗಳು ನೈಸರ್ಗಿಕವಾಗಿಯೇ ಅದೃಷ್ಟವನ್ನು ಪಡೆದುಕೊಂಡಿರುತ್ತದೆ. ಕೆಲವು ಭಾವನಾತ್ಮಕ ರಾಶಿ ಚಕ್ರಗಳಾಗಿರುತ್ತವೆ. ಇನ್ನೂ ಕೆಲವು ಪ್ರೀತಿ ಮತ್ತು ಆರೈಕೆಗೆ ಹೆಸರಾದ ರಾಶಿಚಕ್ರವಾಗಿರುತ್ತದೆ. ಹಾಗೆಯೇ ಕೆಲವು ರಾಶಿಚಕ್ರದ ಅನ್ವಯದಡಿಯಲ್ಲಿ ವ್ಯಕ್ತಿಗಳು ಅತಿಯಾಗಿ ಮಾತನಾಡುವುದು ಮತ್ತು ತಮಾಷೆಗಳನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಾರೆ. ನೀವು ಸಹ ಅತಿಯಾಗಿ ಮಾತನಾಡುತ್ತೀರಿ ಎಂದಾದರೆ ಯಾವ ರಾಶಿಗೆ ಸೇರಿದವರು ಎಂದು ಮೊದಲು ತಿಳಿದುಕೊಳ್ಳಿ. ನಿಮ್ಮ ಗೊಂದಲವನ್ನು ಪರಿಹರಿಸಿಕೊಳ್ಳಬೇಕೆಂದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....

ಮಿಥುನ: (ಮೇ 21-ಜೂನ್ 20)

ಮಿಥುನ: (ಮೇ 21-ಜೂನ್ 20)

ಈ ರಾಶಿಚಕ್ರವು ಗಾಳಿ ಅಥವಾ ವಾಯು ಚಿಹ್ನೆಯನ್ನು ಒಳಗೊಂಡಿದೆ. ಇವರು ಗಾಳಿಯ ವೇಗದಲ್ಲೇ ಮಾತನಾಡುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಜೋಡಿಸುತ್ತಾ ಮಾತನಾಡುತ್ತಲೇ ಸಾಗುತ್ತಾರೆ. ಕೆಲವೊಮ್ಮೆ ಅದು ಅನವಶ್ಯಕ ಎಂದು ಅನಿಸದು ಹಾಗೆ ಮಾತನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಇವರು ಮಾತನಾಡುವಾಗ ಅಥವಾ ಚರ್ಚೆ ಮಾಡುವಾಗ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ.

ಮೇಷ: (ಮಾರ್ಚ್ 21-ಏಪ್ರಿಲ್ 19)

ಮೇಷ: (ಮಾರ್ಚ್ 21-ಏಪ್ರಿಲ್ 19)

ಈ ರಾಶಿಚಕ್ರವು ಬೆಂಕಿಯ ಚಿಹ್ನೆಯನ್ನು ಹೊಂದಿದೆ. ಇವರು ಯಾವುದೇ ವಿಚಾರದ ಬಗ್ಗೆ ಅತಿಯಾಗಿ ಚಿಂತಿಸುವುದಿಲ್ಲ. ತಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳುತ್ತಾರೆ. ಇವರ ಪ್ರಕಾರ ಯಾವುದು ಸರಿ ಎಂದು ಅಂದುಕೊಂಡಿರುತ್ತಾರೋ ಅದರ ಕುರಿತು ಯಾರೇ ವಾದ ಮಾಡಿದರೂ ಅದನ್ನು ಅವರು ಒಪ್ಪಿಕೊಳ್ಳುವಿದಿಲ್ಲ. ಇವರು ಉತ್ತಮ ವಿಚಾರದ ಕುರಿತು ದೀರ್ಘಕಾಲ ಚರ್ಚಿಸಬಲ್ಲರು.

ಧನು: (ನವೆಂಬರ್ 22-ಡಿಸೆಂಬರ್ 21)

ಧನು: (ನವೆಂಬರ್ 22-ಡಿಸೆಂಬರ್ 21)

ಈ ರಾಶಿಯವರು ಪ್ರಾಮಾಣಿಕ ಮತ್ತು ಉತ್ಸಾಹ ಭರಿತ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಇಷ್ಟವಾದ ವಿಚಾರದ ಬಗ್ಗೆ ಇವರು ಗಂಟೆಗಳಕಾಲ ಮಾತನಾಡಬಲ್ಲ ಸಮಥ್ರ್ಯವನ್ನು ಹೊಂದಿರುತ್ತಾರೆ. ಅಲ್ಲದೆ ತಮ್ಮ ಮಾತುಗಳನ್ನು ಯಾವುದೇ ಬೇಸರವಿಲ್ಲದೆ ಸಂತೋಷದಿಂದ ಹೇಳುತ್ತಾರೆ. ಇವರ ಬಾಯಿ ಮುಚ್ಚಿಸ ಬೇಕು ಎಂದರೆ ಒಂದು ಉತ್ತಮ ಪುಸ್ತಕವನ್ನು ಓದಲು ನೀಡಿದರೆ ಸಾಕು.

ಮೀನ (ಫೆಬ್ರವರಿ 19-ಮಾರ್ಚ್ 20)

ಮೀನ (ಫೆಬ್ರವರಿ 19-ಮಾರ್ಚ್ 20)

ಈ ರಾಶಿಯವರು ಬೇರೆಯವರ ಮನಸ್ಸಿನ ಮಾತು ಏನಾಗಿರಬಹುದು ಎನ್ನುವುದನ್ನು ಗುರುತಿಸುವ ಸಾಮಥ್ರ್ಯ ಇರುತ್ತದೆ. ಇವರು ಇತರರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿಯಲು ಗಂಟೆಗಟ್ಟಲೆ ಮಾತನಾಡುತ್ತಾರೆ. ಇವರಿಗೆ ಅವಕಾಶ ನೀಡಿದರೆ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ.

ಸಿಂಹ (ಜುಲೈ 23-ಆಗಸ್ಟ್ 22)

ಸಿಂಹ (ಜುಲೈ 23-ಆಗಸ್ಟ್ 22)

ಇವರು ಅತಿಯಾಗಿ ಮಾತನಾಡುವ ಕೌಶಲ್ಯವನ್ನು ಹೊಂದಿರುವುದಿಲ್ಲ. ಇವರು ಪ್ರೇಕ್ಷಕರನ್ನು ಮೆಚ್ಚಿಸಲು ಕಥೆ ಹೇಳುವುದು ಮತ್ತು ಭವ್ಯವಾದ ಘೋಷಣೆಗಳನ್ನು ಮಾಡಲು ಇಷ್ಟಪಡುತ್ತಾರೆ. ಇವರು ಮಾತನಾಡಲು ಪ್ರಾರಂಭಿಸಿದರೆ ಉಳಿದವರು ತಾಳ್ಮೆಯಿಂದ ಕೇಳಬೇಕಾಗುವುದು.

ಕುಂಭ (ಜನವರಿ 20-ಫೆಬ್ರವರಿ 18)

ಕುಂಭ (ಜನವರಿ 20-ಫೆಬ್ರವರಿ 18)

ಇವರು ವಿಶ್ವದ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರಯತ್ನಿಸುತ್ತಾರೆ. ಇವರು ಯಾವುದೇ ಕಾರಣಕ್ಕೂ ತಮ್ಮ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಕೆಲವು ವಿಚಾರ ಇವರಿಗೆ ಅರ್ಥವಾಗದೆ ಇದ್ದರೆ ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವವವರೆಗೂ ವಿಶ್ರಾಂತಿ ಪಡೆದುಕೊಳ್ಳುವುದಿಲ್ಲ.

ತುಲಾ (ಸೆಪ್ಟೆಂಬರ್ 23-ಅಕ್ಟೋಬರ್ 22)

ತುಲಾ (ಸೆಪ್ಟೆಂಬರ್ 23-ಅಕ್ಟೋಬರ್ 22)

ಇವರು ಅತ್ಯಂತ ಸುಂದರ ಭಾಷಣಕಾರರಾಗಿರುತ್ತಾರೆ. ಇವರು ಹೇಗೆ ಮಾತನಾಡುವುದು ಹಾಗೂ ಹೇಗೆ ಕೇಳುವುದು ಎನ್ನುವುದನ್ನು ಬಹಳ ಚೆನ್ನಾಗಿ ಅರಿತಿರುತ್ತಾರೆ. ಇವರು ಮಾತಿನಲ್ಲಿ ಹೇಗೆ ಹಿಡಿತವನ್ನು ಹಿಡಿಯುವುದು ಹಾಗೂ ಹೇಗೆ ಬದಲಾವಣೆಯನ್ನು ತೆಗೆದುಕೊಳ್ಳುವುದು ಎನ್ನುವುದನ್ನು ಅರಿತಿರುತ್ತಾರೆ.

ಕನ್ಯಾ (ಆಗಸ್ಟ್ 23-ಸೆಪ್ಟೆಂಬರ್ 22)

ಕನ್ಯಾ (ಆಗಸ್ಟ್ 23-ಸೆಪ್ಟೆಂಬರ್ 22)

ಈ ರಾಶಿಗೆ ಬುಧ ಗ್ರಹವು ಆಡಳಿತಾತ್ಮಕ ಗ್ರಹವಾಗಿದೆ. ಹಾಗಾಗಿ ಇವರು ಮನಸ್ಸಿನಲ್ಲಿ ಅನೇಕ ವಿಚಾರಗಳನ್ನು ಇಟ್ಟುಕೊಂಡಿರುತ್ತಾರೆ. ಇವರು ಮಾತನಾಡಲು ಸದಾ ಕೆಚ್ಚೆದೆಯ ಭಾವನೆಯನ್ನು ಹೊಂದಿರುತ್ತಾರೆ. ಇವರು ವಿಶ್ಲೇಷಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರ ಈ ಪ್ರತಿಭೆಗೆ ಬೇರೆ ಯಾರೂ ಸರಿಸಾಟಿ ಹೊಂದಿರುವುದಿಲ್ಲ.

ವೃಷಭ (ಏಪ್ರಿಲ್ 20-ಮೇ 20)

ವೃಷಭ (ಏಪ್ರಿಲ್ 20-ಮೇ 20)

ಇವರು ಸಣ್ಣ ಸಣ್ಣ ಜೋಕ್‍ಗಳನ್ನು ಮಾಡುತ್ತಿರುತ್ತಾರೆ. ಇವರು ಈ ಕೌಶಲ್ಯದಿಂದಲೇ ಗಂಟೆಗಳ ಕಾಲ ಮಾತನಾಡಬಲ್ಲರು. ಇವರು ಬಹುತೇಕ ಸಂದರ್ಭದಲ್ಲಿ ಅವರ ಬಗ್ಗೆಯೇ ಮಾತನಾಡಲು ಸಂತೋಷ ಪಡುತ್ತಾರೆ.

ಕರ್ಕ (ಜೂನ್ 21-ಜುಲೈ 22)

ಕರ್ಕ (ಜೂನ್ 21-ಜುಲೈ 22)

ಇವರು ತಮ್ಮ ಗೌಪ್ಯತೆಯನ್ನು ಇಷ್ಟಪಡುತ್ತಾರೆ. ಇವರು ತಮ್ಮ ಮನೆಯನ್ನು ಹೇಗೆ ಕಾಪಾಡುತ್ತಾರೋ ಹಾಗೆಯೇ ತಮ್ಮ ಆಲೋಚನೆಗಳ ಮೇಲೆ ಹಿಡಿತವನ್ನು ಹೊಂದಿರುತ್ತಾರೆ. ಯಾರು ಅದನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರನ್ನು ಅವರು ಪ್ರಶಂಸಿಸುತ್ತಾರೆ. ಅವರು ತಮ್ಮ ವಿಶ್ವಾಸವನ್ನು ಗಳಿಸಿಕೊಳ್ಳುತ್ತಾರೆ. ಜೊತೆಗೆ ನಿಷ್ಠಾವಂತ ವ್ಯಕ್ತಿಗಳಾಗಿ ಉಳಿಯುತ್ತಾರೆ. ಅವರ ಮನಸ್ಸಿನ ಮಾತುಗಳನ್ನು ಹೇಳುವುದರ ಮೂಲಕ ಗೌರವವನ್ನು ಸಂಪಾದಿಸುತ್ತಾರೆ.

ಮಕರ (ಡಿಸೆಂಬರ್ 22-ಜನವರಿ 19)

ಮಕರ (ಡಿಸೆಂಬರ್ 22-ಜನವರಿ 19)

ಇವರು ಅನಗತ್ಯ ಮಾತುಗಳನ್ನು ಅಥವಾ ಸಂಭಾಷಣೆ ನಡೆಸುವುದರ ಮೂಲಕ ಸಮಯವನ್ನು ವ್ಯರ್ಥ ಮಾಡುತ್ತಾರೆ. ಇವರು ಮಾತುಗಾರರಾಗುವ ಬದಲು ಉತ್ತಮ ಬರವಣಿಗೆಯ ಕೌಶಲ್ಯವನ್ನು ಹೊಂದಿದ್ದಾರೆ ಎನ್ನಬಹುದು. ತಮ್ಮ ಪದಗಳನ್ನು ಆಯ್ಕೆ ಮಾಡಲು ಸಮಯವನ್ನು ನೀಡಿದರೆ ಉತ್ತಮ ಮಾತುಗಾರರಾಗಬಹುದು.

 ವೃಶ್ಚಿಕ (ಅಕ್ಟೋಬರ್ 23-ನವೆಂಬರ್ 21)

ವೃಶ್ಚಿಕ (ಅಕ್ಟೋಬರ್ 23-ನವೆಂಬರ್ 21)

ಇವರು ಮಾತನಾಡುವುದಕ್ಕಿಂತ ಉತ್ತಮ ಕೇಳುಗರಾಗುತ್ತಾರೆ. ಇವರು ಬೇರೆಯವರು ಹೇಳಿದ ಮಾತುಗಳನ್ನು ಬರೆದು ಕೊಳ್ಳುತ್ತಾರೆ. ಇವರು ತಮಗೆ ಇಷ್ಟವಾಗದ ಸಂಗತಿಯನ್ನು ನಿರ್ದಾಕ್ಷಿಣ್ಯವಾಗಿ ದೂಷಿಸುತ್ತಾರೆ. ಆ ಮಾತುಗಳು ಅತ್ಯಂತ ಪರಿಣಾಮಕಾರಿಯಾದ ಪ್ರಭಾವ ಬೀರುವುದು.

English summary

Zodiac Signs Ranked From The “Most To Least” Talkative

If you are a talkative soul and wonder why you blabber so much, then blame your zodiac sign for it! Well, astrology has revealed that the most talkative people belong to certain zodiac signs. Here, in this article, we are listing zodiac signs based on the trait of the individuals being highly talkative. This list ranks the "most to least" talkative zodiac signs. So, go ahead and take a look to know where you stand. Check them out...
X
Desktop Bottom Promotion