ಈ ಐದು ರಾಶಿಚಕ್ರದವರು ಸದಾ ಗೆಲುವಿನ ಬಗ್ಗೆಯೇ ಚಿಂತಿಸುತ್ತಾರಂತೆ!

ನಮ್ಮ ಬದುಕಿನಲ್ಲಿ ಏನೆಲ್ಲಾ ಸಿಗುತ್ತದೆಯೋ ಅದು ನಮ್ಮ ಪಾಲಿಗೆ ಬಂದ ಪಂಚಾಮೃತ ಎನ್ನಬಹುದು. ಬಂದಿರುವುದನ್ನು ಅನುಭವಿಸುವುದು ಜಾಣತನವೂ ಹೌದು. ನಮಗೆ ಸಿಕ್ಕ ಸಮಯವನ್ನು ಅಥವಾ ಅವಕಾಶಗಳನ್ನು ಬಳಸಿಕೊಂಡು ಗುಲುವನ್ನು ಸಾಧಿಸಬೇಕು. ಆಗ ನಮ್ಮ ಜಾಣ್ಮೆಯು ಕೆಲಸ ಮಾಡುವುದು. ಬದುಕು ಎಲ್ಲಾ ಸುಖ ಸಂತೋಷದಿಂದ ಕೂಡಿರುವುದು. ಆದರೆ ಕೆಲವರು ತಮ್ಮ ಪ್ರಯತ್ನದಲ್ಲಿ ನಿರಸ ಅಥವಾ ಸೋಲು ಉಂಟಾದ ತಕ್ಷಣ ಆ ಚಿಂತನೆ ಅಥವಾ ಕೆಲಸವನ್ನು ಅಲ್ಲಿಗೆ ನಿಲ್ಲಿಸುತ್ತಾರೆ.

ಆದರೆ ಕೆಲವರು ಅಂದರೆ ಬೆರಳೆಣಿಕೆಯ ಮಂದಿಗಳಷ್ಟೇ ತಾವು ಅಂದುಕೊಂಡಿರುವುದನ್ನು ಸಾಧಿಸಲು ಮುಂದಾಗುತ್ತಾರೆ. ಜೊತೆಗೆ ಗೆಲುವಿನ ತುದಿಯನ್ನು ಮುಟ್ಟಿದ ನಂತರದಲ್ಲಿಯೇ ಪ್ರಯತ್ನವನ್ನು ನಿಲ್ಲಿಸುತ್ತಾರೆ. ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಜೀವನದಲ್ಲಿ ಆದಷ್ಟು ಸಾಧನೆ ಹಾಗೂ ಗೆಲುವನ್ನು ಸಾಧಿಸಲು ಬಯಸುತ್ತಾರೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳು ಯಾವೆಲ್ಲಾ ಸಾಧನೆ ಮಾಡಲು ಮುಂದಾಗುವರು? ಎನ್ನುವುದನ್ನು ತಿಳಿಯೋಣ ಬನ್ನಿ...

ಮೇಷ

ಮೇಷ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಸ್ಪರ್ಧಾತ್ಮ ಮನೋಭಾವದವರು. ಇವರು ಸದಾ ಗೆಲ್ಲಲು ಇಷ್ಟಪಡುವರು. ಇವರು ಗೆಲುವನ್ನು ಪಡೆದುಕೊಳ್ಳಲು ಯಾವ ಬಗೆಯಲ್ಲಾದರೂ ತಗ್ಗಿ ಬಗ್ಗಿ ನಡೆಯುತ್ತಾರೆ. ಸಾಮಾನ್ಯವಾಗಿ ಇವರು ಎಲ್ಲದರಲ್ಲೂ ಉತ್ತಮ ರೀತಿಯಲ್ಲಿಯೇ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ಹಾಗೊಮ್ಮೆ ಅವರ ನಿರೀಕ್ಷೆಯಂತೆ ಅಥವಾ ವಿಫಲರಾದಾಗ ಬಹಳ ಬೇಸರಕ್ಕೆ ಒಳಗಾಗುವರು. ಹಾಗಾಗಿ ಇವರು ಕಹಿಯಾದ ಸಮಯ ಎದುರಾದಾಗ ಆದಷ್ಟು ತಾಳ್ಮೆಯಿಂದ

ಇರುವುದನ್ನು ಕಲಿಯಬೇಕು. ಹಾಗೊಮ್ಮೆ ನಷ್ಟಗಳು ಉಂಟಾದಾಗ ಗೀಳಿಗೆ ಒಳಗಾಗದೆ ಗೆಲುವಿನ ಕಡೆಗೆ ಹೆಚ್ಚಿನ ಶ್ರಮ ಹಾಗೂ ಗಮನವನ್ನು ನೀಡಬೇಕು.

ಮಕರ

ಮಕರ

ಈ ರಾಶಿಚಕ್ರದವರಿಗೆ ಒಂದು ಚಿಕ್ಕ ಸೋಲು ಅಥವಾ ವಿಫಲತೆಯು ಸಹ ದೊಡ್ಡ ನೋವನ್ನುಂಟುಮಾಡುವುದು. ಸಾಮಾನ್ಯವಾಗಿ ಇವರು ಎಲ್ಲದರಲ್ಲೂ ಇತರರೊಂದಿಗೆ ತಮ್ಮ ಹೋಲಿಕೆಯನ್ನು ನಡೆಸುತ್ತಾರೆ. ತಮ್ಮ ಸಹೋದ್ಯೋಗಿಗಳು, ಕುಟುಂಬದವರು ಸೇರಿದಂತೆ ಅವರು ಇರುವಂತಹ ಸ್ಥಳದಲ್ಲೆಲ್ಲವೂ ಅವರಿಗೆ ಪ್ರೋತ್ಸಾಹ ಹಾಗೂ ಗೆಲುವು ಸಿಗಬೇಕು ಎಂದು ಬಯಸುತ್ತಾರೆ. ಇವರು ಜೀವನದಲ್ಲಿ ಮುಂದೆ ಒಳ್ಳೆಯದಾಗುತ್ತದೆ ಎನ್ನುವ ಭರವಸೆಯಿಂದ ಇರಬೇಕು ಎಂದು ಹೇಳಲಾಗುವುದು.

ಸಿಂಹ

ಸಿಂಹ

ಈ ರಾಶಿಯವರು ತಮ್ಮೆಡೆಗೆ ಹೆಚ್ಚು ಗಮನ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ಗೆಲುವು ಎನ್ನುವುದು ಇವರಿಗೆ ಅತ್ಯಂತ ಪ್ರಮುಖವಾದ ಸಂಗತಿ.ಬಹುತೇಕ ಸಂದರ್ಭದಲ್ಲಿ ಬಹಳ ದೊಡ್ಡ ಬಹುಮಾನವನ್ನು ಗೆಲ್ಲಲು ಬಯಸುವರು. ಇವರ ಪ್ರವೃತ್ತಿಯಲ್ಲಿಯೇ ಅತ್ಯಂತ ಸ್ಪರ್ಧಾತ್ಮಕ ಗುಣವು ಒಳಗೊಂಡಿದೆ ಎಂದು ಹೇಳಲಾಗುವುದು. ಇವರು ಏನನ್ನಾದರೂ ಕಳೆದುಕೊಂಡಾಗ ಆದಷ್ಟು ಸಹನೆ ಹಾಗೂ ಸಾಂತ್ವನವನ್ನು ತಂದುಕೊಳ್ಳಬೇಕಾಗುವುದು.

ಕರ್ಕ

ಕರ್ಕ

ಇವರು ಯಾವುದಾದರೂ ವಿಚಾರದಲ್ಲಿ ಗೆಲ್ಲಬೇಕು ಎಂದುಕೊಂಡಾಗ ಅದಕ್ಕೆ ಸಾಕಷ್ಟು ಪ್ರಯತ್ನವನ್ನು ಮಾಡುತ್ತಾರೆ. ಅತಿಯಾದ ಪ್ರಯತ್ನ ಮಾಡುವುದು ಇವರಿಗೊಂದು ಬಗೆಯ ಸಂತೋಷವನ್ನು ನೀಡುತ್ತದೆ. ಅಲ್ಲದೆ ಇವರು ಎಲ್ಲರ ಎದುರು ಸಹ ತಮ್ಮ ಕೋಪವನ್ನು ತೋರಿಸಲು ಮುಂದಾಗುತ್ತಾರೆ. ತಮ್ಮ ಗೆಲುವಿನ ಪಥದಲ್ಲಿ ನಡೆದ ನಷ್ಟಗಳ ಬಗ್ಗೆ ತ್ವರಿತವಾಗಿ ಮರೆಯುವರು. ಗೆಲುವು ಎನ್ನುವುದು ಈ ವ್ಯಕ್ತಿಗಳಿಗೆ ಎಲ್ಲವನ್ನೂ ತಂದುಕೊಡುತ್ತದೆ. ಸೋಲನ್ನು ಇವರು ಎಂದಿಗೂ ಜೀರ್ಣಿಸಿಕೊಳ್ಳುವುದಿಲ್ಲ ಎಂದು ಹೇಳಬಹುದು.

ವೃಷಭ

ವೃಷಭ

ಈ ವ್ಯಕ್ತಿಗಳು ಸಾಮಾನ್ಯವಾಗಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಷ್ಟಪಡುವುದಿಲ್ಲ. ಇವರು ನಷ್ಟವಾಗುವ ವಿಚಾರದ ಅಡಿಯಲ್ಲಿ ಸ್ಪರ್ಧೆಗೆ ಇಳಿಯುವುದಕ್ಕೆ ಹೆದರುತ್ತಾರೆ. ಉಳಿದಂತೆ ಎಲ್ಲಾ ಸಂದರ್ಭದಲ್ಲೂ ತಾವು ಗೆಲುವನ್ನು ಸಾಧಿಸಬೇಕು ಎಂತಲೇ ಬಯಸುವರು. ಇವರಿಗೆ ಗೆಲುವು ಒದಗಿ ಬಂದಾಗ ಆಕರ್ಷಕ ಹಾಗೂ ಅದ್ಭುತ ಎಂದು ತೋರಿಸಿಕೊಳ್ಳುವರು. ಹಾಗಾಗಿ ಇದು ಅವರ ವ್ಯಕ್ತಿತ್ವಕ್ಕೆ ಇರುವ ಎರಡು ಮುಖ ಎಂದು ತೋರುವುದು.

English summary

Zodiac Sign Individuals Who'd Always Want To Win

These zodiacs are listed as per the sun sign predictions and fighting to win is something they wish to do even until the very last moment. Go ahead and find out if your zodiac sign is listed here. Before you go ahead and find out the list of zodiacs, here's a little note: These predictions are based as per the astro experts and even if your sign is listed here, it does not mean you are a loser, instead it means you tend to fight until you win!
Story first published: Wednesday, June 13, 2018, 7:01 [IST]
X
Desktop Bottom Promotion