Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶನಿವಾರದ ದಿನ ಭವಿಷ್ಯ

ಸುಂದರವಾದ ಉಡುಗೆ ನಮ್ಮ ನೋಟ ಅಥವಾ ಸೌಂದರ್ಯವನ್ನು ಬದಲಿಸಬಹುದು. ಅದೇ ಉತ್ತಮ ನಡತೆ ನಮ್ಮ ಬದುಕನ್ನೇ ಬದಲಿಸುತ್ತದೆ. ನಮ್ಮ ನಡತೆ ಕೊಂಚ ಅಸಮಧಾನಕರವಾಗಿದ್ದರೂ ಮನೆ ಮಂದಿ ಸಹಿಸಿಕೊಳ್ಳುತ್ತಾರೆ. ಜೊತೆಗೆ ಅದೊಂದು ದೊಡ್ಡ ವಿಷಯ ಅಲ್ಲ ಎನ್ನುವ ರೀತಿಯಲ್ಲಿ ಮರೆಮಾಚಿ ಹೋಗುತ್ತದೆ. ಆದರೆ ಸಾಮಾಜಿಕ ಕ್ಷೇತ್ರದಲ್ಲಿರುವಾಗ, ನಮ್ಮನ್ನು ನಾವು ಸಮಾಜಕ್ಕೆ ಪ್ರಸ್ತುತ ಪಡಿಸುವಾಗ ನಮ್ಮ ನಡತೆ ಏನು? ಎನ್ನುವುದು ಬಹಳ ಮುಖ್ಯ ವಾಗಿರುತ್ತದೆ. ನಡತೆಯು ಸಕಾರಾತ್ಮಕವಾಗಿ, ಸಮಾಜಕ್ಕೆ ಪೂರಕವಾಗಿದ್ದರೆ ಜನರು ನಮ್ಮನ್ನು ಮೆಚ್ಚುತ್ತಾರೆ. ಅದೇ ನಕಾರಾತ್ಮಕ ವರ್ತನೆಗಳು ಇದ್ದರೆ ನಮ್ಮನ್ನು ಸಮಾಜದಿಂದ ಪ್ರತ್ಯೇಕವಾಗಿ ಗುರುತಿಸಿ, ದೂರವಿಡುತ್ತಾರೆ. ಹಾಗಾಗಿ ದಿನದಿಂದ ದಿನಕ್ಕೆ ಆದಷ್ಟು ಒಳ್ಳೆಯ ವಿಚಾರವನ್ನು ತಿಳಿದುಕೊಳ್ಳುತ್ತಾ, ಸದ್ಗುಣಗಳನ್ನು ಅಳವಡಿಸಿಕೊಂಡು ಬದುಕೋಣ.
ಶನಿವಾರವಾದ ಈ ದಿನ ಸಾಮಾನ್ಯವಾಗಿ ಅನೇಕರು ವಾರದ ರಜೆಯ ಮಜವನ್ನು ಅನುಭವಿಸುವ ಗುಂಗಿನಲ್ಲಿ ಇರುತ್ತಾರೆ. ಗ್ರಹಗತಿಗಳ ಬದಲಾವಣೆಯಿಂದ ಯಾವೆಲ್ಲಾ ಬದಲಾವಣೆಗಳನ್ನು ನೀವು ಅನಿರೀಕ್ಷಿತವಾಗಿ ಅನುಭವಿಸಬೇಕಾಗುವುದು ಎನ್ನುವ ವಿವರಣೆಯನ್ನು ಈ ಮುಂದೆ ನೀಡಲಾಗಿರುವ ರಾಶಿ ಭವಿಷ್ಯದ ವಿವರಣೆ ನೋಡಿ ಅರಿಯಿರಿ.

ಮೇಷ:28 ಮಾರ್ಚ್ -20 ಏಪ್ರಿಲ್
ಇಂದು ನಿಮಗೆ ಸುಖಮಯವಾದ ಜೀವನ. ಕಪ್ಪು ಬಟ್ಟೆಯನ್ನು ಧರಿಸದಿರಿ. ಮೂರನೆ ವ್ಯಕ್ತಿಯ ಜಗಳಕ್ಕೆ ನೀವು ಚಿಂತಿಸದಿರಿ. ಮಾಡುತ್ತಿರುವ ಉದ್ಯೋಗವನ್ನು ಮುಂದುವರಿಸಿ. ವಿದ್ಯಾರ್ಥಿಗಳಿಗೆ ಶುಭದಿನ. ಸಹಪಾಠಿಗಳಿಂದ ಸಂಪೂರ್ಣ ಸಹಕಾರ ದೊರೆಯುವುದು. ನೆಮ್ಮದಿಯ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗೆ ಆಂಜನೇಯನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ
ನೀವು ಆದಷ್ಟು ಕಾಳಜಿಯಿಂದ ಇರುವುದು ಸೂಕ್ತ. ನಿಮಗೆ ಸಂಬಂಧಿಸದ ಕೆಲವು ಆರೋಪಗಳು ನಿಮ್ಮ ಬೆನ್ನೇರುವ ಸಾಧ್ಯತೆಗಳಿವೆ. ಬಂಧುಗಳಿಂದಲೂ ಕಿರಿಕಿರಿ ಉಂಟಾಗುವ ಸಾಧ್ಯತೆಗಳಿವೆ. ಮಾಡುತ್ತಿರುವ ಕೆಲಸದಲ್ಲಿ ಕೆಲವರ ಹಸ್ತಕ್ಷೇಪಗಳಿಂದಲೂ ಸಮಸ್ಯೆ ಉದ್ಭವ ಆಗಬಹುದು. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸರ್ಕಾರಿ ನೌಕರರಿಗೂ ಸಹ ಮೇಲ್ದರ್ಜೆಯವರಿಂದ ಕಿರುಕುಳ ಉಂಟಾಗುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯಿಂದ ಲಾಭ ದೊರೆಯುವ ಸಾಧ್ಯತೆಗಳು ಕಡಿಮೆ. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ವಿಷ್ಣುವಿನ ಪ್ರಾರ್ಥನೆ ಮಾಡಿ.

ಮಿಥುನ: ಮೇ 21 ಜೂನ್ 20
ಇಂದು ನಿಮ್ಮ ಜೀವನದಲ್ಲಿ ನೆಮ್ಮದಿ ಮತ್ತು ಸಂತೋಷವನ್ನು ಪಡೆದುಕೊಳ್ಳುವಿರಿ. ಅನೇಕ ದಿನಗಳಿಂದ ಬರಬೇಕಾಗಿದ್ದ ಹಣ ಇಂದು ನಿಮ್ಮ ಕೈಗೆ ಸೇರುವ ಸಾಧ್ಯತೆಗಳಿವೆ. ಸ್ತ್ರೀಯರಿಂದ ಶುಭ ಸಮಾಚಾರವನ್ನು ನೀವು ಕೇಳಬಹುದು. ಪ್ರಗತಿಯತ್ತ ನೀವು ಸಾಗುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಸಾಮಾನ್ಯ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಪ್ರಗತಿಯುತವಾದ ಬದುಕಿಗೆ ನೀವು ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22
ಸಮಾಧಾನದ ಬದುಕನ್ನು ಕಾಣುವಿರಿ. ಸಂಪೂರ್ಣವಾಗಿ ಲಾಭಾಂಶವನ್ನು ನಿರೀಕ್ಷೆ ಮಾಡಬಹುದು. ಹಣಕಾಸಿನ ಹೂಡಿಕೆಗೆ ಅಷ್ಟು ಉತ್ತಮವಾದ ದಿನವಲ್ಲ. ಹೊಸ ಉದ್ಯೋಗದ ಆರಂಭವನ್ನು ಇಂದು ಮಾಡದಿರಿ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಅನೇಕ ದಿನಗಳಿಂದ ಭೇಟಿಯಾಗದ ಸ್ನೇಹಿತನ ದರ್ಶನ ಆಗುವುದು. ನಿಮ್ಮ ಕನಸು ನನಸಾಗುವುದು. ಕಲಾವಿದರು ಅನುಕೂಲವನ್ನು ಪಡೆದುಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23
ಸಮಾಧಾನದ ಬದುಕು ಅಸಾಧ್ಯವಾಗುವುದು. ಮನೆಯಲ್ಲೂ ಕಿರಿಕಿರಿಯ ವಾತಾವರಣ ನಿಮ್ಮನ್ನು ಕಾಡುವುದು. ಬಂಧು ಮಿತ್ರರು ನಿಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಬಹುದು. ಜೊತೆಯಲ್ಲಿರುವ ಸ್ನೇಹಿತರೇ ನಿಮ್ಮ ಕೆಲಸದಲ್ಲಿ ಅಡೆತಡೆಯನ್ನು ಉಂಟುಮಾಡಬಹುದು. ಹಿತ ಶತ್ರುಗಳ ಬಾಧೆ ನಿಮ್ಮನ್ನು ಬಾಧಿಸುವುದು. ಕಾಳಜಿಯಿಂದ ಇರಿ. ಆರೋಗ್ಯದ ಬಗ್ಗೆ ಆದಷ್ಟು ಕಾಳಜಿ ವಹಿಸಿ. ಮಧುಮೇಹ ಹಾಗೂ ರಕ್ತದೊತ್ತಡದಂತಹ ಸಮಸ್ಯೆ ಉಲ್ಭಣಿಸುವ ಸಾಧ್ಯತೆಗಳಿವೆ. ರಾಹು ಕಾಲದ ಪ್ರಯಾಣ ಮಾಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಈಶ್ವರನ ಆರಾಧನೆ ಹಾಗೂ ಆಂಜನೇಯನ ಪ್ರಾರ್ಥನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಯಾವುದೇ ಉದ್ಯಮದಲ್ಲಿ ಆತುರವನ್ನು ಮಾಡದಿರಿ. ಕೆಲವು ಮಾನಸಿಕ ಕಿರಿಕಿರಿ ಮುಂದುವರಿಯುವುದು. ಅನಿರೀಕ್ಷಿತ ಸೋಲುಗಳನ್ನು ಸಹ ಎದುರಿಸಬೇಕಾದ ಲಕ್ಷಣಗಳಿವೆ. ತಾಂತ್ರಿಕ ವಿಚಾರದಲ್ಲಿ ಜಾಗೃತರಾಗಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಈಶ್ವರನ ಆರಾಧನೆ ಹಾಗೂ ಆಂಜನೇಯನ ಪ್ರಾರ್ಥನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಸಮಾಧಾನಕರವಾದ ಜೀವನ ನಿಮಗೆ ಲಭ್ಯವಾಗುವುದು. ಎಲ್ಲಾ ಬಗೆಯ ಪ್ರಗತಿಯನ್ನು ನೀವು ಕಾಣುವಿರಿ. ವೃತ್ತಿ ಕ್ಷೇತ್ರದಿಂದ ಹಿಡಿದು ವೈಕ್ತಿಕ ಜೀವನದಲ್ಲೂ ಯಶಸ್ಸು ಹಾಗೂ ಸಂತೋಷವನ್ನು ಪಡೆದುಕೊಳ್ಳುವಿರಿ. ಉತ್ತಮ ಜೀವನದ ಕಾಯಕಲ್ಪಕ್ಕೆ ನೀವು ಸಾಕ್ಷಿಯಾಗುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿಯನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಸಂತೋಷ ಹಾಗೂ ಪ್ರಗತಿಯ ಜೀವನಕ್ಕಾಗಿ ಆಂಜನೇಯನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಶನಿಯ ಪ್ರಭಾವ ಇರುವುದರಿಂದ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಕಾಲುನೋವು ಮತ್ತು ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಬಾಧಿಸುವ ಸಾಧ್ಯತೆಗಳಿವೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಗಳು ಇವೆ. ವೈದ್ಯಾಧಿಕಾರಿಗಳು ಅವಮಾನವನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್
ವಿಪರೀತವಾದ ದೇಹ ಆಯಾಸ. ಇಲ್ಲ ಸಲ್ಲದ ಸಮಸ್ಯೆಗಳು ಮನಸ್ಸಿಗೆ ನೋವು ಉಂಟುಮಾಡುವುದು. ಮನೆಯಲ್ಲಿ ಕಿರಿಕಿರಿ ವಾತಾವರಣ. ಪತಿ ಪತ್ನಿಯರ ಮಧ್ಯೆ ಜಗಳ ಉಂಟಾಗುವ ಸಾಧ್ಯತೆಗಳಿವೆ. ಅನಿರೀಕ್ಷಿತವಾಗಿ ಬಂದು ಒದಗುವ ಹಲವಾರು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20
ಇಂದು ನೀವು ಸಮಾಧಾನಕರವಾದ ಬದುಕನ್ನು ಕಾಣುವಿರಿ. ಬಂಧು ಮಿತ್ರರು ಸಂಪೂರ್ಣವಾದ ಸಹಕಾರವನ್ನು ನೀಡುವರು. ಅನೇಕ ದಿನಗಳಿಂದ ನೀವು ಅಂದುಕೊಂಡ ವಿಚಾರದಲ್ಲಿ ಅಲ್ಪ ಪ್ರಮಾಣದ ಲಾಭವನ್ನು ಪಡೆದುಕೊಳ್ಳುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಏರು ಪೇರು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18
ಇಂದು ನಿಮಗೆ ಶುಭ ದಿನ. ಅನಿರೀಕ್ಷಿತ ಸಮಸ್ಯೆಗಳು ದೂರವಾಗುವುದು. ಸ್ತ್ರೀಯರು ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವರು. ಸುಂದರವಾದ ನಿಮ್ಮ ಬದುಕಿಗೆ ಭಗವಂತನ ಕೃಪೆ ಲಭ್ಯವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್
ಇಂದು ನಿಮಗೆ ಶುಭಕರವಾದ ದಿನ. ಮಾಡುತ್ತಿರುವ ಉದ್ಯಮದಲ್ಲಿ ಪ್ರಗತಿಯನ್ನು ಕಾಣುವಿರಿ. ನಿಮ್ಮ ಸುಂದರ ಬದುಕಿಗೆ ದೇವರ ಆಶೀರ್ವಾದ ಲಭಿಸುವುದು. ಪತ್ರಕರ್ತರಿಗೆ ಅನುಕೂಲವಾಗುವುದು. ರಾಜಕಾರಣಿಗಳಿಗೆ ನೆಮ್ಮದಿ ಹಾಗೂ ಮೇಲ್ದರ್ಜೆಯ ನಾಯಕರಿಂದ ಪ್ರಶಂಸೆ ದೊರೆಯುವುದು. ಇಂದು ಮಾಂಸಹಾರವನ್ನು ಸೇವಿಸದಿರಿ. ಪ್ರಗತಿಯ ಜೀವನ ಹಾಗೂ ಇನ್ನಷ್ಟು ಸಂತೋಷಕ್ಕೆ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.



Click it and Unblock the Notifications











