ಸೋಮವಾರದ ದಿನ ಭವಿಷ್ಯ

Posted By: Divya pandith
Subscribe to Boldsky

ಭಾನುವಾರ ಕಳೆದು ಸೋಮವಾರಕ್ಕೆ ಕಾಲಿಡುತ್ತಿದ್ದಂತೆ ಸಾಮಾನ್ಯವಾಗಿ ಎಲ್ಲರಿಗೂ ಒಂದು ಬಗೆಯ ಒತ್ತಡ. ಬಹು ಜನರಿಗೆ ಇಂದು ಯಾವೆಲ್ಲಾ ಕೆಲಸ ಮಾಡಬೇಕಾಗುತ್ತದೆ ಎನ್ನುವ ಚಿಂತೆ, ಕೆಲವರಿಗೆ ಇಷ್ಟು ದಿನದಿಂದ ಮಾಡುತ್ತಿದ್ದ ಕೆಲಸವನ್ನು ಇಂದಾದರೂ ಪೂರ್ಣಗೊಳಿಸಲು ಸಾಧ್ಯವಾಗುವುದೇ? ಎನ್ನುವ ಗೊಂದಲ ಕಾಡುತ್ತಿರುತ್ತವೆ.

ವಿಶ್ರಾಂತಿಯ ದಿನ ಕಳೆದು ಕೆಲಸ ಪ್ರಾರಂಭವಾಗುತ್ತದೆ ಎನ್ನುವಾಗ ಅದೇನೋ ಒಂದು ಬಗೆಯ ಕಳವಳ ಹಾಗೂ ಚಿಂತೆ ಕಾಡುವುದು ಸತ್ಯ. ಇದರ ನಡುವೆ ನಮ್ಮ ಗ್ರಹಗತಿಗಳು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೆ ಎನ್ನುದು ಸಹ ಬಹು ಮುಖ್ಯ. ಸೋಮವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳು ನಡೆಯುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದಾದರೆ ಈ ಮುಂದೆ ನೀಡಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ... 

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳ ಲಾಭವನ್ನು ಇಂದು ಅನುಭವಿಸುವಿರಿ. ಹೊಸ ಉದ್ಯೋಗದ ಮತ್ತು ಹೊಸ ಆಯಾಮಗಳಲ್ಲಿ ಹೊಸ ತಿರುವುಗಳನ್ನು ಕಾಣುವಿರಿ. ನಿಮ್ಮ ಜೀವನದಲ್ಲಿ ಸಂತೋಷವನ್ನು ಕಾಣುವಿರಿ. ಮಕ್ಕಳಿಂದ ಶುಭ ವಾರ್ತೆಯನ್ನೇ ಕೇಳುವಿರಿ. ವಿದೇಶ ಯಾನ ಮಾಡಲು ಬಯಸಿದವರ ಕನಸು ನನಸಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಂದಿಷ್ಟು ನೆಮ್ಮದಿಯನ್ನು ಪಡೆದುಕೊಳ್ಳುವಂತಹ ದಿನ. ವಿದ್ಯಾರ್ಥಿಗಳಿಗೂ ಶುಭ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇಂದು ನಿಮಗೆ ಸಮಾಧಾನದ ಬದುಕು ಕಾಣುವುದು. ಮನೆಯಲ್ಲಿ ಪೂರ್ಣ ಪ್ರಮಾಣದ ನೆಮ್ಮದಿ ದೊರೆಯದು. ಸಾಲಗಾರರ ಬಾಧೆಗೆ ತುತ್ತಾಗುವ ಸಾಧ್ಯತೆಗಳಿವೆ. ಖಾಸಗಿ ಮತ್ತು ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಒಂದಿಷ್ಟು ಅಡೆತಡೆಗಳನ್ನು ಅನುಭವಿಸಬೇಕಾಗುವ ಸಾಧ್ಯತೆಗಳಿವೆ. ಖನಿಜೋತ್ಪನ್ನ ವ್ಯವಹಾರದಲ್ಲೂ ಅನೇಕ ಅಡೆತಡೆಗಳಿರುತ್ತವೆ. ಮಕ್ಕಳಿಗಾಗಿ ಹಣವನ್ನು ವ್ಯಯಿಸುವ ಸಾಧ್ಯತೆಗಳಿವೆ. ಹೆಂಡತಿಯ ಆರೋಗ್ಯದ ಕುರಿತು ಹಣವನ್ನು ವ್ಯಯಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನೀವು ಸುಖಮಯವಾದ ಜೀವನವನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿಯನ್ನು ಅನುಭವಿಸುವಿರಿ. ಅನಿರೀಕ್ಷಿತ ಸೋಲುಗಳು ದೂರವಾಗುವುದು. ವಿದೇಶಯಾನದ ಕನಸನ್ನು ನನಸಾಗಿಸಿಕೊಳ್ಳುವ ಲಕ್ಷಣವಿದೆ. ಉನ್ನತ ವ್ಯಾಸಂಗಕ್ಕೆ ಭಗವಂತನ ಕೃಪೆ ದೊರೆಯುವುದು. ವಿದ್ಯಾರ್ಥಿಗಳು ಕೆಲವು ಅಡೆತಡೆಗಳನ್ನು ನಿವಾರಿಸಿಕೊಳ್ಳುವರು. ಹಿರಿಯರ ಆರೋಗ್ಯದಲ್ಲೂ ಸುಧಾರಣೆ ಕಾಣುವರು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇಂದು ನೀವು ಲಾಭವನ್ನು ಗಳಿಸುವಿರಿ. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಸಣ್ಣ ಪುಟ್ಟ ವ್ಯಾಪಾರಿಗಳಿಗೂ ಉತ್ತಮ ಲಾಭ ಉಂಟಾಗುವುದು. ಮಕ್ಕಳಿಂದ ಶುಭ ವಾರ್ತೆಯನ್ನೇ ನಿರೀಕ್ಷೆ ಮಾಡಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಅಂದುಕೊಂಡ ಕಾರ್ಯ ಸರಾಗವಾಗಿ ನೆರವೇರುವುದು. ನ್ಯಾಯಾಂಗ ವ್ಯವಸ್ಥೆಯಲ್ಲೂ ಜಯವನ್ನು ನೀವು ಗಳಿಸಿಕೊಳ್ಳುವಿರಿ. ಇನ್ನಷ್ಟು ಪ್ರಗತಿ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಆದಷ್ಟು ಕಾಳಜಿಯಿಂದ ಇರಿ. ಆರೋಗ್ಯದಲ್ಲೂ ಏರುಪೇರು ಉಂಟಾಗುವುದು. ಆಸ್ಪತ್ರೆಗೆ ಹೋಗಲೇ ಬೇಕಾದಂತಹ ಪರಿಸ್ಥಿತಿ ಉಂಟಾಗುವುದು. ಮಧುಮೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳು ನಿಮ್ಮನ್ನು ಹೈರಾಣ ಗೊಳಿಸುವುದು. ಕೆಲವು ದೂರ್ತ ಸನ್ನಿವೇಶದಿಂದ ನಿಮ್ಮ ಮನಸ್ಸಿಗೆ ನೋವು ಉಂಟಾಗುವ ಸಾಧ್ಯತೆಗಳಿವೆ. ಹಿತ ಶತ್ರುಗಳ ಬಾಧೆ ಉಂಟಾಗುವುದು. ಅನಿವಾರ್ಯವಾಗಿ ಕೆಲವು ಕೆಲಸಗಳಿಗೆ ಹಣವನ್ನು ವ್ಯಯಿಸಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ವಿದ್ಯಾರ್ಥಿಗಳ ಕನಸು ಭಗ್ನಗೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಸಮಾಧಾನದ ಬದುಕನ್ನು ಕಾಣುವಿರಿ. ಅನಿರೀಕ್ಷಿತವಾದ ಹಲವಾರು ಸೋಲುಗಳಿಂದ ದೂರವಾಗುವಿರಿ. ಮನೆಯಲ್ಲಿ ನೆಮ್ಮದಿ ಪಡೆಯುವಿರಿ. ಸುಂದರವಾದ ಜೀವನಕ್ಕೆ ನಾಂದಿಗುವುದು. ಹೊಸದಾದ ಕೆಲವು ಆಯಾಮಗಳು ನಿಮ್ಮ ಜೀವನಕ್ಕೆ ಉತ್ತಮ ತಿರುವನ್ನು ತಂದುಕೊಡುವುದು. ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇಂದು ನಿಮಗೆ ಸಮಾಧಾನಕರವಾದ ದಿನ. ಮನೆಯಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಅನಿರೀಕ್ಷಿತ ಸೋಲು ದೂರವಾಗುವುದು. ಸ್ಥಿರಾಸ್ತಿಯಿಂದ ಲಾಭ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಜಯ ಗಳಿಸುವಿರಿ. ಅನೇಕ ದಿನಗಳಿಂದ ಬರಬೇಕಾದ ಹಣಗಗಳು ನಿಮ್ಮ ಕೈ ಸೇರುವ ಸಾಧ್ಯತೆಗಳಿವೆ. ಮಾತಿನಿಂದಲೇ ಅನೇಕ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುವ ಸಾಧ್ಯತೆಗಳಿವೆ. ಇನ್ನಷ್ಟು ಪ್ರಗತಿಗಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಸಮಾಧಾನದ ಬದುಕನ್ನು ಪೂರ್ತಿ ಪ್ರಮಾಣದಲ್ಲಿ ಅನುಭವಿಸಲು ಅಡೆತಡೆಗಳು ಉಂಟಾಗುವುದು. ಅನಿರೀಕ್ಷಿತವಾದ ಕೆಲವು ಸೋಲುಗಳನ್ನು ನೀವು ಕಾಣಬೇಕಾಗುವುದು. ಅಪಮಾನಕರವಾದ ಬೆಳವಣಿಗೆಯನ್ನು ನೀವು ಅನುಭವಿಸಬೇಕಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರು ಒಂದಿಷ್ಟು ಪ್ರಮಾಣದ ಅಡೆತಡೆಗಳನ್ನು ಅನುಭವಿಸಬೇಕಾಗುವ ಸಾಧ್ಯತೆಗಳಿವೆ. ಸಮಾಜ ಸುಧಾರಕರಿಗೂ ಉತ್ತಮವಾದ ದಿನವಲ್ಲ. ವಿದ್ಯಾರ್ಥಿಗಳು ಅಧಿಕ ಶ್ರಮವಹಿಸುವುದರಿಂದ ಜಯವನ್ನು ಗಳಿಸಿಕೊಳ್ಳುವಿರಿ. ಪ್ರಗತಿ ಜೀವನಕ್ಕಾಗಿ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಜನ್ಮ ಶನಿಯ ಪ್ರಭಾವ ಇರುವುದರಿಂದ ಆಂತರ್ಯದ ವಿಚಾರವು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ. ಸ್ತ್ರೀಯರಿಂದ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿಗೆ ಮಸಿ ಬಳಿಯುವ ಕೃತ್ಯ ಎಸಗುವ ಸಾಧ್ಯತೆಗಳಿರುತ್ತವೆ. ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಅನುಕೂಲ ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ಅಡೆತಡೆಗಳನ್ನೇ ಅನುಭವಿಸ ಬೇಕಾಗುವುದು. ಕಪ್ಪು ಬಟ್ಟೆಯ ಧಾರಣೆಗೆ ಮುಂದಾಗದಿರಿ. ಪ್ರಗತಿಯನ್ನು ಕಾಣಲು ಗಣೇಶನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇಂದು ಸುಂದರವಾದ ಜೀವನವನ್ನೇ ಕಾಣುವಿರಿ. ಅನೇಕ ದಿನಗಳಿಂದ ಅಂದುಕೊಂಡ ವಿಚಾರದಲ್ಲಿ ಪ್ರಗತಿಯನ್ನೇ ಕಾಣುವಿರಿ. ಕೆಲವು ಕೆಲಸ ಕಾರ್ಯದಲ್ಲಿ ಸುಗಮವಾದ ಪರಿಣಾಮವನ್ನೇ ಅನುಭವಿಸುವಿರಿ. ಹಿರಿಯರಿಂದ ಒಂದಿಷ್ಟು ಹಣಕಾಸಿನ ಸಹಾಯ ಉಂಟಾಗುವುದು. ಕೈಗಾರಿಕೋದ್ಯಮದಲ್ಲಿ ಇರುವವರಿಗೆ ಒಂದಿಷ್ಟು ಅನುಕೂಲವನ್ನು ತಂದುಕೊಡುತ್ತದೆ. ಸುಂದರವಾದ ಜೀವನವನ್ನು ನೀವು ಪಡೆದುಕೊಳ್ಳಲು ಗಣೇಶನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಸುಂದರವಾದ ಬದುಕನ್ನೇ ಕಾಣುವಿರಿ. ಅನಿರೀಕ್ಷಿತ ಸೋಲು ದೂರಾಗುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಕಲಾವಿದರಿಗೆ ಚಿತ್ರೋದ್ಯಮದಲ್ಲಿ ಒಂದಿಷ್ಟು ಅವಕಾಶ ಹಾಗೂ ಚರ್ಚೆಗಳು ನೆರವೇರುವ ಸಾಧ್ಯತೆಗಳಿವೆ. ಜನಪ್ರಿಯ ನಾಯಕರು ಮಾನಸಿಕವಾಗಿ ಸಮಾಧಾನವನ್ನು ಪಡೆದುಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಗಣೇಶನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇಂದು ಶುಭವನ್ನೇ ಪಡೆದುಕೊಳ್ಳುವಿರಿ. ಮನೆಯಲ್ಲಿ ನೆಮ್ಮದಿಯು ನೆಲೆಸುವುದು. ಸನ್ಮಾನ ಆದರಗಳು ಲಭಿಸುವ ಸಾಧ್ಯತೆಗಳಿವೆ. ಚಿತ್ರೋದ್ಯಮದವರಿಗೆ ನೆಮ್ಮದಿ. ಸಣ್ಣಪುಟ್ಟ ಗೃಹ ಕೈಗಾರಿಕೆ ಕೈಗೊಳ್ಳುವವರಿಗೆ ಲಾಭ ಉಂಟಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಂದು ಶುಭ ಉಂಟಾಗಲಿದೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

English summary

your-daily-horoscope-8-January-2018

Know what astrology and the planets have in store for you today. Choose your zodiac sign and read the details..
Story first published: Monday, January 8, 2018, 7:01 [IST]