ಭಾನುವಾರದ ದಿನ ಭವಿಷ್ಯ

By: Divya Pandith
Subscribe to Boldsky

ಉಪ್ಪಿನಂತೆ ಕಟುಮಾತನ್ನು ಹೇಳುವವನು ನಿಜ ಸ್ನೇಹಿತ. ಸಕ್ಕರೆಯಂತೆ ಸಿಹಿ ಮಾತನಾಡುವವನು ನಯವಂಚಕ. ಉಪ್ಪಿನಲ್ಲಿ ಹುಳ ಬಂದಿರುವ ಇತಿಹಾಸ ಇಲ್ಲ. ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ. ಈ ಮಾತು ಎಷ್ಟು ನಿಜ ಅಲ್ಲವಾ? ಯಾರು ನಮ್ಮನ್ನು ಅತಿಯಾಗಿ ಹೊಗಳುತ್ತಾರೆ ಅಥವಾ ಅಗತ್ಯಕ್ಕಿಂತ ಹೆಚ್ಚು ವಿನಯತೆಯನ್ನು ಯಾರು ತೋರಿಸುತ್ತಾರೋ, ಅಂತಹವರು ಮನಸ್ಸಿನಲ್ಲಿ ಯಾವುದೋ ಉದ್ದೇಶವನ್ನು ಹೊಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಯಾರು ನಮ್ಮನ್ನು ನಿಜವಾಗಲೂ ಪ್ರೀತಿಸುತ್ತಾರೆ ಅವರೇ ನಮ್ಮನ್ನು ತಿದ್ದಿ ಬುದ್ಧಿ ಹೇಳುತ್ತಾರೆ. ಹಾಗಾಗಿ ಯಾರಾದರೂ ನಿಮ್ಮ ಒಳಿತಿಗಾಗಿ ಬುದ್ಧಿ ಹೇಳಿದರೆ ಅದನ್ನು ಅಲ್ಲಗಳೆಯಬೇಡಿ. ಬುದ್ಧಿ ಹೇಳಿದವರ ಬಗ್ಗೆ ಹೀಗಳೆಯ ಬೇಡಿ. ಬುದ್ಧಿ ಹೇಳಿದವರು ಎಂದಿಗೂ ನಿಮಗೆ ಕೆಡುಕನ್ನು ಬಯಸುವುದಿಲ್ಲ. ಭಾನುವಾರವಾದ ಇಂದು ವಿಶ್ರಾಂತಿ ಹಾಗೂ ಒಂದಿಷ್ಟು ಖುಷಿಯನ್ನು ಅನುಭವಿಸುವ ಹಂಬಲದಲ್ಲಿ ಇರುತ್ತೇವೆ. ನಮ್ಮ ಈ ಬಯಕೆಗಳು ಎಷ್ಟರ ಮಟ್ಟಿಗೆ ಈಡೇರುತ್ತದೆ? ಅದಕ್ಕೆ ನಮ್ಮ ರಾಶಿಚಕ್ರವು ಎಷ್ಟು ಸಹಕಾರವನ್ನು ನೀಡಲಿವೆ ಎನ್ನುವುದನ್ನು ತಿಳಿಯಲು ಮುಂದೆ ನೀಡಲಾದ ರಾಶಿಚಕ್ರಗಳ ದಿನ ಭವಿಷ್ಯವನ್ನು ಪರಿಶೀಲಿಸಿ....

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಇಂದು ನಿಮಗೆ ಸಮಾಧಾನ ಲಭಿಸುವುದು. ಮಾನಸಿಕ ನೆಮ್ಮದಿ ದೊರೆಯುವುದು. ಇಂದು ಸ್ನೇಹಿತರ ಆಗಮನ ವಾಗುವುದು. ಒಂದಿಷ್ಟು ಸಿಹಿ ಭೋಜನವನ್ನು ಸವಿಯಲಿದ್ದೀರಿ. ಕೆಲವು ವಿಚಾರದ ಕುರಿತು ಮಿತ್ರರೊಡನೆ ಚರ್ಚೆ ನಡೆಸುವಿರಿ. ವಿದ್ಯಾರ್ಥಿಗಳು ಒಂದಿಷ್ಟು ಸಮಾಧಾನದ ಸುದ್ದಿಯನ್ನು ಕೇಳುವರು. ವ್ಯಾಪಾರಿಗಳಿಗೆ ಉತ್ತಮ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಸಮೃದ್ಧಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇಂದು ನಿಮಗೆ ಸಂಪೂರ್ಣವಾದ ನೆಮ್ಮದಿ ದೊರೆಯದು. ಆಂತರಿಕ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಚಿತ್ರೋದ್ಯಮದಲ್ಲಿರುವವರಿಗೆ ಇಂದು ಅನುಕೂಲವುಂಟಾಗುವುದು. ಆದಷ್ಟು ಪ್ರಾಮಾಣಿಕ ಕೆಲಸದಲ್ಲಿ ತೊಡಗಿದರೆ ಉತ್ತಮ ಅಭಿವೃದ್ಧಿ ಉಂಟಾಗುವುದು. ಮಕ್ಕಳಿಂದ ಶುಭ ಸುದ್ದಿಯ ನಿರೀಕ್ಷೆ ಮಾಡಬಹುದು. ಇನ್ನಷ್ಟು ಸಂತೋಷ ಹಾಗೂ ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನಿಮಗೆ ಶುಭಕರವಾದ ದಿನ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಬಂಧುಗಳ ಆಗಮನ ಹಾಗೂ ಸಿಹಿ ಭೋಜನವನ್ನು ಸವಿಯುವ ಲಕ್ಷಣಗಳಿವೆ. ಅನಿರೀಕ್ಷಿತ ದೂರ ಪ್ರಯಾಣ ಕೈಗೊಳ್ಳುವಿರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸಹ ಮನೆಗೆ ಹಿಂದಿರುಗುವ ಸಾಧ್ಯತೆಗಳಿವೆ. ಇನ್ನಷ್ಟು ಪ್ರಗತಿ ಹಾಗೂ ಸಂತೋಷದ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇಂದು ನಿಮಗೆ ಶುಭಕರವಾದ ದಿನ. ಮನೆಯಲ್ಲೂ ನೆಮ್ಮದಿ ದೊರೆಯುವುದು. ಆದಷ್ಟು ಕಪ್ಪು ಬಟ್ಟೆಯನ್ನು ಧರಿಸದಿರಿ. ಎಲ್ಲಾ ವಗೆಯ ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುವಿರಿ. ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇಂದು ನಿಮಗೆ ಮಾನಸಿಕ ಕಿರಿಕಿರಿ ಮುಂದುವರಿಯುವುದು. ಅನೇಕ ತೊಂದರೆ ಹಾಗೂ ಸೋಲು ನಿಮ್ಮನ್ನು ಹುಡುಕಿಕೊಂಡು ಬರುವುದು. ಕೆಲವು ಅವಮಾನಗಳಂತಹ ಸನ್ನಿವೇಶವನ್ನು ಎದುರಿಸಬೇಕಾಗುವುದು. ರಾಜಕೀಯ ವ್ಯಕ್ತಿಗಳು ಅಧಿಕವಾದ ಮಾನಸಿಕ ಒತ್ತಡವನ್ನು ಎದುರಿಸಬೇಕಾಗುವ ಲಕ್ಷಣಗಳಿವೆ. ಮಾನಸಿಕವಾಗಿ ಒಂದಿಷ್ಟು ಅಡೆತಡೆಗಳು ನಿಮಗೆ ಗೊಂದಲವನ್ನುಂಟುಮಾಡುತ್ತವೆ. ಚಿತ್ರೋದ್ಯಮದಲ್ಲಿ ಕೆಲಸಮಾಡುತ್ತಿರುವವರಿಗೂ ಒಂದಿಷ್ಟು ಅಡೆತಡೆಗಳು ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಬದುಕಿಗಾಗಿ ವಿಷ್ಣುವಿನ ಆರಾಧನೆ ಹಾಗೂ ಗಣೇಶನ ಸ್ಮರಣೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇಂದು ನಿಮಗೆ ಸಮಾಧಾನದ ಬದುಕು ಲಭಿಸುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಹದಗೆಟ್ಟ ಆರೋಗ್ಯದಲ್ಲಿ ಒಂದಿಷ್ಟು ಸುಧಾರಣೆಯನ್ನು ಕಾಣುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳಿಂದ ಲಾಭವನ್ನು ಪಡೆದುಕೊಳ್ಳುವಿರಿ.ಒಂದಿಷ್ಟು ಹೊಸ ಬಗೆಯ ಆವಿಷ್ಕಾರವನ್ನು ಮಾಡುವಿರಿ. ಮಿತ್ರರೊಡನೆ ಚರ್ಚಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸೃಮೃದ್ಧ ಬದುಕಿಗಾಗಿ ವಿಷ್ಣು ಮತ್ತು ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇಂದು ಸಮಾಧಾನಕರವಾದ ಬದುಕು ಲಭ್ಯವಾಗುವುದು. ಮನೆಯಲ್ಲಿ ನೆಮ್ಮದಿ ಹಾಗೂ ಮಕ್ಕಳ ವಿಚಾರದಲ್ಲಿ ಇದ್ದ ಕೆಲವು ಅಡೆತಡೆಗಳು ದೂರವಾಗುವುದು. ವಿವಾಹದಲ್ಲೂ ಕೆಲವು ಅನುಕೂಲಕರವಾದ ಸ್ಥಿತಿ ಒದಗುವುದು. ಕೆಲವು ಶುಭ ಸುದ್ದಿಯನ್ನು ಕಾಣಲಿದ್ದೀರಿ. ವಿದೇಶದಿಂದ ಬರುವ ಮಿತ್ರರು ನಿಮಗೆ ಶುಭ ಸುದ್ದಿಯನ್ನೇ ತರುವರು. ಇಂದು ನೆಮ್ಮದಿಯನ್ನು ಕಂಡುಕೊಳ್ಳುವ ದಿನ. ವೈಜ್ಞಾನಿಕ ಕ್ಷೇತ್ರದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಇನ್ನಷ್ಟು ನೆಮ್ಮದಿ ಹಾಗೂ ಸಂತೋಷದ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಸಂಪೂರ್ಣ ಪ್ರಮಾಣದ ನೆಮ್ಮದಿ ದೊರೆಯದು. ಅಜೀರ್ಣ ಉಂಟಾಗುವ ಸಾಧ್ಯತೆಗಳಿವೆ. ಜೀರ್ಣ ಕ್ರಿಯೆಯಿಂದ ಕೆಲವು ತೊಂದರೆಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಹಿರಿಯರ ಮಾತನ್ನು ಧಿಕ್ಕರಿಸದಿರಿ. ಮನೆಯಲ್ಲಿ ಸಮಾಧಾನವನ್ನು ಪಡೆದುಕೊಂಡರೆ ಉತ್ತಮ ಪ್ರಗತಿಯನ್ನು ಸಾಧಿಸುವ ಸಾಧ್ಯತೆಗಳಿವೆ. ಪತ್ರಕರ್ತರು ಒಂದಿಷ್ಟು ಸಮಾಧಾನವನ್ನು ಪಡೆದುಕೊಳ್ಳುವರು. ಒಂದಿಷ್ಟು ಹೊಸ ಆಯಾಮಗಳು ನಿಮ್ಮ ಜೀವನದಲ್ಲಿ ಹೊಸ ತಿರುವನ್ನು ತರುವ ಸಾಧ್ಯತೆಗಳಿವೆ. ಸಮೃದ್ಧವಾದ ಬದುಕು ಹಾಗೂ ಸಂತೋಷದ ಜೀವನಕ್ಕೆ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಧನು ರಾಶಿಯವರಿಗೆ ಜನ್ಮ ಶನಿಯ ಪ್ರಭಾವ ಇರುವುದರಿಂದ ಆಂತರಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಮನೆಯಲ್ಲಿ ಕಿರಿಕಿರಿ ಹಾಗೂ ಪತಿ ಪತ್ನಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುವುದು. ಮಕ್ಕಳಿಂದ ಅಶುಭ ವಾರ್ತೆ ಕೇಳುವಿರಿ. ಮಕ್ಕಳ ಜೀವನದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಒಂದಿಷ್ಟು ವಿಚಾರಕ್ಕೆ ಸಾಲ ಮಾಡುವ ಸಾಧ್ಯತೆಗಳಿವೆ. ರಾಜಕೀಯ ಕ್ಷೇತ್ರದಲ್ಲೂ ತೊಂದರೆಗಳು ಸಂಭವಿಸುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇಂದು ಶುಭಕರವಾದ ದಿನ. ಅನೇಕ ದಿನಗಳಿಂದ ಅಂದುಕೊಂಡ ವಿಚಾರಗಳು ಲಾಭವನ್ನು ತಂದುಕೊಡುವುದು. ಕೆಲಸ ಕಾರ್ಯಗಳಲ್ಲಿ ಸಮಾಧಾನಯುತವಾದ ಯಶಸ್ಸು ಲಭಿಸುವುದು. ಹಿರಿಯರಿಂದ ಒಂದಿಷ್ಟು ಹಣಕಾಸಿನ ಸಹಾಯ ಉಂಟಾಗುವ ಸಾಧ್ಯತೆಗಳೂ ಇವೆ.ಕೈಗಾರಿಕೋದ್ಯಮದಲ್ಲಿ ಇರುವವರಿಗೂ ಸಹ ಇಂದು ಶುಭಕರವಾದ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಗಣೇಶನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇಂದು ಸಮಾಧಾನಕರವಾದ ದಿನ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಅನಿರೀಕ್ಷಿತ ಸೋಲುಗಳು ದೂರವಾಗುವುದು. ಚಿತ್ರೋದ್ಯಮದಲ್ಲಿ ಹೊಸ ಅವಕಾಗಳು ಲಭ್ಯವಾಗುವುದು. ಜನಪ್ರಿಯ ನಾಯಕರುಗಳಿಗೆ ಸಮಾಧಾನ ದೊರೆಯುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆಗೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇಂದು ಶುಭವನ್ನು ಅನುಭವಿಸುವಿರಿ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಲೇಖಕರಿಗೆ ಸನ್ಮಾನ ಮತ್ತು ಗೌರವಗಳು ಲಭಿಸುವುದು. ಕಲಾವಿದರಿಗೆ ನೆಮ್ಮದಿ ದೊರೆಯುವುದು. ಚಿತ್ರೋದ್ಯಮದಲ್ಲಿ ಇರುವವರಿಗೆ ಅನುಕೂಲ ದೊರೆಯುವುದು. ಸಣ್ಣ ಪುಟ್ಟ ಗೃಹ ಕೈಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ ಉಂಟಾಗುವುದು. ಬಾಲ್ಯದಿಂದ ಹಿಡಿದು ವೃದ್ಧರ ವರೆಗೂ ಅನುಕೂಲ ಉಂಟಾಗುವುದು. ಇನ್ನಷ್ಟು ಪ್ರಗತಿ ಹಾಗೂ ಸಂತೋಷಕ್ಕೆ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

English summary

your-daily-horoscope-28-january

Know what astrology and the planets have in store for you today. Choose your zodiac sign and read the details..
Story first published: Sunday, January 28, 2018, 7:02 [IST]
Subscribe Newsletter