ಶುಕ್ರವಾರದ ದಿನ ಭವಿಷ್ಯ

Posted By: Divya pandith
Subscribe to Boldsky

ಚಿಂತೆಗೂ ಚಿತೆಗೂ ಕೇವಲ ಒಂದು ಸೊನ್ನೆಯ ವ್ಯತ್ಯಾಸ... ಚಿತೆ ಸತ್ತ ದೇಹವನ್ನು ಸುಟ್ಟರೆ, ಚಿಂತೆ ಬದುಕಿರುವ ಸಜೀವವನ್ನೇ ದಹಿಸುತ್ತದೆ. ಮನುಷ್ಯ ಎಂದಮೇಲೆ ಅನೇಕ ಚಿಂತೆಗಳು, ನೋವು, ಕಷ್ಟಗಳು ಹಾಗೂ ದುಃಖಗಳು ಕಾಡುವುದು ಸಹಜ. ಅದಕ್ಕಾಗಿ ಅತಿಯಾದ ಚಿಂತೆ ಮಾಡುವುದು ಸೂಕ್ತವಲ್ಲ. ಅಗತ್ಯವಿರುವಷ್ಟೇ ಚಿಂತನೆ ನಡೆಸಿದರೆ ಸಾಕಾಗುತ್ತದೆ. ಚಿತೆಯಾದರೆ ಸತ್ತ ದೇಹವನ್ನು ಒಮ್ಮೆಲೇ ದಹಿಸಿ ಭಸ್ಮಮಾಡುತ್ತದೆ.

ಆದರೆ ಅದೇ ಚಿಂತೆಯು ಪ್ರತಿದಿನ, ಪ್ರತಿ ಕ್ಷಣವೂ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೀರುತ್ತಾ ಬರುತ್ತದೆ. ಅನೇಕ ಆರೋಗ್ಯ ಸಮಸ್ಯೆಗೆ ಒಳಗಾಗುವುದರ ಮೂಲಕ ಇನ್ನಷ್ಟು ಚಿಂತೆಯನ್ನು ಹೆಚ್ಚಿಸಿಕೊಳ್ಳಬೇಕಾಗುವುದು. ಹಾಗಾಗಿ ಯಾವುದೇ ವಿಚಾರದ ಕುರಿತು ಅತಿಯಾಗಿ ಚಿಂತಿಸದೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ...

ಶುಕ್ರವಾರವಾದ ಇಂದು ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ನಾವೆಲ್ಲರೂ ಪಾಲ್ಗೊಂಡು ದೇಶದ ಒಳಿತಿಗಾಗಿ ಶ್ರಮಿಸೋಣ. ಈ ಶುಭ ದಿನ ನಿಮಗೆ ಯಾವೆಲ್ಲಾ ಅನುಕೂಲ ಹಾಗೂ ಅನಾನುಕೂಲತೆಗಳು ಬಂದೊದಗಬಹುದು? ಎನ್ನುವುದನ್ನು ತಿಳಿಯಲು ಈ ಮುಂದಿರುವ ದಿನದ ರಾಶಿ ಭವಿಷ್ಯವನ್ನು ಅರಿಯಿರಿ... 

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಇಂದು ನಿಮಗೆ ಸಮಾಧಾನದ ಬದುಕು ದೊರೆಯುವುದು. ಸ್ತ್ರೀಯರಿಂದ ಶುಭವಾರ್ತೆ ಲಭಿಸುವದು. ವಿವಾಹಕ್ಕೆ ಇದ್ದ ಅಡೆತಡೆಗಳು ದೂರವಾಗುವುದು. ಬಂಧುಗಳ ಆಗಮನ. ವಿದೇಶ ಯಾನದ ಕನಸು ನನಸಾಗುವ ಸಾಧ್ಯತೆಗಳಿವೆ. ಶುಭ ಹಾರೈಕೆಯನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಸಮಾಧಾನ ಹಾಗೂ ಪ್ರಗತಿಯ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ನಿಮಗೆ ಅಷ್ಟಮ ಶನಿಯ ಪ್ರಭಾವ ಇರುವುದರಿಂದ ವಿಪರೀತ ಮನಾಸಿಕ ಕಿರಿಕಿರಿ ಹಾಗೂ ಅಧಿಕ ನಷ್ಟವನ್ನು ಅನುಭವಿಸಬೇಕಾಗುವ ಸಾಧ್ಯತೆಗಳಿವೆ. ಯಾವ ಕೆಲಸದಲ್ಲೂ ಅನುಕೂಲ ಉಂಟಾಗದು. ಮಾನಸಿಕ ವೇದನೆ ನಿಮ್ಮನ್ನು ಹೈರಾಣಗೊಳಿಸುವುದು. ಇಲ್ಲಸಲ್ಲದ ಆರೋಪವು ನಿಮ್ಮ ಬೆನ್ನೇರುವ ಸಾಧ್ಯತೆಗಳಿವೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಅಧಿಕಾರವನ್ನು ಕಳೆದುಕೊಳ್ಳುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಯ ಬದುಕಿಗಾಗಿ ಶಕ್ತಿಯ ಆರಾಧನೆ ಹಾಗೂ ಚಾಮುಂಡಿಯ ಪ್ರಾರ್ಥನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನಿಮಗೆ ಸಮಾಧಾನದ ಬದುಕು ಲಭ್ಯವಾಗುವುದು. ಮನೆಯಲ್ಲಿ ನೆಮ್ಮದಿಯನ್ನು ಅನುಭವಿಸುವಿರಿ. ಮಾಡುತ್ತಿರುವ ಉದ್ಯೋಗದಲ್ಲಿ ಲಾಭವನ್ನು ಪಡೆದುಕೊಳ್ಳುವಿರಿ. ಹೋಟೆಲ್ ಉದ್ಯಮ ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಿಗಳಿಗೂ ಉತ್ತಮ ಲಾಭ ಉಂಟಾಗುವುದು. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ಹಿರಿಯರು ತೀರ್ಥಯಾತ್ರೆ ಅಥವಾ ದೇವಸ್ಥಾನಗಳಿಗೆ ಭೇಟಿ ನೀಡುವರು. ಅಲ್ಲದೆ ಆರೋಗ್ಯದಲ್ಲೂ ಸುಧಾರಣೆ ಕಾಣುವುದು. ಜೀವನದಲ್ಲಿ ಇನ್ನಷ್ಟು ಸಮೃದ್ಧಿಯನ್ನು ಪಡೆದುಕೊಳ್ಳಲು ದೇವಿಯ ಉಪಾಸನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಸಂಪೂರ್ಣ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಮನೆಯಲ್ಲಿ ನೆಮ್ಮದಿ ಲಭಿಸುವುದು. ವಾತಾವರಣ ತಿಳಿಗೊಳ್ಳುವುದು. ಮಾನಸಿಕ ನೋವು ದೂರಾಗುವ ಲಕ್ಷಣಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಹಾಗೂ ವೈದ್ಯರಿಗೆ ಸನ್ಮಾನ ಲಭಿಸುವುದು. ಹತ್ತು ಹಲವಾರು ಬಗೆಯ ಶುಭ ಫಲವನ್ನು ಅನುಭವಿಸಲಿದ್ದೀರಿ. ಇಷ್ಟ ಮಿತ್ರರೊಡನೆ ಸಮಯವನ್ನು ಕಳೆಯುವ ಯೋಗವಿದೆ. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ಗೇಶ ಮತ್ತು ಕುಲದೇವರ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇಂದು ನಿಮಗೆ ಅಷ್ಟಾಗಿ ಶುಭದಿನವಲ್ಲ. ಮಾನಸಿಕ ನೋವು ವಿಪರೀತವಾಗುವುದು. ಸಾಲ ಪಡೆಯುವುದು, ಸಾಲ ನೀಡುವ ಕೆಲಸಕ್ಕೆ ಮುಂದಾಗದಿರಿ. ಸಾಲದ ಬಾಧೆ ನಿಮ್ಮನ್ನು ಹೈರಾಣಗೊಳಿಸುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳಲ್ಲಿ ಅಡೆತಡೆ ಉಂಟಾಗುವುದು. ಇದರಿಂದ ಇನ್ನಷ್ಟು ಮಾನಸಿಕ ನೋವು ನಿಮ್ಮನ್ನು ಕಾಡುವುದು. ಬಂಧುಗಳಿಂದ ಕಿರಿಕಿರಿಯ ವಾತಾವರಣ ಉಂಟಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಚಾಮುಂಡೇಶ್ವರಿಯನ್ನು ಆರಾಧಿಸಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇಂದು ಸಂಪೂರ್ಣವಾದ ನೆಮ್ಮದಿಯನ್ನು ಪಡೆಯಲು ವಿಫಲರಾಗುವಿರಿ. ನಿರಂತರ ಪರಿಶ್ರಮದಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಷೇರು ಮಾಡುಕಟ್ಟೆಯಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ಬ್ಯಾಂಕ್ ನೌಕರರು ಮೋಸಗಾರರ ಬಲೆಗೆ ಬೀಳುವ ಸಾಧ್ಯತೆಗಳಿವೆ. ಸ್ತ್ರೀಯರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಸಮಸ್ಯೆಗಳ ನಿವಾರಣೆಗೆ ದೇವಿಯ ಉಪಾಸನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇಂದು ನಿಮಗೆ ಸಮಾಧಾನದ ಬದುಕು ಕಾಣುವುದು. ಬಂಧುಗಳು ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸುವರು. ವಿದೇಶದಲ್ಲಿರುವ ನಿಮ್ಮ ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ವಿವಾಹಕ್ಕೆ ಉಂಟಾದ ಅಡೆತಡೆಗಳು ಇಂದು ದೂರಾಗುವುದು. ಶುಭ ಯೋಗ ನಿಮಗೆ ದೊರೆಯುವುದು. ಭಗವಂತನ ಕೃಪೆ ಲಭಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಸಂತೋಷದ ಬದುಕಿಗಾಗಿ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಸಂಪೂರ್ಣವಾದ ಶುಭ ಫಲಗಳು ಲಭಿಸದು. ಇನ್ನೂ ಒಂದೂವರೆ ವರ್ಷಗಳ ಕಾಲ ಇದೇ ಫಲವನ್ನು ನೀವು ಕೇಳುವ ಸಾಧ್ಯತೆಗಳಿವೆ. ಮಾನಸಿಕ ಕಿರಿಕಿರಿ ಹಾಗೂ ಕಪ್ಪು ಬಟ್ಟೆಯ ಧಾರಣೆ ಉತ್ತಮವಲ್ಲ. ಪ್ರೇಮ ವೈಫಲ್ಯ ಉಂಟಾಗುವುದು. ಕೆಲವರಿಗೆ ವಿವಾಹದಲ್ಲಿ ಉಂಟಾದ ವೈಫಲ್ಯ ಸುಧಾರಣೆ ಕಾಣುವುದು. ಸ್ಥಿರಾಸ್ತಿಯಿಂದ ಲಾಭ ಪಡೆಯುವಿರಿ. ಅಡಿಕೆ, ತೆಂಗು ಬೆಳೆಗಾರರು ಹಾಗೂ ರೈತ ಸಮುದಾಯದವರಿಗೆ ಲಾಭ ಉಂಟಾಗುವುದು. ಇನ್ನಷ್ಟು ಸಮಾಧಾನದ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗಾಗಿ ದೇವಿಯ ಉಪಾಸನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಇಂದು ನೀವು ಸಮಾಧಾನದ ಬದುಕನ್ನು ಕಾಣಲಿದ್ದೀರಿ. ಬಂಧುಗಳು ಸಹ ಸಕಾರಾತ್ಮಕ ರೀತಿಯಲ್ಲಿ ವರ್ತಿಸುವರು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ನಿಮ್ಮ ಜೀವನಕ್ಕೆ ಲಾಭ ಮತ್ತು ಸಮಾಧಾನವನ್ನು ತಂದುಕೊಡುವುದು. ಮನೆಯಲ್ಲಿ ನೆಮ್ಮದಿ ದೊರೆಯುವುದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿಮ್ಮ ಜನಪ್ರಿಯತೆ ದ್ವಿಗುಣಗೊಳ್ಳುವುದು. ಅನೇಕ ಲಾಭವನ್ನು ಪಡೆದುಕೊಳ್ಳುವಂತಹ ಶುಭ ದಿನವಾಗುವುದು. ಇನ್ನಷ್ಟು ಸಮಾಧಾನ ಹಾಗೂ ಪ್ರಗತಿಯ ಬದುಕಿಗಾಗಿ ಗಣಪತಿ ಮತ್ತು ದೇವಿಯ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇಂದು ನಿಮಗೆ ಸಂಪೂರ್ಣವಾದ ಸಮಾಧಾನ ಅಲಭ್ಯವಾಗುವುದು. ಮಾನಸಿಕ ಕಿರಿಕಿರಿ ನಿಮ್ಮನ್ನು ಕಂಗೆಡಿಸುವುದು. ಮಾಡುತ್ತಿರುವ ಉದ್ಯೋಗದಲ್ಲಿ ಹಿತಶ್ರುಗಳ ಬಾಧೆ ಉಂಟಾಗುವುದು. ನಿಮ್ಮ ಆಂತರಿಕ ಗುಟ್ಟು ರಟ್ಟಾಗುವ ಸಾಧ್ಯತೆಗಳಿವೆ. ಹೀಗೆ ಅನೇಕ ಹತ್ತಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಇನ್ನಷ್ಟು ಸಮಾಧಾನ ಹಾಗೂ ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇಂದು ನಿಮಗೆ ಸಮಾಧಾನ ಲಭಿಸುವುದು. ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯನ್ನು ಕಾಣುವಿರಿ. ವಿದ್ಯಾರ್ಥಿಗಳ ಜೀವನ ಶುಭಮಯವಾಗಿರುತ್ತದೆ. ಸಹೋದ್ಯೋಗಿಗಳ ಸಹಕಾರ ಲಭಿಸುವುದು. ವೃತ್ತಿಪರ ಜೀವನದಲ್ಲಿ ನೆಮ್ಮದಿಯನ್ನು ಅನುಭವಿಸುವಿರಿ. ಆರ್ಥಿಕ ವಲಯದಲ್ಲಿ ಪ್ರಗತಿಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಅಭಿವೃದ್ಧಿಯ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇಂದು ನಿಮಗೆ ಶುಭಕರವಾದ ದಿನ. ಸಂತಸಕರವಾದ ಅನುಭವವನ್ನು ಪಡೆದುಕೊಳ್ಳುವಿರಿ. ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಉತ್ತಮವಾದ ಪ್ರಗತಿಯತ್ತ ಹೆಜ್ಜೆ ಹಾಕುವಿರಿ. ಪತ್ರಿಕ ವಲಯದಲ್ಲೂ ಲಾಭಾಂಶವನ್ನು ಪಡೆದುಕೊಳ್ಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.

English summary

your-daily-horoscope-26-january

Know what astrology and the planets have in store for you today. Choose your zodiac sign and read the details...
Story first published: Friday, January 26, 2018, 7:01 [IST]